Just In
Don't Miss
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- News
ಚಿರತೆ ಹಾವಳಿ ತಡೆಗೆ ಟಾಸ್ಕ್ ಪೋರ್ಸ್ ರಚಿಸಿ ಆದೇಶ ಹೊರಡಿಸಿದ ಸರ್ಕಾರ, ತಂಡಗಳ ವಿವರ ಇಲ್ಲಿದೆ
- Movies
"ಕಾಂತಾರ' ಯಾಕೆ ಆಸ್ಕರ್ಗೆ ನಾಮಿನೇಟ್ ಆಗ್ಲಿಲ್ಲ ಅಂದ್ರೆ? ಸೀಕ್ವೆಲ್ಗೆ ಪ್ರಶಸ್ತಿ ಗ್ಯಾರೆಂಟಿ": ವಿಜಯ್ ಕಿರಗಂದೂರ್
- Sports
Union Budget 2023: ಕಳೆದ ಬಾರಿಗಿಂತ 700 ಕೋಟಿ ರೂ. ಅಧಿಕ ಪಡೆದ ಕ್ರೀಡಾ ಸಚಿವಾಲಯ
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟ್ರಾಫಿಕ್ ದಂಡವನ್ನು ಆನ್‌ಲೈನ್‌ನಲ್ಲಿ ಪಾವತಿಸೋದು ಹೇಗೆ..? ಇಲ್ಲಿದೆ ಟಿಪ್ಸ್..!
ಸೆಪ್ಟೆಂಬರ್ 1, 2019ರಿಂದ ದೇಶದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಸಂಚಾರಿ ನಿಯಮಗಳ ಉಲ್ಲಂಘನೆಗೆ ಭಾರೀ ಪ್ರಮಾಣದಲ್ಲಿ ದಂಡ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆದರೆ, ರಸ್ತೆ ಅಪಘಾತಗಳಲ್ಲಿ ಸಾಕಷ್ಟು ಜನ ಸಾವಿಗೀಡಾಗುತ್ತಿದ್ದಾರೆ ಎಂಬ ಮಾಹಿತಿಯಿಂದ ಕೇಂದ್ರ ಸರ್ಕಾರ ಸಂಚಾರಿ ನಿಯಮಗಳ ಉಲ್ಲಂಘನೆಯ ಪ್ರಮಾಣ ಇಳಿಸಲು ಈ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಕೇವಲ ಸಾಂವಿಧಾನಿಕ ಬದಲಾವಣೆ ಅಷ್ಟೇ ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ರಸ್ತೆಗಳಲ್ಲಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸಿದರೆ ಕ್ಯಾಮೆರಾವೇ ಇ-ಚಲನ್ ಸೃಷ್ಟಿಸಲಿದೆ. ಸಂಚಾರ ಪೊಲೀಸ್ ಅಧಿಕಾರಿಗಳು ಸಹ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇ-ಚಲನ್ ನೀಡುತ್ತಾರೆ. ಈ ಚಲನ್‌ನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿಸಬಹುದು. ಹಾಗಿದ್ರೇ, ಟ್ರಾಫಿಕ್ ಇ-ಚಲನ್‌ನ್ನು ಆನ್‌ಲೈನ್‌ನಲ್ಲಿ ಪಾವತಿಸುವುದು ಹೇಗೆ..? ಎಂಬುದನ್ನು ಮುಂದೆ ನೋಡಿ.

ಹಂತ 1:
ಮೊಬೈಲ್ ಅಥವಾ ಡೆಸ್ಕ್‌ಟಾಪ್‌ನಲ್ಲಿ https://echallan.parivahan.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. ಈ ವೆಬ್‌ಸೈಟ್ ಒನ್ ನೇಷನ್ ಒನ್ ಚಲನ್ ಉಪಕ್ರಮದಡಿ ಸೃಷ್ಟಿಯಾಗಿದ್ದು, ಇಲ್ಲಿ "ಚಲನ್ ಸ್ಥಿತಿ ಪರಿಶೀಲಿಸಿ" ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 2:
ನೀವು ಲೈಸನ್ಸ್ ಸಂಖ್ಯೆ, ವಾಹನ ಸಂಖ್ಯೆ ಅಥವಾ ಚಲನ್ ಸಂಖ್ಯೆಯೊಂದಿಗೆ ದಂಡದ ಚಲನ್‌ಗಳನ್ನು ಹುಡುಕಬಹುದು. ನಿಮಗೆ ಈ ಮಾಹಿತಿಯ ಅಗತ್ಯವಿರುತ್ತದೆ. ಪ್ರಕ್ರಿಯೆಯಲ್ಲಿ ಮುಂದುವರಿಯಲು ಕ್ಯಾಪ್ಚಾ ನಮೂದಿಸಿ.

ಹಂತ 3:
ಮೇಲಿನ ಮೂರು ವಿವರಗಳಲ್ಲಿ ಒಂದನ್ನು ನಮೂದಿಸಿದ ನಂತರ, ದಂಡದ ಚಲನ್ ವಿವರಗಳು ಆನ್‌ಲೈನ್‌ನಲ್ಲಿ ಗೋಚರಿಸುತ್ತವೆ. ಕೆಲವೊಮ್ಮೆ ಎರಡು ವಿಭಿನ್ನ ಚಲನ್‌ಗಳನ್ನು ಪರವಾನಗಿ ಸಂಖ್ಯೆ ಮತ್ತು ವಾಹನ ಸಂಖ್ಯೆ ಎರಡನ್ನು ಪ್ರತ್ಯೇಕವಾಗಿ ಬಳಸಿ ನೀಡಿರುತ್ತಾರೆ ಎಂಬುದನ್ನು ಗಮನಿಸಬೇಕು. ಆನ್‌ಲೈನ್‌ನಲ್ಲಿ ಉತ್ಪತ್ತಿಯಾಗುವ ಚಲನ್ ವಿವರಗಳನ್ನು ಪಡೆಯಲು ಎರಡು ವಿವರಗಳನ್ನು ಬಳಸಬಹುದು.

ಹಂತ 4:
ಚಲನ್ ವಿವರಗಳನ್ನು ಜನರೇಟ್ ಮಾಡಿದ ನಂತರ, ಆನ್‌ಲೈನ್‌ನಲ್ಲಿ ಪಾವತಿ ಮಾಡಲು ‘ಈಗ ಪಾವತಿಸಿ' ಆಯ್ಕೆಯನ್ನು ಕ್ಲಿಕ್ ಮಾಡಿ. ಬಳಿಕ ವಹಿವಾಟನ್ನು ಪ್ರಾರಂಭಿಸಲು, ನಿಮ್ಮ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಪರಿಶೀಲಿಸಬೇಕಾಗುತ್ತದೆ. ಈ ಹಂತದಲ್ಲಿ, ನಿಮ್ಮನ್ನು ನಿಮ್ಮ ರಾಜ್ಯದ ಇ-ಚಲನ್ ಪಾವತಿ ವೆಬ್‌ಸೈಟ್‌ಗೆ ಕೊಂಡೊಯ್ಯಲಾಗುತ್ತದೆ.

ಹಂತ 5:
ಮೇಲಿನ ಹಂತ ಮುಗಿದ ನಂತರ, ನೀವು ಪಾವತಿಸಿದ ಬಗ್ಗೆ ದೃಢೀಕರಣವನ್ನು ನೋಡುತ್ತೀರಿ. ಇಲ್ಲಿ ‘‘Proceed with Net Payment'' ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ಆದ್ಯತೆಯ ಪೇಮೆಂಟ್ ಗೇಟ್‌ವೇ ಆಯ್ಕೆಮಾಡಿ. ಇಲ್ಲಿ ನಿಮಗೆ ನೆಟ್ ಬ್ಯಾಂಕಿಂಗ್, ಕಾರ್ಡ್ ಪಾವತಿ ಮತ್ತಿತರ ಇತರ ಪಾವತಿ ವಿಧಾನಗಳು ಲಭ್ಯವಿದ್ದು, ನಿಮ್ಮ ಇಷ್ಟದ ಪಾವತಿ ವಿಧಾನದಲ್ಲಿ ದಂಡ ಪಾವತಿಸಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470