ಪೆಟ್ರೋಲ್ ಉಳಿತಾಯಕ್ಕಾಗಿ ಗೂಗಲ್ ಮ್ಯಾಪ್ ನ ಈ ಟ್ರಿಕ್ ಬಳಸಿ

By Gizbot Bureau
|

ದಿನದಿಂದ ದಿನಕ್ಕೆ ಏರುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಗಳಿಂದಾಗಿ ಡ್ರೈವಿಂಗ್ ಮಾಡುವಾಗ ನೀವು ತಲುಪಬೇಕಾದ ಸ್ಥಳವನ್ನು ತಲುಪುವುದಕ್ಕಾಗಿ ಒಂದೆರಡು ಕಿಲೋಮೀಟರ್ ಹೆಚ್ಚುವರಿ ಡ್ರೈವಿಂಗ್ ಮಾಡುವುದು ಖಂಡಿತ ದುಬಾರಿ ಅನ್ನಿಸಿಕೊಳ್ಳುತ್ತದೆ.ಇದೀಗ ಹೆಚ್ಚಿನವರಿಗೆ ಗೂಗಲ್ ಮ್ಯಾಪ್ ಜೀವನಶೈಲಿಯನ್ನೇ ಬದಲಿಸಿದ್ದು ನೀವು ತಲುಪಬೇಕಾಗಿರುವ ಸ್ಥಳವನ್ನು ತಲುಪುವುದಕ್ಕೆ ಹತ್ತಿರದ ಮಾರ್ಗ ಯಾವುದು ಎಂಬುದನ್ನು ಅದುವೇ ತಿಳಿಸುತ್ತದೆ.

ಪೆಟ್ರೋಲ್ ಉಳಿತಾಯಕ್ಕಾಗಿ ಗೂಗಲ್ ಮ್ಯಾಪ್ ನ ಈ ಟ್ರಿಕ್ ಬಳಸಿ

ಎಂತಹದ್ದೇ ಅಪರಿಚಿತ ಪ್ರದೇಶಕ್ಕೆ ಆದರೂ ಕೂಡ ಗೂಗಲ್ ಮ್ಯಾಪ್ ನ ಸಹಾಯದಿಂದ ಬಹಳ ಸುಲಭವಾಗಿ ತಲುಪಿ ಬಿಡಬಹುದು. ಮ್ಯಾಪ್ ನಿಮಗೆ ಟ್ರಾಫಿಕ್ ಮತ್ತು ಇತರೆ ಹಲವು ಲಭ್ಯವಿರುವ ಮಾರ್ಗಗಳ ಬಗ್ಗೆ ತಿಳಿಸಿ ನೀವು ತಲುಪಬೇಕಾಗಿರುವ ಸ್ಥಳವನ್ನು ಗೊತ್ತುಪಡಿಸುತ್ತದೆ.

ಆದರೆ ಈ ನೇವಿಗೇಷನ್ ಸೇವೆಯು ನಿಮಗೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ತಲುಪಬೇಕಾಗಿರುವ ಜಾಗದ ದೂರವನ್ನು ಲೆಕ್ಕ ಹಾಕುವುದುಕ್ಕೆ ಅವಕಾಶ ನೀಡುತ್ತದೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ನೀವು ತಲುಪಬೇಕಾಗಿರುವ ಸ್ಥಳಗಳ ಬಗೆಗಿನ ದೂರದ ಬಗ್ಗೆ ಸರಿಯಾದ ಲೆಕ್ಕಾಚಾರ ಮಾಡಿಕೊಳ್ಳುವುದರಿಂದಾಗಿ ಕೇವಲ ನಿಮ್ಮ ಸಮಯ ಮಾತ್ರವಲ್ಲ ಬದಲಾಗಿ ನಿಮ್ಮ ಪೆಟ್ರೋಲ್ ಅಥವಾ ಡಿಸೇಲ್ ಕೂಡ ಉಳಿತಾಯವಾಗುತ್ತದೆ.ಇದಕ್ಕಾಗಿ ಒಂದು ಸುಲಭದ ಮಾರ್ಗವಿದೆ. ಈ ಕೆಳಗಿನ ಹಂತವನ್ನು ಅನುಸರಿಸಿ ನೀವು ದೂರವನ್ನು ಲೆಕ್ಕಾಚಾರ ಹಾಕಬಹುದು.

ಡೆಸ್ಕ್ ಟಾಪ್ ನಲ್ಲಿ :

ಡೆಸ್ಕ್ ಟಾಪ್ ನಲ್ಲಿ :

ಹಂತ 1: ನಿಮ್ಮ ಕಂಪ್ಯೂಟರ್ ನ ವೆಬ್ ಬ್ರೌಸರ್ ನಲ್ಲಿ ಗೂಗಲ್ ಮ್ಯಾಪ್ ನ್ನು ತೆರೆಯಿರಿ.

ಹಂತ 2: ಆರಂಭಿಕ ಪಾಯಿಂಟ್ ಗೆ ಝೂಮ್ ಮಾಡಿ ಮತ್ತು ಅದರ ಮೇಲೆ ರೈಟ್ ಕ್ಲಿಕ್ ಮಾಡಿ.

ಹಂತ 3: ಇದಾದ ನಂತರ ಡ್ರಾಪ್ ಡೌನ್ ಮೆನುವಿನಿಂದ ‘Measure' ನ್ನು ಸೆಲೆಕ್ಟ್ ಮಾಡಿ.

ಹಂತ 4: ಇದಾದ ನಂತರ ನೀವು ಲೆಕ್ಕ ಹಾಕಬೇಕಿರುವ ಎರಡನೇ ಲೊಕೇಷನ್ ನ್ನು ಕ್ಲಿಕ್ಕಿಸಿ ದೂರವನ್ನು ಹೀಗೆಯೇ ಲೆಕ್ಕ ಮಾಡಿ. ಒಂದು ವೇಳೆ ನೀವು ಬೇರೆಬೇರೆಯ ಹಲವು ಪಾಯಿಂಟ್ ಗಳಲ್ಲಿರುವ ದೂರವನ್ನು ನೋಡಬೇಕಿದ್ದಲ್ಲಿ ಎಲ್ಲಾ ಲೊಕೇಷನ್ ಗಳನ್ನು ಹೀಗೆಯೇ ಕ್ಲಿಕ್ಕಿಸಿ ಗಮನಿಸಬಹುದು.

ಹಂತ 5: ಇದಾದ ನಂತರ, ದೂರವನ್ನು ಮ್ಯಾಪ್ ಮಾಡುವುದಕ್ಕಾಗಿ ನೀವು ಪಾಯಿಂಟ್ ನ್ನು ಡ್ರ್ಯಾಗ್ ಮಾಡಬೇಕು. ನೀವು ಪಾಯಿಂಟ್ ನ್ನು ಡ್ರ್ಯಾಗ್ ಮಾಡುತ್ತಿದ್ದಂತೆ ಗೂಗಲ್ ಮ್ಯಾಪ್ ನಿಮಗೆ ಪೇಜಿನ ಕೆಳಭಾಗದಲ್ಲಿ ಲೊಕೇಷನ್ ಗಳ ನಡುವಿನ ದೂರದ ಲೆಕ್ಕಾಚಾರವನ್ನು ನೀಡುತ್ತದೆ.

ಸ್ಮಾರ್ಟ್ ಫೋನ್ ಗಳಲ್ಲಿ:

ಸ್ಮಾರ್ಟ್ ಫೋನ್ ಗಳಲ್ಲಿ:

ಈ ಟಾಸ್ಕ್ ನ್ನು ನೀವು ಆಂಡ್ರಾಯ್ಡ್ ಅಥವಾ ಐಓಎಶ್ ನಲ್ಲೂ ಕೂಡ ಸಾಧಿಸಬಹುದು. ಆದರೆ, ಪ್ರೊಸೆಸ್ ಸ್ಮಾರ್ಟ್ ಫೋನ್ ನಲ್ಲಿ ಸ್ವಲ್ಪ ವಿಭಿನ್ನವಾಗಿರುತ್ತದೆ.ಅದಕ್ಕಾಗಿ ನೀವು ಈ ಕೆಳಗೆ ತಿಳಿಸಲಾಗುತ್ತಿರುವ ಹಂತಗಳನ್ನು ಅನುಸರಿಸಬಹುದು.

ಹಂತ 1:ಗೂಗಲ್ ಮ್ಯಾಪ್ ಆಪ್ ನ್ನು ತೆರೆಯಿರಿ.

ಹಂತ 2: ಇದೀಗ ಮೊದಲ ಪಾಯಿಂಟ್ ನ್ನು ಲೊಕೇಟ್ ಮಾಡಿ ಮತ್ತು ರೆಡ್ ಪಿನ್ ಆಗಿ ಅದನ್ನು ಮಾರ್ಕ್ ಮಾಡಿ.

ಹಂತ 3: ಇದಾದ ನಂತರ, ಮ್ಯಾಪ್ ನ ಕೆಳಭಾಗದಲ್ಲಿ ಸ್ಥಳಧ ಹೆಸರನ್ನು ಟ್ಯಾಪ್ ಮಾಡಿ.

ಹಂತ 4: ಇದೀಗ ಪಾಪ್ ಮೆನುವಿನಿಂದ ಮೆಷರ್ ಡಿಸ್ಟೆನ್ಸ್ ನ್ನು ಸೆಲೆಕ್ಟ್ ಮಾಡಿ.

ಹಂತ 5: ಇದೀಗ ಮ್ಯಾಪ್ ನ್ನು ಡ್ರ್ಯಾಗನ್ ಮಾಡಿ ಮತ್ತು ಆ ಮೂಲಕ ನಿಮ್ಮ ನೆಕ್ಸ್ಟ್ ಪಾಯಿಂಟ್ ನಲ್ಲಿ ಕಪ್ಪು ಬಣ್ಣದ ಸರ್ಕಲ್ ಆಗಲಿದೆ.

ಹಂತ 6:

ಹಂತ 6:

ಇದೇ ರೀತಿ ಆಪ್ ನಲ್ಲಿ ನೀವು ಹಲವು ಪಾಯಿಂಟ್ ಗಳನ್ನು ಸೇರಿಸಬಹುದು. ಅದಕ್ಕಾಗಿ Add + ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 7:ಇದನ್ನು ಮಾಡಿದ ನಂತರ ನೀವು ಒಟ್ಟು ದೂರವನ್ನು ಮೈಲುಗಳಲ್ಲಿ ಅಥವಾ ಕಿಲೋಮೀಟರ್ ಗಳಲ್ಲಿ ಡಿಸ್ಪ್ಲೇ ಆಗುವುದನ್ನು ಸ್ಕ್ರೀನಿನ ಕೆಳಭಾಗದಲ್ಲಿ ಗಮನಿಸಬಹುದು.

Best Mobiles in India

English summary
This Google Maps trick could help you save petrol

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X