TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಭಾರತದಲ್ಲಿ ಹಬ್ಬದ ಸೀಸನ್ ಆರಂಭವಾಗಿದೆ. ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಗಳಲ್ಲಿ ಭರ್ಜರಿ ರಿಯಾಯಿತಿ, ಇಎಂಐ ಸೌಲಭ್ಯ, ಕ್ಯಾಷ್ ಬ್ಯಾಕ್ ಸೇರಿದಂತೆ ಹಲವು ಆಫರ್ ಗಳಿದೆ. ಫ್ಲಿಪ್ ಕಾರ್ಟ್ ಅಮೇಜಾನ್ ಗಳಲ್ಲಿ ತಮ್ಮ ವ್ಯಾಪಾರ ಹೆಚ್ಚಿಸಿಕೊಳ್ಳಲು ಪ್ರತಿವರ್ಷದಂತೆ ಈ ಬಾರಿಯೂ ವಾರ್ಷಿಕ ಸೇಲ್ ನ್ನು ಆಯೋಜಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಈ ಆನ್ ಲೈನ್ ವ್ಯಾಪಾರವೂ ಅತ್ಯಧಿಕವಾಗುತ್ತಿದೆ.
ಎಲ್ಲಿ ಒಂದು ಒಳ್ಳೇದು ಇರುತ್ತೋ ಅಲ್ಲೊಂದು ಕೆಟ್ಟದ್ದೂ ಇರುತ್ತೆ ಎಂಬಂತೆ ಸಹಜವಾಗೇ ಇದರ ಮೇಲೆ ಹ್ಯಾಕರ್ ಗಳ ಕಣ್ಣು ಬಿದ್ದಿರುತ್ತೆ. ಸೈಬರ್ ಕ್ರಿಮಿನಲ್ ಗಳು ಇಲ್ಲಿ ನಡೆಯುವ ದೊಡ್ಡ ಮೊತ್ತದ ಟ್ರಾನ್ಸ್ಯಾಕ್ಷನ್ ಗಳ ಮೇಲೆ ಕಣ್ಣು ಹಾಕಿರುವ ಸಾಧ್ಯತೆ ಇದೆ. ಹಾಗಾಗಿ ಗ್ರಾಹಕರು ಈ ನಿಟ್ಟಿನಲ್ಲಿ ಹೆಚ್ಚು ಜಾಗೃತರಾಗಿರಬೇಕು, ಈ ಸೈಬರ್ ಕ್ರೈಮ್ ನಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳುವುದು ಹೇಗೆ ಇಲ್ಲಿದೆ ನೋಡಿ ವಿವರ.
'ಫಾರ್ಮ್ ಜಾಕಿಂಗ್'
'ಫಾರ್ಮ್ ಜಾಕಿಂಗ್' ಅನ್ನು ಬಳಸುವುದರಿಂದ, ವೆಬ್ಸೈಟ್ಗಳಲ್ಲಿ ಪಾವತಿ ಫಾರ್ಮ್ಗಳಿಂದ ಹ್ಯಾಕರ್ಗಳು ಕ್ರೆಡಿಟ್ / ಡೆಬಿಟ್ ಕಾರ್ಡ್ ಮಾಹಿತಿಯನ್ನು ಕದಿಯುತ್ತಾರೆ. 'ಫಾರ್ಮ್ ಜಾಕಿಂಗ್' ಅಂದರೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಮತ್ತು ಇತರೆ ಪಾವತಿ ಸಂಬಂಧಿಸಿದ ವಿವರಗಳನ್ನು ಇ-ಕಾಮರ್ಸ್ ಸೈಟ್ ಗಳಿಂದ ಕದಿಯಲು ಬಳಸುವ ಜಾವಾಸ್ಕ್ರಿಪ್ಟ್ ಗಳನ್ನು ವಿವರಿಸುವ ಒಂದು ಪದ.
'ಫಾರ್ಮ್ ಜಾಕಿಂಗ್' ಜಾವಾ ಸ್ಕ್ರಿಪ್ಟ್ ಕೋಡ್ ಗಳು ನಿಮ್ಮ ಪಾವತಿ ವಿವರಗಳನ್ನು ಕಲೆಹಾಕಿರುತ್ತದೆ.
ನೀವು ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಯಾವಾಗ ಸಬ್ಮಿಟ್ ಬಟನ್ ಕ್ಲಿಕ್ಕಿಸುತ್ತೀರೋ ಅಥವಾ ಇದೇ ಮಾದರಿಯ ಇತರೆ ಪಾವತಿ ಸಂಬಂಧಿಸಿದ ಬಟನ್ ನ್ನು ಕ್ಲಿಕ್ಕಿಸುತ್ತೀರೋ ಆಗ ದುರುದ್ದೇಶಪೂರಿತ ಈ ಜಾವಾ ಸ್ಕ್ರಿಪ್ಟ್ ಗಳು ನೀವು ನಮೂದಿಸಿದ ಎಲ್ಲಾ ಮಾಹಿತಿಗಳನ್ನು ಕಲೆ ಹಾಕುತ್ತದೆ. ಕಾರ್ಡ್ ವಿವರಗಳು, ನಿಮ್ಮ ಹೆಸರು, ಅಡ್ರೆಸ್ ಇತ್ಯಾದಿ ವಿವರಗಳು ಇದರಲ್ಲಿ ಒಳಗೊಂಡಿರುತ್ತದೆ. ಇದು ಸೈಬರ್ ಕ್ರಿಮಿನಲ್ ಮಾಡುವ ಕ್ರೈಮ್ ಕೆಲಸವಾಗಿದೆ. ಇದನ್ನು ನಂತರ ಅಟ್ಯಾಕ್ ಮಾಡುವ ವ್ಯಕ್ತಿಗಳ ಸರ್ವರ್ ಗೆ ಕಳುಹಿಸಿಕೊಡಲಾಗುತ್ತದೆ. ನಂತರ ಅವರು ಇದನ್ನು ಪೇಮೆಂಟ್ ಸಂಬಂಧಿಸಿದ ಕೆಟ್ಟ ಕೆಲಸ ಮಾಡುವುದಕ್ಕೆ ಬಳಸಬಹುದು ಅಥವಾ ಡಾರ್ಕ್ ವೆಬ್ ನಲ್ಲಿ ಇತರ ಕ್ರಿಮಿನಲ್ ಗಳಿಗೆ ಮಾರಾಟ ಮಾಡುವ ಸಾಧ್ಯತೆಯೂ ಇದೆ.
3.8 ಲ್ಯಾಕ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯಲಾಗಿತ್ತು
ಇತ್ತೀಚೆಗೆ ಫಾರ್ಮ್ ಜಾಕಿಂಗ್ ಬಳಸಿ ಬ್ರಿಟೀಷ್ ಏರ್ ವೇಸ್ ನಲ್ಲಿ 3.8 ಲ್ಯಾಕ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯಲಾಗಿತ್ತು. ಇತ್ತೀಚೆಗೆ ನಡೆದ ಇಂತಹ ಅಟ್ಯಾಕ್ ಅಂದರೆ ಅದು ಬ್ರಿಟೀಷ್ ಏರ್ ವೇಸ್ ನಲ್ಲಿ ನಡೆದಿದೆ. ಟಿಕೆಟ್ ಮಾಸ್ಟರ್ ವೆಬ್ ಸೈಟ್ ನಲ್ಲಿ ಫಾರ್ಮ್ ಜಾಕಿಂಗ್ ಮೂಲಕ 3.8 ಲಕ್ಷ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯಲಾಗಿತ್ತು.
ನಿಮ್ಮನ್ನ ನೀವು ರಕ್ಷಿಸಿಕೊಳ್ಳುವುದು ಹೇಗೆ? –ಕಠಿಣ ಪಾಸ್ ವರ್ಡ್ ಗಳನ್ನು ಬಳಸಿ ಮತ್ತು ಒಂದೇ ಪಾರ್ಸ್ ವರ್ಡ್ ಗಳನ್ನು ಬಳಸಬೇಡಿ
ನಿಮ್ಮ ಅಕೌಂಟನ್ನು ಕಠಿಣ ಪಾಸ್ ವರ್ಡ್ ಗಳಿಂದ ರಕ್ಷಿಸಿಕೊಳ್ಳಬಹುದು. ಯಾರೂ ಊಹಿಸಲಾಗದ ಪಾಸ್ ವರ್ಡ್ ಗಳನ್ನು ಇಟ್ಟುಕೊಳ್ಳಿ. 10 ಅಪ್ಪರ್ ಕೇಸ್, ಲೋವರ್ ಕೇಸ್ ಸೇರಿದಂತೆ ಸಿಂಬಲ್ ಮತ್ತು ನಂಬರ್ ಗಳು ನಿಮ್ಮ ಪಾಸ್ ವರ್ಡ್ ನಲ್ಲಿ ಇರಲಿ. ಒಂದೇ ಪಾಸ್ ವರ್ಡ್ ನ್ನು ಬೇರೇಬೇರೆ ಅಕೌಂಟ್ ಗಳಲ್ಲಿ ಬಳಸಬೇಡಿ.
ನಿಮ್ಮನ್ನ ನೀವು ರಕ್ಷಿಸಿಕೊಳ್ಳುವುದು ಹೇಗೆ?
ಅಪರಿಚಿತ ವ್ಯಕ್ತಿಗಳ ಇಮೇಲ್ ಮತ್ತು ಅದರ ಅಟ್ಯಾಚ್ ಮೆಂಟ್ ಗಳನ್ನು ತೆರೆಯಬೇಡಿ ಅಸುರಕ್ಷಿತ ಮತ್ತು ಅಪರಿಚಿತ ಅಥವಾ ಅನುಮಾನಾಸ್ಪದ ಮೆಸೇಜ್ ಗಳನ್ನು ತೆರೆಯುವಾಗ ಯೋಚಿಸಿ. ರ್ಯಾಡಂ ಆಗಿ ಲಭ್ಯವಾಗುವ ಯಾವುದೇ ಲಿಂಕ್ ಗಳನ್ನು ಕ್ಲಿಕ್ಕಿಸಬೇಡಿ. ಇಂತಹ ಮೆಸೇಜ್ ಗಳು ಸೈಬರ್ ಕ್ರಿಮಿನಲ್ ಗಳು ನಿಮಗೆ ಕಳುಹಿಸಿರಬಹುದು.
ಮನೆಯ ಇಂಟರ್ನೆಟ್ ಡಿವೈಸ್ ಗಳಿಗೆ ಡೀಫಾಲ್ಟ್ ಪಾಸ್ ವರ್ಡ್ ನ್ನು ಬದಲಾಯಿಸಿ
ಮನೆಯ ಇಂಟರ್ನೆಟ್ ಡಿವೈಸ್ ಗಳಿಗೆ ಡೀಫಾಲ್ಟ್ ಪಾಸ್ ವರ್ಡ್ ನ್ನು ಬದಲಾಯಿಸಿ ಹೊಸ ನೆಟ್ ವರ್ಕ್ ಗೆ ಡಿವೈಸ್ ಕನೆಕ್ಟ್ ಆಗುವಾಗ, ಡೀಫಾಲ್ಟ್ ಪಾಸ್ ವರ್ಡ್ ನ್ನು ಬದಲಿಸುವುದನ್ನು ಮರೆಯಬೇಡಿ. ಅಂತರ್ಜಾಲ ವೈಶಿಷ್ಟ್ಯತೆಗಳ ಬಳಕೆಯನ್ನು ಸರಿಯಾಗಿ ಪ್ಲಾನ್ ಮಾಡಬೇಕು ಉದಾಹರಣೆಗೆ ಸ್ಮಾರ್ಟ್ ಅಪ್ಲಯೆನ್ಸಸ್ ಗಳು, ಯಾವಾಗ ಅಗತ್ಯವಿಲ್ಲವೋ ಆಗ ರಿಮೋಟ್ ಆಕ್ಸಿಸ್ ನ್ನು ತೆಗೆದುಹಾಕಿ ಅಥವಾ ಡಿಸೇಬಲ್ ಮಾಡಿ. ನಿಮ್ಮ ವಯರ್ ಲೆಸ್ ಕನೆಕ್ಷನ್ ನ್ನು ಕಠಿಣ ಪಾಸ್ ವರ್ಡ್ ಗಳಿಂದ ರಕ್ಷಿಸಿಕೊಳ್ಳಿ. ಇತರರು ನಿಮ್ಮ ಡಿವೈಸ್ ಗೆ ಡಾಟಾ ಸಂಚರಿಸುವ ವಿವರಗಳನ್ನು ಇದರಿಂದ ನೋಡಲು ಅಸಾಧ್ಯವಾಗುವಂತೆ ಮಾಡಬಹುದು.
ವಿಪಿಎನ್ ಬಳಸಿ
ಪಬ್ಲಿಕ್ ವೈ-ಫೈ ಮತ್ತು ಇತರೆ ಸುರಕ್ಷಿತವಲ್ಲದ ನೆಟ್ ವರ್ಕ್ ಗೆ ಕನೆಕ್ಟ್ ಆಗುವಾಗ ವಿಪಿಎನ್ ಬಳಸಿ
ಆಂಟಿ ವೈರಸ್ ಸಾಫ್ಟ್ ವೇರ್
ಯಾವಾಗಲೂ ನೂತನ ಆಂಟಿ ವೈರಸ್ ಸಾಫ್ಟ್ ವೇರ್ ನ್ನು ಬಳಸಿ ನಿಮ್ಮ ಡಿವೈಸ್ ನ್ನು ಅಪ್ ಡೇಟ್ ಮಾಡುತ್ತಿರಿ.