ಎಚ್ಚರ: ಸ್ಮಾರ್ಟ್‌ಫೋನ್ ಸ್ಫೋಟಕ್ಕೆ ಕಾರಣಗಳೇನು?

By Shwetha
|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಸ್ಫೋಟ ಕುರಿತ ಹೆಚ್ಚಿನ ಮಾಹಿತಿಗಳನ್ನು ನೀವು ಕೇಳುತ್ತಿರುತ್ತೀರಿ. ಇತ್ತೀಚೆಗೆ ತಾನೇ ಶ್ಯೋಮಿ ಎಮ್ಐ 4ಐ ಕಚೇರಿಯಲ್ಲೇ ಸ್ಫೋಟಗೊಂಡಿದೆ. ಹೀಗೆ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಳ್ಳುತ್ತಿರುವ ಮಾಹಿತಿಯನ್ನು ನೀವು ಕೇಳುತ್ತಿರುತ್ತೀರಿ.

ಓದಿರಿ: ವೇಗವಾಗಿ ಫೋನ್ ಚಾರ್ಜ್ ಮಾಡಲು ಇಲ್ಲಿದೆ ಟಿಪ್ಸ್

ಹಾಗಿದ್ದರೆ ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವುದು ಹೇಗೆ ಎಂಬುದರ ಸಲಹೆಗಳನ್ನೇ ಇಂದಿಲ್ಲಿ ನಾವು ತಿಳಿಸುತ್ತಿದ್ದು ಈ ಟಿಪ್ಸ್‌ಗಳನ್ನು ಅನುಸರಿಸುವುದರ ಮೂಲಕ ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಫೋಟವನ್ನು ತಡೆಗಟ್ಟಬಹುದಾಗಿದೆ.

ಎರಡು ಮುಖ್ಯ ಕಾರಣಗಳು

ಎರಡು ಮುಖ್ಯ ಕಾರಣಗಳು

ಹೆಚ್ಚಾಗಿ ಎರಡು ಮುಖ್ಯ ಕಾರಣಗಳಿಗೆ ಸ್ಮಾರ್ಟ್‌ಫೋನ್ ಬ್ಯಾಟರಿ ಸ್ಫೋಟಗೊಳ್ಳುತ್ತದೆ, ಒಂದಾ ಇದು ಬ್ಯಾಟರಿ ದೋಷವಾಗಿರುತ್ತದೆ ಇನ್ನೊಂದು ಡಿವೈಸ್‌ನ ಚಾರ್ಜರ್ ದೋಷವಾಗಿರುತ್ತದೆ.

ಲಿಥಿಯಮ್ ಬ್ಯಾಟರಿಗಳ ಥರ್ಮಲ್ ರನ್‌ವೇ

ಲಿಥಿಯಮ್ ಬ್ಯಾಟರಿಗಳ ಥರ್ಮಲ್ ರನ್‌ವೇ

ಲಿಥಿಯಮ್ ಬ್ಯಾಟರಿಗಳಲ್ಲಿರುವ ಥರ್ಮಲ್ ರನ್‌ವೇ ಸಮಸ್ಯೆಯು ಹೆಚ್ಚುವರಿ ಉಷ್ಣವನ್ನು ಉತ್ಪಾದಿಸುವಂತೆ ಮಾಡುತ್ತದೆ. ಈ ಕಾರಣದಿಂದಾಗಿ, ಇದಕ್ಕಾಗಿ ಕೆಲವೊಂದು ಬ್ಯಾಟರಿಗಳು ಸುರಕ್ಷತಾ ಕವಚವನ್ನು ಪಡೆದುಕೊಂಡಿರುತ್ತವೆ. ಹೆಚ್ಚು ದುಬಾರಿಯಲ್ಲದ ಬ್ಯಾಟರಿಗಳನ್ನು ಅಜ್ಞಾತ ಕಂಪೆನಿಗಳು ನಿರ್ಮಿಸುತ್ತಿದ್ದು ಬ್ಯಾಟರಿ ಕಳಪೆ ಗುಣಮಟ್ಟದ್ದಾಗಿರುತ್ತದೆ.

ತೆಳು ಬ್ಯಾಟರಿಗಳು

ತೆಳು ಬ್ಯಾಟರಿಗಳು

ಸ್ಮಾರ್ಟ್‌ಫೋನ್ ಬ್ಯಾಟರಿಗಳು ತೆಳುವಾಗಿದ್ದು ಬ್ಯಾರಿಯ ಧನಾತ್ಮಕ ಮತ್ತು ಋಣಾತ್ಮಕ ಪ್ಲೇಟ್‌ಗಳ ನಡುವೆ ಕಡಿಮೆ ಸ್ಥಳಾವಕಾಶವನ್ನು ಹೊಂದಿರುತ್ತದೆ. ಬ್ಯಾಟರಿಯಲ್ಲಿರುವ ಋಣಾತ್ಮಕ ಮತ್ತು ಧನಾತ್ಮಕ ಸ್ಥಳಗಳಲ್ಲಿ ಕಡಿಮೆ ಸ್ಪೇಸ್ ಇರುತ್ತದೆ.

ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡುವುದು

ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡುವುದು

ರಾತ್ರಿ ಪೂರ್ತಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುವ ಅಭ್ಯಾಸವನ್ನು ನೀವು ಬದಲಾಯಿಸಲೇಬೇಕು ಇದು ನಿಮ್ಮ ಬ್ಯಾಟರಿಗೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

ಒರಿಜಿನಲ್ ಬ್ಯಾಟರಿಯನ್ನು ಮಾತ್ರ ಬಳಸಿ

ಒರಿಜಿನಲ್ ಬ್ಯಾಟರಿಯನ್ನು ಮಾತ್ರ ಬಳಸಿ

ತಯಾರಕರು ಸಿದ್ಧಪಡಿಸಿರುವ ಒರಿಜಿನಲ್ ಬ್ಯಾಟರಿಯನ್ನು ಮಾತ್ರ ಬಳಸಿ ಕಡಿಮೆ ದರದಲ್ಲಿ ದೊರೆಯುವ ಕನಿಷ್ಟ ಮಟ್ಟದ ಬ್ಯಾಟರಿಗಳು ನಿಮ್ಮ ಸ್ಮಾರ್ಟ್‌ಫೋನ್‌ಗೆ ಹಾನಿಯನ್ನುಂಟು ಮಾಡುವ ಸಾಧ್ಯತೆ ಇರುತ್ತದೆ.

ಬಿಸಿಗೆ ಫೋನ್ ಅನ್ನು ತೋರಿಸದಿರಿ

ಬಿಸಿಗೆ ಫೋನ್ ಅನ್ನು ತೋರಿಸದಿರಿ

ಬಿಸಿಯಾದ ಸ್ಥಳದಲ್ಲಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇರಿಸದಿರಿ ಅದರಲ್ಲೂ ನೀವು ಚಾರ್ಜ್ ಮಾಡುತ್ತಿರುವಾಗ. ಇದು ಡಿವೈಸ್ ಅನ್ನು ಓವರ್ ಹೀಟ್ ಮಾಡುತ್ತದೆ ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು.

ಕಡಿಮೆ ಮಟ್ಟಕ್ಕೆ ಬ್ಯಾಟರಿ ಮಟ್ಟವನ್ನು ಇಳಿಸದಿರಿ

ಕಡಿಮೆ ಮಟ್ಟಕ್ಕೆ ಬ್ಯಾಟರಿ ಮಟ್ಟವನ್ನು ಇಳಿಸದಿರಿ

ನಿಮ್ಮ ಫೋನ್ ಬ್ಯಾಟರಿ 30 ಮಟ್ಟಕ್ಕೆ ಇಳಿದಾಗ ಮಾತ್ರವೇ ಚಾರ್ಜ್ ಮಾಡಿ. ಲಿಯಾನ್ ಬ್ಯಾಟರಿಗಳು ಈ ಸಮಸ್ಯೆಯಿಂದ ಬಳಲುವಂತಿದ್ದು ಕಡಿಮೆ ವೋಲ್ಟೇಜ್‌ನಿಂದ ಇದು ಬಳಲಬಹುದಾಗಿದೆ.

Best Mobiles in India

English summary
First, you need to keep in mind that unless there is a major flaw in the battery assembly or design, it is quite unlikely for any device, be it a tablet, smartphone, radio or anything to explode. Even if it happens, it is not just the device's battery that is to be blamed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X