ಎರಡೇ ಗಂಟೆಗಳಲ್ಲಿ ಅಮೇಜಾನ್ ನಿಂದ ವಸ್ತುಗಳನ್ನು ನಿಮ್ಮ ಮನೆಗೆ ತರಿಸಿಕೊಳ್ಳಿ..!

|

ತಕ್ಷಣಕ್ಕೆ ಯಾವುದೋ ವಸ್ತು ಬೇಕು. ಹೆಚ್ಚು ಸಮಯವಿಲ್ಲ. ಅತಿಥಿಗಳು ಆಗಮಿಸುವವರಿದ್ದಾರೆ. ಮಾರ್ಕೆಟ್ ಗೆ ಹೋಗಿ ಪರ್ಚೆಸ್ ಮಾಡೋಣವೆಂದರೆ ಅವರೆಲ್ಲಿ ಬಂದು ಬಿಡುತ್ತಾರೋ ಎಂಬ ನೀರೀಕ್ಷೆ. ಇಂತಹ ಸಂದರ್ಬದಲ್ಲಿ ಏನು ಮಾಡೋದು ಎಂದು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ.. ಆನ್ ಲೈನ್ ಶಾಪಿಂಗ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅಮೇಜಾನ್ ಇನ್ನು ಮುಂದೆ ಕೇವಲ ಎರಡೇ ಗಂಟೆಗಳಲ್ಲಿ ನೀವು ಖರೀದಿಸುವ ವಸ್ತುವನ್ನು ನಿಮ್ಮ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಿದೆ.. ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಈ ಸೌಲಭ್ಯ ಲಭ್ಯವಿರುತ್ತೆ.

ಎರಡೇ ಗಂಟೆಗಳಲ್ಲಿ ಅಮೇಜಾನ್ ನಿಂದ ವಸ್ತುಗಳನ್ನು ನಿಮ್ಮ ಮನೆಗೆ ತರಿಸಿಕೊಳ್ಳಿ..!

ಈ ಸಮಯದಲ್ಲಿ ನಿಮಗೆ ಅಗತ್ಯ ಬೀಳುವ ವಸ್ತುಗಳನ್ನು ಅಮೇಜಾನ್ ನಿಂದ ತಕ್ಷವೇ ಖರೀದಿಸಿ ನಿಮ್ಮ ಮನೆಗೆ ತರಿಸಿಕೊಳ್ಳಬಹುದು. ಈ ವಿಶೇಷ ಸೌಲಭ್ಯವನ್ನು ಈಗಾಗಲೇ ಬಿಡುಗಡೆಗೊಳಿಸುವ ಅಮೇಜಾನ್, ಈ ಸೌಲಭ್ಯಕ್ಕೆ” Prime Now” ಎಂದು ಹೆಸರಿಟ್ಟಿದೆ. ಪ್ರೈಮ್ ನೌ ನಲ್ಲಿ ನೀವು ಯಾವುದೇ ವಸ್ತು ಖರೀದಿಸಲು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ರ ವರೆಗೆ ಅವಕಾಶವಿದ್ದ, 10 ಗಂಟೆಗೆ ಬುಕ್ಕಿಂಗ್ ಕ್ಲೋಸ್ ಆಗುತ್ತೆ. 10 ರಾತ್ರಿಗೆ ಬುಕ್ ಆದ ವಸ್ತು 12 ಗಂಟೆ ಒಳಗೆ ನಿಮ್ಮ ಮನೆ ತಲುಪುತ್ತೆ.

ಇದರಲ್ಲಿ ಅದೇ ದಿನ ಮತ್ತು ಮಾರನೇ ದಿನದ ಡೆಲಿವರಿ ಆಯ್ಕೆಯನ್ನು ಸಂಸ್ಥೆ ಹಾಗೆಯೇ ಉಳಿಸಿಕೊಂಡಿದ್ದು, ಯಾವ ದಿನ ನಿಮಗೆ ಡೆಲಿವರಿ ಬೇಕು ಎಂಬುದನ್ನು ಆಯ್ಕೆ ಮಾಡಲು ಅವಕಾಶವಿರುತ್ತೆ. ಆದರೆ ನೆನಪಿರಲಿ ಅಮೇಜಾನ್ ನ ಪ್ರೈಮ್ ನೌ ಸೌಲಭ್ಯವು ಕೇವಲ ಬೆಂಗಳೂರು, ಮುಂಬೈ, ನವದೆಹಲಿ ಮತ್ತು ಹೈದ್ರಾಬಾದ್ ನಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಲಭ್ಯವಿರುತ್ತೆ. ಪ್ರೌಮ್ ನಲ್ಲಿ ಸಿಗುವ ಪ್ರಮುಖ ವಸ್ತುಗಳೆಂದರೆ ಹಣ್ಣುಗಳು, ತರಕಾರಿಗಳು, ದಿನಬಳಕೆ ದಿನಸಿ ಪದಾರ್ಥಗಳು,ಮಾಂಸ, ಹಾಲು, ಮೊಸರು ಮತ್ತು ಮನೆ ಮತ್ತು ಅಡುಗೆಮನೆಗೆ ಸಂಬಂಧಿಸಿದ ಇನ್ನಿತರೆ ವಸ್ತುಗಳನ್ನು ಹೀಗೆ ಖರೀದಿಸುವ ಅವಕಾಶವಿರುತ್ತೆ.

ಅಮೇಜಾನ್ ಈ ಸೌಲಭ್ಯವನ್ನು ಬಿಗ್ ಬಜಾರ್, ಆದಿತ್ಯಾ ಬಿರ್ಲಾ ಮೋರ್, ಸ್ಥಳೀಯ ವ್ಯಾಪಾರಸ್ಥರಗಳಾದ ಉದಾಹರಣೆಗೆ ಪೆಸ್ಕಾಫ್ರೆಶ್ ಇತ್ಯಾದಿ ಕಡೆಗಳಿಂದ ಬೇಡಿಕೆಯನ್ನು ಪೂರೈಸಲಿದೆ. ಈ ಸೌಲಭ್ಯವನ್ನು ಇತ್ತೀಚೆಗಷ್ಟೇ ಅಮೇಜಾನ್ “Home & Kitchen” ಕೆಟಗರಿಯಲ್ಲಿ ಸೇರಿಸಿದೆ. ಇನ್ನು ಇದರಲ್ಲಿ, ಸಣ್ಣ ಪುಟ್ಟ ಅಡುಗೆ ಮನೆ ಸಾಮಗ್ರಿಗಳಿಂದ ಹಿಡಿದು ಮಿಕ್ಸರ್ ಗ್ರೈಂಡರ್,ಇಂಡಕ್ಷನ್ ಕುಕ್ಕರ್, ಮತ್ತು ಇತರೆ ವಸ್ತುಗಳನ್ನು ಕೂಡ ಖರೀದಿಸಬಹುದು.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?

ಆದರೆ ಅಮೇಜಾನ್ ಪ್ರೈಮ್ ನೌ ಆಪ್ ಒಂದು ಸಪರೇಟ್ ಆಪ್ ಆಗಿದ್ದು ಅದನ್ನು ನೀವು ಗೂಗಲ್ ಪ್ಲೇ ಸ್ಟೋರ್ ಇಲ್ಲವೇ ಆಪಲ್ ಆಪ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಅಮೇಜಾನ್ ನ ಸದಸ್ಯರು ಅಮೇಜಾನ್ ಆಪ್ ಗೆ ಲಾಗಿನ್ ಆಗುವ ಸೈನ್ ಇನ್ ಡೀಟೈಲ್ಸ್ ಬಳಸಿ ಅಮೇಜಾನ್ ಪ್ರೈಮ್ ಗೂ ಲಾಗಿನ್ ಆಗಬಹುದು.

ಇದರ ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಅಮೇಜಾನ್,ಬಿಗ್ ಬಾಸ್ಕೆಟ್ ಗಳಂತೆ ಫ್ಲಿಪ್ ಕಾರ್ಟ್ ಕೂಡ ದಿನಸಿ ವಸ್ತುಗಳ ಮಾರಾಟಕ್ಕೆ ಮುಂದಾಗಲಿದೆ ಎಂದು ತಿಳಿದುಬಂದಿದೆ. 5 ಪ್ರಮುಖ ನಗರಗಳಲ್ಲಿ ಜುಲೈನಿಂದ ಈ ಸೇವೆಯನ್ನು ಆರಂಭಿಸಲು ಫ್ಲಿಪ್ ಕಾರ್ಟ್ ಯೋಜನೆ ರೂಪಿಸಿದೆಯಂತೆ. ಫ್ಲಿಪ್ ಕಾರ್ಟ್ ನ ಮೂಲಗಳ ಪ್ರಕಾರ, ಹೈದ್ರಾಬಾದ್, ಚೆನೈ, ಮುಂಬೈ, ದೆಹಲಿ ಮತ್ತು ಪುಣೆಯಲ್ಲಿ ಈ ಸರ್ವೀಸ್ ನೀಡಲು ಚಿಂತನೆ ನಡೆಸುತ್ತಿದೆ. ಕಳೆದ ನವೆಂಬರ್ ನಲ್ಲಿ ಬೆಂಗಳೂರಿನ ಗ್ರಾಹಕರಿಗೆ ಈ ಸೌಲಭ್ಯ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಾಗುತ್ತಿದೆ. ಆ ಮೂಲಕ ತಾಜಾ ಹಣ್ಣು- ತರಕಾರಿಗಳ ಮಾರಾಟಕ್ಕೆ ಫ್ಲಿಪ್ ಕಾರ್ಟ್ ಮುಂದಾಗಿದೆ..

ಒಟ್ಟಿನಲ್ಲಿ ಈ ಎಲ್ಲಾ ಸೌಲಭ್ಯಗಳು ಮನೆಯಲ್ಲೇ ಕೂತು ತಮ್ಮ ಅಗತ್ಯತೆಯನ್ನು ಪೂರೈಸಿಕೊಳ್ಳಲು ನೆರವಾಗುತ್ತಿದೆ.

ಟೆಲಿಕಾಂ ಮಾರುಕಟ್ಟೆಯನ್ನು ದಿಗ್ಭ್ರಮೆಗೊಳಿಸಿದ ಜಿಯೋ ಪ್ಲಾನ್: ರೂ. 101ಕ್ಕೆ ನಿತ್ಯ 2GB 4G ಡೇಟಾ..!ಟೆಲಿಕಾಂ ಮಾರುಕಟ್ಟೆಯನ್ನು ದಿಗ್ಭ್ರಮೆಗೊಳಿಸಿದ ಜಿಯೋ ಪ್ಲಾನ್: ರೂ. 101ಕ್ಕೆ ನಿತ್ಯ 2GB 4G ಡೇಟಾ..!

Best Mobiles in India

Read more about:
English summary
How you can get deliveries from Amazon in two hours

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X