ಲೋಕಸಭೆ ಎಲೆಕ್ಷನ್ 2019: ವೋಟಿಂಗ್ ಡೇಟ್, ಮತದಾನದ ಪ್ರದೇಶ ಮತ್ತು ಕ್ಷೇತ್ರದ ಅನುಸಾರ ಅಭ್ಯರ್ಥಿಗಳ ಲಿಸ್ಟ್ ತೆಗೆಯುವುದು ಹೇಗೆ?

By Gizbot Bureau
|

ಭಾರತದ ಲೋಕಸಭಾ ಎಲೆಕ್ಷನ್ ಪ್ರಾರಂಭವಾಗಿದೆ. ಈಗಾಗಲೇ ಮೊದಲ ಹಂತದ ಎಲೆಕ್ಷನ್ ನಿನ್ನೆಯೇ ಆರಂಭವಾಗಿದೆ. ಒಟ್ಟು ಏಳು ಹಂತಗಳಲ್ಲಿ ವೋಟಿಂಗ್ ನಡೆಯಲಿದ್ದು ಮೇ 23 ಕ್ಕೆ ಫಲಿತಾಂಶ ಪ್ರಕಟವಾಗುತ್ತದೆ. ಭಾರತದಲ್ಲಿ ಮತದಾನ ಮಾಡಲು ನೀವು ರಿಜಿಸ್ಟ್ರರ್ ಆಗಿದ್ದಲ್ಲಿ, ನೀವು ನಿಮ್ಮ ವೋಟಿಂಗ್ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ಗಮನಿಸಬೇಕಾಗುತ್ತದೆ. ಎರಡು ಪ್ರಮುಖ ಅಂಶಗಳನ್ನು ಇದರಲ್ಲಿ ನೀವು ನೆನಪಿಡಬೇಕು. ಒಂದು ನಿಮ್ಮ ಮತದಾನ ಮಾಡಬೇಕಾಗಿರುವ ಪ್ರದೇಶ ಮತ್ತೊಂದು ನೀವು ಯಾವ ಕ್ಷೇತ್ರದ ಅಭ್ಯರ್ಥಿಗೆ ಮತಹಾಕಬೇಕು ಎಂಬುದು.

ಲೋಕಸಭೆ ಎಲೆಕ್ಷನ್ 2019- ನಿಮಗೆ ಬೇಕಾಗಿರುವ ಮಾಹಿತಿಗಳೆಲ್ಲ ಆನ್ ಲೈನ್ ನಲ್ಲಿ ಲಭ್ಯ

ಯಾರಿಗೆ ನೀವು ಮತ ಚಲಾಯಿಸುತ್ತೀರಿ ಎಂಬುದು ಮುಂದಿನ 5 ವರ್ಷಗಳ ಭಾರತದ ಭವಿಷ್ಯವನ್ನು ನಿರ್ಮಾಣ ಮಾಡುತ್ತದೆ.ಈಗಾಗಲೇ ನೀವು ನಿಮ್ಮ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣ ಚಿತ್ರಣವನ್ನು ಪಡೆದಿರುತ್ತೀರಿ. ನಿಮ್ಮ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ನೀವು ಸಂಪೂರ್ಣ ಮಾಹಿತಿ ಪಡೆದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ವೋಟ್ ಮಾಡಬೇಕಾಗಿರುವ ದಿನಾಂಕ ಮತ್ತು ಪೋಲಿಂಗ್ ಬೂತ್ ಬಗ್ಗೆ ಕೂಡ ನೀವು ತಿಳಿದಿರಬೇಕಾಗುತ್ತದೆ. ಅದಕ್ಕಾಗಿ ಕೆಲವು ವಿಧಾನಗಳಿವೆ. ಏನು ಮಾಡಬೇಕು? ಮುಂದೆ ಓದಿ.

ಪೋಲಿಂಗ್ ಬೂತ್ ಬಗ್ಗೆ ಆನ್ ಲೈನ್ ನಲ್ಲಿ ತಿಳಿಯುವುದು ಹೇಗೆ?

ಪೋಲಿಂಗ್ ಬೂತ್ ಬಗ್ಗೆ ಆನ್ ಲೈನ್ ನಲ್ಲಿ ತಿಳಿಯುವುದು ಹೇಗೆ?

ಮೊದಲಿಗೆ www.electoralsearch.in ಗೆ ತೆರಳಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ ಉದಾಹರಣೆಗೆ ಹೆಸರು, ತಂದೆಯ ಹೆಸರು, ವಯಸ್ಸು, ರಾಜ್ಯ, ಜಿಲ್ಲೆ ಮತ್ತು ಯಾವ ಕ್ಷೇತ್ರಕ್ಕೆ ನೀವು ಬರುತ್ತೀರಿ ಎಂಬುದು. ಕೆಳಭಾಗದಲ್ಲಿರುವ ಕ್ಯಾಪ್ಚಾವನ್ನು ಕೂಡ ಬರೆಯಬೇಕಾಗುತ್ತದೆ ಮತ್ತು ಸರ್ಚ್ ಬಟನ್ ನ್ನು ಕ್ಲಿಕ್ಕಿಸಿ, ಅಥವಾ ನಿಮ್ಮ 10 ಡಿಜಿಟ್ಟಿನ EPIC IDಯನ್ನು ಕೂಡ ಬರೆಯಬಹುದು. ಇದು ನಿಮ್ಮ ವೋಟರ್ ಕಾರ್ಡ್ ನಲ್ಲಿ ಇರುತ್ತದೆ.

ನಿಮ್ಮ ಹೆಸರು ಪಟ್ಟಿಯಲ್ಲಿ ಇದ್ದರೆ, ಉತ್ತರವು ಸ್ಕ್ರೀನಿನ ಕೆಳಭಾಗದಲ್ಲಿ ಬರುತ್ತದೆ. ಜಸ್ಟ್ ನೀವು ಸ್ಕ್ರೋಲ್ ಮಾಡಬೇಕು ಅಷ್ಟೇ. ಎಡಭಾಗದಲ್ಲಿ, ವ್ಯೂ ಡೀಟೆಲ್ಸ್ ನ್ನು ಕ್ಲಿಕ್ಕಿಸಿ ಮತ್ತು ಮುಂದಿನ ಪೇಜ್ ನಲ್ಲಿ ನೀವು ಹೆಸರು, ಪಾರ್ಲಿಮೆಂಟ್ ಕ್ಷೇತ್ರ, ಪೋಲೀಂಗ್ ಸ್ಟೇಷನ್ ಅಡ್ರೆಸ್ ಮತ್ತು ಪೋಲಿಂಗ್ ಡೇಟ್ ಅಂದರೆ ಮತದಾನದ ದಿನಾಂಕ ಎಲ್ಲವನ್ನೂ ಪಡೆಯುತ್ತೀರಿ. ಬಲಭಾಗದಲ್ಲಿ ಎಲೆಕ್ಷನ್ ಅಧಿಕಾರಿಗಳ ಕಾಂಟ್ಯಾಕ್ಟ್ ವಿವರಗಳನ್ನು ಕೂಡ ಪಡೆಯುತ್ತೀರಿ.

ವೋಟರ್ ಹೆಲ್ಪ್ ಲೈನ್ ಆಪ್ ಮೂಲಕ ಕೂಡ ನೀವಿದನ್ನು ಸಾಧಿಸಬಹುದು. ಆಪ್ ನ ಹೋಮ್ ಪೇಜ್ ನಲ್ಲಿ "Search your name in Electoral Roll" ಸರ್ಚ್ ಬಾರ್ ನ್ನು ಟ್ಯಾಪ್ ಮಾಡಿ ಮತ್ತು ಮೇಲಿನ ವಿವರಗಳನ್ನು ನಮೂದಿಸಿ.

ಎಸ್ಎಂಎಸ್ ಮೂಲಕ ಹೇಗೆ ಮತದಾನದ ಬೂತ್ ನ್ನು ಹುಡುಕುವುದು?

ಎಸ್ಎಂಎಸ್ ಮೂಲಕ ಹೇಗೆ ಮತದಾನದ ಬೂತ್ ನ್ನು ಹುಡುಕುವುದು?

ಆನ್ ಲೈನ್ ಆಯ್ಕೆ ಸ್ವಲ್ಪ ಗೊಂದಲಾತ್ಮಕವಾಗಿ ನಿಮಗೆ ಅನ್ನಿಸಿದರೆ ಸಿಂಪಲ್ ವಿಧಾನವೂ ಕೂಡ ಲಭ್ಯವಿದೆ. ಅದುವೇ ಎಸ್ಎಂಎಸ್ ಮೂಲಕ ವಿವರ ಪಡೆಯುವುದು. ಹೌದು ಸರಳವಾಗಿ EPIC ವೋಟರ್ ID ನಂಬರ್ ನ್ನು ಟೈಪ್ ಮಾಡಿ ಮತ್ತು 51969 ಅಥವಾ 166 ಗೆ ಸೆಂಡ್ ಮಾಡಿ. ನೀವು ಕೂಡಲೇ ಲೊಕೇಷನ್ ಮತ್ತು ನಿಮ್ಮ ಪೋಲಿಂಗ್ ಬೂತ್ ನೇಮ್ ಮೆಸೇಜ್ ನಲ್ಲಿ ಬರುತ್ತದೆ.

ಕ್ಷೇತ್ರದ ಆಧಾರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಹೇಗೆ ಪಡೆಯುವುದು?

ಕ್ಷೇತ್ರದ ಆಧಾರದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಹೇಗೆ ಪಡೆಯುವುದು?

ಇದಕ್ಕಾಗಿ ನೀವು ವೋಟರ್ ಹೆಲ್ಪ್ ಲೈನ್ ಆಪ್ ನ್ನು ಆಂಡ್ರಾಯ್ಡ್ ನಲ್ಲಿ ಅಥವಾ ಐಓಎಶ್ ಡಿವೈಸ್ ನಲ್ಲಿ ಡೌನ್ ಲೋಡ್ ಮಾಡಬೇಕಾಗುತ್ತದೆ. ಆಪ್ ನಲ್ಲಿ ಕ್ಯಾಂಡಿಡೇಟ್ ಹೆಸರಿನ ಟ್ಯಾಬ್ ಇದೆ. ಅದನ್ನು ಟ್ಯಾಪ್ ಮಾಡಿ. ಎಲ್ಲಾ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆಗೊಳ್ಳುತ್ತದೆ. ಯಾರೆಲ್ಲ ಇದ್ದಾರೆ, ಯಾರ ಅಪ್ಲಿಕೇಷನ್ ಸ್ವೀಕರಿಸಲಾಗಿದೆ, ಯಾವ ಅಭ್ಯರ್ಥಿಯ ಅರ್ಜಿ ತಿರಸ್ಕೃತಗೊಂಡಿದೆ ಇತ್ಯಾದಿ ವಿವರಗಳು ಸಿಗುತ್ತದೆ. ಸರ್ಚ್ ಬಾರ್ ನಲ್ಲಿ ಅಭ್ಯರ್ಥಿಯ ಹೆಸರನ್ನು ಹಾಕಿ ಕೂಡ ನೀವು ಹುಡುಕಾಟ ನಡೆಸಬಹುದು.

ಒಂದು ವೇಳೆ ನೀವು ಅಭ್ಯರ್ಥಿಯ ಹೆಸರು ತಿಳಿಯದಿದ್ದರೆ ಯಾವುದೇ ಸಮಸ್ಯೆಯಿಲ್ಲ. ಕೆಳಗಿನ ಬಲಭಾಗದಲ್ಲಿ ಫಿಲ್ಟರ್ ಬಟನ್ ಕೂಡ ಇರುತ್ತದೆ. ಅಲ್ಲಿ ಕ್ಷೇತ್ರವನ್ನು ಡ್ರಾಪ್ ಡೌನ್ ನಲ್ಲಿ ಆಯ್ಕೆ ಮಾಡಿ, ಫೇಸ್, ರಾಜ್ಯ ಮತ್ತು ಕ್ಷೇತ್ರ ಇತ್ಯಾದಿಗಳ ವಿವರಗ ನೀಡಿದರೆ ನಿಮ್ಮ ಕ್ಷೇತ್ರದಲ್ಲಿರುವ ಎಲ್ಲಾ ಅಭ್ಯರ್ಥಿಗಳ ಪಟ್ಟಿ ಸಿಗುತ್ತದೆ. ಅಭ್ಯರ್ಥಿಯ ಹೆಸರನ್ನು ಕ್ಲಿಕ್ಕಿಸಿದರೆ ಅವರ ವಯಸ್ಸು, ವಿಳಾಸ ಮತ್ತು ಅಫಿಡವಿಟ್ ಕೂಡ ಸಿಗುತ್ತದೆ.

Best Mobiles in India

English summary
Lok Sabha Election 2019: How to find voting date, polling booth and constituency-wise candidate list

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X