ವಾಟ್ಸ್ ಆಪ್ ನಲ್ಲಿ ಹಬ್ಬಗಳ ಸ್ಟಿಕ್ಕರ್ ಡೌನ್ ಲೋಡ್ ಮಾಡುವುದು ಹೇಗೆ?

By Gizbot Bureau
|

ಹಬ್ಬಗಳ ಸೀಸನ್ ಆರಂಭವಾಗಿದೆ. ಯುಗಾದಿ ಆಯ್ತು, ನವರಾತ್ರಿ, ಗುಡಿ ಪಡ್ವಾ ಸೇರಿದಂತೆ ಹಿಂದುಗಳಿಗೆ ಒಂದಾದ ಮೇಲೆ ಒಂದು ಈ ವರ್ಷದ ಹಬ್ಬಗಳು ಆರಂಭವಾಗತ್ತವೆ. ಇದೀಗ ಹಬ್ಬಗಳ ಸಂಭ್ರಮವು ವಾಟ್ಸ್ ಆಪ್ ನಲ್ಲೂ ಜೋರಾಗಿರುತ್ತದೆ. ಒಬ್ಬರು ಇನ್ನೊಬ್ಬರಿಗೆ ಈಗೆಲ್ಲ ವಾಟ್ಸ್ ಆಪ್ ನಲ್ಲಿ ಶುಭಾಶಯ ಕೋರಿಕೊಳ್ಳುವುದು ಸಾಮಾನ್ಯ. ಆದರೆ ಈ ಸಂದರ್ಬದಲ್ಲಿ ಸಹಜ ಮೆಸೇಜ್ ಕಳುಹಿಸುವುದಕ್ಕಿಂತ ಸ್ವಲ್ಪ ಭಿನ್ನವಾಗಿರುವ ಸ್ಟಿಕ್ಕರ್ ಕಳಿಸಿದರೆ ನೋಡುವುದಕ್ಕೆ ಸುಂದರವಾಗಿರುತ್ತದೆ ಎಂಬುದು ಎಲ್ಲರ ಆಶಯ. ಅದಕ್ಕಾಗಿಯೇ ವಾಟ್ಸ್ ಆಪ್ ನಲ್ಲಿ ಹಬ್ಬಗಳ ಸಂಭ್ರಮದ ಸ್ಟಿಕ್ಕರ್ ಗಳು ಲಭ್ಯವಿದೆ.

ವಾಟ್ಸ್ ಆಪ್ ನಲ್ಲಿ ಹಬ್ಬಗಳ ಸ್ಟಿಕ್ಕರ್ ಡೌನ್ ಲೋಡ್ ಮಾಡುವುದು ಹೇಗೆ?

ವಾಟ್ಸ್ ಆಪ್ ಚಾಟ್ ನ್ನು ತೆರೆಯಿರಿ, ನಂತರ ಎಂಓಜಿಐಕಾನ್ ಗಳನ್ನು ಕ್ಲಿಕ್ಕಿಸಿ ನಂತರ ಅದರ ಕೆಳಗೆ ಸ್ಟಿಕ್ಕರ್ ಐಕಾನ್ ಇರುತ್ತದೆ. ನಿಮ್ಮ ಎಲ್ಲಾ ಆಡೆಡ್ ಸ್ಟಿಕ್ಕರ್ ಗಳ ನಂತರ + ಐಕಾನ್ ನ್ನು ನೀವು ಗಮನಿಸಬಹುದು. ಅದನ್ನು ಹಿಟ್ ಮಾಡಿ. ನಂತರ ನಿಮ್ಮ ಎಲ್ಲಾ ಸ್ಟಿಕ್ಕರ್ ಟ್ಯಾಬ್ ನಲ್ಲಿ ಕೆಳಭಾಗದವರೆಗೆ ಸ್ಕ್ರೋಲ್ ಡೌನ್ ಮಾಡಿ. ಅಲ್ಲಿ ನೀವು ಪ್ಲೇ ಸ್ಟೋರ್ ನ ಗೆಟ್ ಮೋರ್ ಸ್ಟಿಕ್ಕರ್ ನ ಶಾರ್ಟ್ ಕಟ್ ನ್ನು ಗಮನಿಸುತ್ತೀರಿ.

ಒಮ್ಮೆ ನೀವು ಸ್ಟೋರ್ ಗೆ ತೆರಳಿದ ನಂತರ ನೀವು ಚೈತ್ರ ನವರಾತ್ರಿ, ಗುಡಿ ಪಾಡ್ವಾ ಅಥವಾ ಯುಗಾದಿ ಸೇರಿದಂತೆ ಹಬ್ಬದ ಹೆಸರನ್ನು ನಮೂದಿಸಿ ಅದಕ್ಕೆ ತಕ್ಕುದಾದ ಸ್ಟಿಕ್ಕರ್ ನ್ನು ಪಡೆಯಬಹುದು.

ಆದರೆ ಎಲ್ಲಾ ಸಲಹೆಗಳು ಸಂಪೂರ್ಣ ಫರ್ಫೆಕ್ಟ್ ಆಗಿರುವುದಿಲ್ಲ. ಕೆಲವು ಕೇವಲ ಆಪ್ಸ್ ಗಳಾಗಿರುತ್ತವೆ ಮತ್ತು ಅದರಲ್ಲೂ ಸಾಕಷ್ಟು ಜಾಹೀರಾತುಗಳು ತುಂಬಿರುವ ಸಾಧ್ಯತೆ ಇರುತ್ತದೆ ಮತ್ತು ಅವು ಸರಿಯಾದ ಸ್ಟಿಕ್ಕರ್ ಗಳನ್ನು ನೀಡುತ್ತವೆ ಎಂದು ಹೇಳಲಾಗುವುದಿಲ್ಲ.

ಹಾಗಾಗಿ ನಾವಿಲ್ಲಿ ಕೆಲವು ಆಪ್ಸ್ ಗಳನ್ನು ತಿಳಿಸಿದ್ದೇವೆ. ಇವು ನಿಜವಾಗಿಯೂ ನಿಮಗೆ ವಾಟ್ಸ್ ಆಪ್ ಗೆ ಸಂಬಂಧಿಸಿದ ಥೀಮ್ ನ ಸ್ಟಿಕ್ಕರ್ ಗಳನ್ನೇ ಒದಗಿಸುತ್ತವೆ. ಯಾವುದಕ್ಕೂ ಡೌನ್ ಲೋಡ್ ಮಾಡಿಕೊಳ್ಳುವಾಗ ಇವುಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಮೈಮಂದಿರ್ ನ ಚೈತ್ರ ನವರಾತ್ರಿ ಸ್ಟಿಕ್ಕರ್ಸ್ ಇದರಲ್ಲಿ ನವರಾತ್ರಿ, ಗುಡಿಪಾಡ್ವ ಮತ್ತು ಯುಗಾದಿ ಸ್ಟಿಕ್ಕರ್ ಗಳು ಲಭ್ಯವಿದ್ದು ನೀವು ಆಯ್ಕೆ ಮಾಡಿಕೊಳ್ಳಬಹುದು. ಆಕಾಶ್ ಪಟೇಲ್4 ವಾಟ್ಸ್ ಆಪ್ ಆಪ್ ನಲ್ಲೂ ಕೂಡ ಈ ಸ್ಟಿಕ್ಕರ್ ಗಳು ಸಿಗುತ್ತವೆ.

ವಾಟ್ಸ್ ಆಪ್ ಆಪ್ ಗೆ ಸ್ಟಿಕ್ಕರ್ ಸೇರಿಸುವುದು ಹೇಗೆ?

ಒಮ್ಮೆ ನೀವು ಆಪ್ ನ್ನು ಆಯ್ಕೆ ಮಾಡಿಕೊಂಡ ನಂತರ ಇನ್ಸ್ಟಾಲ್ ಮಾಡಿ ಒಪನ್ ನ್ನು ಹಿಟ್ ಮಾಡಿ. ಆಪ್ ಆಫರ್ ಮಾಡುವ ಸ್ಟಿಕ್ಕರ್ ಗಳ ಕೆಟಗರಿಗಳನ್ನು ಆಪ್ ಲಾಂಚ್ ಆದ ಕೂಡಲೇ ತೋರಿಸುತ್ತದೆ. + ಸೈನ್ ನ್ನು ಟ್ಯಾಪ್ ಮಾಡುವ ಮೂಲಕ ನೀವು ಅವುಗಳನ್ನು ಪ್ರತಿ ಕೆಟಗರಿಯಿಂದಲೂ ಕೂಡ ಸೇರಿಸಿಕೊಳ್ಳಲು ಅವಕಾಶವಿದೆ.

ನಂತರ ವಾಟ್ಸ್ ಆಪ್ ಗೆ ಪುನಃ ತೆರಳಿದ ನಂತರ, ಸ್ಟಿಕ್ಕರ್ಸ್ ಐಕಾನ್ ನ್ನು ಟ್ಯಾಪ್ ಮಾಡಿದ ನಂತರ ಮೇಲ್ಬಾಗದಲ್ಲಿ ಸೇರಿಸಲಾಗಿರುವ ಸ್ಟಿಕ್ಕರ್ ಗಳನ್ನು ಗಮನಿಸುವುದಕ್ಕೆ ಸಾಧ್ಯ.

ಹಾಗಾದ್ರೆ ಹಬ್ಬಗಳ ಹೊಸ ಸ್ಟಿಕ್ಕರ್ ನ್ನು ಡೌನ್ ಲೋಡ್ ಮಾಡಿ ನಿಮ್ಮವರಿಗೆ ಕಳಿಸಿ ಎಲ್ಲಾ ಹಬ್ಬವನ್ನು ಮಸ್ತ್ ಮಜಾ ಮಾಡಿ. ಹ್ಯಾಪಿ ಹಬ್ಬ!

Best Mobiles in India

English summary
How to download WhatsApp Stickers for Navratri, Ugadi and Gudi Padwa

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X