ನಿಮ್ಮ ಮೊಬೈಲ್‌ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!

|

ಪ್ರಸ್ತತ ಇಂಟರ್ನೆಟ್‌ ಇಲ್ಲದೇ ಏನು ಇಲ್ಲ ಎನ್ನುವ ವಾತಾವರಣ ಇದೆ ಎಂದರೇ ತಪ್ಪಾಗಲಾರದು. ಆನ್‌ಲೈನ್‌ ಮೂಲಕ ಯಾವುದೇ ಕೆಲಸ ಮಾಡಬೇಕಿದ್ದರೂ, ಡೇಟಾ ಸೌಲಭ್ಯ ಅಗತ್ಯವಾಗಿದೆ. ಹಾಗೆಯೇ ಆನ್‌ಲೈನ್‌ ಮೂಲಕ ಸುಲಭವಾಗಿ ಹಣಗಳಿಸಲು ಇಂದು ಹಲವು ಮಾರ್ಗಗಳಿವೆ. ಅವುಗಳಿಗೆ ಹೆಚ್ಚಿನ ಬಂಡವಾಳದ ಅಗತ್ಯ ಸಹ ಇಲ್ಲ. ಆದರೆ ಆನ್‌ಲೈನ್‌ ಮೂಲಕ ಆದಾಯಗಳಿಸುವ ಕೆಲಸಕ್ಕೆ ದೃಢ ಮನಸ್ಸು ಅಗತ್ಯವಾಗಿದೆ.

ನಿಮ್ಮ ಮೊಬೈಲ್‌ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!

ಹೌದು, ಆನ್‌ಲೈನ್‌ ಮೂಲಕ ಹಣ ಗಳಿಸಬಹುದಾಗಿದೆ. ಅದಕ್ಕಾಗಿ ಒಂದು ಸ್ಮಾರ್ಟ್‌ ಫೋನ್‌ ಅಥವಾ ಲ್ಯಾಪ್‌ಟಾಪ್‌, ಇಂಟರ್ನೆಟ್‌ ಹಾಗೂ ಮಾಡುವ ಕೆಲಸದ ಬಗ್ಗೆ ಆಸಕ್ತಿ ಇರಬೇಕು. ಆನ್‌ಲೈನ್‌ ಮೂಲಕ ಆದಾಯಗಳಿಕೆ ಮಾಡಲು ಮುಂದಾದರೇ, ಬಳಕೆದಾರರಲ್ಲಿ ಸ್ವಲ್ಪ ತಾಳ್ಮೆಯು ಇರಬೇಕಿದೆ. ಏಕೆಂದರೇ ಬಹುತೇಕ ಸಂದರ್ಭಗಳಲ್ಲಿ ತ್ವರಿತವಾಗಿ ಹಣ ಗಳಿಕೆ ಶುರುವಾಗಿ ಬಿಡುವುದಿಲ್ಲ. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಯೂಟ್ಯೂಬ್‌ ಚಾನೆಲ್‌ ಶುರುಮಾಡಿ

ಗೂಗಲ್‌ ಮಾಲೀಕತ್ವದ ಯೂಟ್ಯೂಬ್‌ ವಿಡಿಯೊ ಪ್ಲಾಟ್‌ಫಾರ್ಮ್ ನಲ್ಲಿ ಯಾರು ಬೇಕಾದರೂ ಚಾನಲ್ ಆರಂಭಿಸಬಹುದಾಗಿದ್ದು, ಈ ಸೇವೆಯು ಉಚಿತವಾಗಿದೆ. ಡಾನ್ಸ್, ಸಿಂಗಿಂಗ್, ಅಡುಗೆ, ಹಾಸ್ಯ, ಡ್ರಾಯಿಂಗ್, ಮಾಹಿತಿ, ಟ್ರಾವೆಲ್, ಸ್ಟ್ರೀಟ್ ಫುಡ್‌, ಲಕ್ಸುರಿ ಹೊಟೇಲ್‌ಗಳ ಮಾಹಿತಿ, ದೇವಸ್ಥಾನಗಳ ದರ್ಶನ ಹೀಗೆ ಕ್ರಿಯೆಟಿವಿಟಿಯ ಯಾವುದೇ ಒಂದು ವಿಷಯಕ್ಕೆ ಸಂಬಂಧಿಸದ ಚಾನಲ್ ಶುರು ಮಾಡುವುದು. ಉತ್ತಮ ವಿಡಿಯೊಗಳ ಮೂಲಕ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯ. ಆದರೆ ಯೂಟ್ಯೂಬ್‌ ನಿಯಮಗಳನ್ನು ಪಾಲಿಸಬೇಕು.

ನಿಮ್ಮ ಮೊಬೈಲ್‌ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!

ಆನ್‌ಲೈನ್‌ ಕ್ಲಾಸ್ ಅಥವಾ ಆನ್‌ಲೈನ್ ಸಲಹೆಗಾರ

ಆನ್‌ಲೈನ್‌ ಕ್ಲಾಸ್ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಪಠ್ಯ ವಿಷಯ ತರಬೇತಿ ನೀಡಬಹುದು. ಅದಲ್ಲದೇ ಯೋಗ ತರಬೇತಿ, ಫಿಟ್ನೆಸ್ ತರಬೇತಿ, ಹಣಕಾಸ ನಿರ್ವಹಣೆ ಸೇರಿದಂತೆ ಇತರೆ ಯಾವುದೇ ವಿಷಯದ ಕುರಿತು ನೀವು ತರಬೇತಿ ನೀಡಬಹುದಾಗಿದೆ. ನೀವು ಪರಿಣಿತಿ ಪಡೆದ ಕ್ಷೇತ್ರದಲ್ಲಿ/ ವಿಷಯದಲ್ಲಿ ಆನ್‌ಲೈನ್‌ ಮೂಲಕ ತರಬೇತಿ ನೀಡುವ ಮೂಲಕ ಹಣ ಗಳಿಕೆ ಮಾಡಬಹುದು. ಹಾಗೆಯೇ ಆನ್‌ಲೈನ್ ಸಲಹೆಗಾರ ಆಗಿಯೂ ಕೆಲಸ ಮಾಡಬಹುದಾಗಿದೆ.

ಅಫೀಲೆಟ್‌ ಪ್ರೋಗ್ರಾಂ

ಅಫೀಲೆಟ್‌ ಪ್ರೋಗ್ರಾಂ (Affiliate programs) ಬಳಕೆದಾರರು ಯೂಟ್ಯೂಬ್‌ ವಿಡಯೊದಲ್ಲಿ ಪ್ಯೂಚರ್‌ ಪ್ರೊಡಕ್ಟ್ಸ್‌ಗಳ (ಉದಾಹರಣೆಗೆ ಮೇಕ್‌ಅಪ್‌ ಟುಟೋರಿಯಲ್) ಬಗ್ಗೆ ಇದ್ದರೇ ಈ ಅಫೀಲೆಟ್‌ ಪ್ರೋಗ್ರಾಂ ಸೇರಬಹುದಾಗಿದೆ. Amazon Affiliates ಬೆಸ್ಟ್‌ ಅಫೀಲೆಟ್‌ ಪ್ರೋಗ್ರಾಂ ಎನಿಸಿದೆ. ಸೇರ್ಪಡೆ ಆದ ಬಳಿಕ ಬಳಕೆದಾರ ಯೂಟ್ಯೂಬ್ ವಿಡಿಯೊದಲ್ಲಿ ಜಾಹಿರಾತು ನೀಡಲಾಗುತ್ತದೆ ಆ ಜಾಹಿರಾತು ವೀಕ್ಷಿಸಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸಿದರೇ ಅಲ್ಪ ಕಮಿಷನ್ ದೊರೆಯುತ್ತದೆ

ಆನ್‌ಲೈನ್‌ನಲ್ಲಿ ಮಾರಾಟ

ಆನ್‌ಲೈನ್‌/ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಸದ್ಯ ಬಹುದೊಡ್ಡ ಮಾರುಕಟ್ಟೆ ಆಗಿ ಗುರುತಿಸಿಕೊಂಡಿದೆ. ಒಂದು ವೇಳೆ ನೀವು ರಿಟೇಲ್ ವ್ಯಾಪರ್ಸ್ಥರಾಗಿದ್ದರೆ ಅಥವಾ ಯಾವುದಾದರೂ ವಸ್ತು/ ಪ್ರೊಡೆಕ್ಟ್‌ ಮಾರಾಟ ಮಾಡುವ ಯೋಜನೆ ಹೊಂದಿದ್ದರೆ ಅದಕ್ಕೆ ಆನ್‌ಲೈನ್ ತಾಣ ಸೂಕ್ತ. ಅನೇಕ ಆನ್‌ಲೈನ್‌ ತಾಣಗಳು ವಸ್ತುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತವೆ. ಹೀಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹಣ ಗಳಿಸಬಹುದು.

ಬ್ಲಾಗ್‌ ತೆರೆಯಿರಿ, ಹಣ ಗಳಿಸಿ

ನಿಮಗೆ ಬರವಣಿಗೆ ಇಷ್ಟ ಅನ್ನೊದಾದ್ರೆ, ನೀವು ಬ್ಲಾಗ್ ಅಥವಾ ವೆಬ್‌ಸೈಟ್‌ ಪ್ರಾರಂಭಿಸಬಹುದು. ನಿರಂತರ ಲೇಖನಗಳನ್ನು ಬರೆಯುವ ಮೂಲಕ ಜನಪ್ರಿಯತೆ ಪಡೆಯುವ ಜೊತೆಗೆ ಜಾಹಿರಾತುಗಳ ಮೂಲಕ ಆದಾಯಗಳಿಸಬಹುದಾಗಿದೆ. ಬ್ಲಾಗ್‌ ಶುರು ಮಾಡಲು ಆರಂಭ ದಲ್ಲಿ ಉಚಿತವಾಗಿ ಲಭ್ಯವಿರುವ ಸಾಫ್ಟ್‌ವೇರ್ ಬಳಿಕೆ ಉತ್ತಮ.

Best Mobiles in India

English summary
There are many easy ways to make money online today. They also do not require much capital. But earning money online requires determination. know more details in kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X