ಐಆರ್ ಸಿಟಿಸಿ ಹೊಸ ಫೀಚರ್: ಖಾಲಿ ಇರುವ ರೈಲಿನ ಸೀಟು, ರಿಸರ್ವೇಷನ್ ಚಾಟ್ ನ್ನು ಆನ್ ಲೈನ್ ನಲ್ಲೇ ಚೆಕ್ ಮಾಡಿ

By Gizbot Bureau
|

ಖಾಲಿ ಇರುವ ಸೀಟಿಗಾಗಿ ಟ್ರೈನಿನ ಹಿಂಗೆ ಓಡುವ ಕಾಲ ಬಹಳ ಹಳೆಯದಾಯಿತು. ಭಾರತೀಯ ರೈಲ್ವೇ ಇಲಾಖೆಯು ರಿಸರ್ವ್ ಆಗಿರುವ ಸೀಟ್ ಗಳ ವಿವರವನ್ನು ಆನ್ ಲೈನ್ ಚಾಟ್ ನಲ್ಲಿ ತಿಳಿಸುತ್ತದೆ ಮತ್ತು ಪ್ರಯಾಣಿಕರಿಗೆ ನಿರ್ಧಿಷ್ಟ ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದಾಗ ಸೀಟಿನ ಸ್ಟೇಟಸ್ ಚೆಕ್ ಮಾಡುವುದಕ್ಕೆ ಅವಕಾಶ ನೀಡುತ್ತದೆ.

ಖಾಲಿ ಇರುವ ರೈಲಿನ ಸೀಟು, ರಿಸರ್ವೇಷನ್ ಚಾಟ್ ನ್ನು ಆನ್ ಲೈನ್ ನಲ್ಲೇ ಚೆಕ್ ಮಾಡಿ

ಅಂತರ್ಜಾಲದಲ್ಲಿ ಇನ್ನುಮುಂದೆ ರಿಸರ್ವೇಷನ್ ಚಾಟ್ ನ್ನು ನೋಡುವುದಕ್ಕೆ ಅವಕಾಶವಿರುತ್ತದೆ ಎಂದು ರೈಲ್ವೇ ಮಿನಿಸ್ಟರ್ ಪಿಯೂಷ್ ಘೋಯಲ್ ತಿಳಿಸಿದ್ದು ಹೊಸ ವ್ಯವಸ್ಥೆಯನ್ನು ಬುಧವಾರದಂದು ಬಿಡುಗಡೆಗೊಳಿಸಿದ್ದಾರೆ. ಚಾಟ್ ತಯಾರಿಯ ನಂತರ ಪ್ರಯಾಣಿಕರಿಗೆ ಎಲ್ಲಾ ಖಾಲಿ ಇರುವ ಸೀಟ್ ಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಸ್ಥಳದ ವಿವರ ಮತ್ತು ಖಾಲಿ ಇರುವ ಸೀಟಿನ ವಿವರ ಸಂಪೂರ್ಣವಾಗಿ ತಿಳಿದುಕೊಳ್ಳಲು ಗ್ರಾಹಕರಿಗೆ ಅವಕಾಶವಿರುತ್ತದೆ.

ಬ್ಯುಸಿನೆಸ್ ನಿಯಮಾವಳಿಗಳ ಅನ್ವಯ ಟಿಟಿಇಯಲ್ಲಿ ಖಾಲಿಇರುವ ಆನ್ ಬೋರ್ಡ್ ರೈಲಿನ ಮಾಹಿತಿಯನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿರುತ್ತದೆ.ಈ ಫೀಚರ್ ವೆಬ್ ವರ್ಷನ್ ಮತ್ತು ಮೊಬೈಲ್ ವರ್ಷನ್ ಎರಡರಲ್ಲೂ ಕೂಡ ಲಭ್ಯವಿರುತ್ತದೆ. ಈ ವ್ಯವಸ್ಥೆಯ ಸಂಪೂರ್ಣ ರೈಲ್ವೇ ವ್ಯವಸ್ಥೆಯನ್ನು ಪಾರದರ್ಶಕವಾಗಿಸುತ್ತದೆ.

ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ರಿಸರ್ವೇಷನ್ ಚಾಟ್ ನ್ನು ಹೇಗೆ ಪರೀಕ್ಷಿಸಿಕೊಳ್ಳಬಹುದು?

1. IRCTC ವೆಬ್ ಸೈಟ್ ನಲ್ಲಿ ಹೊಸ ಆಯ್ಕೆ ಚಾರ್ಟ್/ವೇಕೆನ್ಸಿ ಲಭ್ಯವಿರುತ್ತದೆ. 2. ನೀವು ಪ್ರಯಾಣದ ವಿವರವನ್ನು ನೀಡಬೇಕು ಉದಾಹರಣೆಗೆ ರೈಲಿನ ನಂಬರ್, ಪ್ರಯಾಣದ ದಿನಾಂಕ ಮತ್ತು ಬೋರ್ಡಿಂಗ್ ಸ್ಟೇಷನ್.

3. ಅದಾದ ನಂತರ ಖಾಲಿ ಇರುವ ಭೋಗಿಗಳ ಕ್ಲಾಸ್ ವೈಸ್ ಮತ್ತು ಕೋಚ್ ವೈಸ್ ನಂಬರ್ ನ್ನು ಕಾಣಬಹುದು.

4. ನೀವು ನಿರ್ಧಿಷ್ಟ ಕೋಚ್ ನ್ನು ಕೂಡ ಕ್ಲಿಕ್ಕಿಸಬಹುದು ಮತ್ತು ಲೇಔಟ್ ನ್ನು ನೋಡಬಹುದು

ಐಆರ್ ಸಿಟಿಸಿಯ ಹೊಸ ಫೀಚರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು

1. ಏರ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದಂತೆಯೇ ಇಂಡಿಯನ್ ರೈಲ್ವೇ ವೆಬ್ ಸೈಟ್ ಐಆರ್ ಸಿಟಿಸಿಯೂ ಕೂಡ ಸೀಟಿಂಗ್ ಲೇಔಟ್ ನ್ನು ವಿಭಿನ್ನ ಬಣ್ಣಗಳಲ್ಲಿ ತೋರಿಸುತ್ತದೆ. ಸಂಪೂರ್ಣ ಬುಕ್ ಆಗಿರುವುದು, ಖಾಲಿ ಇರುವುದು ಮತ್ತು ಪಾರ್ಷಲಿ ಬುಕ್ ಆಗಿರುವುದು ಎಂದು ತಿಳಿಸುತ್ತದೆ.

2. ಭಾರತೀಯ ರೈಲ್ವೇಯ ರಿಸರ್ವ್ಡ್ ಟ್ರೈನ್ ಗಳಲ್ಲಿ ಬಳಸಲಾಗುವ 9 ಕೋಚ್ ಲೇಔಟ್ ಗಳನ್ನು ಈ ಹೊಸ ಸಿಸ್ಟಮ್ ಡಿಸ್ಪ್ಲೇ ಮಾಡುತ್ತದೆ ಮತ್ತು 120 ಕ್ಕೂ ಹೆಚ್ಚು ಕೋಚ್ ಲೇಔಟ್ ಗಳು ಇದರಲ್ಲಿ ಅಳವಡಿಸಲಾಗಿದೆ.

3. ಈ ಫೀಚರ್ ಕ್ಲಾಸ್ ವೈಸ್ ಮತ್ತು ಕೋಚ್ ವೈಸ್ ಖಾಲಿ ಇರುವ ಸೀಟ್ ಗಳ ಮಾಹಿತಿಯನ್ನು ನೀಡುತ್ತದೆ. ಮೊದಲನೇ ಚಾರ್ಟ್ ನ್ನು ರೈಲು ಹೊರಡುವ ನಾಲ್ಕು ತಾಸುಗಳ ಮುನ್ನ ಪ್ರಿಪೇರ್ ಮಾಡಲಾಗುತ್ತದೆ.

4. ಒಂದು ವೇಳೆ ಎರಡನೇ ಚಾರ್ಟ್ ಕೂಡ ತಯಾರಿ ಆದರೆ ಪುನಃ ಖಾಲಿ ಇರುವ ಜಾಗಗಳನ್ನು ಡಿಸ್ಪ್ಲೇ ಮಾಡಲಾಗುತ್ತದೆ. ಎರಡನೇ ಚಾರ್ಟ್ ನ್ನು ರೈಲು ಹೊರಡುವ 30 ನಿಮಿಷಗಳ ಮುನ್ನ ತಯಾರಿಸಲಾಗುತ್ತದೆ.

Best Mobiles in India

English summary
IRCTC’s new feature: Check vacant train seats, reservation chart online

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X