ವೈಫೈ ಸ್ಲೋ ಆಗಿದೆಯೇ? ಎಫ್‌ಎಮ್ ರೇಡಿಯೊ ಬಳಸಿ

By Shwetha
|

ಇಂದಿನ ಆಧುನಿಕ ಯುಗದಲ್ಲಿ ವೈಫೈ ಬಳಕೆಯನ್ನು ಮಾಡದವರು ಯಾರಿದ್ದಾರೆ ಹೇಳಿ? ಮೊಬೈಲ್‌ನಿಂದ ಹಿಡಿದು ನೀವು ಬಳಸುವ ಪ್ರತಿಯೊಂದು ಇಲೆಕ್ಟ್ರಾನಿಕ್ ಪರಿಕರದಲ್ಲೂ ವೈಫೈ ಬಳಕೆ ಇಂದು ಲಭ್ಯವಿದೆ. ಅದಾಗ್ಯೂ ಈ ಸೌಲಭ್ಯದಲ್ಲಿ ನೀವೇನಾದರೂ ಸಂಕಷ್ಟವನ್ನು ಎದುರಿಸುತ್ತಿರಬಹುದು. ನೀವೊಂದೇ ಅಪಾರ್ಟ್‌ಮೆಂಟ್‌ನಲ್ಲಿದ್ದು ನಿಮ್ಮ ನೆರೆಹೊರೆಯವರು ಒಂದೇ ವೈಫೈ ಸಂಪರ್ಕವನ್ನು ಬಳಸಿಕೊಳ್ಳುತ್ತಿರುವಾಗ ನಿಮಗೆ ಈ ಸೌಲಭ್ಯದಲ್ಲಿ ನಿಧಾನಗತಿ ಉಂಟಾಗಿರಬಹುದು

ಓದಿರಿ: ಸ್ಮಾರ್ಟ್‌ಫೋನ್ ಸ್ಕ್ರೀನ್ ಒಡೆದಿದ್ದರೆ ಇಲ್ಲಿದೆ ಪರಿಹಾರ

ಆದರೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಎಫ್‌ಎಮ್ ರೇಡಿಯೊ ನಿಮಗೆ ಸಹಾಯ ಮಾಡಲಿದೆ. ಅದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡೋಣ.

ರೇಡಿಯೊ ಡೇಟಾ ಸಿಸ್ಟಮ್

ರೇಡಿಯೊ ಡೇಟಾ ಸಿಸ್ಟಮ್

ನಿಮ್ಮ ಕಾರಿನಲ್ಲಿ ನೀವು ಎಫ್‌ಎಮ್ ರೇಡಿಯೊ ಕೇಳುತ್ತಿರುವಾಗ ಅದು ಹಾಡುವವರ ಹೆಸರು ಮತ್ತು ಸ್ಟೇಶನ್ ಹೆಸರನ್ನು ಡಿಸ್‌ಪ್ಲೇನಲ್ಲಿ ತೋರಿಸುತ್ತದೆ. ಕೆಲವೊಮ್ಮೆ ಟ್ರಾಫಿಕ್ ಅಥವಾ ಹವಾಮಾನ ಮುನ್ಸೂಚನೆಗಳನ್ನು ಇದು ನಿಮಗೆ ತಿಳಿಸುತ್ತದೆ ಅಲ್ಲವೇ? ಈ ಮಾಹಿತಿ ಡಿಜಿಟಲ್ ಸಿಗ್ನಲ್ ಆದ ರೇಡಿಯೊ ಡೇಟಾ ಸಿಸ್ಟಮ್ ಅಥವಾ ಆರ್‌ಡಿಎಸ್ ವ್ಯವಸ್ಥೆಯಿಂದ ದೊರಕುತ್ತದೆ. ಬ್ರಾಡ್‌ಕಾಸ್ಟ್ ಸಿಗ್ನಲ್‌ನ ಬಲಭಾಗದಲ್ಲಿ ಇದು ಪ್ರಸಾರವಾಗುತ್ತದೆ.

ಆರ್‌ಡಿಎಸ್ ಡೇಟಾ

ಆರ್‌ಡಿಎಸ್ ಡೇಟಾ

ಆರ್‌ಡಿಎಸ್ ಡೇಟಾವು ಸಿಗ್ನಲ್ ಅಂಶವನ್ನು ಹೊಂದಿದ್ದು, ತನ್ನಷ್ಟಕ್ಕೆ ಆವರ್ತನೆ ಮಾಡುವ ಶಕ್ತಿಯನ್ನು ಇದು ಪಡೆದುಕೊಂಡಿದೆ.

ವೈಫೈ ನೆಟ್‌ವರ್ಕ್‌

ವೈಫೈ ನೆಟ್‌ವರ್ಕ್‌

ವೈಫೈ ನೆಟ್‌ವರ್ಕ್‌ಗಳು ಇದೇ ಆರ್‌ಡಿಎಸ್ ಅನ್ನು ಕವರ್ ಮಾಡುತ್ತಿದೆ ಎಂದಾದಲ್ಲಿ ಸಮಯ ಹೇಳುವಿಕೆಗೆ ಕೂಡ ಇದನ್ನು ಬಳಸಬಹುದಾಗಿದೆ. ಹೆಚ್ಚು ಬಲವಾದ ಸಿಗ್ನಲ್‌ನೊಂದಿಗೆ ಕಡಿಮೆ ಆವರ್ತಾನಾ ರೇಡಿಯೊ ಸ್ಟೇಶನ್‌ಗಾಗಿ ಎಫ್‌ಎಮ್ ಡಯಲ್ ಅನ್ನು ಸ್ಕ್ಯಾನ್ ಮಾಡುವುದು.

ನಿರ್ದಿಷ್ಟ ಪುನರಾವರ್ತನಾ ಅಂಶ

ನಿರ್ದಿಷ್ಟ ಪುನರಾವರ್ತನಾ ಅಂಶ

ನಿರ್ದಿಷ್ಟ ಪುನರಾವರ್ತನಾ ಅಂಶ ಇದೆ ಎಂದಾದಲ್ಲಿ ಡಿವೈಸ್‌ಗಳು ಅದನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಲಿದೆ. ಇಲ್ಲಿ ಪುನರಾವರ್ತನೆಯಾಗುವ ನಿರ್ದಿಷ್ಟ ಆರ್‌ಡಿಎಸ್ ಸಿಗ್ನಲ್ ಸೀಕ್ವೆನ್ಸ್ ಆರಂಭವನ್ನು ಇದು ಕಂಡುಕೊಳ್ಳುತ್ತದೆ.

ನಿರ್ದಿಷ್ಟ ಸಮಯ

ನಿರ್ದಿಷ್ಟ ಸಮಯ

ಇವುಗಳು ಇಂತಹ ನಿರ್ದಿಷ್ಟ ಪಾಯಿಂಟ್‌ಗೆ ಬಂದಾಗ ಇವುಗಳು ಸಮಯವನ್ನು ನಿರ್ದಿಷ್ಟ ಸಮಯಕ್ಕೆ ವಿಂಗಡಿಸುತ್ತದೆ ಮತ್ತು ಈ ಸಮಯದಲ್ಲಿ ಇತರರ ಕ್ರಿಯೆಯನ್ನು ಇದು ಆಲಿಸುತ್ತದೆ. ಇದು ಡೇಟಾವನ್ನು ಯಾವಾಗ ಕಳುಹಿಸುತ್ತದೆ, ಯಾವಾಗ ಕಳುಹಿಸುವುದಿಲ್ಲ ಎಂಬುದನ್ನು ತಿಳಿಸುತ್ತದೆ.

ವೈಫೈ

ವೈಫೈ

ಇನ್ನೂ ಸರಳವಾಗಿ ಹೇಳಬೇಕೆಂದಾದಲ್ಲಿ ಆರ್‌ಡಿಎಸ್ ಸಿಗ್ನಲ್ ವೈಫೈ ಡಿವೈಸ್‌ಗಳಿಗೆ ಗಡಿಯಾರದಂತೆ ಕೆಲಸ ಮಾಡುತ್ತವೆ ಮತ್ತು ಇತರರು ಈ ಸಮಯದಲ್ಲಿ ವೈಫೈ ಬಳಸುತ್ತಿದ್ದರೆ ಬಳಸದೇ ಇದ್ದಲ್ಲಿ ಇದು ನಿಮಗೆ ತಿಳಿಸುತ್ತದೆ.

ಸಂಶೋಧನೆ

ಸಂಶೋಧನೆ

ಈ ಸಂಶೋಧನೆಯನ್ನು ನಡೆಸಿದವರು ಕುಜಮಾನೊವಿಕ್ ಹಾಗೂ ಅವರ ಸಹೋದ್ಯೋಗಿಗಳಾದ ಮಾರ್ಸೆಲ್ ಮತ್ತು ಉರಿ ಕ್ಲಾರ್‌ಮನ್.

ವೈ-ಎಫ್‌ಎಮ್ ತಂತ್ರಜ್ಞಾನ

ವೈ-ಎಫ್‌ಎಮ್ ತಂತ್ರಜ್ಞಾನ

ಸಂಶೋಧಕರು ಈ ತಂತ್ರಜ್ಞಾನವನ್ನು ವೈ-ಎಫ್‌ಎಮ್ ಎಂಬುದಾಗಿ ಹೆಸರನ್ನಿಟ್ಟಿದ್ದು, ಇದರ ಮೇಲೆ ಪ್ರಬಂಧವನ್ನು ಮಂಡಿಸಿದ್ದಾರೆ. ಎಫ್‌ಎಮ್ ಸಿಗ್ನಲ್‌ಗಳನ್ನು ಬಳಸಿಕೊಂಡು ವೈಫೈ ಡಿವೈಸ್‌ಗಳನ್ನು ಸಂಯೋಜಿಸುವುದಾಗಿದೆ.

ಸಾಫ್ಟ್‌ವೇರ್

ಸಾಫ್ಟ್‌ವೇರ್

ವೈ-ಎಫ್‌ಎಮ್ ತಂತ್ರಜ್ಞಾನವನ್ನು ತಮ್ಮ ವೈಫೈ ಡಿವೈಸ್‌ಗಳಲ್ಲಿ ಸಾಫ್ಟ್‌ವೇರ್ ಅಳವಡಿಸಿಕೊಂಡಲ್ಲಿ ನಿಜಕ್ಕೂ ಈ ವ್ಯವಸ್ಥೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿದೆ ಎಂಬುದು ಕುಜಮಾನೊವಿಕೆ ಅವರ ಅಭಿಪ್ರಾಯವಾಗಿದೆ.

ಕ್ಲಿಕ್

ಕ್ಲಿಕ್

ಗೂಗಲ್ ಹಾಗೂ ಆಪಲ್ ತಮ್ಮ ಓಎಸ್‌ಗಳ ಮೂಲಕ ಈ ಉಪಾಯವನ್ನು ಪಸರಿಸಿದಲ್ಲಿ ಇದು ನಿಜಕ್ಕೂ ಕ್ಲಿಕ್ ಆಗುತ್ತದೆ ಎಂಬುದು ಕುಜಮಾನೊವಿಕೆ ಅನಿಸಿಕೆಯಾಗಿದೆ.

Best Mobiles in India

English summary
In this article we can see Slow wifi FM radio might help with that.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X