ಹ್ಯಾಕ್ ಆಗದಂತೆ ಪಾಸ್ವರ್ಡ್ ಸುರಕ್ಷತೆಗೆ ಟಿಪ್ಸ್

Posted By: Varun
ಹ್ಯಾಕ್ ಆಗದಂತೆ ಪಾಸ್ವರ್ಡ್ ಸುರಕ್ಷತೆಗೆ ಟಿಪ್ಸ್

ಕಳೆದ ವಾರ ಯಾಹೂ ಖಾತೆ ಹೊಂದಿರುವ ಸುಮಾರು 4.5 ಲಕ್ಷ ಖಾತೆಗಳನ್ನು ಹ್ಯಾಕ್ ಮಾಡಿ ಇಂಟರ್ನೆಟ್ ನಲ್ಲಿ ಅವುಗಳ ಪಾಸ್ವರ್ಡ್ ಅನ್ನು ಹಾಕಲಾಗಿತ್ತು ಎಂಬ ಸುದ್ದಿಯನ್ನು ನಮ್ಮ ಕನ್ನಡ ಗಿಜ್ಬಾಟ್ ನಲ್ಲಿ ಪ್ರಕಟಿಸಿದ್ದೆವು.

ಪದೇ ಪದೇ ಸುಮಾರು ಖಾತೆಗಳು ವಿಶ್ವದಾದ್ಯಂತ ಹ್ಯಾಕ್ ಆಗುತ್ತಿವೆ. ಕೆಲವು ತಿಂಗಳುಗಳ ಹಿಂದೆ ಇದೆ ರೀತಿ ಲಿಂಕ್ಡ್ ಇನ್ ವೆಬ್ಸೈಟ್ ಅನ್ನೂ ಹ್ಯಾಕ್ ಮಾಡಲಾಗಿತ್ತು. ಈ ರೀತಿ ಆದರೆ ನಮ್ಮ ಖಾಸಗಿ ಮಾಹಿತಿಯನ್ನು ಉಪಯೋಗಿಸಿಕೊಂಡು ಅದನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.

ಹಾಗಾಗಿ ನಮ್ಮ ನಮ್ಮ ಖಾತೆಗಳನ್ನು ಇನ್ನೂ ಹೆಚ್ಚು ಹ್ಯಾಕ್ ಪ್ರೂಫ್ ಮಾಡುವ ಅವಶ್ಯಕತೆ ಇರುತ್ತದೆ. ನಮ್ಮ ಪಾಸ್ವರ್ಡ್ ಎಷ್ಟು ಬಲಿಷ್ಠವಾಗಿರುತ್ತದೋ ಅಷ್ಟೇ ಕಷ್ಟವಾಗುತ್ತದೆ, ಹ್ಯಾಕರುಗಳಿಗೆ. ಅದಕ್ಕಾಗಿ ಏನು ಮಾಡುವುದು ಎಂದರೆ ನೀವು ಈ ಕಳಗೆ ಕೊಟ್ಟಿರುವ ಸುಲಾಭವಾದ ಟಿಪ್ಸ್ ಅನ್ನು ಪಾಲಿಸಿದರೆ ನಿಮ್ಮ ಖಾತೆ ಸುರಕ್ಷಿತವಾಗಿರುತ್ತದೆ.

1) ವಿಭಿನ್ನ ಪಾಸ್ವರ್ಡ್ ಬಳಸಿ- ನಿಮ್ಮ ಪ್ರತಿಯೊಂದು ಖಾತೆಗೂ ಡಿಫರೆಂಟ್ ಆದ ಪಾಸ್ವರ್ಡ್ ಕೊಡಿ.

2) ಲಾಗ್ ಆಫ್ ಮಾಡಲು ಮರೆಯದಿರಿ- ಲಾಗಿನ್ ಮಾಡಿ ಬ್ರೌಸ್ ಮಾಡಿದ ಮೇಲೆ ಕಂಪ್ಯೂಟರ್ ಬಿಟ್ಟು ಹೋಗುವಾಗ ಸೈನ್ ಆಫ್ ಮಾಡಿ ಹೋಗಲು ಮರೆಯದಿರಿ. ನಿಮ್ಮ ಪಾಸ್ವರ್ಡ್ ಅನ್ನು ಬೇರೆಯವರು ಬದಲಾಯಿಸುವ ಸಾಧ್ಯತೆ ಇರುತ್ತದೆ.

3) ವೈರಸ್ ವಿರೋಧಿ ತಂತ್ರಾಂಶ ಅಪ್ಡೇಟ್ ಮಾಡಿ- ಆಂಟಿ ವೈರಸ್ ಅನ್ನು ಆಗಾಗ ಅಪ್ಡೇಟ್ ಮಾಡಿದರೆ ಮ್ಯಾಲ್ವೆರ್ ನಿಂದ ರಕ್ಷಿಸಿಕೊಳ್ಳಬಹುದು. ಹಾಗು ಕೀ ಲಾಗರ್ ತಂತ್ರಾಂಶ ಬಳಸಿ ನಿಮ್ಮ ಪಾಸ್ವರ್ಡ್ ಅನ್ನು ಬೇರೆಯವರು ಕದಿಯುವ ಯತ್ನವನ್ನು ತಪ್ಪಿಸಬಹುದು.

4) ಸೈಬರ್ ಅಂಗಡಿಗಳಲ್ಲಿ ಖಾತೆ ತೆರೆಯದಿರಿ- ಆದಷ್ಟೂ ಇಂಟರ್ನೆಟ್ ಕೆಫೆ ಗಳಲ್ಲಿ ಖಾತೆಗಳನ್ನು ಸೈನ್ ಇನ್ ಮಾಡಬೇಡಿ. ಇದಷ್ಟೇ ಅಲ್ಲದೆ ಅಸುರಕ್ಷಿತ ವೈಫೈ ತಾಣಗಳಲ್ಲಿ (ಕಾಫಿ ಶಾಪ್, ಏರ್ಪೋರ್ಟ್) ಉಪಯೋಗಿಸಬೇಡಿ.

5) ನಿಮ್ಮ ಪಾಸ್ವರ್ಡ್ ಅನ್ನು ಹೇಳಬೇಡಿ- ನಿಮ್ಮ ಖಾತೆಯ ಪಾಸ್ವರ್ಡ್ ಅನ್ನು ಯಾವುದೇ ಕಾರಣಕ್ಕೂ (ನಿಮ್ಮ ಸ್ನೇಹಿತರನ್ನೂ ಒಳಗೊಂಡು) ಹೇಳಬೇಡಿ.

6) ಪಾಸ್ವರ್ಡ್ ಆಗಾಗ ಬದಲಾಯಿಸಿ- ಆಗಾಗ ಪಾಸ್ವರ್ಡ್ ಬದಲಾಯಿಸಿದರೆ ಹ್ಯಾಕರುಗಳಿಗೆ ನಿಮ್ಮ ಖಾತೆಯನ್ನು ಹ್ಯಾಕ್ ಮಾಡಲು ಕಷ್ಟವಾಗುತ್ತದೆ.

7) ಸುಲಭ, ಆದರೆ ನಿಮಗೆ ಮಾತ್ರ ನೆನಪಿಗೆ ಬರುವ ಪಾಸ್ವರ್ಡ್ ಕೊಡಿ- ದೊಡ್ಡ ಅಕ್ಷರ, ಚಿಕ್ಕ ಅಕ್ಷರ, ಅಂಕಿಗಳು, ಚಿನ್ಹೆಗಳು, ಈ ರೀತಿಯ ಕಾಂಬಿನೇಶನ್ ಇರುವ ಪಾಸ್ವರ್ಡ್ ಕೊಡಿ. ಅದು ಕನಿಷ್ಠ 8 ಕ್ಯಾರೆಕ್ಟರ್ ಇರುವ ಪಾಸ್ವರ್ಡ್ ಇರಲಿ. ಉದಾ: MaNEYalli10

8 ) ಟಿಪ್ ಶೀಟ್ ಇಟ್ಟುಕೊಳ್ಳಿ- ನೀವು ಕೊಟ್ಟಿರುವ ಪಾಸ್ವರ್ಡ್ ಅನ್ನು ಜ್ಞಾಪಕ ಪಡಿಸಲು ಸುಳಿವು ಕೊಡುವ ಶೀಟ್ ಓದನ್ನು ಇಟ್ಟುಕೊಳ್ಳಿ. ಅದರ ಸುಳಿವು ನಿಮಗೆ ಮಾತ್ರ ಗೊತ್ತಾಗಬೇಕು.

Please Wait while comments are loading...
Opinion Poll

Social Counting