ಮತದಾರರ ಗುರುತಿನ ಚೀಟಿ ಪರಿಶೀಲನೆ ಮತ್ತು ತಿದ್ದುಪಡಿ ಇದೀಗ ಬಹಳ ಸುಲಭ

By Gizbot Bureau
|

ಸೆಪ್ಟೆಂಬರ್ 1 ರಂದು ಕ್ರೌಡ್ ಸೋರ್ಸಿಂಗ್ ಮೂಲಕ ಮತದಾರರ ಪಟ್ಟಿಯನ್ನು ನವೀಕರಿಸುವ ಚುನಾವಣಾ ಆಯೋಗದ ಹೊಸ ಮೆಗಾ ಮತದಾರರ ಪರಿಶೀಲನಾ ಕಾರ್ಯಕ್ರಮವನ್ನು ದೇಶದಾದ್ಯಂತ ಪ್ರಾರಂಭಿಸಲಾಯಿತು.

ಮೆಗಾ ಮಿಲಿಯನ್

ಈ ಕಾರ್ಯಕ್ರಮದ ಅಡಿಯಲ್ಲಿ, ಪ್ರತಿ ಕುಟುಂಬದ ಮತದಾರರಿಗೂ ಕೂಡ ಯ್ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಸಿಗುತ್ತದೆ. ಚುನಾವಣಾ ನೊಂದಣಿಗೆ ಸಂಬಂಧಿಸಿದ ತಮ್ಮ ಕುಟುಂಬದ ಸದಸ್ಯರ ಎಲ್ಲಾ ದಾಖಲಾತಿಗಳನ್ನು ಟ್ಯಾಗ್ ಮಾಡಿ ಅಪ್ ಲೋಡ್ ಮಾಡುವುದಕ್ಕೆ ಇದರಲ್ಲಿ ಅವಕಾಶ ನೀಡಲಾಗುತ್ತದೆ.

"ಮೆಗಾ ಮಿಲಿಯನ್" ಬಿಡುಗಡೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಕೂಡ ಬಿಡುಗಡೆಯಾಗುತ್ತದೆ. ಇದನ್ನು ಒಂದು ಮಿಲಿಯನ್ ಮತಗಟ್ಟೆಗಳಲ್ಲಿ ರಾಜ್ಯದ ಪ್ರಧಾನ ಕಛೇರಿ ಮಟ್ಟದಲ್ಲಿ ಎಲ್ಲಾ 36 ಸಿಇಓಗಳು, ಜಿಲ್ಲಾ ಪಟ್ಟದಲ್ಲಿ ಎಲ್ಲಾ 740 ಜಿಲ್ಲೆಯ ಚುನಾವಣಾ ಅಧಿಕಾರಿಗಳು ಮತ್ತು ಬಿಎಲ್ಓಗಳು ಮತ್ತು ಚುನಾವಣಾ ನೊಂದಣಿ ಅಧಿಕಾರಿಗಳು ಮಾಡಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇವಿಪಿ ಎಷ್ಟು ಕಾಲ ಇರುತ್ತದೆ?

ಇವಿಪಿ ಎಷ್ಟು ಕಾಲ ಇರುತ್ತದೆ?

ದೆಹಲಿಯಲ್ಲಿ ಇವಿಪಿ ಸುಮಾರು 14,000 ವಿಭಿನ್ನ ಸ್ಥಳಗಳಲ್ಲಿ ಬಿಡುಗಡೆಯಾಗುತ್ತದೆ. ಕ್ಯಾಂಪೇನ್ ಮೋಡ್ ನಲ್ಲಿ ಈ ಕಾರ್ಯಕ್ರಮ ಜರುಗಲಿದ್ದು ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 15 ರ ವರೆಗೂ ಕೂಡ ನಡೆಯುತ್ತದೆ.

ಇವಿಪಿಯ ಉದ್ದೇಶ ಏನು?

ಮತದಾರರ ಪಟ್ಟಿಯ ಆರೋಗ್ಯ ಸುಧಾರಣೆ ಮತ್ತು ಮತದಾರರ ಪಟ್ಟಿಯ ವಿಶೇಷ ಸಾರಾಂಶ ಪರಿಷ್ಕರಣೆಯನ್ನು ಮಾಡಿ ಎಲ್ಲಾ ಅರ್ಹ ನಾಗರೀಕರ ದಾಖಲಾತಿಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಒಂದು ಬಾರಿಯ ದೃಢೀಕರಣದ ವಿವರಗಳು ಮತ್ತು ಕಾಂಟ್ಯಾಕ್ಟ್ ವಿವರಗಳನ್ನು ಹಂಚಿಕೊಳ್ಳುವುದರಿಂದಾಗಿ ಮತದಾರರಿಗೆ ಆನ್ ಲೈನ್ ಅಪ್ಲಿಕೇಷನ್ನಿನ ಸ್ಥಿತಿಗತಿ,ಇಪಿಐಸಿಯ ಸ್ಥಿತಿಗತಿ, ಚುನಾವಣಾ ದಿನಾಂಕದ ಪ್ರಕಟಣೆ, ರಿಜಿಸ್ಟರ್ ಆಗಿರುವ ಇಮೇಲ್ ಗೆ ವೋಟರ್ ಸ್ಲಿಪ್ ಮತ್ತು ಮೊಬೈಲ್ ಸಂಖ್ಯೆಯ ಕುರಿತಾದ ನವೀಕರಣಗಳನ್ನು ಪಡೆಯುವುದಕ್ಕೆ ಅವಕಾಶವಿರುತ್ತದೆ. ಮತದಾರರ ಜೊತೆಗೆ ಸರಣಿ ಸಂಖ್ಯೆಗಳು, ಮತದಾನ ಕೇಂದ್ರದ ವಿವರಗಳು, ಬಿಎಲ್ಓ/ಇಆರ್ ಓ ಬದಲಾವಣೆ, ಮತದಾನದ ಕೇಂದ್ರಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಮತದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಯಾವಾಗ ಪಟ್ಟಿ ಬಿಡುಗಡೆಗೊಳ್ಳುತ್ತದೆ?

ಯಾವಾಗ ಪಟ್ಟಿ ಬಿಡುಗಡೆಗೊಳ್ಳುತ್ತದೆ?

ಮೊದಲಿಗೆ ಸಾರಾಂಶ ಕರಡು ಪ್ರತಿಯನ್ನು ಪ್ರಕಟಿಸಲಾಗುತ್ತದೆ. ಅಂದಾಜು ಜನವರಿ 1,2020 ರ ಹೊತ್ತಿಗೆ ಪ್ರಕಟಿಸುವ ನಿರೀಕ್ಷೆ ಇದೆ. ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಅಂತಿಮ ಹಂತದ ಬಿಡುಗಡೆಯನ್ನು ಕೈಗೊಳ್ಳಲಾಗುವುದು.

ಯಾವೆಲ್ಲಾ ಸೌಲಭ್ಯಗಳು ಲಭ್ಯವಿದೆ?

ಮತದಾರರು ಈ ಕೆಳಗಿನ ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿರುತ್ತದೆ.

• ಸದ್ಯ ಇರುವ ವಿವರಗಳನ್ನು ಪರಿಶೀಲಿಸಬಹುದು ಮತ್ತು ತಿದ್ದುಪಡಿ

ಮಾಡುವುದಕ್ಕೆ ಅವಕಾಶವಿರುತ್ತದೆ.

• ಈ ಕೆಳಗಿನ ದಾಖಲಾತಿಗಳಲ್ಲಿ ಒಂದನ್ನು ಸ್ಕ್ಯಾನ್/ಡಿಜಿಲಾಕರ್ ಕಾಪಿ ಮಾಡುವ ಮೂಲಕ ಪ್ರವೇಶದ ದೃಢೀಕರಣ ಸಾಧ್ಯ:(i) ಭಾರತೀಯ ಪಾಸ್ ಪೋರ್ಟ್ (ii) ಡ್ರೈವಿಂಗ್ ಲೈಸನ್ಸ್ (iii)ಆಧಾರ್ ಕಾರ್ಡ್ (iv) ರೇಷನ್ ಕಾರ್ಡ್ (v) ಸರ್ಕಾರಿ ಅಥವಾ ಅರೆ ಸರ್ಕಾರಿ ಅಧಿಕಾರಿಗಳಿಗೆ ಗುರುತಿನ ಚೀಟಿ (vi) ಬ್ಯಾಂಕ್ ಪಾಸ್ ಬುಕ್ (vii) ರೈತರ ಗುರುತಿನ ಚೀಟಿ (viii) ಪಾನ್ ಕಾರ್ಡ್ (ix)ಆರ್ ಜಿಐ ನಿಂದ ನೀಡಲಾಗಿರುವ ಸ್ಮಾರ್ಟ್ ಕಾರ್ಡ್ (x)ನೀರು/ವಿದ್ಯುತ್/ಟೆಲಿಫೋನ್/ ಗ್ಯಾಸ್ ಕನೆಕ್ಷನ್ನಿನ ಇತ್ತೀಚೆಗಿನ ಬಿಲ್

• ಕುಟುಂಬ ಸದಸ್ಯರ ವಿವರಗಳನ್ನು ಒದಗಿಸುವುದು ಮತ್ತು ಪರಿಶೀಲಿಸುವುದಕ್ಕೆ ಸಾಧ್ಯವಾಗುತ್ತದೆ.

• ಮೃತಪಟ್ಟ ಅಥವಾ ಶಾಶ್ವತವಾಗಿ ದೂರವಾದ ಕುಟುಂಬ ಸದಸ್ಯರ ವಿವರಗಳನ್ನು ನವೀಕರಿಸುವುದಕ್ಕೆ ನೆರವು

• 01.01.2001 ಅಥವಾ ಅದಕ್ಕೂ ಮುನ್ನ ಜನಿಸಿದ ಅರ್ಹ ಕುಟುಂಬ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮತ್ತು 02.01.2002 ರಿಂದ 01.01.2003 ರ ವರೆಗೆ ನಿಮ್ಮ ಜೊತೆಗೆ ವಾಸಿಸುತ್ತಿರುವ ಮತದಾರ ಅಥವಾ ಕುಟುಂಬ ಸದಸ್ಯರನ್ನು ಅಂದರೆ ನಿರೀಕ್ಷಿತ ಮತದಾರರನ್ನು ಸೇರಿಸುವುದು..

• ಉತ್ತಮ ಚುನಾವಣಾ ಸೇವೆಯನ್ನು ಪಡೆಯಲು ಜಿಐಎಸ್ ಕಕ್ಷೆಗಳನ್ನು ಮನೆಗೆ (ಮೊಬೈಲ್ ಆಪ್ ಮೂಲಕ) ಒದಗಿಸುವುದು.

• ಸದ್ಯ ಇರುವ ಮತದಾನ ಕೇಂದ್ರಗಳು ಮತ್ತು ಪರ್ಯಾಯ ಪಿಎಸ್ ಕುರಿತು ಸಲಹೆ ಮತ್ತು ಸೂಚನೆಗಳನ್ನು ಪಡೆಯುವುದು.

ಆನ್ ಲೈನ್ ನಲ್ಲಿ ಮಾಡುವುದಕ್ಕೆ ಸಾಧ್ಯವೇ?

ಆನ್ ಲೈನ್ ನಲ್ಲಿ ಮಾಡುವುದಕ್ಕೆ ಸಾಧ್ಯವೇ?

ಹೌದು,ನೀವು NVSP ಪೋರ್ಟಲ್ (nvsp.in) ಅಥವಾ Voter Helpline App ಗೆ ಲಾಗಿನ್ ಆಗಬಹುದು. ನೀವು ನಿಮ್ಮ ಹೆಸರು, ಕುಟುಂಬದ ವಿವರ ಮತ್ತು ವಿಳಾಸವನ್ನು ನಮೂದಿಸಬಹುದು.ಈ ಸೈಟ್ ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬಹುದು.ಇದು ಸ್ವಯಂ ರಚನೆಯ ಅರ್ಜಿಯಾಗಿರುತ್ತದೆ ಅಂದರೆ ಆಟೋ ಜನರೇಟೆಡ್ ಫಾರ್ಮ್ ಆಗಿರುತ್ತದೆ.

ಫಾರ್ಮ್ 6 ಮತ್ತು 7 ನ್ನು ಹೆಸರನ್ನು ಸೇರಿಸುವುದಕ್ಕೆ ಮತ್ತು ಡಿಲೀಟ್ ಮಾಡುವುದಕ್ಕಾಗಿ ಭರ್ತಿ ಮಾಡಬಹುದು. 18 ವರ್ಷ ತುಂಬುವವರಿಗೆ ಫಾರ್ಮ್ ಅನ್ನು ಭರ್ತಿ ಮಾಡುವುದಕ್ಕಾಗಿ ಅಲರ್ಟ್ ಗಳನ್ನು ಕಳುಹಿಸಲಾಗುತ್ತದೆ.

ಆಫ್ ಲೈನ್ ನಲ್ಲಿ ಮಾಡುವುದಾದರೆ ಯಾವ ಕ್ರಮ ಅನುಸರಿಸಬೇಕು?

ನೀವು ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು ಅಥವಾ ಹತ್ತಿರದ ಯಾವುದೇ ಮತದಾರರ ಸೌಲಭ್ಯ ಕೇಂದ್ರಕ್ಕೆ ತೆರಳಬಹುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸುಮಾರು ಏಳರಿಂದ ಎಂಟು ಸಾಮಾನ್ಯ ಸೇವಾ ಕೇಂದ್ರಗಳಿವೆ. ಎನ್ ವಿಎಸ್ ಪಿ ವೆಬ್ ಸೈಟ್ ನಲ್ಲಿ ಹೆಚ್ಚಿನ ಮಾಹಿತಿಗಳು ಲಭ್ಯವಿದೆ.

ಶುಲ್ಕ ಪಾವತಿಸಬೇಕೇ?

ಪ್ರತಿ ಸಿಎಸ್ ಸಿ ಕೂಡ ನಾಮಿನಲ್ ಫೀಯನ್ನು ಪಾವತಿಸಬೇಕಾಗುತ್ತದೆ.ಉದಾಹರಣೆಗೆ ಡಾಕ್ಯುಮೆಂಟ್ ಅಪ್ ಲೋಡ್ ಮಾಡುವುದಕ್ಕೆ ಒಂದು ರುಪಾಯಿ ಅಥವಾ ಫೋಟೋ ಅಪ್ ಲೋಡ್ ಮಾಡುವುದಕ್ಕೆ ಎರಡು ರುಪಾಯಿ ಮತ್ತು ಫಾರ್ಮ್ 6 ನ್ನು ಸಲ್ಲಿಸುವುದಕ್ಕೆ 1ರುಪಾಯಿ ಹೀಗೆ. ಪ್ರತಿ ಸಿಎಸ್ ಸಿಯಲ್ಲೂ ಕೂಡ ಶುಲ್ಕವನ್ನು ಪ್ರದರ್ಶಿಸಲಾಗುತ್ತದೆ.

ವಿಳಾಸ ಪುರಾವೆಯಾಗಿ ಯಾವೆಲ್ಲಾ ದಾಖಲೆಗಳನ್ನು ಬಳಸಬಹುದು?

ವಿಳಾಸ ಪುರಾವೆಯಾಗಿ ಯಾವೆಲ್ಲಾ ದಾಖಲೆಗಳನ್ನು ಬಳಸಬಹುದು?

ಈಗಾಗಲೇ ಅನುಮೋದಿಸಲಾಗಿರುವ ಏಳು ದಾಖಲೆಗಳ ಜೊತೆಗೆ- ಪಾಸ್ ಪೋರ್ಟ್,ಚಾಲನಾ ಪರವಾನಗಿ, ಆಧಾರ್, ರೇಷನ್ ಕಾರ್ಡ್, ಸರ್ಕಾರಿ ಅಥವಾ ಅರೆಸರ್ಕಾರಿ ಅಧಿಕಾರಿಗಳಿಗೆ ಗುರುತಿನ ಚೀಟಿ,ಬ್ಯಾಂಕ್ ಪಾಸ್ ಬುಕ್, ರೈತರ ಗುರುತಿನ ಚೀಟಿಗಳನ್ನು ಬಳಸಬಹುದು. ಇದರ ಜೊತೆಗೆ ಇನ್ನೂ ಮೂರು ದಾಖಲೆಗಳನ್ನು ಬಳಸಲಾಗುತ್ತದೆ. ಅವುಗಳೆಂದರೆ ಪಾನ್ ಕಾರ್ಡ್, ಎನ್ಆರ್ ಪಿ ಅಡಿಯಲ್ಲಿ ಆರ್ ಜಿಐ ನೀಡಿದ ಸ್ಮಾರ್ಟ್ ಕಾರ್ಡ್ ಮತ್ತು ನೂತನವಾಗಿರುವ ನೀರು/ಟೆಲಿಫೋನ್/ ವಿಳಾಸಕ್ಕಾಗಿ ಗ್ಯಾಸ್ ಕನೆಕ್ಷನ್ ಬಿಲ್, ಇವೆಲ್ಲವೂ ಅರ್ಜಿದಾರರ ಹೆಸರಲ್ಲಿ ಇಲ್ಲವೇ ಪೋಷಕರು ಅಥವಾ ಇತ್ಯಾದಿ ಅವನ/ಳ ತಕ್ಷಣದ ಸಂಬಂಧದ ರೂಪದಲ್ಲಿ ಇರುವುದಕ್ಕೆ ಅವಕಾಶವಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Best Mobiles in India

English summary
Updating And Charging Voter ID Became Mich Simple: Here Is Everything You Need To Know

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X