ತನ್ನ ಸ್ಮಾರ್ಟ್‌ಫೋನ್ ಅನ್ನೇ ವಿವಾಹವಾದ ಫೋನ್ ಪ್ರೇಮಿ

Written By:

ನಮ್ಮ ಫೋನ್ ಅನ್ನು ನಾವು ಕರೆಮಾಡಲು, ಸಂದೇಶ ಕಳುಹಿಸಲು, ಅಪ್ಲಿಕೇಶನ್‌ಗಳನ್ನು ಬಳಸಲು, ಫೋಟೋಗ್ರಫಿಗಾಗಿ ಇನ್ನೂ ಹೆಚ್ಚೆಂದರೆ ಗೇಮ್ಸ್ ಆಡಲು ಬಳಸಿಕೊಳ್ಳುವುದು ವಾಡಿಕೆ. ಅಂತೂ ಈ ತಂತ್ರಜ್ಞಾನದ ಕೊಡುಗೆಯೊಂದಿಗೆ ನಾವು ಬಿಟ್ಟೂ ಬಿಡದ ಸಂಬಂಧವನ್ನು ಹೊಂದಿದ್ದೇವೆ. ನಾವು ಎಲ್ಲೇ ಹೋಗಲಿ ಫೋನ್ ನಮ್ಮೊಂದಿಗೆ ಇರಬೇಕು. ಕರೆ ಬರಲಿ ಬರದೇ ಇರಲಿ ಅದನ್ನು ಪಾಕೆಟ್‌ನಿಂದ ಹೊರತೆಗೆದು ಸುಮ್ಮನೆ ಕಣ್ಣಾಡಿಸುವುದು ಪ್ರತಿಯೊಬ್ಬ ಫೋನ್ ಮಾಲೀಕನು ಮಾಡುವ ಕೆಲಸವಾಗಿದೆ.

ಓದಿರಿ: ಕೇರಳದಲ್ಲಿ ಸಂಭವಿಸಿದ ರಕ್ತಮಳೆ! ಇಂತಹುದೇ ಇನ್ನಷ್ಟು!

ಆದರೆ ವಿಶ್ವದಲ್ಲಿ ಎಂತೆಂತಹ ಜನರಿರುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲೊಬ್ಬ ಫೋನ್ ಪ್ರೇಮಿ ತನ್ನ ಸ್ಮಾರ್ಟ್‌ಫೋನ್ ಅನ್ನೇ ವಿವಾಹವಾಗಿದ್ದಾನೆ. ಲಾಸ್ ವೇಗಸ್‌ನ ಚರ್ಚ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಆರನ್ ಚೆರುವನಾಕ್ ಹೆಸರಿನ ಕಲಾವಿದ ಮತ್ತು ನಿರ್ದೇಶಕ ಸ್ಮಾರ್ಟ್‌ಫೋನ್ ಅನ್ನೇ ಮದುವೆಯಾಗಿ ವಿಸ್ಮಯ ಸೃಷ್ಟಿಸಿದ್ದಾನೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸರಳ ಸಮಾರಂಭ

ಸರಳ ಸಮಾರಂಭ

ಆರನ್ ಚೆರುವನಾಕ್ ಲಾಸ್ ಏಂಜಲೀಸ್‌ನಲ್ಲಿರುವ ಚರ್ಚ್‌ವೊಂದರಲ್ಲಿ ಸರಳ ಸಮಾರಂಭವನ್ನಿಟ್ಟುಕೊಂಡು ಆರನ್ ಫೋನ್ ಅನ್ನು ವಿವಾಹವಾಗಿದ್ದಾನೆ.

ಮದುಮಕ್ಕಳ ದಿರಿಸು

ಮದುಮಕ್ಕಳ ದಿರಿಸು

ಮದುಮಗ ಆರನ್ ಟ್ಯೂಕ್ಸ್ ಉಡುಪನ್ನು ಧರಿಸಿದ್ದರೆ ಮದುಮಗಳು ಬಿಳಿಯ ಪ್ರೊಟೆಕ್ಟೀವ್ ಕೇಸ್ ಅನ್ನು ಧರಿಸಿಕೊಂಡಿತ್ತು.

ವಿಶ್ವಾಸ

ವಿಶ್ವಾಸ

ವಿವಾಹ ಸಮಯದಲ್ಲಿ ಆರನ್ ಅನ್ನು ನೀನು ವಿವಾಹವಾಗುತ್ತಿರುವ ಸ್ಮಾರ್ಟ್‌ಫೋನ್ ಅನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತೀಯ ಆಕೆಯೊಂದಿಗೆ ವಿಶ್ವಾಸಪೂರ್ವಕವಾಗಿ ನೀನು ಇರುತ್ತೀಯ ಎಂದು ಕೇಳಿದ್ದಕ್ಕೆ ಆರನ್ ಸಮ್ಮತಿಯನ್ನು ಸೂಚಿಸಿದ್ದಾರೆ.

ಹುಚ್ಚುತನ

ಹುಚ್ಚುತನ

ಇದು ಮನರಂಜನೆ ಎಂಬುದಾಗಿ ಹೇಳುವುದಕ್ಕಿಂತ ಒಂದು ರೀತಿಯ ಹುಚ್ಚುತನ ಎಂಬುದಾಗಿ ನಮಗೆ ಅನ್ನಿಸಿದರೂ ಆರನ್ ಈ ರೀತಿ ಮಾಡುವುದಕ್ಕೆ ಕಾರಣವನ್ನು ನೀಡುತ್ತಾರೆ.

ಸ್ಮಾರ್ಟ್‌ಫೋನ್ ಆತ್ಮೀಯತೆ

ಸ್ಮಾರ್ಟ್‌ಫೋನ್ ಆತ್ಮೀಯತೆ

ಆರನ್ ಈ ರೀತಿ ಮಾಡುತ್ತಿರುವುದು ಏಕೆಂದರೆ ಜನರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂಬುದನ್ನು ತೋರಿಸುವುದಕ್ಕಂತೆ.

ಹೆಚ್ಚು ಸಮಯ ಸಂಪರ್ಕ

ಹೆಚ್ಚು ಸಮಯ ಸಂಪರ್ಕ

ತಮ್ಮ ಫೋನ್‌ಗಳೊಂದಿಗೆ ಜನರು ಹೆಚ್ಚು ಸಮಯ ಸಂಪರ್ಕವನ್ನು ಹೊಂದಿರುತ್ತಾರೆ ಮತ್ತು ಎಲ್ಲಾ ಸಮಯವೂ ಅದರೊಂದಿಗೆ ಸಮಯ ಕಳೆಯುತ್ತಾರೆ. ತಮ್ಮ ಫೋನ್‌ಗಳೊಂದಿಗೆ ಅವರು ನಿದ್ರೆಯನ್ನೂ ಮಾಡುತ್ತಾರೆ.

ಮದುವೆಯೇ ಉಚಿತ

ಮದುವೆಯೇ ಉಚಿತ

ತಮ್ಮ ಸೆಲ್ ಫೋನ್‌ನೊಂದಿಗೆ ಅವರು ಬೆಳಗ್ಗೆ ಏಳುತ್ತಾರೆ. ಕೆಲವೊಮ್ಮೆ ಅವರು ಪರಿಶೀಲಿಸುವ ಪ್ರಥಮ ವಿಷಯವೇ ತಮ್ಮ ಫೋನ್ ಆಗಿರುತ್ತದೆ ಎಂಬುದಾಗಿ ಕೆಲ್ಲಿ ತಿಳಿಸುತ್ತಾರೆ, ಆದ್ದರಿಂದ ಮದುವೆಯೇ ಉಚಿತವೆಂಬುದಾಗಿ ನಾನು ಅಂದುಕೊಂಡಿದ್ದೇನೆ ಎಂಬುದು ಆರನ್ ಮಾತಾಗಿದೆ.

ಸ್ಮಾರ್ಟ್‌ಫೋನ್‌ನೊಂದಿಗೆ ನನ್ನದು ದೀರ್ಘ ಸಂಬಂಧ

ಸ್ಮಾರ್ಟ್‌ಫೋನ್‌ನೊಂದಿಗೆ ನನ್ನದು ದೀರ್ಘ ಸಂಬಂಧ

ನನ್ನ ಸ್ಮಾರ್ಟ್‌ಫೋನ್‌ನೊಂದಿಗೆ ನನ್ನದು ದೀರ್ಘ ಸಂಬಂಧವಿದೆ. ಹೆಚ್ಚು ಭಾವನಾತ್ಮಕ ಸಂದರ್ಭಗಳಲ್ಲಿ ನಾನು ನನ್ನ ಫೋನ್‌ನೊಂದಿಗೆ ಸಂಪರ್ಕವನ್ನು ಹೊಂದಿದ್ದೇನೆ. ನಮಗೊಂದು ಆಪ್ತತೆಗಾಗಿ, ನಮ್ಮನ್ನು ನಿರಾಳಗೊಳಿಸಲು, ನಿದ್ರಿಸಲು, ಮೆದುಳನ್ನು ಶಾಂತಗೊಳಿಸಲು, ಹೀಗೆ ಬಹು ಬಗೆಯಲ್ಲಿ ಫೋನ್ ಅನ್ನು ಬಳಸುತ್ತೇವೆ ಎಂಬುದಾಗಿ ಆರನ್ ಯೂಟ್ಯೂಬ್ ವೀಡಿಯೊದಲ್ಲಿ ತಿಳಿಸಿದ್ದಾರೆ. ಆದ್ದರಿಂದಲೇ ಫೋನ್ ಅನ್ನು ಮದುವೆಯಾಗುವ ನಿರ್ಧಾರಕ್ಕೆ ನಾನು ಬಂದಿರುವುದಾಗಿ ಅವರು ತಿಳಿಸುತ್ತಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Aaron Chervenak, an artist-director, drove 365 kilometres from Los Angeles to Las Vegas to take part in a typical Las Vegas wedding that took place at Little Vegas Chapel. The normal wedding had one deviation — the groom Aaron donned a tux while the bride wore a protective case.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot