ನಿಮ್ಮ ಮಕ್ಕಳು ಫೇಸ್‌ಬುಕ್‌ ಬಳಕೆ ಮಾಡುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ!! ಏಕೆ ಗೊತ್ತಾ?

Written By:

ಫೇಸ್‌ಬುಕ್‌ನಲ್ಲಿಯೇ ಹೆಚ್ಚು ಸಮಯ ಕಳೆಯುವ ಮಕ್ಕಳು ಮಾನಸಿಕ ರೋಗಕ್ಕೆ ತುತ್ತಾಗುವುದಲ್ಲದೇ ಕಲಿಕೆಯಲ್ಲಿಯೂ ಹಿಂದುಳಿಯುತ್ತಿದ್ದಾರೆ ಎಂದು ಸಂಶೋದನಾ ವರದಿಯೊಂದು ಹೇಳಿದೆ.!!

ಕ್ಯಾಲಿಫೋರ್ನಿಯಾ ಸ್ಟೇಟ್ ಯುವಿವರ್ಸಿಟಿಯಲ್ಲಿ ಸೈಕಾಲಜಿ ಪ್ರೊಸೆಸರ್ ಆಗಿ ಕಾರ್ಯ ನಿರ್ವಹಿಸುತ್ತಿಎಉವ ಡಾ. ಲ್ಯಾರಿ ಡಿ ರೋಸನ್ ಎಂಬುವವರು ಈ ಬಗ್ಗೆ ಅಧ್ಯಯನ ನಡೆಸಿದ್ದು, ಫೇಸ್‌ಬುಕ್ ಬಳೆಕೆಯೊಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳನ್ನು ಹೇಳಿದ್ದಾರೆ.!!

ಹಾಗಾದರೆ, ಫೆಸ್‌ಬುಕ್ ಬಳಕೆಯಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳು ಯಾವುದು? ನಾವೇಗೆ ಎಚ್ಚರಿಕೆಯಿಂದ ಇರಬೆಕು? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಕ್ಕಳಿಗೆ ಶಾಲೆಗಿಂತ ಫೇಸ್‌ಬುಕ್ ಬೆಸ್ಟ್!!

ಮಕ್ಕಳಿಗೆ ಶಾಲೆಗಿಂತ ಫೇಸ್‌ಬುಕ್ ಬೆಸ್ಟ್!!

ಹೌದು, ಡಾ. ಲ್ಯಾರಿ ಡಿ ರೋಸನ್ ಅವರ ವರದಿಯ ಪ್ರಕಾರ ಮಕ್ಕಳು ಫೇಸ್‌ಬುಕ್ ಬಗ್ಗೆ ತೋರಿಸುವ ಇಂಟ್ರೆಸ್ಟ್ ಅವರ ಶಾಲೆಯ ಮೇಲೆ ಇರುವುದಿಲ್ಲ ಎಂದಿದ್ದಾರೆ.! ಮಕ್ಕಳಿಗೆ ಫೇಸ್‌ಬುಕ್ ಮೆನಿಯಾ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ನಿದ್ರಾಹೀನತೆಗೆ ಫೆಸ್‌ಬುಕ್ ಕಾರಣ!!

ನಿದ್ರಾಹೀನತೆಗೆ ಫೆಸ್‌ಬುಕ್ ಕಾರಣ!!

ಹೌದು, ಇದು ಮಕ್ಕಳಿಗೆ ಮಾತ್ರವಲ್ಲ. ಫೆಸ್‌ಬುಕ್ ಬಳಕೆಯಿಂದಾಗಿ ಎಲ್ಲರೂ ನಿದ್ರಾಹೀನತೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ನಿದ್ರಾಹೀನತೆಯೇ ಮಕ್ಕಳ ಓದಿನ ಮೇಲೆ ಬಹಳಷ್ಟು ಪರಿಣಾಮ ಬೀರುತ್ತಿದೆ.!!

13 ವರ್ಷದವರು ತಿಂಗಳಿಗೆ 2000 ಮೆಸೇಜ್!!

13 ವರ್ಷದವರು ತಿಂಗಳಿಗೆ 2000 ಮೆಸೇಜ್!!

ಈಗಿನ ಮಕ್ಕಳು ಎಂದರೆ 13 ವರ್ಷದವರು ಪ್ರತಿ ತಿಂಗಳು ಸರಾಸರಿ 2000ಕ್ಕಿಂತ ಹೆಚ್ಚು ಮೆಸೇಜ್ ಕಳುಹಿಸುತ್ತಾರೆ. ಇದರಲ್ಲಿ ಗೆಳಯರ ಸಂಖ್ಯೆಯೇ ಹೆಚ್ಚಿದೆ.!!

ಕಲ್ಪನೆ ಲೋಕದಲ್ಲಿಯೇ ಜೀವನ!!

ಕಲ್ಪನೆ ಲೋಕದಲ್ಲಿಯೇ ಜೀವನ!!

ಫೆಸ್‌ಬುಕ್ ಬಳಸುವ ಮಕ್ಕಳು ಹೆಚ್ಚು ಕಲ್ಪನಾತೀತ ಜಗತ್ತಿನಲ್ಲಿಯೇ ಬದುಕುತ್ತಿದ್ದಾರೆ.ಹೌದು, ವಾಸ್ತವ ಪ್ರಪಂಚದ ಬದುಕು ಫೆಸ್‌ಬುಕ್ ಹೆಚ್ಚು ಬಳಕೆ ಮಾಡುವ ಮಕ್ಕಳಿಗೆ ಅರ್ಥವಾಗಲು ಬಹಳಷ್ಟು ಸಮಯ ಬೇಕು!!

ಮಕ್ಕಳಿಗೆ ಪ್ರೀತಿ ನೀಡಿ ಫೆಸ್‌ಬುಕ್ ಬಳಕೆ ಕಡಿಮೆ ಮಾಡಿಸಿ!!

ಮಕ್ಕಳಿಗೆ ಪ್ರೀತಿ ನೀಡಿ ಫೆಸ್‌ಬುಕ್ ಬಳಕೆ ಕಡಿಮೆ ಮಾಡಿಸಿ!!

ಗದರಿಸಿ, ಹೆದರಿಸಿ ಮಕ್ಕಳಿಗೆ ಫೆಸ್‌ಬುಕ್ ಬಳಕೆ ಬಿಡಿಸಲು ಸಾಧ್ಯವೆ ಇಲ್ಲ. ಮಕ್ಕಳಿಗೆ ಪ್ರೀತಿಯಿಂದ ತಿಳಿಯುವಹಾಗೆ ಅರ್ಥಮಾಡಿಸಿ. ಮತ್ತು ಅವರಿಗೆ ವಾಸ್ತವ ಜಗತ್ತಿನ ಬಗ್ಗೆ ಹೇಳಿಕೊಡಿ.! ಹಾಗೆ ಶೇರ್ ಮಾಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
These findings were unveiled by Dr. Larry D. Rosen, a professor of psychology at California State University. to know more visit to klannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot