ಲಿಂಕ್ಸ್ ಗಳನ್ನು ಕ್ಯೂಆರ್ ಕೋಡ್ ಬಳಸಿ ಹಂಚಿಕೊಳ್ಳುವುದು ಹೇಗೆ?

By Gizbot Bureau
|

ಗೂಗಲ್ ಕ್ರೋಮ್ ಮತ್ತೊಂದು ಹೊಸ ಫೀಚರ್ ನ್ನು ಪರಿಚಯಿಸಿದ್ದು ಬಳಕೆದಾರರು ವೆಬ್ ಸೈಟ್ ಅಥವಾ ಯಾವುದೇ ನಿರ್ಧಿಷ್ಟ ವೆಬ್ ಪೇಜ್ ನ್ನು ಕಂಪ್ಯಾಟಿಬಲ್ ಡಿವೈಸ್ ಗಳಾಗಿರುವ ಸ್ಮಾರ್ಟ್ ಫೋನಿನ ಕ್ಯಾಮರಾ ಅಥವಾ ಗೂಗಲ್ ಲೆನ್ಸ್ ಬಳಸಿ ಡಿಕೋಡ್ ಮಾಡಿ ಕ್ಯೂಆರ್ ಕೋಡ್ ಆಗಿ ಬದಲಾಯಿಸಿ ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಿದೆ.

ಫೀಚರ್

ಸದ್ಯಕ್ಕೆ ಈ ಫೀಚರ್ ಟೆಸ್ಟಿಂಗ್ ಹಂತದಲ್ಲಿದ್ದು ಅಂತಿಮ ವರ್ಷನ್ ಗೂಗಲ್ ಕ್ರೋಮ್ ನಲ್ಲಿ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ. ಸದ್ಯಕ್ಕೆ ಕ್ರೋಮ್ ಕ್ಯಾನರಿಯಲ್ಲಿ ಈ ಫೀಚರ್ ಸಿಗುತ್ತಿದೆ. ಆದರೆ ಡೀಫಾಲ್ಟ್ ಆಗಿ ಈ ಫೀಚರ್ ಆಫ್ ಆಗಿದೆ ಮತ್ತು ಮ್ಯಾನುವಲಿ ಬಳಕೆದಾರರು ಅನೇಬಲ್ ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಅನೇಬಲ್ ಮಾಡುವುದಕ್ಕಾಗಿ ಸಾಮಾನ್ಯವಾಗಿ ಅಭಿವೃದ್ಧಿಯ ಹಂತದಲ್ಲಿರುವ ಅಥವಾ ಪ್ರಯೋಗದ ಹಂತದಲ್ಲಿರುವ ಫೀಚರ್ ಗಳನ್ನು ಬ್ರೌಸರ್ ನಲ್ಲಿ ಗೂಗಲ್ ಹೈಡ್ ಮಾಡುವ ವಿಭಾಗವಾಗಿರುವ ಫ್ಲ್ಯಾಗ್ಸ್ ಸೆಕ್ಷನ್ ಗೆ ನೀವು ತೆರಳಬೇಕಾಗುತ್ತದೆ.ಒಂದು ವೇಳೆ ಈ ಫೀಚರ್ ಬಗ್ಗೆ ನಿಮಗೆ ಕುತೂಹಲ ಹೆಚ್ಚಿದ್ದರೆ ಈ ಕೆಳಗಿನ ಹಂತಗಳನ್ನು ನೀವು ಅನುಸರಿಸಬಹುದು.

ಪ್ರಮುಖ ಅಗತ್ಯತೆಗಳು:

ಪ್ರಮುಖ ಅಗತ್ಯತೆಗಳು:

• ನಿಮ್ಮ ಪಿಸಿಯಲ್ಲಿ ಗೂಗಲ್ ಕ್ರೋಮ್ ಕ್ಯಾನರಿ ಇನ್ಸ್ಟಾಲ್ ಆಗಿರಬೇಕು

• ಕಾರ್ಯ ನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕವಿರಬೇಕು

ಸೂಚನೆ: ಸದ್ಯ ಇದು ಕ್ಯಾನರಿಯಲ್ಲಿರುವ ಅಂದರೆ ಟೆಸ್ಟಿಂಗ್ ಹಂತದಲ್ಲಿರುವ ಫೀಚರ್ ಆಗಿರುವುದರಿಂದಾಗಿ ಕೆಲವು ರೀತಿಯ ಗ್ಲಿಚ್ಚಸ್ ಗಳಿರುವ ಸಾಧ್ಯತೆಗಳಿರುತ್ತದೆ.

ಅನುಸರಿಸಬೇಕಾಗಿರುವ ಹಂತಗಳು:

ಅನುಸರಿಸಬೇಕಾಗಿರುವ ಹಂತಗಳು:

1.ಈಗಾಗಲೇ ಕ್ರೋಮ್ ಕ್ಯಾನರಿ ನಿಮ್ಮ ಡಿವೈಸ್ ನಲ್ಲಿ ಇನ್ಸ್ಟಾಲ್ ಆಗಿದೆ ಎಂದು ಭಾವಿಸುತ್ತೇವೆ ಮತ್ತು ಅದನ್ನು ತೆರೆಯಿರಿ.

2.ನಂತರ ಬ್ರೌಸರ್ ನ ಅಡ್ರೆಸ್ ಬಾರ್ ನಲ್ಲಿ ‘chrome://flags/#sharing-qr-code-generator' ಎಂದು ಟೈಪ್ ಮಾಡಿ.

3.ಇದು ಸ್ವಯಂಚಾಲಿತವಾಗಿ ಫ್ಲ್ಯಾಗ್ಸ್ ಪೇಜಿಗೆ ನೇರವಾಗಿ ನಿಮ್ಮನ್ನ ರಿಡೈರೆಕ್ಟ್ ಮಾಡುತ್ತದೆ.

4.ಸಮಯವನ್ನು ಸ್ವಲ್ಪ ಉಳಿತಾಯ ಮಾಡುವುದಕ್ಕಾಗಿ ctrl + f ನ್ನು ನಿಮ್ಮ ಪಿಸಿಯಲ್ಲಿ ಟೈಪ್ ಮಾಡಿ ಮತ್ತು ಕ್ಯೂಆರ್ ಕೋಡ್ ಎಂದು ಟೈಪ್ ಮಾಡಿ ಮತ್ತು ಎಂಟರ್ ನ್ನು ಪ್ರೆಸ್ ಮಾಡಿ.

5.‘Enable sharing page via QR code'ಆಯ್ಕೆಯ ಮುಂಭಾಗದಲ್ಲಿರುವ ಅನೇಬಲ್ ನ್ನು ಬಾಕ್ಸ್ ನಲ್ಲಿ ಆಯ್ಕೆ ಮಾಡಿ.

6.ಇದೀಗ ಸ್ಕ್ರೀನಿನ ಕೆಳಭಾಗದಲ್ಲಿರುವ ರೀಲಾಂಚ್ ನೌ ಬಟನ್ ನ್ನು ಕ್ಲಿಕ್ಕಿಸಿ.

7.ಈ ಫೀಚರ್ ನ್ನು ಬಳಕೆ ಮಾಡುವುದಕ್ಕಾಗಿ ಯಾವುದೇ ವೆಬ್ ಪೇಜ್ ನ್ನು ತೆರೆಯಿರಿ ಮತ್ತು ಮೂರು ಚುಕ್ಕಿಗಳನ್ನು ಕ್ಲಿಕ್ಕಿಸಿ ನಂತರ ‘Generate QR code for this page' ಆಯ್ಕೆಯನ್ನು ಸೆಲೆಕ್ಟ್ ಮಾಡಿ.

Most Read Articles
Best Mobiles in India

English summary
Link Sharing Via QR Codes Is Now A Reality

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X