ಕಾದು ನೋಡಿ, ಜಿಯೋ ಬಿಡುಗಡೆ ಮಾಡುವ ಹೊಸ ಸೇವೆಗಳು ನಿಮ್ಮನ್ನು ಬೆರಗಾಗಿಸಲಿದೆ

ಜಿಯೋ ಆರಂಭವಾದ ನಂತರ ರಿಲಯನ್ಸ್ ಖ್ಯಾತಿ ಮತ್ತಷ್ಟು ಎತ್ತರಕ್ಕೆ ಹೋಗಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ.

|

ದೇಶಿಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಉತ್ತಮ ಹೆಸರು ಗಳಿಸಿದ್ದರೂ, ಜಿಯೋ ಆರಂಭವಾದ ನಂತರ ರಿಲಯನ್ಸ್ ಖ್ಯಾತಿ ಮತ್ತಷ್ಟು ಎತ್ತರಕ್ಕೆ ಹೋಗಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಜಿಯೋ ಮಾಡಿದ ಕ್ರಾಂತಿಯನ್ನು ಜನರಿಂದ ಗಳಿಸಿದ ಪ್ರೀತಿಯನ್ನು ಇನ್ನು ಎತ್ತರಕ್ಕೆ ಬೆಳೆಯಲು ಬಳಸಿಕೊಳ್ಳಲು ಮುಂದಾಗಿದೆ.

ಕಾದು ನೋಡಿ, ಜಿಯೋ ಬಿಡುಗಡೆ ಮಾಡುವ ಹೊಸ ಸೇವೆಗಳು ನಿಮ್ಮನ್ನು ಬೆರಗಾಗಿಸಲಿದೆ

ಓದಿರಿ: ಮತ್ತೇ ಬದಲಾದ ಜಿಯೋ ಪ್ಲಾನ್..! ಏಕೆ, ಹೊಸ ಆಫರ್ ಏನೇನು.?

ಜಿಯೋ 4G ನೆಟ್‌ವರ್ಕ್‌ನಲ್ಲಿ ಮಾಡಿದ ಕ್ರಾಂತಿಕಾರಕ ಬದಾಲವಣೆಯಿಂದಾಗಿ ಜನರಿಗೆ ಜಿಯೋ ಮೇಲೆ ನಂಬಿಕೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಜಿಯೋ 2017ರಲ್ಲಿ ಹಲವು ಸೇವೆಗಳನ್ನು ಆರಂಭಿಸಲಿದ್ದು, ಅವುಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋ DTH ಸೇವೆ:

ಜಿಯೋ DTH ಸೇವೆ:

ಜಿಯೋ DTH ಲೋಕಕ್ಕೆ ಕಾಲಿಡಲು ಭರ್ಜರಿ ಸಿದ್ಧತೆ ನಡೆಸಿದ್ದು, ಈ ಹಿಂದೆ 4G ಸೇವೆಯನ್ನು ಆರಂಭಿಸಿದ್ದ ಸಂದರ್ಭದಲ್ಲಿ ಮಾಡಿದಂತಹ ಪ್ರಯೋಗವನ್ನೇ ಇಲ್ಲಿಯೂ ಮಾಡಲು ಚಿಂತನೆ ನಡೆಸಿದೆ. ತನ್ನ ಗ್ರಾಹಕರಿಗೆ 400 ಚಾನಲ್ ಗಳನ್ನು ನೋಡುವ ಅವಕಾಶವನ್ನು ಮಾಡಿಕೊಡಲಿದ್ದು, ಅದುವೇ ಕಡಿಮೆ ಬೆಲೆಗೆ. ಅಲ್ಲದೇ ಆರಂಭಿಕ ಕೊಡುಗೆಯಾಗಿ ಮೂರು ರಿಂದ ಆರು ತಿಂಗಳ ಉಚಿತ ಸೇವೆಯನ್ನು ಸಹ ನೀಡಲಿದೆ. ಅಲ್ಲದೇ ಹೈಬ್ರಿಡ್ ಸೆಟಪ್ ಬಾಕ್ಸ್ ಸಹ ಇದರೊಂದಿಗೆ ನೀಡಲಿದೆ.

ರಿಲಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಸೇವೆ:

ರಿಲಯನ್ಸ್ ಜಿಯೋ ಬ್ರಾಡ್‌ಬ್ಯಾಂಡ್ ಸೇವೆ:

ಜಿಯೋ DTH ಮಾದರಿಯಲ್ಲೇ ಜಿಯೋ ಬ್ರಾಡ್‌ಬ್ಯಾಂಡ್ ಸೇವೆ ಸಹ ಶೀಘ್ರವೇ ಆರಂಭವಾಗಲಿದೆ. ಈಗಾಗಲೇ ಬೀಟಾ ಆವೃತ್ತಿ ಚಾಲನೆಯಲ್ಲಿದ್ದು, ಅದು ಯಶಸ್ವಿಯಾದ ನಂತರದಲ್ಲಿ ದೇಶದಾದ್ಯಂತ ಈ ಸೇವೆಯನ್ನು ವಿಸ್ತರಿಸಲಿದೆ. ಅಲ್ಲದೇ ಇದು 1Gbps ವೇಗದ ಇಂಟರ್ನೆಟ್ ಸೇವೆಯನ್ನು ಕಡಿಮೆ ಬೆಲೆಗೆ ನೀಡಲಿದೆ ಎನ್ನಲಾಗಿದೆ.

ಜಿಯೋ ಮನಿ:

ಜಿಯೋ ಮನಿ:

ಸದ್ಯ ದೇಶದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚಾಗುತ್ತಿದ್ದು, ಇದರ ಲಾಭವನ್ನು ಪಡೆಯಲು ಜಿಯೋ ತನ್ನ ಮನಿ ಆಪ್ ಅನ್ನು ಇನಷ್ಟು ಸುಧಾರಿಸಲಿದೆ ಎನ್ನಲಾಗಿದೆ. ಸದ್ಯ ಜಿಯೋ ಮನಿ ಆಪ್ ಕಾರ್ಯಚರಣೆ ನಡೆಸುತ್ತಿದ್ರೂ, ಅಷ್ಟಾಗಿ ಖ್ಯಾತಿಯನ್ನು ಪಡೆದುಕೊಂಡಿಲ್ಲ. ಈ ಹಿನ್ನಲೆಯಲ್ಲಿ ಜಿಯೋ ಮನಿ ಆಪ್‌ಗೆ ಮರು ಜೀವ ನೀಡಿ, ದೊಡ್ಡ ಮಟ್ಟಕ್ಕೆ ಸದ್ದು ಮಾಡಲು ಜಿಯೋ ಸಿದ್ಧತೆ ನಡೆಸಿದೆ.

ಕಡಿಮೆ ಬೆಲೆಗೆ 4G VoLTE ಫೀಚರ್ ಫೋನ್:

ಕಡಿಮೆ ಬೆಲೆಗೆ 4G VoLTE ಫೀಚರ್ ಫೋನ್:

ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ 4G VoLTE ಸಪೋರ್ಟ್ ಮಾಡುವ ಸ್ಮಾರ್ಟ್‌ಫೋನ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಅವುಗಳ ಬೆಲೆಯೂ ಜಾಸ್ತಿ ಇದೆ. ಇದಕ್ಕಾಗಿ ಜಿಯೋ ತನ್ನ ಬಳಕೆದಾರಿಗೆ ಕಡಿಮೆ ಬೆಲೆಗೆ ಅಂದರೆ ರೂ.999 ಇಲ್ಲವೇ ರೂ.1499ಕ್ಕೆ 4G VoLTE ಸಪೋರ್ಟ್ ಮಾಡುವ ಫೀಚರ್ ಫೋನ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಜಿಯೋ ಸ್ಮಾರ್ಟ್ ಹೋಮ್ ಮತ್ತು ಸ್ಮಾರ್ಟ್ ಪ್ರಾಡೆಕ್ಟ್ಸ್:

ಜಿಯೋ ಸ್ಮಾರ್ಟ್ ಹೋಮ್ ಮತ್ತು ಸ್ಮಾರ್ಟ್ ಪ್ರಾಡೆಕ್ಟ್ಸ್:

ಈಗಾಗಲೇ ಜಿಯೋ ಮನೆಗಳಿಗೆ ಬ್ರಾಡ್‌ಬ್ಯಾಂಡ್ ಸೇವೆಯನ್ನು ನೀಡುತ್ತಿದ್ದು, ಇದರೊಂದಿಗೆ ಸ್ಮಾರ್ಟ್ ಹೋಮ್ ಕನಸನ್ನು ಹೊಂದಿದೆ. ಇಂಟರ್ನೆಟ್ ಸೇವೆಯನ್ನು ಬಳಿಸಿಕೊಂಡು ಕಾರ್ಯ ನಿರ್ವಹಿಸುವ ಸ್ಮಾರ್ಟ್ ಹೋಮ್ ವಸ್ತುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈಗಾಗಲೇ ತಯಾರಿಕೆಯನ್ನು ಆರಂಭಿಸಿದ್ದು, ಶೀಘ್ರವೇ ಈ ಸೇವೆಯನ್ನು ಆರಂಭ ಮಾಡಲಿದೆ. ಒಟ್ಟಿನಲ್ಲಿ ಎಲ್ಲವನ್ನು ಜಿಯೋ ಮಯ ಮಾಡಲು ಚಿಂಚನೆ ನಡೆಸಿದೆ.

ಜಿಯೋ 4G ಲ್ಯಾಪ್‌ಟಾಪ್ :

ಜಿಯೋ 4G ಲ್ಯಾಪ್‌ಟಾಪ್ :

ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟ ಲ್ಯಾಪ್‌ಟಾಪ್ ನೀಡುವ ಯೋಜನೆಯೂ ಜಿಯೋ ಮುಂದೆ ಇದೆ. ಈಗಾಗಲೇ 4G ಸಿಮ್ ಸಪೋರ್ಟ್ ಮಾಡುವ ಲ್ಯಾಪ್‌ಟಾಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದೇ ಮಾದರಿಯಲ್ಲಿ ಜಿಯೋ ಸಹ 4G ಸಿಮ್ ಹಾಕಬಹುದಾದ ಲ್ಯಾಪ್‌ಟಾಪ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಚಿಂಚನೆ ನಡೆಸಿದೆ ಎನ್ನಲಾಗಿದೆ.

Best Mobiles in India

Read more about:
English summary
Reliance Jio has upended the whole telecom industry of India, and it doesn’t seem to be slowing time anytime soon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X