ಭೂಮಿಯ ಮೇಲಿರುವ ಏಳು ರಹಸ್ಯಮಯ ಸ್ಥಳಗಳು

Written By:

ವಿಶ್ವವು ತನ್ನ ಅಂತರಾಳದಲ್ಲಿ ಅದ್ಭುತ ಸಂಗತಿಗಳನ್ನು ಹಿಡಿದಿಟ್ಟುಕೊಂಡಿದೆ. ಈ ಅದ್ಭುತಗಳಿಗೆ ಕೆಲವಕ್ಕೆ ನಾವು ಪರಿಹಾರವನ್ನು ಕಂಡುಕೊಳ್ಳಬೇಕಾಗಿದ್ದು ಇನ್ನು ಕೆಲವು ತನ್ನ ರಹಸ್ಯಗಳನ್ನು ಹಾಗೆಯೇ ಬಚ್ಚಿಟ್ಟುಕೊಂಡಿದೆ. ಹಾಗಿದ್ದರೆ ಈ ಅಪೂರ್ವ ವಿಸ್ಮಯ ಸಂಗತಿಗಳನ್ನು ನಿಮ್ಮೆದುರು ಬಿಚ್ಚಿಡುವಂತಹ ಕೆಲವೊಂದು ಸಂಗತಿಗಳನ್ನು ಪ್ರಸ್ತುತಪಡಿಸುತ್ತಿದ್ದು ನಿಜಕ್ಕೂ ಇದು ನಿಮ್ಮನ್ನು ವಿಸ್ಮಯ ಲೋಕಕ್ಕೆ ಕೊಂಡೊಯ್ಯುತ್ತದೆ

ಇಂದಿನ ಲೇಖನದಲ್ಲಿ ಇಂತಹುದೇ ವಿಶ್ವ ವಿಸ್ಮಯ ಸಂಗತಿಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದು ಇದು ಏಕೆ ಮಹತ್ತರವಾದುದು ಎಂಬುದನ್ನು ನೀವು ಕಂಡುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಲಡ್ ಫಾಲ್ಸ್, ಟೇಲರ್ ಗ್ಲೇಸಿಯರ್, ಅಂಟಾರ್ಟಿಕಾ

ಬ್ಲಡ್ ಫಾಲ್ಸ್, ಟೇಲರ್ ಗ್ಲೇಸಿಯರ್, ಅಂಟಾರ್ಟಿಕಾ

#1

ಅಂಟಾರ್ಟಿಕಾದಲ್ಲಿರುವ ಗ್ಲಾಸಿಯರ್‌ನಲ್ಲಿ ನೀರು ಕಂದುಬಣ್ಣದಲ್ಲಿ ರಕ್ತವೇ ಹರಿಯುವಂತೆ ಕಾಣುತ್ತಿದ್ದು ಇದು ಕಡಿಮೆ ಆಕ್ಸಿಜನ್ ಮಟ್ಟವನ್ನು ಹೊಂದಿದೆ ಇದರಿಂದಾಗಿ ಹೀಗಿದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿರುವಂತಹದ್ದಾಗಿದೆ. ಮಂಗಳನಲ್ಲೂ ಇಂತಹುದೇ ಇಕೋಸಿಸ್ಟಮ್ ಇದೆಯೇ ಎಂಬುದು ವಿಜ್ಞಾನಿಗಳು ಮುಂದಿರುವ ಪ್ರಶ್ನೆಯಾಗಿದೆ.

ಡೋರ್ ಟು ಹೆಲ್, ಟರ್ಕಮೆನಿಸ್ತಾನ್

ಡೋರ್ ಟು ಹೆಲ್, ಟರ್ಕಮೆನಿಸ್ತಾನ್

#2

ಈ ರೌಂಡ್ ಡೋರ್ 69 ಮೀಟರ್ಸ್ ಅಗಲ ಮತ್ತು 30 ಮೀಟರ್ಸ್ ಆಳವನ್ನು ಪಡೆದುಕೊಂಡಿದೆ, ನೈಸರ್ಗಿಕ ಗ್ಯಾಸ್ ಫೀಲ್ಡ್ ಇದಾಗಿದೆ. ಇದು 1971 ರಲ್ಲಿ ಪತ್ತೆಯಾಗಿದ್ದು ನೈಸರ್ಗಿಕ ಗ್ಯಾಸ್ ಕ್ರಿಯೇಟರ್ ಎಂದೆನಿಸಿದೆ.

ಕ್ಯಾನೊ ಕ್ರಿಸ್ಟೇಲ್ಸ್, ಕೊಲಂಬಿಯಾ

ಕ್ಯಾನೊ ಕ್ರಿಸ್ಟೇಲ್ಸ್, ಕೊಲಂಬಿಯಾ

#3

ರಿವರ್ ಆಫ್ ಫೈವ್ ಕಲರ್ಸ್ ಎಂಬ ಹೆಸರನ್ನೂ ಈ ನದಿ ಪಡೆದುಕೊಂಡಿದ್ದು, ಕೊಲಂಬಿಯನ್ ರಿವರ್ ಆಗಿದೆ. ಜುಲೈಯಿಂದ ನವೆಂಬರ್‌ನಾದ್ಯಂತ ಈ ನದಿ ಈ ಐದು ಬಣ್ಣಗಳಿಂದ ಕೂಡಿರುತ್ತದೆ. ಹಳದಿ, ಹಸಿರು, ಕಪ್ಪು, ನೀಲಿ, ಮತ್ತು ವಿಶೇಷವಾಗಿ ಕೆಂಪು.

ಡ್ರ್ಯಾಗಿಂಗ್ ಸ್ಟೋನ್, ಡೆತ್ ವಾಲ್ಲಿ, ಕ್ಯಾಲಿಫೋರ್ನಿಯಾ, ಯುಎಸ್

ಡ್ರ್ಯಾಗಿಂಗ್ ಸ್ಟೋನ್, ಡೆತ್ ವಾಲ್ಲಿ, ಕ್ಯಾಲಿಫೋರ್ನಿಯಾ, ಯುಎಸ್

#4

ಈ ಕಲ್ಲುಗಳನ್ನು ಸೈಲಿಂಗ್ ಸ್ಟೋನ್ ಎಂದೂ ಕೂಡ ಕರೆಯಲಾಗಿದ್ದು ಈಸ್ಟರ್ನ್ ಕ್ಯಾಲಿಫೋರ್ನಿಯಾದಲ್ಲಿದೆ. ಯಾವುದೇ ಪ್ರಾಣಿ ಅಥವಾ ಮನುಷ್ಯರ ಸಹಾಯವಿಲ್ಲದೆ ಈ ಕಲ್ಲು ಚಲಿಸುತ್ತದೆ.

ಸಹಾರಾದ ನೀಲಿ ಕಣ್ಣು, ಆಫ್ರಿಕಾ

ಸಹಾರಾದ ನೀಲಿ ಕಣ್ಣು, ಆಫ್ರಿಕಾ

#5

ಐ ಆಫ್ ಸಹಾರಾ ಅಥವಾ ಬ್ಲ್ಯೂ ಐ ಆಫ್ ಆಫ್ರಿಕಾ ಎಂಬ ಹೆಸರನ್ನು ಇದು ಪಡೆದುಕೊಂಡಿದ್ದು ಇದು 50 ಕಿಲೋಮೀಟರ್ಸ್ ಉದ್ದವಾಗಿದೆ ಮತ್ತು ಭೌಗೋಳಿಕ ವೃತ್ತಾಕಾರವನ್ನು ಪಡೆದುಕೊಂಡಿದೆ. ಜ್ವಾಲಾಮುಖಿಯಿಂದ ಇದು ಸ್ಥಾಪನೆಯಾಗಿದೆ.

ಲೇಕ್ ರೆಟ್ಬಾ, ಸೆನೆಗಲ್

ಲೇಕ್ ರೆಟ್ಬಾ, ಸೆನೆಗಲ್

#6

ಈ ನದಿಯ ಬಣ್ಣ ಗುಲಾಬಿಯಾಗಿದೆ. ಲೇಕ್ ರೆಬ್ಟಾ ಅಥವಾ ಲೇಕ್ ರೋಸ್ ಪಿಕ್ ಲೇಕ್ ಎಂಬ ಹೆಸರನ್ನೂ ಪಡೆದುಕೊಂಡಿದೆ. ಇದರ ನೀರು ಗುಲಾಬಿಯಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಅಧಿಕ ಪ್ರಮಾಣದ ಉಪ್ಪನ್ನು ಪಡೆದುಕೊಂಡಿದೆ.

ಅಜೂರ್ ಟೆಂಪಲ್, ಚಿಲಿ

ಅಜೂರ್ ಟೆಂಪಲ್, ಚಿಲಿ

#7

ಅಜೂರ್ ಟೆಂಪಲ್, ನೈಸರ್ಗಿಕ ವಿಸ್ಮಯ ಎಂಬುದಾಗಿ ಕರೆಸಿಕೊಂಡಿದ್ದು ವಿಶ್ವದ ಅತಿ ಸುಂದರ ಕೇವ್ ನೆಟ್‌ವರ್ಕ್ ಎಂದೆನಿಸಿದೆ. ನಿಜಕ್ಕೂ ಇಂತಹ ವಿಸ್ಮಯಗಳನ್ನು ಒಳಗೊಂಡಿರುವ ಜಗವು ನಮ್ಮಿಂದ ಬಲು ಎತ್ತರಕ್ಕೇರಿದೆ.

ಭೇಟಿ ನೀಡಿ

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You can’t afford to miss visiting these places if you love adventure. Scroll down to read.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot