ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಈಗಲೇ ಈ ಕೆಲಸ ಮಾಡಿ!!

ಪ್ರತಿಯೊಂದು ಡಿವೈಸ್‌ಗೆ ದುಪ್ಪಟ್ಟು ಸುರಕ್ಷತೆಯನ್ನು ಒದಗಿಸಲು ನಾವು 'ಪ್ಲೇ ಪ್ರೊಟೆಕ್ಟ್' ವಿನ್ಯಾಸಗೊಳಿಸಿರುವುದಾಗಿ ಗೂಗಲ್ ಕಂಪೆನಿ ಈಗಾಗಲೇ ಹೇಳಿರುವುದು ನಿಮಗೆಲ್ಲಾ ತಿಳಿದಿದೆ ಎನ್ನಬಹುದು.!!

|

ಪ್ರತಿಯೊಂದು ಆಂಡ್ರಾಯ್ಡ್ ಸಾಧನವೂ ಯಾವಾಗಲೂ ಯಾವುದೇ ರೀತಿಯ ಹಾನಿಗಳಿಂದ ರಕ್ಷಿಸಲ್ಪಟ್ಟಿರುತ್ತದೆ ಎಂಬುದನ್ನು ನಾವು ಖಚಿತಪಡಿಸಿಸುತ್ತೇವೆ. ಆದರೆ, ಪ್ರತಿಯೊಂದು ಡಿವೈಸ್‌ಗೆ ದುಪ್ಪಟ್ಟು ಸುರಕ್ಷತೆಯನ್ನು ಒದಗಿಸಲು ನಾವು 'ಪ್ಲೇ ಪ್ರೊಟೆಕ್ಟ್' ವಿನ್ಯಾಸಗೊಳಿಸಿರುವುದಾಗಿ ಗೂಗಲ್ ಕಂಪೆನಿ ಈಗಾಗಲೇ ಹೇಳಿರುವುದು ನಿಮಗೆಲ್ಲಾ ತಿಳಿದಿದೆ ಎನ್ನಬಹುದು.!!

ಗೂಗಲ್‌ಗೂ ವಂಚಿಸಿ ಜನರಿಗೆ ಮೋಸಗೊಳಿಸುವ ಹ್ಯಾಕರ್‌ಗಳ ಕಾಟ ಹೆಚ್ಚಾಗಿದ್ದನ್ನು ಕಂಡ ಗೂಗಲ್ ಕಂಪೆನಿ ಅದಕ್ಕಾಗಿಯೇ 'ಗೂಗಲ್ ಪ್ಲೇ ಪ್ರೊಟೆಕ್ಟ್' ಆಯ್ಕೆಯನ್ನು ತಂದಿದೆ. ಮತ್ತು ಈ ಗೂಗಲ್ ಪ್ಲೇ ಪ್ರೊಟೆಕ್ಟ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಭರವಸೆಯನ್ನು ಸಹ ಕಂಪೆನಿ ನೀಡಿದೆ.!!

ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ ಈಗಲೇ ಈ ಕೆಲಸ ಮಾಡಿ!!

ಹಾಗಾಗಿ, ಸ್ಮಾರ್ಟ್‌ಫೋನಿನಲ್ಲಿ ಯಾವುದೇ ವೃರಸ್ ಕಂಡುಬಂದರೆ ಬಹುಬೇಗ ನಿಮಗೆ ಮಾಹಿತಿಯನ್ನು ಒದಗಿಸುವ 'ಗೂಗಲ್‌ ಪ್ಲೆ ಪ್ರೊಟೆಕ್ಟ್' ಹೇಗೆ ಕಾರ್ಯನಿರ್ವಹಣೆ ನೀಡುತ್ತದೆ? ಗೂಗಲ್ ಪ್ಲೇ ಪ್ರೊಟೆಕ್ಟ್ ಆಯ್ಕೆಯನ್ನು ಎನೆಬಲ್ ಮಾಡಿಕೊಳ್ಳುವುದು ಹೇಗೆ? ಇದರಿಂದ ಬಳಕೆದಾರರಿಗೆ ಪ್ರಯೋಜನಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!

ಪ್ಲೇಸ್ಟೋರ್ ತೆರೆಯಿರಿ.!!

ಪ್ಲೇಸ್ಟೋರ್ ತೆರೆಯಿರಿ.!!

ನೀವು ಆಪ್ ಡೌನ್‌ಲೋಡ್ ಮಾಡುವ ಪ್ಲೇಸ್ಟೋರ್ ಆಪ್ ತೆರೆಯಿರಿ. ಅದರಲ್ಲಿ ಮೂರುಗೆರೆಗಳುಳ್ಳ ಮೆನು ಬಟನ್ ಆಯ್ಕೆ ಮಾಡಿರಿ.! ನಂತರ ಹಲವು ಆಯ್ಕೆಗಳು ನಿಮಗೆ ಕಾಣಿಸುತ್ತವೆ. ಅವುಗಳಲ್ಲಿ ಸೆಟ್ಟಿಂಗ್ಸ್ ತೆರದು 'ಪ್ಲೆ ಪ್ರೊಟೆಕ್ಟ್' ಆಯ್ಕೆ ಮಾಡಿ.(ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ನ ಸೆಟ್ಟಿಂಗ್ಸ್ ಹೊರಗಡೆಯೆ 'ಗೂಗಲ್‌ ಪ್ಲೆ ಪ್ರೊಟೆಕ್ಟ್' ಆಯ್ಕೆ ಇರುತ್ತದೆ.)

ಗೂಗಲ್‌ ಪ್ಲೆ ಪ್ರೊಟೆಕ್ಟ್ ಎನೆಬಲ್ ಮಾಡಿ.!!

ಗೂಗಲ್‌ ಪ್ಲೆ ಪ್ರೊಟೆಕ್ಟ್ ಎನೆಬಲ್ ಮಾಡಿ.!!

ಅಲ್ಲಿ ನೀವು ಗೂಗಲ್‌ ಪ್ಲೆ ಪ್ರೊಟೆಕ್ಟ್ ಮೇಲೆ ಕ್ಲಿಕ್‌ ಮಾಡಿದ ನಂತರ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ. ಸ್ಕ್ಯಾನ್ ಡಿವೈಸ್ ಸೆಕ್ಯುರಿಟಿ ಹಾಗೂ ಹಾರ್ಮ್‌ಫುಲ್ ಆಪ್ ಡಿಟೆಕ್ಷನ್ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಕಾಣುವ ಎರಡೂ ಆಯ್ಕೆಗಳನ್ನು ಎನೆಬಲ್ ಮಾಡಿದ ನಂತರ ನಿಮ್ಮ ಸ್ಮಾರ್ಟ್‌ಫೋನ್ ಪ್ಲೇ ಪ್ರೊಟೆಕ್ಟ್‌ಗೆ ಎನೆಬಲ್ ಆಗುತ್ತದೆ.!!

ಆಪ್‌ ಸ್ಕ್ಯಾನ್‌ ಮಾಡುತ್ತದೆ.!!

ಆಪ್‌ ಸ್ಕ್ಯಾನ್‌ ಮಾಡುತ್ತದೆ.!!

ಪ್ಲೆ ಪ್ರೊಟೆಕ್ಟ್ ಆಯ್ಕೆಗಳನ್ನು ಎನೆಬಲ್ ಮಾಡಿದರೆ ನೀವು ಯಾವುದೇ ಆಪ್‌ ಇನ್‌ಸ್ಟಾಲ್ ಮಾಡಿದರೂ ಗೂಗಲ್‌ ಅದನ್ನು ಸ್ಕ್ಯಾನ್‌ ಮಾಡುತ್ತದೆ. ಒಂದು ವೇಳೆ ನೀವು ಡೌನ್‌ಲೋಡ್ ಮಾಡಲು ಹೊರಟಿರುವ ಆಪ್‌ಗಳಲ್ಲಿ ವೈರಸ್‌ ಕಂಡು ಬಂದರೆ ಅದನ್ನು ಸ್ಕ್ಯಾನ್ ಮಾಡಿ ಬಹುಬೇಗ ಮಾಹಿತಿಯನ್ನು ನೀಡುತ್ತದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಮಾಲ್ವೇರ್ ವೆಬ್‌ಸೈಟ್‌ ಎಚ್ಚರಿಕೆ!!

ಮಾಲ್ವೇರ್ ವೆಬ್‌ಸೈಟ್‌ ಎಚ್ಚರಿಕೆ!!

ಗೂಗಲ್ ಪ್ಲೆ ಪ್ರೊಟೆಕ್ಟ್ ನಿಮ್ಮ ಆಂಡ್ರಾಯ್ಡ್‌ಗೆ ಇನ್‌ಸ್ಟಾಲ್ ಆಗುವ ಆಪ್‌ಗಳನ್ನು ಮಾತ್ರ ಸ್ಕ್ಯಾನ್ ಮಾಡುವುದಲ್ಲದೇ, ನಿಮ್ಮ ಡಿವೈಸ್‌ಗೆ ಮಾಲ್ವೇರ್ ಅನ್ನು ಪೂರೈಸುವಂತಹ ವೆಬ್‌ಸೈಟ್‌ಗಳ ಬಗ್ಗೆ ಮತ್ತು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸುವಂತೆ ಕೋರಿ ನಿಮ್ಮನ್ನು ಮೋಸಗೊಳಿಸಲು ಪ್ರಯತ್ನಿಸುವವರ ಬಗ್ಗೆ ಎಚ್ಚರಿಕೆ ನೀಡುತ್ತದೆ.!!

ಡಿವೈಸ್‌ ಸುರಕ್ಷತೆ!!

ಡಿವೈಸ್‌ ಸುರಕ್ಷತೆ!!

ನಿಮ್ಮ ಸ್ಮಾರ್ಟ್‌ಫೋನ್ ಆಟೋಮ್ಯಾಟಿಕ್ ಆಗಿ ಪತ್ತೆ ಮಾಡಲು, ಲಾಕ್ ಮಾಡಲು ಮತ್ತು ಐಚ್ಛಿಕವಾಗಿ ಅಳಿಸಲು ಗೂಗಲ್‌ ಪ್ಲೆ ಪ್ರೊಟೆಕ್ಟ್ ಅನುಮತಿಸುತ್ತದೆ. ನಿಮ್ಮ ಡಿವೈಸ್‌ ಪೂರ್ತಿ ಸ್ಕ್ಯಾನ್ ಮಾಡಿ ಯಾವುದಾದರೂ ವೈರಸ್ ಇದ್ದರೆ ಆ ಬಗ್ಗೆ ನಿಮಗೆ ಮಾಹಿತಿ ನೀಡುತ್ತದೆ. ಇದರಿಂದ ನಿಮ್ಮ ಡಿವೈಸ್‌ಗೆ ಸುರಕ್ಷತೆ ಜತೆಗೆ ಹೆಚ್ಚು ಸೇವೆಗಳು ಸಿಗಲಿವೆ!!

Best Mobiles in India

English summary
There's one detail rarely mentioned about Google's splashy new Android security effort—and it's a critical point for everyone to understand.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X