ಒಂದು ದೇಶ ಒಂದು ಕಾರ್ಡ್ ಬಿಡುಗಡೆ: ಹೇಗೆ ಪಡೆಯುವುದು,ಇದರಲ್ಲಿ ನೀವೇನು ಮಾಡಬಹುದು

By Gizbot Bureau
|

ಸಾರ್ವಜನಿಕ ಸಾರಿಗೆಯಲ್ಲಿ ಪಾವತಿ ಕಾರ್ಯಗಳು ಸುಲಭಗೊಳ್ಳಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಒಂದು ದೇಶ ಒಂದು ಕಾರ್ಡ್ ಹೆಸರಿನ ಕಾರ್ಡ್ ನ್ನು ಬಿಡುಗಡೆಗೊಳಿಸಿದ್ದಾರೆ. ಈ ಕಾರ್ಡಿನ ಸಹಾಯದಿಂದಾಗಿ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ.

ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC)ಕಂಪ್ಲೈಟ್ ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ಕಾರ್ಪೋರೇಷನ್ನಿನ ರೂಪೇ ಕಾರ್ಡ್ ಪೇಮೆಂಟ್ ಸ್ಕೀಮ್ ನ ಅಡಿಯಲ್ಲಿ ಇದನ್ನು ಮಾಡಲಾಗಿದೆ. ಒಂದು ದೇಶ ಒಂದು ಕಾರ್ಡ್ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು.

 ಒಂದು ದೇಶ ಒಂದು ಕಾರ್ಡ್ ಬಿಡುಗಡೆ: ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು
  • ಬ್ಯಾಂಕ್ ನಿಂದ ನೀಡಲಾಗುವ ರೂಪೇ/ಡೆಬಿಟ್/ಕ್ರೆಡಿಟ್ ಕಾರ್ಡ್ ನಂತೆಯೇ ಇರುತ್ತದೆ ಒಂದು ದೇಶ ಒಂದು ಕಾರ್ಡ್.
  • ಈ ರೂಪೇ ಕಾರ್ಡ್ ನ್ನು ಪಾಲುದಾರ ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್ ರೂಪದಲ್ಲಿ ನೀಡಬಹುದು.
  • ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಜೊತೆಗೆ ರೂಪೇ ಒಂದು ದೇಶ ಒಂದು ಕಾರ್ಡ್ ಕಾಂಟ್ಯಾಕ್ಟ್ ಲೆಸ್ ಕಾರ್ಡ್ ಆಗಿದ್ದು ಮೆಟ್ರೋ ರೈಲಿನ ಸ್ಮಾರ್ಟ್ ಕಾರ್ಡಿನಂತೆಯೇ ಕಾರ್ಯ ನಿರ್ವಹಿಸುತ್ತದೆ.
  • ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಬೆಂಬಲದೊಂದಿಗೆ ನಿಮ್ಮ ಬ್ಯಾಂಕ್ ನ್ನು ಸಂಪರ್ಕಿಸಿದರೆ ರೂಪೇ ಒಂದು ದೇಶ ಒಂದು ಕಾರ್ಡ್ ನ್ನ ಪಡೆದುಕೊಳ್ಳಬಹುದು.
  • ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ನೊಂದಿಗೆ ರೂಪೇ ಸಂಪರ್ಕವಿಲ್ಲದ ಕಾರ್ಡ್ ನ್ನು 25 ಬ್ಯಾಂಕ್ ಗಳಲ್ಲಿ – ಎಸ್ ಬಿಐ, ಪಿಎನ್ಬಿ, ಮತ್ತು ಇತರೆ ಬ್ಯಾಂಕ್ ಗಳಲ್ಲಿ ಪಡೆದುಕೊಳ್ಳಬಹುದು.
  • ಒಂದು ದೇಶ ಒಂದು ಕಾರ್ಡ್ ಪೇಟಿಎಂ ಪಾವತಿ ಬ್ಯಾಂಕ್ ನಿಂದ ಕೂಡ ನೀಡಲಾಗುತ್ತದೆ.
  • ಬಸ್, ಮೆಟ್ರೋ ಮತ್ತು ಇತರೆ ಸಾರಿಗೆ ವ್ಯವಸ್ಥೆ ಸೇರಿದಂತೆ ಶಾಪಿಂಗ್ ಮಾಡುವ ಸ್ಥಳಗಳಲ್ಲಿ ನೀವಿದನ್ನು ಬಳಕೆ ಮಾಡಬಹುದು. ಮೆಟ್ರೋ, ಬಿಆರ್ ಟಿ, ಸಿಟಿ ಬಸ್, ಸಬ್-ಅರ್ಬನ್ ರೈಲು ಮತ್ತು ಇತ್ಯಾದಿ ಕಡೆಗಳಲ್ಲಿ ಬಳಸಬಹುದು ಎಂದು ಭಾರತದ ಸರ್ಕಾರ ಹೌಸಿಂಗ್ ಮತ್ತು ಅರ್ಬನ್ ಅಫೈರ್ಸ್ ನ ಸಚಿವರು, ಸೆಕ್ರೆಟರಿ ಆಗಿರುವ ದುರ್ಗಾ ಶಂಕರ್ ಮಿಶ್ರಾ ಟ್ವೀಟಿಸಿದ್ದಾರೆ.
  • ಪಾರ್ಕಿಂಗ್ ಮತ್ತು ಟೋಲ್ ಗಳಲ್ಲೂ ಕೂಡ ಪಾವತಿ ಮಾಡುವುದಕ್ಕೆ ಒಂದು ದೇಶ ಒಂದು ಕಾರ್ಡ್ ನ್ನು ಬಳಕೆ ಮಾಡಬಹುದು.
  • ಅಟೋಮ್ಯಾಟಿಕ್ ಫೇರ್ ಕಲೆಷನ್ ಗೇಟ್ ಸ್ವಗತ್ ನ ಬೆಂಬಲ ಮತ್ತು ಸ್ವೀಕಾರ್ ಎಂಬ ಅಟೋಮ್ಯಾಟಿಕ್ ಫೇರ್ ಕಲೆಕ್ಷನ್ ಸಿಸ್ಟಮ್ ನ ಓಪನ್ ಲೂಪ್ ನಿಂದ ಬೆಂಬಲಿತವಾಗಿದ್ದು ಸ್ಥಳೀಯವಾಗಿ ಅಭಿವೃದ್ಧಿ ಮಾಡಲಾಗಿದೆ.
  • ವಿದೇಶ ಪ್ರಯಾಣ ಮಾಡಿದಾಗ ಗ್ರಾಹಕರು 5% ಕ್ಯಾಷ್ ಬ್ಯಾಕ್ ನ್ನು ಎಟಿಎಂನಿಂದ ಮತ್ತು 10% ಕ್ಯಾಷ್ ಬ್ಯಾಕ್ ನ್ನು ಮರ್ಚೆಂಟ್ ಔಟ್ ಲೆಟ್ ನಿಂದ ಪಡೆಯಬಹುದು.
  • ಈ ರೂಪೇ ಕಾರ್ಡ್ ನ್ನು ಡಿಸ್ಕವರ್ ಮತ್ತು ಡೈನರ್ಸ್ ಕ್ಲಬ್ ನ ಅಂತರಾಷ್ಟ್ರೀಯ ವ್ಯಾಪಾರಿಗಳು ಮತ್ತು ಎಟಿಎಂಗಳಲ್ಲಿ ಸ್ವೀಕರಿಸಲಾಗುವುದು.
Best Mobiles in India

Read more about:
English summary
ONE NATION ONE CARD LAUNCHED: HOW TO GET IT, WHAT YOU CAN DO AND MORE

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X