ಕಂಪ್ಯೂಟರ್‌ನ್ನು ವೇಗವಾಗಿ ಶಟ್‌ಡೌನ್‌ ಮಾಡುವುದು ಹೇಗೆ?

Posted By:

ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿರುವ ಕಂಪ್ಯೂಟರ್/ಲ್ಯಾಪ್‌ಟಾಪ್‌ನಲ್ಲಿ ಐದಕ್ಕಿಂತ ಹೆಚ್ಚು ವಿಂಡೋಗಳನ್ನು ಓಪನ್‌ ಮಾಡಿಕೊಂಡು ಕೆಲಸ ಮಾಡಿಕೊಂಡಿರುತ್ತಿರಿ. ಇಷ್ಟೇ ಅಲ್ಲದೇ ನಿಮ್ಮ ಕೆಲಸದೊಂದಿಗೆ ಇಂಟರ್‌ನೆಟ್‌ನಿಂದ ನಿಮಗಿಷ್ಟವಾದ ವೀಡಿಯೋವನ್ನು ಡೌನ್‌ಲೋಡ್‌ ಮಾಡಿಕೊಂಡಿರುತ್ತೀರಿ. ಈ ಸಂದರ್ಭದಲ್ಲಿ ನಿಮಗೆ ತುರ್ತು ಕರೆ ಬರುತ್ತದೆ.ಕರೆಗೆ ಪ್ರತಿಕ್ರಿಯೆ ನೀಡಿ ಕೂಡಲೇ ಕಂಪ್ಯೂಟರ್‌ನ್ನು ಶಟ್‌ಡೌನ್‌ ಮಾಡಲು ಪ್ರಯತ್ನಿಸಿತ್ತಿರಿ.

ಕಂಪ್ಯೂಟರ್‌ನ್ನು ವೇಗವಾಗಿ ಶಟ್‌ಡೌನ್‌ ಮಾಡುವುದು ಹೇಗೆ?

ಆದ್ರೆ ಕಂಪ್ಯೂಟರ್‌ ಕೂಡಲೇ ಶಟ್‌ಡೌನ್‌ ಆಗುದಿಲ್ಲ. ಈ ಸಂದರ್ಭದಲ್ಲಿ ನೀವೇನು ಮಾಡುತ್ತೀರಿ? ಎಲ್ಲಾ ವಿಂಡೋಗಳನ್ನು ಕ್ಲೋಸ್‌ ಮಾಡಿ,ಜೊತೆಗೆ ಡೌನ್‌ಲೋಡ್‌ ಆಗುತ್ತಿರುವ ವೀಡಿಯೋ ಕ್ಯಾನ್ಸಲ್‌ ಮಾಡಿ ನಂತರ ಶಟ್‌ಡೌನ್‌ ಮಾಡುತ್ತಿರಿ.ಇಷ್ಟು ಹೊತ್ತು ಶಟ್‌ಡೌನ್‌ ಆಗಬೇಕಾದ್ರೆ ತುಂಬಾ ಹೊತ್ತು ಹಿಡಿಯುತ್ತದೆ. ಆದ್ರೆ ನೀವು ಈ ರೀತಿ ತುರ್ತು ಸಂದರ್ಭದಲ್ಲಿ ವಿಂಡೋಸ್‌ ಬೇಗನೆ ಶಟ್‌ಡೌನ್‌ ಮಾಡಬಹುದು.

ತುರ್ತಾಗಿ ಶಟ್‌ಡೌನ್‌ ಮಾಡಲು ನೀವು ಕೀಬೋರ್ಡ್‌ನಲ್ಲಿರುವ ಅಲ್ಟ್ ಮತ್ತು ಎಫ್‌4(Alt-F4) ಕೀ ಪ್ರೆಸ್‌ ಮಾಡಿದ್ರೆ ಓಪನ್‌ ಆಗಿರುವ ಎಲ್ಲಾ ವಿಂಡೋಗಳು ತಕ್ಷಣವೇ ಕ್ಲೋಸ್‌ ಆಗುತ್ತವೆ.ಈ ಮೂಲಕ ನೀವು ಪ್ರತಿಯೊಂದು ವಿಂಡೋವನ್ನು ಕ್ಲೋಸ್‌ ಮಾಡದೇ ಬೇಗನೆ ಕಂಪ್ಯೂಟರ್‌ ಶಟ್‌ಡೌನ್‌ ಮಾಡಬಹುದು.

Please Wait while comments are loading...
Opinion Poll

Social Counting