Subscribe to Gizbot

ಬ್ಯಾಂಕ್ ನೊಂದಿಗೆ ವಾಟ್ಸ್‌ಆಪ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ..!

Written By:

ಈಗಾಗಲೇ ಮಾರುಕಟ್ಟೆಯಲ್ಲಿ ವಾಟ್ಸ್ಆಪ್ ಪೇಮೆಂಟ್ ಸೇವೆಯೂ ಸದ್ದು ಶುರು ಮಾಡಿದ್ದು, ದಿನದಿಂದ ದಿನಕ್ಕೆ ಹೆಚ್ಚಿನ ಬಳಕೆದಾರರಿಗೆ ಈ ಹೊಸ ಆಯ್ಕೆಯೂ ಬಳಕೆಗೆ ದೊರೆಯುತ್ತಿದೆ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ನಲ್ಲಿ ಪೇಮೆಂಟ್ ಸೇವೆಯನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನವು ಇದಾಗಿದೆ.

ಬ್ಯಾಂಕ್ ನೊಂದಿಗೆ ವಾಟ್ಸ್‌ಆಪ್ ಲಿಂಕ್ ಮಾಡುವುದು ಹೇಗೆ..?

ವಾಟ್ಸ್‌ಆಪ್ ತನ್ನ ಪೇಮೆಂಟ್ ಸೇವೆಯನ್ನು ನಾಷಿನಲ್ ಪೇಮೆಂಟ್ ಕಾರ್ಪೋರೆಷನ್ ಆಫ್ ಇಂಡಿಯಾ ದೊಂದಿಗೆ ಸೇರಿಕೊಂಡು ನಿರ್ಮಿಸಿದ್ದು, ಭಾರತ್ ಇನ್ಟ್ರಾಫೇಸ್ ಫಾರ್ ಮನಿಯನ್ನು ಇದರಲ್ಲಿ ಬಳಕೆ ಮಾಡಿಕೊಂಡಿದೆ. ಅಲ್ಲದೇ ಯುನಿಫೈಟ್ ಪೇಮೆಂಟ್ ಇನ್ಟ್ರಾಫೇಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಇತರ ಆಪ್ ಗಳಂತೆ ಸುಲಭವಾಗಿ ಹಣವನ್ನು ವರ್ಗವಣೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 01:

ಬ್ಯಾಂಕ್ ಲಿಂಕ್ ಮಾಡುವುದು ಹೇಗೆ..?ಹಂತ 01:

ಸುಲಭವಾಗಿ ನೀವು ಬ್ಯಾಂಕ್ ಖಾತೆಯನ್ನು ವಾಟ್ಸ್‌ಆಪ್ ನೊಂದಿಗೆ ಲಿಂಕ್ ಮಾಡಬಹುದಾಗಿದೆ. ಮೊದಲು ವಾಟ್ಸ್‌ಆಪ್ ಓಪನ್ ಮಾಡಿ, ನಂತರ ಮೇಲ್ಭಾಗದಲ್ಲಿರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಸೆಟ್ಟಿಂಗ್ಸ್ ಓಪನ್ ಆಗಲಿದೆ.

ಹಂತ 02:

ಹಂತ 02:

ಅಲ್ಲಿ ನಿಮಗೆ ಹೊಸದಾಗಿ ಪೇಮೆಂಟ್ಸ್ ಎನ್ನುವ ಹೊಸ ಆಯ್ಕೆ ಕಾಣಿಸಿಕೊಳ್ಳಲಿದೆ. ನೋಟಿಫಿಕೇಷನ್ ಕೆಳಭಾಗದಲ್ಲಿ ಇರಲದೆ. ಅಲ್ಲದೇ ಅದರ ಮೇಲೆ ಕ್ಲಿಕ್ ಮಾಡಿದರೆ 'ಅಕ್ಸೆಪ್ಟ್ ಅಂಡ್ ಕನಟಿನ್ಯೂ' ಎನ್ನುವ ಆಯ್ಕೆ ಕಾಣಿಸಿಕೊಳ್ಳಿದೆ.

ಹಂತ 03:

ಹಂತ 03:

ಅದನ್ನು ಕ್ಕಿಕ್ ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ವೈರಿಫೈ ಕೇಳಲಿದೆ ನಂತರ ಮೊಬೈಲ್ ನಂಬರ್ ವೈರಿಫೈ ಮಾಡಿರಿ.

ಹಂತ 04:

ಹಂತ 04:

ಇದಾದ ನಂತರದಲ್ಲಿ ಆಪ್ ನಿಮ್ಮ ನಂಬರ್ ನಿಂದ SMS ಕಳುಹಿಸಲಿದ್ದು, ನಂತರದಲ್ಲಿ ನೀವು ಬ್ಯಾಂಕ್‌ಗಳ ಲಿಸ್ಟ್ ಕಾಣಬಹುದಾಗಿದೆ. ನಂತರದಲ್ಲಿ ನಿಮ್ಮ ಬ್ಯಾಂಕ್ ಸೆಲೆಕ್ಟ್ ಮಾಡಿಕೊಳ್ಳ ಬೇಕಾಗಿದೆ.

How to find out where you can get your Aadhaar card done (KANNADA)
ಹಂತ 05:

ಹಂತ 05:

ನಂತರದಲ್ಲಿ ನಿಮ್ಮ ನಂಬರ್ ಅನ್ನು ಹೊಂದಿರು ಬ್ಯಾಂಕ್ ಸೆಲೆಕ್ಟ್ ಮಾಡಿಕೊಂಡ ನಂತರದಲ್ಲಿ ಬ್ಯಾಂಕ್ ಆಕೌಂಟ್ ಮಾಹಿತಿಯೂ ಅಲ್ಲಿ ಕಾಣಿಸಿಕೊಳ್ಳಲಿದೆ. ಅದನ್ನು ಓಕೆ ಮಾಡಿದ ಮೇಲೆ ಸೆಟಪ್ ಕಂಪ್ಲಿಟ್ ಆಗಲಿದೆ. ನೀವು ಹಣ ಕಳುಹಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
WhatsApp Payments: How to set up. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot