ಜಿಯೋ ಪೋಸ್ಟ್‌ಪೇಯ್ಡ್‌ ಪ್ಲಸ್‌ ಯೋಜನೆಯನ್ನು ಪಡೆಯುವುದು ಹೇಗೆ?

|

ದೇಶದ ಟೆಲಿಕಾಂ ವಲಯದಲ್ಲಿ ಲೀಡ್‌ನಲ್ಲಿರುವ ರಿಲಯನ್ಸ್ ಜಿಯೋ ಇತ್ತೀಚೆಗೆ ಹೊಸದಾಗಿ ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆ ಪರಿಚಯಿಸಿದೆ. ಭಿನ್ನ ಪ್ರೈಸ್‌ ರೇಂಜ್‌ನಲ್ಲಿರುವ ಈ ಯೋಜನೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ. ಇನ್ನು ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಸೇವೆಯನ್ನು ಪಡೆಯಲು ಯೋಜಿಸುತ್ತಿರುವವರು ಈಗಾಗಲೇ ಯಾವುದೇ ಆಪರೇಟರ್‌ನ ಪೋಸ್ಟ್‌ಪೇಯ್ಡ್ ಬಳಕೆದಾರರಾಗಿದ್ದರೆ ಭದ್ರತಾ ಠೇವಣಿಗಾಗಿ ಪಾವತಿಸಬೇಕಾಗಿಲ್ಲ.

ಟೆಲಿಕಾಂ

ಹೌದು, ಜಿಯೋ ಟೆಲಿಕಾಂ "ನಿಮ್ಮ ಕ್ರೆಡಿಟ್ ಮಿತಿಯನ್ನು ಕ್ಯಾರಿ-ಫಾರ್ವರ್ಡ್ ಮಾಡಿ" ಫೀಚರ್‌ ಅನ್ನು ಈ ಯೋಜನೆಯಲ್ಲಿ ನೀಡಿದೆ. ಹೀಗಾಗಿ ಇತರೆ ಟೆಲಿಕಾಂ ಪೋಸ್ಟ್‌ಪೇಯ್ಡ್‌ ಗ್ರಾಹಕರು ಸುಲಭವಾಗಿ ಜಿಯೋ ಪೋಸ್ಟ್‌ಪೇಯ್ಡ್‌ಗೆ ಬದಲಾಗಬಹದು. ಇನ್ನು ಪ್ರಿಪೇಯ್ಡ್ ಬಳಕೆದಾರರಾಗಿದ್ದು, ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್‌ಗೆ ಹೋಗಲು ಬಯಸಿದರೆ, ಗ್ರಾಹಕರು ಭದ್ರತಾ ಠೇವಣಿ ನೀಡಬೇಕಾಗುತ್ತದೆ.

ಪೋಸ್ಟ್‌ಪೇಯ್ಡ್

ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳು 399 ರೂ,ಗಳ ಆರಂಭಿಕ ಬೆಲೆಯೊಂದಿಗೆ ಶುರುವಾಗುತ್ತವೆ. ಗ್ರಾಹಕರು ಆರಂಭಿಕ ಪ್ಲ್ಯಾನ್‌ನಲ್ಲಿ ತಿಂಗಳಿಗೆ 75 ಜಿಬಿ ಡೇಟಾವನ್ನು ಪಡೆಯುತ್ತಾರೆ ಮತ್ತು ಜನಪ್ರಿಯ ವೀಡಿಯೊ ಸ್ಟ್ರೀಮಿಂಗ್ ಚಂದಾದಾರಿಕೆಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಇವುಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ ಸೇರಿವೆ.

ರೋಲ್‌ಓವರ್

ಹಾಗೆಯೇ ಯೋಜನೆಯು 200 ಜಿಬಿ ರೋಲ್‌ಓವರ್ ಡೇಟಾ, ಅನಿಯಮಿತ ಧ್ವನಿ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಸಹ ಒಳಗೊಂಡಿದೆ. 599 ರೂ ಯೋಜನೆಯು ಈ ಎಲ್ಲಾ ಪ್ರಯೋಜನಗಳನ್ನು ಹೊಂದಿದೆ. ಒಂದೇ ವಿಷಯವೆಂದರೆ ನೀವು ತಿಂಗಳಿಗೆ 100 ಜಿಬಿ ಡೇಟಾ ಮತ್ತು ಕುಟುಂಬ ಯೋಜನೆಯೊಂದಿಗೆ ಒಂದು ಹೆಚ್ಚುವರಿ ಸಿಮ್ ಕಾರ್ಡ್ ಪಡೆಯುತ್ತೀರಿ.

ಡೇಟಾದ

ಅದೇ ರೀತಿ 799ರೂ.ಗಳ ಜಿಯೋಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಯೊಂದಿಗೆ, ಗ್ರಾಹಕರು 150 ಜಿಬಿ ಡೇಟಾ ಮತ್ತು ಕುಟುಂಬ ಯೋಜನೆಯೊಂದಿಗೆ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳನ್ನು ಪಡೆಯುತ್ತಾರೆ. 999 ರೂಗಳಿಂದ ಪ್ರಾರಂಭವಾಗುವ ಯೋಜನೆಗಳೊಂದಿಗೆ, ರೋಲ್‌ಓವರ್ ಡೇಟಾದ ಮಿತಿ 500 ಜಿಬಿ ವರೆಗೆ ಹೋಗುತ್ತದೆ ಮತ್ತು ನೀವು ತಿಂಗಳಿಗೆ 200 ಜಿಬಿ ಪಡೆಯುತ್ತೀರಿ.

ಜಿಯೋ ಪೋಸ್ಟ್‌ಪೇಯ್ಡ್‌ ಬಳಕೆದಾರರು; ಜಿಯೋ ಪೋಸ್ಟ್‌ಪೇಯ್ಡ್‌ ಪ್ಲಸ್‌ ಪಡೆಯುವುದು ಹೇಗೆ?

ಜಿಯೋ ಪೋಸ್ಟ್‌ಪೇಯ್ಡ್‌ ಬಳಕೆದಾರರು; ಜಿಯೋ ಪೋಸ್ಟ್‌ಪೇಯ್ಡ್‌ ಪ್ಲಸ್‌ ಪಡೆಯುವುದು ಹೇಗೆ?

ಹಂತ 1: ನಿಮ್ಮ ಫೋನ್‌ನಲ್ಲಿ ನೀವು 88-501-88-501 ಸಂಖ್ಯೆಯನ್ನು ಉಳಿಸಿ ನಂತರ ವಾಟ್ಸಾಪ್ ತೆರೆಯಬೇಕು.

ಹಂತ 2: ಪ್ರಸ್ತಾಪಿಸಿದ ಸಂಖ್ಯೆಗೆ ‘ಹಾಯ್-Hi' ಕಳುಹಿಸಿ ಮತ್ತು ಅದಕ್ಕೆ ಪ್ರತಿಯಾಗಿ ನಿಮಗೆ ಉತ್ತರ ಸಿಗುತ್ತದೆ.

ಹಂತ 3: ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಆಪರೇಟರ್‌ನ ಪೋಸ್ಟ್‌ಪೇಯ್ಡ್ ಬಿಲ್ ಹಂಚಿಕೊಳ್ಳಲು ನಿಮ್ಮನ್ನು ಕೇಳಲಾಗುತ್ತದೆ. ನೀವು ಪರದೆಯ ಮೇಲಿನ ಸೂಚನೆಗಳನ್ನು ಅನುಸರಿಸಬೇಕು ಮತ್ತು ಪರಿಶೀಲನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅದರ ನಂತರ, ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಸಿಮ್ ಅನ್ನು ನಿಮ್ಮ ಮನೆಗೆ ಉಚಿತವಾಗಿ ತಲುಪಿಸಲಾಗುತ್ತದೆ.

ಜಿಯೋ ಪ್ರಿಪೇಯ್ಡ್ ಬಳಕೆದಾರರು: ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಪಡೆಯುವುದು ಹೇಗೆ?

ಜಿಯೋ ಪ್ರಿಪೇಯ್ಡ್ ಬಳಕೆದಾರರು: ಜಿಯೋ ಪೋಸ್ಟ್‌ಪೇಯ್ಡ್ ಪ್ಲಸ್ ಪಡೆಯುವುದು ಹೇಗೆ?

ನೀವು ಪ್ರಿಪೇಯ್ಡ್ ಬಳಕೆದಾರರಾಗಿದ್ದರೆ ಮತ್ತು ಈ ಪೋಸ್ಟ್‌ಪೇಯ್ಡ್ ಸೇವೆಗೆ ತೆರಳಲು ಸಿದ್ಧರಿದ್ದರೆ, ನೀವು 1800-88-99-88-99 ಗೆ ಕರೆ ಮಾಡಬೇಕಾಗುತ್ತದೆ. ಜಿಯೋ ಸ್ಟೋರ್ ಅಥವಾ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಿ ಡಾಕ್ಯುಮೆಂಟ್ ಕೆಲಸವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಮತ್ತು ಆ ಕ್ಷಣದಲ್ಲಿ ಸಿಮ್ ಕಾರ್ಡ್ ಸಂಗ್ರಹಿಸಿ. ಅಧಿಕೃತ ಆನ್‌ಲೈನ್ ಜಿಯೋ ವೆಬ್‌ಸೈಟ್ ಮೂಲಕವೂ ನೀವು ಸಿಮ್ ಪಡೆಯಬಹುದು.

Best Mobiles in India

English summary
Jio PostPaid Plus plans come with a starting price of Rs 399. For the same price, you will get 75GB data per month.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X