ಆಂಡ್ರಾಯ್ಡ್ ಫೋನ್‌ಗಳ "ಆಟೊ ಬ್ಯಾಕಪ್‌" ಬಗ್ಗೆ ನಿಮಗೆಷ್ಟು ಗೊತ್ತು?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಡೇಟಾಗಳು ಸ್ವಯಂಚಾಲಿತವಾಗಿ ಬ್ಯಾಕಪ್‌ ಆದರೆ, ಕೆಲವನ್ನು ನಾವೇ ಮ್ಯಾನ್ಯುಯಲ್‌ ಆಗಿ ಬ್ಯಾಕಪ್‌ ಇರಿಸಿಕೊಳ್ಳುವ ಅಗತ್ಯವಿರುತ್ತದೆ.!!

|

ಸ್ಮಾರ್ಟ್‌ಫೋನ್ ಏನಾದರೂ ಹ್ಯಾಂಗ್‌ ಆದರೆ ಅಥವಾ ಫೋನಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ಸ್ಮಾರ್ಟ್‌ಪೋನ್ ಫ್ಯಾಕ್ಟರಿ ಡೇಟಾ ರೀಸೆಟ್' ಮಾಡಬೇಕಾಗಿ ಬರುತ್ತದೆ.! ಇಂತಹ ಸಮಯದಲ್ಲಿ ನಮ್ಮ ಸ್ಮಾರ್ಟ್‌ಫೋನಿನಲ್ಲಿ ಚಿತ್ರಗಳು,ವಿಡಿಯೋಗಳು ಮತ್ತು ಫೈಲುಗಳು ಡಿಲೀಟ್‌ ಆದರೆ ಗೂಗಲ್ ಬ್ಯಾಕಪ್‌ ಫೈಲ್‌ಗಳು ಉಪಯೋಗಕ್ಕೆ ಬರುತ್ತವೆ.!!

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಡೇಟಾಗಳು ಸ್ವಯಂಚಾಲಿತವಾಗಿ ಬ್ಯಾಕಪ್‌ ಆದರೆ, ಕೆಲವನ್ನು ನಾವೇ ಮ್ಯಾನ್ಯುಯಲ್‌ ಆಗಿ ಬ್ಯಾಕಪ್‌ ಇರಿಸಿಕೊಳ್ಳುವ ಅಗತ್ಯವಿರುತ್ತದೆ.!! ಹಾಗಾಗಿ, ನಮ್ಮ ಕಾಂಟ್ಯಾಕ್ಟ್ಸ್, ಫೋಟೋಸ್, ವಿಡಿಯೋಗಳು ಹಾಗೂ ಫೈಲ್‌ಗಳನ್ನು ಉಳಿಸಿಕೊಳ್ಳುವುದು ನಮ್ಮ ಕೈಯಲ್ಲಿರುತ್ತದೆ.!!

ಆಂಡ್ರಾಯ್ಡ್ ಫೋನ್‌ಗಳ

ಹ್ಯಾಂಗ್‌ ಅಥವಾ ಫೋನಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ ಯಾವಾಗ ನಮ್ಮ ಫೈಲುಗಳು ಕೈತಪ್ಪಿ ಡಿಲೀಟ್‌ ಆಗುತ್ತವೆ ಅಂತ ಹೇಳಲಿಕ್ಕೆ ಬರುವುದಿಲ್ಲವಾದ್ದರಿಂದ, ನಮಗೆ ಅತ್ಯಂತ ಅಗತ್ಯವಿರುವ ಫೈಲ್‌ಗಳನ್ನು ಆನ್‌ಲೈನಿನಲ್ಲಿ ಬ್ಯಾಕಪ್‌ ಇರಿಸಿಕೊಳ್ಳುವ ಬಗ್ಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯಿರಿ.!!

 ಡೇಟಾ ಬ್ಯಾಕಪ್!!

ಡೇಟಾ ಬ್ಯಾಕಪ್!!

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ಗೆ ಸಂಪರ್ಕಗೊಂಡಿರುವ ಡೇಟಾದ ಬ್ಯಾಕಪ್‌ ಸೇವೆಯು ಅಂತರ್‌ನಿರ್ಮಿತವಾಗಿಯೇ ಇರುತ್ತದೆ. ಆದರೂ ಗೂಗಲ್‌ ಸರ್ವರ್‌ ಜತೆ ಕ್ರೋಮ್, ಪ್ಲೇ ಸ್ಟೋರ್ , ಗೂಗಲ್‌ ಫೋಟೋಗಳು ಮತ್ತು ಜಿಮೇಲ್ಗಳಂತಹ ಯಾವೆಲ್ಲ ಡೇಟಾ ಸಿಂಕ್ರನೈಸ್ ಆಗಬೇಕು ಎಂಬುದನ್ನು ನಾವೇ ನಿಯಂತ್ರಿಸಬಹುದು.!!

ಜಿಮೇಲ್ 'ಸಿಂಕ್‌ ಸೆಟ್ಟಿಂಗ್ಸ್'!!

ಜಿಮೇಲ್ 'ಸಿಂಕ್‌ ಸೆಟ್ಟಿಂಗ್ಸ್'!!

ಜಿಮೇಲ್ ಸೆಟ್ಟಿಂಗ್ಸ್‌ನಲ್ಲಿ 'ಸಿಂಕ್‌ ಸೆಟ್ಟಿಂಗ್ಸ್' ಎಂಬಲ್ಲಿಗೆ ಹೋದರೆ, ಆಪ್‌ ಡೇಟಾ, ಕ್ಯಾಲೆಂಡರ್‌, ಕಾಂಟ್ಯಾಕ್ಟ್ಸ್, ಡ್ರೈವ್, ಜಿಮೇಲ್, ಗೂಗಲ್‌ ಫಿಟ್‌ಡೇಟಾ ಮುಂತಾದವನ್ನು ಜಿಮೇಲ್ ಜತೆ ಸಮ್ಮಿಳಿತಗೊಳಿಸಬೇಕೇ ಎಂದು ಹೊಂದಿಸಿಕೊಳ್ಳುವ ಆಯ್ಕೆ ನಿಮಗೆ ಲಭ್ಯವಿದೆ.!!

ಗೂಗಲ್‌ ಫೋಟೋಸ್!!

ಗೂಗಲ್‌ ಫೋಟೋಸ್!!

ಗೂಗಲ್‌ ಫೋಟೋಸ್‌ನಲ್ಲಿ ನಿಮ್ಮ ಮೊಬೈಲ್‌ ಸಾಧನದಲ್ಲಿರುವ ಫೋಟೊಗಳು ಸ್ವಯಂಚಾಲಿತವಾಗಿ ಸೇವ್ ಆಗಬೇಕಿದ್ದರೆ ಬ್ಯಾಕಪ್‌ ಆಯ್ಕೆಯನ್ನು ಗೂಗಲ್ ಡ್ರೈವ್‌ನಲ್ಲಿ ಎನೇಬಲ್ ಮಾಡಬೇಕಾಗುತ್ತದೆ. ಹೀಗೆ ಮಾಡಿದರೆ, ಫೋಟೋ ಅಥವಾ ವೀಡಿಯೋಗಳೆಲ್ಲವೂ ಗೂಗಲ್‌ ಸರ್ವರ್‌ನಲ್ಲಿ ಸೇವ್ ಆಗುತ್ತಿರುತ್ತದೆ.!!

ಜಿಮೇಲ್ ಚಾಟಿಂಗ್

ಜಿಮೇಲ್ ಚಾಟಿಂಗ್

ಜಿಮೇಲ್ ಚಾಟಿಂಗ್ ಸೇವೆಯಾಗಿರುವ 'ಹ್ಯಾಂಗೌಟ್ಸ್' ಡೇಟಾ ಕೂಡ ಜಿಮೇಲ್‌ಗೆ ಲಿಂಕ್‌ ಆಗಿರುತ್ತದೆ.ಇದು ಬೇಡವೆಂದಾದರೆ, ಜಿಮೇಲ್‌ನ ಸೆಟ್ಟಿಂಗ್‌ನಲ್ಲಿ 'ಚಾಟ್‌ ಲಾಗಿಂಗ್‌' ಎಂಬುದನ್ನು ಡಿಸೇಬಲ್ ಮಾಡಡಿದರೆ ಹ್ಯಾಂಗೌಟ್ಸ್ ಒಳಗೆ ಯಾವುದೇ ಡೇಟಾ ಉಳಿದುಕೊಳ್ಳುವುದಿಲ್ಲ.!!

ಗೂಗಲ್‌ ಪ್ಲೇ ಸ್ಟೋರ್!!

ಗೂಗಲ್‌ ಪ್ಲೇ ಸ್ಟೋರ್!!

ಗೂಗಲ್‌ ಪ್ಲೇ ಸ್ಟೋರ್ನಿಂದ ನಿಮ್ಮ ಮೊಬೈಲ್‌ಗೆ ಡೌನ್‌ಲೋಡ್‌ ಮಾಡಿಕೊಂಡಿರುವ ಆಪ್‌ಗಳ ದಾಖಲೆಯೂ ನಿಮ್ಮ ಜಿಮೇಲ್ ಖಾತೆಯ ಮೂಲಕ ಬ್ಯಾಕಪ್‌ ಆಗಿರುತ್ತದೆ. ಹಾಗಾಗಿ, ನಿಮ್ಮ ಇನ್ನೊಂದು ಸಾಧನಕ್ಕೆ ಪುನಃ ಪುನಃ ಹುಡುಕಾಟ ನಡೆಸಿ ಆಪ್ ಇನ್‌ಸ್ಟಾಲ್ ಮಾಡಿಕೊಳ್ಳಲು ಹುಡುಕುವ ಪ್ರಮೇಯ ಬರುವುದಿಲ್ಲ.!!

ಹಿಂದೊಮ್ಮೆ ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ ವಿಶ್ವದ ನಂ.1 ಶ್ರೀಮಂತನಾದ ಕಥೆ!!ಹಿಂದೊಮ್ಮೆ ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ ವಿಶ್ವದ ನಂ.1 ಶ್ರೀಮಂತನಾದ ಕಥೆ!!

Best Mobiles in India

English summary
Go to Settings, Personal, Backup and reset, and select both Backup my data and Automatic restore. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X