Subscribe to Gizbot

ಸೈಬರ್ ಕ್ರಿಮಿನಲ್‌ಗಳು ಹೇಗೆಲ್ಲಾ ಮೋಸ ಮಾಡ್ತಾರೆ ಗೊತ್ತಾ?..ಈ ಸ್ಟೋರಿ ನೋಡಿ!!

Written By:

ಆನ್‌ಲೈನ್ ಮೂಲಕ ಜನರನ್ನು ಮೋಸಗೊಳಿಸಲು ಸೈಬರ್‌ಕ್ರಿಮಿನಲ್‌ಗಳು ಯಾವ ಯಾವ ದಾರಿಗಳನ್ನು ಹುಡುಕುತ್ತಾರೆ ಎಂಬುದನ್ನು ಕೆಲವೊಮ್ಮೆ ಹೂಹಿಸಲು ಕಷ್ಟವಾಗಬಹುದು.!! ಅಂತಹದೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದ್ದು, ಸೈಬರ್‌ ಕ್ರಿಮಿನಲ್‌ಗಳೂ ಹೀಗೂ ಮೋಸ ಮಾಡಬಹುದಾ ಎಂದು ಆಶ್ಚರ್ಯ ಮೂಡಿಸುತ್ತದೆ.!!

ಜಾಕ್‌ಪಾಟ್‌ ಗೆದ್ದಿರುವುದಾಗಿ , ಹಣ ಡಬಲ್ ನೀಡುವುದಾಗಿ ಹೇಳಿ ವಂಚಿಸುವುದು ಸಾಮಾನ್ಯವಾಗಿರುವ ನಡುವೆಯೇ, ಹೊಸ ವಿಧಾನದ ಮೂಲಕ ಮಹಿಳೆಯೊಬ್ಬರನ್ನು ವಂಚಿಸಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ ಘಟನೆ ಕುರಿತು ಸ್ಕೂಪ್‌ವೂಪ್ ವೆಬ್‌ಸೈಟ್ ವರದಿ ಒಂದು ವರದಿ ಮಾಡಿದೆ .!! ಆ ಕ್ರಿಮಿನಲ್ ವಂಚಿಸಲು ಹುಡುಕಿದ ದಾರಿ ಹೀಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಎಲ್‌ಎಕ್ಸ್ ಮೂಲಕ ವಂಚನೆಗೆ ಜಾಲ!!

ಒಎಲ್‌ಎಕ್ಸ್ ಮೂಲಕ ವಂಚನೆಗೆ ಜಾಲ!!

ಪುಣೆಯೆ ಪವಿತ್ರಾ ಎಂಬುವವರು ಸ್ಟ್ರಾಲರ್( ಚಿಕ್ಕಮಕ್ಕಳನ್ನು ಕೂರಿಸಿಕೊಂಡು ತೆರಳುವ ಸಾಧನ) ಒಂದನ್ನು ಒಎಲ್‌ಎಕ್ಸ್ ಮೂಲಕ ಮಾರಾಟ ಮಾಡಲು ಮುಂದಾಗಿದ್ದರು. ಇದನ್ನು ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಿದ ವಂಚಕನು ಗ್ರಾಹನ ಸೋಗಿನಲ್ಲಿ ಅವರನ್ನು ವಂಚಿಸಲು ಮುಂದಾಗಿದ್ದ ಆದರೆ ಅದು ಸಾಧ್ಯವಾಗಿಲ್ಲ.!!

ಕೊಡುಗೆ ನೀಡಲು ಖರೀದಿ!!

ಕೊಡುಗೆ ನೀಡಲು ಖರೀದಿ!!

ಒಎಲ್‌ಎಕ್ಸ್‌ನ ಚಾಟ್ ಮೆಸೆಂಜರ್‌ನಿಂದ ಪವಿತ್ರಾ ಅವರಿಗೆ ಸಂದೇಶವೊಂದು ಬಂದಿದ್ದು, ವ್ಯಕ್ತಿಯೊಬ್ಬರು ಕರೆ ಮಾಡಿ ಆ ವಸ್ತುವನ್ನು ಖರೀದಿಸುವುದಾಗಿ ತಿಳಿಸಿದ್ದರು. ತನ್ನ ಹೆಸರು ವಿಶಾಲ್, ಮುಂಬೈ ನಿವಾಸಿ ಎಂದೂ ಪರಿಚಯಿಸಿಕೊಂಡಿದ್ದರು. ಜತೆಗೆ, ಪುಣೆಯಲ್ಲಿರುವ ತಮ್ಮ ಸಹೋದರಿಗೆ ಅನಿರೀಕ್ಷಿತ ಕೊಡುಗೆಯಾಗಿ ಅದನ್ನು ನೀಡಲು ಖರೀದಿಸುವಾಗಿ ತಿಳಿಸಿದ್ದರು.!!

ಬೆಲೆ ₹3,500 ಆದರೆ ಜಮೆಯಾಗಿದ್ದು ₹13,500

ಬೆಲೆ ₹3,500 ಆದರೆ ಜಮೆಯಾಗಿದ್ದು ₹13,500

ಇನ್ನು ಅದನ್ನು ಖರೀದಿಸಲು ಆನ್‌ಲೈನ್ ಮೂಲಕ ಹಣ ಪಾವತಿಸುವುದಾಗಿ ತಿಳಿಸಿದ ಆ ವ್ಯಕ್ತಿ, ತನ್ನ ಸಹೋದರಿ ಬಂದು ಸ್ಟ್ರಾಲರ್ ಖರೀದಿಸುವುದಾಗಿ ತಿಳಿಸಿದ್ದರು. ನಂತರ ಬ್ಯಾಂಕ್ ಖಾತೆ ಪಡೆದರು. ನಂತರ ಅವರ ಮೊಬೈಲ್‌ಗೆ 59444 (ಲಾಸ್ಟ್ ನಂಬರ್‌ಗಳು)ದೂರವಾಣಿ ಸಂಖ್ಯೆಯಿಂದ ಸಂದೇಶ ಬಂದಿದೆ. ಸ್ಟ್ರಾಲರ್ ಬೆಲೆ ₹3,500 ಆದರೆ ₹13,500 ಜಮೆಯಾಗಿದೆ.

ಕಣ್ತಪ್ಪಿನಿಂದ ನಿಮ್ಮ ಖಾತೆಗೆ ಹಣ ಜಮೆಯಾಗಿದೆ!!

ಕಣ್ತಪ್ಪಿನಿಂದ ನಿಮ್ಮ ಖಾತೆಗೆ ಹಣ ಜಮೆಯಾಗಿದೆ!!

ತನ್ನ ತಾಯಿ ಆಸ್ಪತ್ರೆಯಲ್ಲಿ ಹಣ ಪಾವತಿಸಬೇಕಿದ್ದು, ಅವರಿಗೆ ವರ್ಗಾಯಿಸಬೇಕಾದ ಹಣ ಕಣ್ತಪ್ಪಿನಿಂದ ನಿಮ್ಮ ಖಾತೆಗೆ ಜಮೆಯಾಗಿದೆ. ದಯವಿಟ್ಟು ನಿಮ್ಮ ಅಕೌಂಟ್‌ಗೆ ಹೆಚ್ಚುವರಿಯಾಗಿ ಬಂದಿರುವ ಹಣವನ್ನ ತಾಯಿಯ ಸಂಖ್ಯೆಗೆ ಪೇಟಿಎಂ ಮೂಲಕ ಪಾವತಿಸಿ ಎಂದು ಹೇಳಿ. ತನ್ನ ತಾಯಿಯ ಪೇಟಿಎಂ ಸಂಖ್ಯೆಗೆ ಪಾವತಿ ಮಾಡಿ ಎಂದು ಕ್ರಿಮಿನಲ್ ಒತ್ತಾಯಿಸುತ್ತಲೇ ಇದ್ದರು. ಮತ್ತು ಸತತವಾಗಿ ಕರೆ ಮಾಡುತ್ತಿದ್ದರು

ಮೂರು ನಿಮಿಷದಲ್ಲಿ ಹಣ ಟ್ರಾನ್ಸ್‌ಫರ್!!

ಮೂರು ನಿಮಿಷದಲ್ಲಿ ಹಣ ಟ್ರಾನ್ಸ್‌ಫರ್!!

ಆ ವ್ಯಕ್ತಿ ಪವಿತ್ರಾ ಅವರ ಬ್ಯಾಂಕ್ ಖಾತೆ ಪಡೆದ ನಂತರ ಕೇವಲ 3 ನಿಮಿಷಗಳಲ್ಲಿ ₹13,500 ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂಬ ಸಂದೇಶ ಬಂದಿತ್ತು. ಐಎಂಪಿಎಸ್‌ ವಿಧಾನದ ಮೂಲಕ ಪಾವತಿ ಮಾಡಿದ್ದಾಗಿ ಹೆಳಿದ್ದ ಅವರಿಗೆ ಈ ವಿಧಾನದಲ್ಲಿ ಖಾತೆಗೆ ಹಣ ವರ್ಗವಾಗಲು ಎರಡು ಗಂಟೆಯಾದರೂ ಬೇಕಾಗುತ್ತದೆ.!! ಇಲ್ಲಿ ಪವಿತ್ರಾ ಅವರು ಇದು ಮೋಸದ ಜಾಲ ಎಂದು ತಿಳಿದರು.

ಬ್ಯಾಂಕ್ ಅಕೌಂಟ್‌ಗೆ ಹಣವೇ ಬಂದಿಲ್ಲ.!!

ಬ್ಯಾಂಕ್ ಅಕೌಂಟ್‌ಗೆ ಹಣವೇ ಬಂದಿಲ್ಲ.!!

ಈ ಬಗ್ಗೆ ಅನುಮಾನಗೊಂಡ ಪವಿತ್ರಾ ಅವರು ಬ್ಯಾಂಕ್‌ನ ಗ್ರಾಹಕ ಸೇವಾ ಸಿಬ್ಬಂದಿಗೆ ಕರೆ ಮಾಡಿ ಮೊತ್ತ ಜಮೆ ಆದ ಬಗ್ಗೆ ಮಾಹಿತಿ ಪಡೆದರು. ಆದರೆ, ಯಾವ ಹಣವೂ ಪಾವತಿಯಾಗಿರಲಿಲ್ಲ.!! ಪವಿತ್ರರವರು ಈ ಬಗ್ಗೆ ಪರೀಶೀಲನೆ ಮಾಡಿ ಉಳಿದುಕೊಂಡರೂ.!..ನೀವೇನಾದರೂ ಅಪ್ಪಿತಪ್ಪಿ ಯಾಮಾರಿಬಿಟ್ಟೀರಾ ಹುಷಾರು!!

ಓದಿರಿ:ಉಚಿತವಾಗಿ ಜಿಯೋ ಫೋನ್ ನೀಡಲು ಕಾರಣ ಏನು?.ಅಂಬಾನಿ ಮಾಡಿರುವ ಪ್ಲಾನ್ ಇಲ್ಲಿದೆ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The internet has made our lives super easy. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot