ಆಪ್‌ ಕ್ರಿಯೇಟ್ ಮಾಡಲು ಇಂಜಿನಿಯರ್ ಬೇಡ!..ನೀವೆ ಕ್ರಿಯೇಟ್ ಮಾಡಬಹುದು!!ಹೇಗೆ?

ಕೋಡಿಂಗ್- ಡಿಕೋಡಿಂಗ್ ವ್ಯವಸ್ಥೆ ಇಲ್ಲದೇ, ನಿಮಗೆ ಬೇಕಾದ ರೀತಿಯಲ್ಲಿ ಕೇವಲ ನಿಮ್ಮ ಮಾಹಿತಿ ತುಂಬಿ ನಿಮ್ಮ ಆಪ್‌ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದು.

|

ವಾಟ್ಸ್ಆಪ್, ಫೇಸ್‌ಬುಕ್ ಆಪ್‌ಗಳಂತೆ ನಾವು ಕೂಡ ತಮ್ಮದೇ ಕಲ್ಪನೆ ಇರುವ ಸ್ವಂತ ಆಪ್‌ ತಯಾರಿಸಬೇಕು ಎಂಬುದು ನಿಮ್ಮ ಆಸೆಯೇ? ಆದರೆ ಇದಕ್ಕೆ ಹಣದ ಕೊರತೆಯೇ? ಹಾಗಾದ್ರೆ ಚಿಂತೆ ಬಿಡಿ.ಏಕೆಂದರೆ ಮೊಬೈಲ್ ಮೂಲಕವೇ ನೀವು ಆಪ್ ಅನ್ನು ತಯಾರಿಸಬಹುದು.! ಕೋಡಿಂಗ್- ಡಿಕೋಡಿಂಗ್ ವ್ಯವಸ್ಥೆ ಇಲ್ಲದೇ, ನಿಮಗೆ ಬೇಕಾದ ರೀತಿಯಲ್ಲಿ ಕೇವಲ ನಿಮ್ಮ ಮಾಹಿತಿ ತುಂಬಿ ನಿಮ್ಮ ಆಪ್‌ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದು.!!

ಹಾಗಾಗಿಯೇ ಇದಕ್ಕೆ "ಆಪಿ ಪೈ" (Appy Pie) ಎನ್ನುವ ವೆಬ್‌ಸೈಟ್‌ ಒಂದು ಹುಟ್ಟಿಕೊಂಡಿದೆ! ಈ ಆಪ್‌ ಮೂಲಕ ನಿಮ್ಮದೇ ಆಪ್‌ ಒಂದನ್ನು ಕ್ರಿಯೇಟ್‌ ಮಾಡಿ ಸಾರ್ವಜನಿಕವಾಗಿ ಅದನ್ನು ಬಳಕೆಮಾಡಿಕೊಳ್ಳಬಹುದಾಗಿದೆ.ಹಾಗಾದರೆ, "ಆಪಿ ಪೈ" (Appy Pie) ಮೂಲಕ ನಮ್ಮದೇ ಸ್ವಂತ ಆಪ್‌ ಅನ್ನು ಹೇಗೆ ಕ್ರಿಯೇಟ್ ಮಾಡುವುದು? ಇದರಿಂದ ಪ್ರಯೋಜನಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1

#1 "ಆಪಿ ಪೈ" (Appy Pie) ಅಫಿಷಿಯಲ್ ವೆಬ್‌ಸೈಟ್‌ ತೆರೆಯಿರಿ.

"ಆಪಿ ಪೈ" (Appy Pie) ಅಫಿಶಿಯಲ್ ತೆರೆಯಿರಿ ಮತ್ತು "create an app for free " ಎನ್ನುವ ಐಕಾನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಿ.

#2 ಯಾವ ರೀತಿಯ ವೆಬ್‌ಸೈಟ್ ಬೇಕೆಂದು ಆಯ್ಕೆ ಮಾಡಿ.

#2 ಯಾವ ರೀತಿಯ ವೆಬ್‌ಸೈಟ್ ಬೇಕೆಂದು ಆಯ್ಕೆ ಮಾಡಿ.

"create an app for free " ಎನ್ನುವ ಐಕಾನ್ ಕ್ಲಿಕ್ ಮಾಡಿದ ನಂತರ ನಿಮಗೆ ಯಾವ ವರ್ಗದ ಆಪ್‌ ಬೇಕು ಎಂಬುದನ್ನು ನಿರ್ಧರಿಸಿ. ಆನ್‌ಲೈನ್‌ ಬ್ಯುಸಿನೆಸ್, ಫೋಟೊಗ್ರಫಿ, ನ್ಯೂಸ್, ಮಾಹಿತಿ ಯಂತಹ ಹಲವು ವರ್ಗಗಳು ನಿಮಗೆ ಲಭ್ಯವಿದೆ.

#3 ಆಪ್‌ ಥೀಮ್ ಆಯ್ಕೆ ಮಾಡಿ.

#3 ಆಪ್‌ ಥೀಮ್ ಆಯ್ಕೆ ಮಾಡಿ.

ನಿಮ್ಮ ಇಷ್ಟದ ಆಪ್‌ ವರ್ಗವನ್ನು ಕ್ಲಿಕ್ ಮಾಡಿದ ನಂತರ "ಆಪಿ ಪೈ" (Appy Pie) ನಿಮಗೆ ಹಲವು ರೀತಿಯ ಆಪ್‌ ಥೀಮ್‌ಗಳನ್ನು ತೋರಿಸುತ್ತದೆ. ನಿಮ್ಮ ಆಯ್ಕೆಯ ಥೀಮ್ ಸೆಲೆಕ್ಟ್ ಮಾಡಿ. Appy Pie ನಿಮಗೆ ಡೆಮೊ ತೋರಿಸುತ್ತದೆ. ನಂತರ "Next" ಐಕಾನ್‌ ಕ್ಲಿಕ್ ಮಾಡಿ.

#4 ಆಪ್‌ ವಿವರಗಳನ್ನು ತುಂಬಿರಿ.

#4 ಆಪ್‌ ವಿವರಗಳನ್ನು ತುಂಬಿರಿ.

ಥೀಮ್ ಸೆಲೆಕ್ಟ್ ಮಾಡಿದ ನಂತರ ನೀವು ಆಪ್‌ ಡಿಸ್ಕ್ರಿಪ್ಟನ್, ಕಾಂಟ್ಯಾಕ್ಟ್ ಡಿಟೇಲ್ಸ್ ವಿವರಗಳನ್ನು ತುಂಬಿರಿ. ಜೊತೆಯಲ್ಲಿಯೇ ಆಪ್‌ ಕಲರ್, ಫಾಂಟ್‌ ಸ್ಟೈಲ್, ವಿವಿಧ ರೀತಿಯ ಐಕಾನ್‌ಗಳು ನೀವು ಆಪ್‌ಗೆ ಆಯ್ಕೆ ಮಾಡಿಕೊಳ್ಳಿ.

#5 ಸೈನ್‌ಅಪ್ ಆಗಿ ಆಪ್‌ ಕ್ರಿಯೇಟ್ ಮಾಡಿ.

#5 ಸೈನ್‌ಅಪ್ ಆಗಿ ಆಪ್‌ ಕ್ರಿಯೇಟ್ ಮಾಡಿ.

ನಿಮ್ಮ ಆಯ್ಕೆಯ ಆಪ್‌ ಅನ್ನು ರಚಿಸಿದ ನಂತರ '' Build" ಎನ್ನುವ ಐಕಾನ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ ನಂತರ ನಿಮ್ಮ ಹೆಸರು ಮತ್ತು ನಿಮ್ಮ ಇ-ಮೇಲ್ ಮಾಹಿತಿಗಳ ಮೂಲಕ ಸೈನ್‌ಅಪ್ ಆಗಿ. ನಿಮಗೆ ಆಪಿ ಪೈ" (Appy Pie) ವೆಬ್‌ಸೈಟ್ ಹಲವು ಬೆಲೆಯ ಆಫರ್‌ ನೀಡಿರುತ್ತದೆ. ಹಣ ನೀಡಿ ಆಪ್ ಬ್ಯುಲ್ಡ್ ಮಾಡಬಹುದಾಗಿದ್ದು, ಕೆಲವು ತಿಂಗಳುಗಳು ಆಪ್‌ ಅನ್ನು ಉಚಿತವಾಗಿ ಪಡೆಯಬಹುದು. ಹಾಗಾಗಿ ಕೊನೆಯಲ್ಲಿ ಕಾಣುವ "Free" ಎನ್ನುವ ಐಕಾನ್‌ ಕ್ಲಿಕ್ ಮಾಡಿ.

#6 ಸ್ವಂತ ಬ್ಯಸಿನೆಸ್ ಮಾಡಿ!!

#6 ಸ್ವಂತ ಬ್ಯಸಿನೆಸ್ ಮಾಡಿ!!

ಈ ಆಪ್‌ ಮೂಲಕ ನಿಮ್ಮ ಯಾವುದೇ ಪ್ರಾಡೆಕ್ಟ್ ಅನ್ನು ಜನರಿಗೆ ಮುಟ್ಟಿಸಬಹುದು.! ನೀವು ಮಾರಬೇಕಿರುವ ವಸ್ತುವಿನ ಪೂರ್ತಿ ಡೀಟೆಲ್ಟ್ ಅನ್ನು ಆಪ್‌ನಲ್ಲಿ ಇನ್‌ಸ್ಟಾಲ್ ಮಾಡಿ ಹೆಚ್ಚು ಜನರಿಗೆ ತಲುಪಿಸಿದರೆ ನೀವು ಕೂಡ ಬಹುದೊಡ್ಡ ಬ್ಯುಸಿನೆಸ್ ಆಗುವುದರಲ್ಲಿ ಸಂದೇಹವಿಲ್ಲಾ.!!

<strong>ಪ್ರಪಂಚದಲ್ಲಿಯೇ ಶ್ರೀಮಂತ ವ್ಯಕ್ತಿ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿರಲಿಲ್ಲ!! ಏಕೆ ಗೊತ್ತಾ?</strong>ಪ್ರಪಂಚದಲ್ಲಿಯೇ ಶ್ರೀಮಂತ ವ್ಯಕ್ತಿ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಿಸಿರಲಿಲ್ಲ!! ಏಕೆ ಗೊತ್ತಾ?

Best Mobiles in India

English summary
how about building an app for free and make it available to the public. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X