Subscribe to Gizbot

ಮರಣದ ನಂತರ ನಿಮ್ಮ ಸೋಶಿಯಲ್ ಮೀಡಿಯಾ ಖಾತೆ ಏನಾಗುತ್ತದೆ?

Written By:

ಬದುಕಿದ್ದಾಗ ನಾವು ಸಾಮಾಜಿಕ ಮಾಧ್ಯಮದಲ್ಲಿ ಖಾತೆಯನ್ನು ನಮ್ಮದೇ ಒಂದು ಚಿತ್ರಣವನ್ನು ಅಲ್ಲಿ ರೂಪಿಸಿಕೊಳ್ಳುತ್ತೇವೆ. ಹಲವಾರು ಸ್ನೇಹಿತರನ್ನು ಮಾಡಿಕೊಳ್ಳುತ್ತೇವೆ. ನಮ್ಮ ಜೀವನದಲ್ಲಿ ನಡೆದ ಪ್ರತಿಯೊಂದನ್ನೂ ಅಲ್ಲಿ ಹಂಚಿಕೊಳ್ಳುತ್ತೇವೆ. ಮಾಸದ ನೆನಪುಗಳನ್ನು ಜೀವಂತವಾಗಿ ಅಲ್ಲಿ ಇರಿಸಿಕೊಳ್ಳುತ್ತೇವೆ. ಆದರೆ ನಮ್ಮ ಮರಣದ ನಂತರ ನಮ್ಮ ಈ ಖಾತೆಗೆ ಏನುಂಟಾಗಬಹುದು ಎಂಬುದನ್ನು ಕುರಿತು ಆಲೋಚಿಸಿದ್ದೀರಾ?

ಇದನ್ನೂ ಓದಿ:ಹೆಚ್ಚಿನ ಅಂತರ್ಜಾಲದ ಬಳಕೆಯಿಂದ ಮೋಸ ಹೋಗುವಿರಿ ಜೋಕೆ!

ಹೌದು ಮರಣದ ನಂತರವೂ ನಮ್ಮ ಖಾತೆ ಸಕ್ರಿಯವಾಗಿದ್ದರೆ ಹ್ಯಾಕರ್‌ಗಳು ಇದನ್ನು ಬಳಸಿಕೊಳ್ಳಬಹುದು. ಅಥವಾ ಇನ್ನಾವುದಾದರೂ ಮಾರ್ಗದಲ್ಲಿ ಖಾತೆಯನ್ನು ಅಡ್ಡದಾರಿಗೆ ಬಳಸಿಕೊಳ್ಳಬಹುದು. ಮರಣಾ ನಂತರವೂ ನಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್ ಖಾತೆ

ಸಾಮಾಜಿಕ ಮಾಧ್ಯಮ ಖಾತೆ

ರೋಗಿಯ ಬಗ್ಗೆ ನಿಖರವಾದ ಮಾಹಿತಿಯನ್ನು ಫೇಸ್‌ಬುಕ್‌ನಲ್ಲಿ ನೀಡುವುದು. ಇನ್ನು ಮರಣ ಹೊಂದಿದ ವ್ಯಕ್ತಿಯ ಪ್ರೊಫೈಲ್ ಅನ್ನು ಮೆಮೋರಿಯಲ್ ಪುಟವಾಗಿ ನಿಮಗೆ ಮಾರ್ಪಡಿಸಬಹುದು. ಹೀಗೆ ಮಾಡುವುದು ವ್ಯಕ್ತಿಯ ಮರಣಾ ನಂತರವೂ ಆತನ ಆಕೆಯ ಖಾತೆಯನ್ಉ ಸಕ್ರಿಯವಾಗಿರಿಸುತ್ತದೆ.

ಗೂಗಲ್ ಅಥವಾ ಜಿಮೇಲ್ ಖಾತೆ

ಸಾಮಾಜಿಕ ಮಾಧ್ಯಮ ಖಾತೆ

ಇನ್ನು ವ್ಯಕ್ತಿಯ ಗೂಗಲ್ ಅಥವಾ ಜಿಮೇಲ್ ಖಾತೆಯನ್ನು ಫೇಸ್‌ಬುಕ್‌ನಲ್ಲಿ ಮಾಡಿದಂತೆಯೇ ಮಾಡಿ ಅವರ ನೆನಪಿನೊಂದಿಗೆ ಖಾತೆಯನ್ನು ಸಕ್ರಿಯಗೊಳಿಸಬಹುದಾಗಿದೆ. ನೀವು ಇದಕ್ಕಾಗಿ ಗೂಗಲ್‌ಗೆ ವ್ಯಕ್ತಿಯ ನಿಖರವಾದ ಮಾಹಿತಿಯನ್ನು ಕಳುಹಿಸಬೇಕಾಗುತ್ತದೆ. ಅದರೆ ಮರಣ ಪ್ರಮಾಣಪತ್ರವನ್ನೂ ಇದು ಒಳಗೊಂಡಿರಬೇಕು. ನಂತರ ಗೂಗಲ್ ವ್ಯಕ್ತಿಯ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ.

ಟ್ವಿಟ್ಟರ್ ಖಾತೆ

ಸಾಮಾಜಿಕ ಮಾಧ್ಯಮ ಖಾತೆ

ರೋಗಿಯ ಬಳಕೆದಾರ ಹೆಸರು ಅವರ ಮರಣಾ ಪ್ರಮಾಣ ಪತ್ರದ ಒಂದು ಪ್ರತಿ, ಸರಕಾರ ಪರವಾನಗಿ ನೀಡಿದ ಐಡಿ ಇವಿಷ್ಟು ದಾಖಲೆಗಳನ್ನು ನಿಮ್ಮ ದಾಖಲೆಗಳು ಒಳಗೊಂಡಿರಬೇಕು. ಟ್ವಿಟ್ಟರ್‌ಗೆ ಈ ಎಲ್ಲಾ ಮಾಹಿತಿಗಳನ್ನು ಫ್ಯಾಕ್ಸ್ ಅಥವಾ ಮೇಲ್ ಮಾಡಬೇಕು. ನಂತರವಷ್ಟೇ ಟ್ವಿಟ್ಟರ್ ಖಾತೆಯನ್ನು ಕ್ಲೋಸ್ ಮಾಡುತ್ತದೆ.

ಪಿನ್‌ಟ್ರೆಸ್ಟ್ ಖಾತೆ

ಸಾಮಾಜಿಕ ಮಾಧ್ಯಮ ಖಾತೆ

ಬಳಕೆದಾರ ಮರಣ ಹೊಂದಿದ್ದಾನೆ ಎಂಬ ಮಾಹಿತಿಯನ್ನು ನೀವು ಪಿನ್‌ಟ್ರೆಸ್ಟ್‌ಗೆ ಕಳುಹಿಸಿದರೆ ಇದು ಖಾತೆಯನ್ನು ಕ್ಲೋಸ್ ಮಾಡುತ್ತದೆ.

ಇನ್‌ಸ್ಟಾಗ್ರಾಮ್ ಖಾತೆ

ಸಾಮಾಜಿಕ ಮಾಧ್ಯಮ ಖಾತೆ

ಇನ್ನು ಇದರಲ್ಲಿ ಸಂವಹನವನ್ನು ನಡೆಸಿ ಬಳಕೆದಾರ ಖಾತೆಯನ್ನು ಮುಚ್ಚಬಹುದಾಗಿದೆ. ಫೇಸ್‌ಬುಕ್‌ನಂತೆಯೇ, ಇನ್‌ಸ್ಟಾಗ್ರಾಮ್‌ನಲ್ಲಿರುವ ರೋಗಿಯ ವರದಿಗೆ ಅರ್ಜಿ ಕೋರಿಕೆಯನ್ನು ನೀವು ಭರ್ತಿ ಮಾಡಬೇಕು.

ಯಾಹೂ ಖಾತೆ

ಸಾಮಾಜಿಕ ಮಾಧ್ಯಮ ಖಾತೆ

ಇನ್ನು ಯಾಹೂವಿನಲ್ಲಿ ಕೂಡ ಮರಣ ಹೊಂದಿದ ವ್ಯಕ್ತಿಯ ಖಾತೆಯನ್ನು ಕ್ಲೋಸ್ ಮಾಡಬಹುದು. ಕೋರಿಕೆ ಪತ್ರ ಒಳಗೊಂಡಿರುವ ಮೇಲ್, ಫ್ಯಾಕ್ಸ್ ಅಥವಾ ಇಮೇಲ್‌ ಅನ್ನು ಇದಕ್ಕೆ ನೀವು ಕಳುಹಿಸಬೇಕು.

ಪೇಪಾಲ್ ಖಾತೆಯನ್ನು ನಿಷ್ಕ್ರಿಯಗೊಳಿಸುವುದು

ಸಾಮಾಜಿಕ ಮಾಧ್ಯಮ ಖಾತೆ

ನಿಮ್ಮ ಸಂಬಂಧಿಯ ಪೇಪಾಲ್ ಖಾತೆಯನ್ನು ಕ್ಲೋಸ್ ಮಾಡಲು, ವ್ಯಕ್ತಿಯ ಮರಣ ಪ್ರಮಾಣ ಪತ್ರ, ಕಾನೂನು ಪತ್ರ ಮೊದಲಾದ ದಾಖಲೆಗಳು ಬೇಕಾಗಿದೆ. ನಂತರವಷ್ಟೇ ಇದು ಖಾತೆಯನ್ನು ಮುಚ್ಚುತ್ತದೆ.

ಡಿಜಿಟಲ್ ರೆಕಾರ್ಡ್ಸ್

ಸಾಮಾಜಿಕ ಮಾಧ್ಯಮ ಖಾತೆ

ನಿಮ್ಮೆಲ್ಲಾ ಇತರ ಆಸ್ತಿಗಳಂತೆಯೇ ನಿಮ್ಮ ಮರಣಾ ನಂತರ ಡಿಜಿಟಲ್ ಆಸ್ತಿಯನ್ನೂ ಕಾಪಾಡುವುದು ಅತಿ ಮುಖ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about What Happens to Your Online Accounts When You Die.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot