Subscribe to Gizbot

ಗೂಗಲ್ ಅರ್ಥ್‌ನಿಂದ ಬಹಿರಂಗಗೊಂಡ ಪ್ರಪಂಚದ ರಹಸ್ಯ ತಾಣಗಳು

Written By:

ಗೂಗಲ್ ಅರ್ಥ್‌ ಸೇವೆ ಪ್ರಪಂಚದ ಜನತೆಗೆ, ತಾವು ಕೂತಲ್ಲಿಯೇ ನೋಡಬಹುದಾದ ಯಾವುದೇ ಪ್ರದೇಶದ ಮ್ಯಾಪ್‌, ಉಪಗ್ರಹಗಳಿಂದ ಸೆರೆಹಿಡಿದ ಬಾಹ್ಯಾಕಾಶದ ಗೆಲಾಕ್ಸಿಯ ರಹಸ್ಯ ಚಿತ್ರಣ, ಸುಂದರ ತಾಣಗಳ ಮಾಹಿತಿಯನ್ನು ಮಾರ್ಗ ಮತ್ತು ಫೋಟೋ ಸಹಿತ ನೀಡುತ್ತದೆ. ವಾಸ್ತವವಾಗಿ ಭೇಟಿ ನೀಡಲು ಸಾಧ್ಯವಿದೆಯೋ ಇಲ್ವೋ. ಆದ್ರೆ ಗೂಗಲ್‌ ಅರ್ಥ್‌ ಇದುವರೆಗೆ ನೀಡಿರುವ ಅದ್ಭುತ ವಿಷಯಗಳಲ್ಲಿ, ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಪ್ರಖ್ಯಾತಗೊಂಡ ಟಾಪ್‌ ವಿಷಯಗಳನ್ನು ನಿಮಗಾಗಿ ನೀಡುತ್ತಿದೆ. ಗಮನಾರ್ಹ ವಿಷಯವೆಂದರೆ ಟೆಕ್‌ ಪ್ರಿಯರು ಒಮ್ಮೆಯಾದರೂ ಸಹ ಇಂತಹ ವೈರಲ್‌ ಇಂಟರ್ನೆಟ್‌ ಮಾಹಿತಿಯನ್ನು ಮತ್ತು ಗೂಗಲ್‌ ಅರ್ಥ್‌ ಸಂಗ್ರಹಿಸಿರುವ ರಹಸ್ಯ ವಿಷಯಗಳನ್ನು ಜೀವಿತಾವಧಿಯಲ್ಲಿ ಒಮ್ಮೆ ಯಾದರೂ ನೋಡಲೇಬೇಕು..

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೈಬೋ ಪ್ಲೇನ್‌

1

ಅಮೇರಿಕದ ನ್ಯೂಜರ್ಸಿಯಲ್ಲಿನ ಕ್ಯಾಥಿ ಟೆರೇಸ್‌ ಇಗಲ್‌ವುಡ್‌ನ ಕ್ಲಿಪ್ಸ್‌. ಕಾಮನಬಿಲ್ಲಿನ ಬಣ್ಣದಲ್ಲಿರುವ ಪ್ಲೇನ್‌ ಚಿತ್ರ. ಬಹುಶಃ ಯಾರು ನೋಡಿರಲು ಸಾಧ್ಯವಿಲ್ಲ.

ಚಿತ್ರ ಕೃಪೆ: Google Earth

ಹೃದಯ ಆಕಾರದ ಕೊಳ

2

ಓಹಿಯೋದ ಕೊಲಂಬಿಯಾ ಕೇಂದ್ರದಲ್ಲಿರುವ ಹೃದಯ ಆಕಾರದಲ್ಲಿರುವ ಕೊಳವಿದು. ನೋಡಲು ಸುಂದರ ಹಾಗೂ ಅಲ್ಲಿನ ಪರಿಸರವು ಅಷ್ಟೇ ಸುಂದರವಾಗಿದೆ.

ಚಿತ್ರ ಕೃಪೆ: Google Earth

ಗಿಟಾರ್‌ ಆಕಾರದಲ್ಲಿನ ಅರಣ್ಯ

3

ಗೂಗಲ್‌ ಅರ್ಥ್‌ನಲ್ಲಿ ಎಲ್ಲರಿಗೂ ಕುತೂಹಲ ನೀಡುವ ರಹಸ್ಯವಿದು. ಅರ್ಜೆಂಟಿನಾದ ಕೊರ್ಡೋಬ ಪ್ರದೇಶದಲ್ಲಿರುವ ಗಿಟಾರ್‌ ಆಕಾರದಲ್ಲಿರುವ ಪ್ರಪಂಚದಲ್ಲೇ ಅತಿ ವಿಶಿಷ್ಟವಾದ ಅರಣ್ಯವಿದು.

ಚಿತ್ರ ಕೃಪೆ: Google Earth

ಬೃಹತ್‌ ಗಾತ್ರ ಸಿಂಹ

4

ಬ್ರಿಟನ್‌'ನ ಡನ್‌ಸ್ಟೇಬಲ್‌ LU6 2UD ಯಲ್ಲಿರುವ ಅತಿ ದೊಡ್ಡ ಗಾತ್ರದ ಸಿಂಹದ ಚಿತ್ರಣವಿದು.

ಚಿತ್ರ ಕೃಪೆ: Google Earth

ಟರ್ಕಿಷ್ ಫ್ಲಾಗ್

5

ಸೈಪ್ರಸ್ ದೇಶದ ಕೈರೇನಿಯಾದಲ್ಲಿರುವ ದೈತ್ಯ ಟರ್ಕಿಷ್‌ ಫ್ಲಾಗ್ ಇದು.

ಚಿತ್ರ ಕೃಪೆ: Google Earth

ಕಟಾವಿ ರಾಷ್ಟ್ರೀಯ ಉದ್ಯಾನವನ

6

ಟಾಂಜಾನಿಯಾದ ಕಟಾವಿ ರಾಷ್ಟ್ರೀಯ ಉದ್ಯಾನವನದಲ್ಲಿ ವಿಶಾಳ ಕೊಳದಲ್ಲಿ ನೀರುಕುದುರೆಗಳು ಸ್ನಾನ ಮಾಡುವ ದೃಶ್ಯ.

ಚಿತ್ರ ಕೃಪೆ: Google Earth

ಬೃಹದಾಕಾರದ ಫೈಯರ್‌ಫಾಕ್ಸ್‌ ಲೋಗೋ

7

ಅಮೇರಿಕದ ಓರೆಗಾನ್‌ ಪ್ರದೇಶದ ಡೇಟನ್‌ನಲ್ಲಿನ ಜೋಳ ಬೆಳೆಯುವ ಪ್ರದೇಶದಲ್ಲಿರುವ ಬೃಹದಾಕಾರದ ಫೈಯರ್‌ಫಾಕ್ಸ್‌ ಲೋಗೋ.

ಚಿತ್ರ ಕೃಪೆ: Google Earth

ಯೆಲ್ಲೋಸ್ಟೋನ್‌ ‌ ನ್ಯಾಷನಲ್‌ ಪಾರ್ಕ್‌

8

ಅಮೇರಿಕದ ವ್ಯೋಮಿಂಗ್‌ನಲ್ಲಿನ ಯೆಲ್ಲೊಸ್ಟೋನ್ ನ್ಯಾಷನಲ್ ಪಾರ್ಕ್‌ನಲ್ಲಿರುವ ಗ್ರ್ಯಾಂಡ್‌ ಕಾಮನಬಿಲ್ಲಿನ ಸುರುಳಿ.

ಚಿತ್ರ ಕೃಪೆ: Google Earth

 ವಿನ್ಸ್ಲೋ

9

ಅರಿಜೋನದಲ್ಲಿನ ವಿನ್ಸ್ಲೋ ಬ್ಯಾರಿಂಗರ್ ಉಲ್ಕೆಯ ಕುಳಿಯ ಚಿತ್ರಣ.

ಚಿತ್ರ ಕೃಪೆ: Google Earth

UTA Flight 772

10

ನೈಜರ್‌ನ ದಕ್ಷಿಣ ಟೆನೆರೆಯ ಸಹರಾ ಮರುಭೂಮಿಯಲ್ಲಿನ UTA Flight 772 ನಲ್ಲಿನ ಮರುಭೂಮಿಯಲ್ಲಿನ ನೆನಪು ಕಾಡುವ ಪ್ಲೇನ್‌ ಚಿತ್ರ.

 Mattel ಲೋಗೋ

11

ಕ್ಯಾಲಿಫೋರ್ನಿಯಾದಲ್ಲಿನ ಎಲ್‌ ಸಿಗುಂಡೊದಲ್ಲಿರುವ ಆಟಿಕೆಗಳ ತಯಾರಿಕೆಯ ಅಂತರರಾಷ್ಟ್ರೀಯ ಕಂಪನಿ Mattel ನ ಲೋಗೋ ಚಿತ್ರಣ.

ಚಿತ್ರ ಕೃಪೆ: Google Earth

 ಮರುಭೂಮಿಯಲ್ಲಿ ತಂಗುದಾಣ

12

ಅಮೇರಿಕದ ಅರಿಜೋನಾದ ಎಲಾಯ್‌ನಲ್ಲಿನ ಮರುಭೂಮಿಯಲ್ಲಿ ಯಾದೃಚ್ಛಿಕವಾಗಿ ನಿರ್ಮಿಸಿರುವ ತಂಗುದಾಣ.

ಚಿತ್ರ ಕೃಪೆ: Google Earth

ಸನ್‌ಕೆನ್‌ ಶಿಪ್‌

13

ಇರಾಕ್‌ನ ಬಸ್ಟಾಹ್‌ನಲ್ಲಿನ ಸನ್‌ಕೆನ್‌ ಶಿಪ್‌ ಚಿತ್ರಣ. ಇದರ ವಿಶೇಷತೆ ಎಂದರೆ ಸೂರ್ಯನ ಬೆಳಕು ಈ ಹಡಗಿನ ನೇರದ ತಳದವರೆಗೂ ಸಹ ಬೀಳುತ್ತದೆ.

ಚಿತ್ರ ಕೃಪೆ: Google Earth

ಸ್ನೇಹಿ ದೈತ್ಯ ಬೆಟ್ಟಗಳು

14

ಚಿಲಿಯ ಟರಪಕ ಪ್ರದೇಶದ ಹ್ವಾರ ಹಳ್ಳಿಯಲ್ಲಿರುವ ಎರಡು ದೈತ್ಯ ಸ್ನೇಹಿ ಬೆಟ್ಟಗಳು.

ಚಿತ್ರ ಕೃಪೆ: Google Earth

ರಹಸ್ಯ ಚಿಹ್ನೆ

15

ಗೂಗಲ್‌ ಅರ್ಥ್‌ನಲ್ಲಿ ದೊರೆಯುವ ಅಮೇರಿಕದ ನೆವಡಾ ಪ್ರದೇಶದ ರಹಸ್ಯ ಚಿಹ್ನೆ ಇದು.

ಚಿತ್ರ ಕೃಪೆ: Google Earth

ಕೋಕಾ ಕೋಲಾ ಲೋಗೋ

16

ಚಿಲಿಯಲ್ಲಿನ ಅರಿಕ ವೈ ಪರಿನಕೋಟಾ ಪ್ರದೇಶದಲ್ಲಿರುವ ರಹಸ್ಯ ಕೋಕಾ ಕೋಲಾ ಕಂಪನಿಯ ಲೋಗೋ ಚಿತ್ರಣ ಗೂಗಲ್‌ ಅರ್ಥ್‌ನಲ್ಲಿ ಕಾಣುವುದು ಹೀಗೆ.

ಚಿತ್ರ ಕೃಪೆ: Google Earth

ರಹಸ್ಯ ಚಿಹ್ನೆ

17

ಅಮೇರಿಕದ ನೆವಡಾದಲ್ಲಿ ಕಂಡು ಬರುವ ಮತ್ತೊಂದು ರಹಸ್ಯ ಚಿಹ್ನೆಯ ಚಿತ್ರಣವಿದು.

ಚಿತ್ರ ಕೃಪೆ: Google Earth

ಪೊಟಾಷ್ ಕೊಳಗಳು

18

ಅಮೇರಿಕದ ಉಟಾಹ್‌ನ ಮೋಬ್‌ನಲ್ಲಿ ಕಂಡುಬರುವ ಪೊಟಾಷ್‌ ಕೊಳಗಳು ಇವು.

ಚಿತ್ರ ಕೃಪೆ: Google Earth

ಜೀಸಸ್‌ ಲವ್ಸ್‌ ಯು

19

ಅಮೇರಿಕದ ಇದಾಹೊ 'ಡ ನ್ಯಾಷನಲ್ ಫಾರೆಸ್ಟ್'ನಲ್ಲಿರುವ ಪ್ರೀತಿಯ ಸಂದೇಶ ಸಾರುವ ಜೀಸಸ್ ಲವ್ಸ್‌ ಯು" ಗೂಗಲ್‌ ಅರ್ಥ್‌ನಲ್ಲಿ ಸಿಗುವ ರಹಸ್ಯ ತಾಣವಿದು.

ಚಿತ್ರ ಕೃಪೆ: Google Earth

ಮರುಭೂಮಿಯ ಗುರಿ

20

ಅಮೇರಿಕದಲ್ಲಿರುವ ನೆವಾಡಾ ಪ್ರದೇಶದಲ್ಲಿನ ಮರುಭೂಮಿಯಲ್ಲಿನ ಅತಿದೊಡ್ಡ ಟಾರ್ಗೆಟ್ ಪ್ರದೇಶವಿದು. ಹೋಗುವುದು ಕಷ್ಟ.

ಚಿತ್ರ ಕೃಪೆ: Google Earth

 ಚಿಹ್ನೆ

21

ಚೀನಾದ ಮರುಭೂಮಿಯಲ್ಲಿರುವ ರಹಸ್ಯ ತಾಣವಿದು. ಆದ್ರೆ ಇದರ ಸೂಚನೆ ಏನು ಎಂಬುದೇ ತಿಳಿದಿಲ್ಲಾ.

ಚಿತ್ರ ಕೃಪೆ: Google Earth

 ಮರಗಳಿಂದ ಆವೃತ್ತವಾದ ಹಡಗು

22

ಆಸ್ಟ್ರೇಲಿಯಾದ ಸಿಡ್ನಿಯ ಹೋಮ್‌ಬುಶ್‌ ಪ್ರದೇಶದಲ್ಲಿ ಹಡಗು ಒಂದಕ್ಕೆ ಮರಗಳು ಸುತ್ತಿಕೊಂಡಿರುವುದು ಹೀಗೆ.

ಚಿತ್ರ ಕೃಪೆ: Google Earth

23

ಕೆನಡಾದ ಆಲ್ಬರ್ಟಾದಲ್ಲಿನ ವಾಲ್ಷ್ ಪ್ರದೇಶದಲ್ಲಿರುವ "ಬ್ಯಾಡ್ ಲ್ಯಾಂಡ್ಸ್ ಗಾರ್ಡಿಯನ್" ಗೂಗಲ್‌ ಅರ್ಥ್‌ನಲ್ಲಿ ಕಂಡದ್ದು ಹೀಗೆ.

ಚಿತ್ರ ಕೃಪೆ: Google Earth

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳು

ಉತ್ತರ ಕೊರಿಯಾ ಅಧ್ಯಕ್ಷನ ಮೊಬೈಲ್‌ ಹಿಂದಿರುವ ರಹಸ್ಯವೇನು?

ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
29 Amazing Things That You Must See On Google Earth Before You Die. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot