Subscribe to Gizbot

5G ಬಂದರೆ ಬದಲಾಗುವ ಭಾರತದಲ್ಲಿ ನಾವು-ನೀವು ಹೀಗೆ ಇರುವುದೇ ಇಲ್ಲ...!!

Written By:

ಸದ್ಯ ದೇಶದಲ್ಲಿ 4G ಸೇವೆಯೂ ಕ್ರಾಂತಿಕಾರಕ ಬದಲಾವಣೆಯನ್ನು ಮಾಡಿದ್ದು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿದೆ. ಅಲ್ಲದೇ ಅವರ ಜೀವನ ಶೈಲಿಯನ್ನು ಬದಲಾವಣೆ ಮಾಡುವ ಮಟ್ಟಕ್ಕೆ ಬಂದಿದೆ. ವೇಗದ ಇಂಟರ್‌ನೆಟ್ ಸೇವೆಯನ್ನು ನೀಡುವ ಮೂಲಕ ಜಗತ್ತನ್ನೇ ಅಂಗೈನಲ್ಲಿ ಇಟ್ಟಿದೆ. ಇದೇ ಸಂದರ್ಭದಲ್ಲಿ 5ನೇ ತಲೆಮಾರಿನ ನೆಟ್‌ವರ್ಕಿನ ಬಗ್ಗೆ ಮಾತುಕತೆ ಶುರುವಾಗಿದೆ.

5G ಬಂದರೆ ಬದಲಾಗುವ ಭಾರತದಲ್ಲಿ ನಾವು-ನೀವು ಹೀಗೆ ಇರುವುದೇ ಇಲ್ಲ...!!

5G ಸೇವೆಯೂ ಭಾರತದಲ್ಲಿ ಕಾಲಿಟ್ಟರೆ ನಮ್ಮ ಜೀವನ ವಿಧಾನವು ಸಖತ್ ಸ್ಮಾರ್ಟ್ ಆಗಲಿದೆ. ಸ್ಮಾರ್ಟ್‌ ಮನೆಗಳು, ಸ್ಮಾರ್ಟ್‌ ಕಾರುಗಳು, ಸ್ಮಾರ್ ವಸ್ತುಗಳೇ ನಮ್ಮ ದೈನಂದಿನ ಬದುಕನ್ನು ಅವರಿಸಿಕೊಳ್ಳಲಿದೆ ಎಂಬುದು ತಜ್ಞರ ವಾದವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
4Gಯಲ್ಲಿ ಸ್ಮಾರ್ಟ್‌ಫೋನ್ ಬಳಕೆ ಜಾಸ್ತಿ:

4Gಯಲ್ಲಿ ಸ್ಮಾರ್ಟ್‌ಫೋನ್ ಬಳಕೆ ಜಾಸ್ತಿ:

4G ಸೇವೆಯಲ್ಲಿ ದೇಶದ ಫೋನ್‌ಗಳೇಲ್ಲವೂ ಸ್ಮಾರ್ಟ್‌ ಆಗಿದ್ದಂತೂ ಸುಳ್ಳಲ್ಲ. ಮೊಬೈಲ್‌ನಲ್ಲೇ ವಿಡಿಯೋ ಕಾಲಿಂಗ್, ಸಿನಿಮಾ ವೀಕ್ಷಣೆ, ಬಿಲ್ ಪೇಮೆಂಟ್ ಎಲ್ಲೂ ಸಾಧ್ಯವಾಗಿತ್ತು, ಒಟ್ಟಿನಲ್ಲಿ ಸ್ಮಾರ್ಟ್ ಜೀವನದ ಆರಂಭ ಇಲ್ಲಿಂದ ಶುರುವಾಯಿತು.

5G ಜೀವನ ಶೈಲಿಯನ್ನೇ ಬದಲಾಯಿಸಲಿದೆ:

5G ಜೀವನ ಶೈಲಿಯನ್ನೇ ಬದಲಾಯಿಸಲಿದೆ:

ಮಂದಿನ ತಲೆ ಮಾರಿನ ಜೀವನ ಶೈಲಿಯನ್ನು ಬದಲಾಯಿಸಲಿದೆ 5G. ಕಾರಣ ನಮ್ಮ ದಿನ ನಿತ್ಯದ ಕೆಲಸಗಳೆಲ್ಲೂ ಸ್ಮಾರ್ಟ್ ಆಗಲಿದೆ. ನಾವು ಪ್ರತಿ ಕೆಲಸಗಳಿಗೆ ಸ್ಮಾರ್ಟ್ ವಸ್ತುಗಳ ಮೇಲೆ ನಿರ್ಧಾರಿತವಾಗಲಿದೆ. ಪ್ರತಿ ವಸ್ತುವು ಸ್ಮಾರ್ಟ್ ಆದರೂ ಆಶ್ವರ್ಯಪಡಬೇಕಾಗಿಲ್ಲ.

ಮನೆಯೇ ಸ್ಮಾರ್ಟ್:

ಮನೆಯೇ ಸ್ಮಾರ್ಟ್:

ನಮ್ಮ ಇಡೀ ಮನೆಯೇ ಸ್ಮಾರ್ಟ್ ಆಗಲಿದೆ, ಡೋರ್ ಲಾಕ್ ನಿಂದ ಹಿಡಿದು, ನೀರುವ ಹರಿಸುವ ನಲ್ಲಿಯೂ ಸ್ಮಾರ್ಟ್, ಬೆಳಗುವ ದೀಪ, ಹೆಚ್ಚು ಓಲೆ, ಕಸ ಗುಡಿಸುವುದು ಎಲ್ಲವೂ ಸ್ಮಾರ್ಟ್ ಆಗಲಿದೆ. ನೀವು ಧರಿಸುವ ಉಡುಗೆ ತೊಡುಗೆಗಳು ಸ್ಮಾರ್ಟ್ ಆಗಲಿದೆ ಎನ್ನಲಾಗಿದೆ.

ರಸ್ತೆ ತುಂಬೆಲ್ಲ ಸ್ಮಾರ್ಟ್ ವಾಹನಗಳು:

ರಸ್ತೆ ತುಂಬೆಲ್ಲ ಸ್ಮಾರ್ಟ್ ವಾಹನಗಳು:

ಮನೆ ಸ್ಮಾರ್ಟ್ ಆದ ಮಾದರಿಯಲ್ಲೇ ರಸ್ತೆಗಳ ತುಂಬೆಲ್ಲಾ ಸ್ಮಾರ್ಟ್ ವಾಹನಗಳು ಸಂಚಾರಿಸಲಿದ್ದು, ಸಿಗ್ನಲ್ ಲೈಟ್‌ಗಳು ಸ್ಮಾರ್ಟ್ ಆಗಲಿದೆ. ಸಂಚಾರಿ ಫೋಲಿಸರು ಸ್ಮಾರ್ಟ್ ಆಗಲಿದ್ದಾರೆ. ರಸ್ತೆಗಳು ಸ್ಮಾರ್ಟ್ ಆಗಿ ಕಾರ್ಯನಿರ್ವಹಿಸಲಿದೆ ಇದಕ್ಕೆಲ್ಲಾ 5G ನೆಟ್‌ವರ್ಕ್ ಇಂಟರೆ ನೆಟ್ ಸೇವೆಯನ್ನು ನೀಡಲಿದೆ.

ಸ್ಮಾರ್ಟ್ ಆಗಲಿದೆ ಎಲ್ಲಾ ಸಿಟಿಗಳು:

ಸ್ಮಾರ್ಟ್ ಆಗಲಿದೆ ಎಲ್ಲಾ ಸಿಟಿಗಳು:

5G ಸೇವೆ ದೇಶದಲ್ಲಿ ಆರಂಭವಾಗುತ್ತಿದಂತೆ ದೇಶದ ಸಿಟಿಗಳೆಲ್ಲೂ ಸ್ಮಾರ್ಟ್ ಆಗಲಿದೆ. ಜನರೇ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಸ್ಮಾರ್ಟ್ ಆಗಿ ಆಪ್‌ ಡೇಟ್ ಆಗಲಿದ್ದಾರೆ. ನಗರದ ಪ್ರತಿ ವ್ಯವಸ್ಥೆಗಳು ಬದಲಾಗಲಿದ್ದು, ಕುಳಿತ ಸ್ಥಳದಲ್ಲಿಯೇ ಪ್ರತಿ ವ್ಯವಸ್ಥೆಯೂ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
With 5G not only the network speeds will improve, but it will also bring about significant socio-economic and cultural change. to know more vist kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot