ಮಾರುಕಟ್ಟೆಗೆ ಬಂದಿದೆ ಹಾರುವ ಕಾರ್!!..ಏನೇನು ವಿಶೇಷ ಹೊಂದಿದೆ ಗೊತ್ತಾ?

Written By:

ಸಾರಿಗೆ ಕ್ಷೇತ್ರದಲ್ಲಿ ಮಾನವನ ಅಭಿವೃದ್ದಿಯಾಗಿದ್ದು, ಜಗತ್ತಿನ ಎಲ್ಲಾ ಕ್ಷೇತ್ರದ ಬದಲಾವಣೆಗಳಿಗೆ ನಾಂದಿ ಹಾಡಿತು ಎಂದು ಇತೀಹಾಸದಿಂದ ತಿಳಿದುಬರುತ್ತದೆ. ಕಾಲ್ನಡಿಗಡೆಯಲ್ಲಿದ್ದ ಮಾನವನ ಸಂಚಾರ ಇಂದು ವಿಮಾನ, ಹೈಪರ್ ಲೂಪ್‌ಗಳಲ್ಲಿದ್ದರೆ, ಚೀನಾ ಇದೀಗ ಹಾರುವ ಕಾರನ್ನು ಪರಿಚಯಿಸುತ್ತಿದೆ.!!

ಹೌದು, ಚೀನಾದ ಕಂಪನಿಯೊಂದು ಎಲೆಕ್ಟ್ರಾನಿಕ್ ಕಾರನ್ನು ಅಭಿವೃದ್ಧಿಪಡಿಸಿದ್ದು, ಜುಲೈನಿಂದ ದುಬೈನಲ್ಲಿ ಹಾರಾಟ ಆರಂಭಿಸಲಿದೆ. ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಚಲಿಸಬಹುದಾದ ಈ ಕಾರ್‌ನಲ್ಲಿ ಓರ್ವ ಮಾತ್ರ ಪ್ರಯಾಣಿಸಬಹುದಾಗಿದ್ದು, ಈ ಹಾರುವ ಕಾರನ್ನು ನಿಂತ ಸ್ಥಳದಿಂದ ಹಾರಾಟ ನಡೆಸಬಹುದಾಗಿದೆ.!!

ಮಾರುಕಟ್ಟೆಗೆ ಬಂದಿದೆ ಹಾರುವ ಕಾರ್!!..ಏನೇನು ವಿಶೇಷ ಹೊಂದಿದೆ ಗೊತ್ತಾ?

ಜಿಯೋಗೆ ಶಾಕ್..145 ರೂ.ಗೆ 14GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್!!

ಕಾರ್‌ಗೆ ಇ-ಹೆಂಗ್ 184 ಎಂದು ಹೆಸರಿಟ್ಟಿದ್ದು, ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ ಕೇವಲ 30 ನಿಮಿಷಗಳ ಕಾಲ ಹಾರಬಲ್ಲದು. ಅಂದರೆ ಸುಮಾರು 15 ಕಿಲೋಮೀಟರ್ ದೂರ ಕ್ರಮಿಸುತ್ತದೆ. ಕಾರನ್ನು ಓಡಿಸುವುದು ಕೂಡಾ ಸರಳವಾಗಿದ್ದು, ಚಾಲಕನೇ ಇದರ ನಿಯಂತ್ರಣ ಮಾಡಬಹುದು.!!

ಇನ್ನು ಕಾರಿನಲ್ಲಿರುವ ಸ್ಕ್ರೀನ್ ಮೂಲಕ ಆತ ಎದುರಿನ ಭಾಗವನ್ನು ನೋಡಬಹುದಾಗಿದೆ. ಕಾರಿನಲ್ಲಿ 8 ಪ್ರೊಪೆಲ್ಲರ್​ಗಳ ಶಕ್ತಿಶಾಲಿ ಇಂಜಿನ್​ ಇದ್ದು ಸುರಕ್ಷತೆ ದೃಷ್ಟಿಯಿಂದ ಸೆನ್ಸರ್ ಅಳವಡಿಸಲಾಗಿದೆ. ಹಾಗಾಗಿ, ಭವಿಷ್ಯದ ಸಾರಿಗೆ ಹಾರುವ ಕಾರ್ ಆದರೂ ಆಗಬಹುದು.!!

Read more about:
English summary
Dubai is to test passenger. to know more visitt o kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot