ಪೈರೇಟ್ಸ್ ಆಫ್ ದಿ ಕೆರಿಬಿಯನ್ ಚಿತ್ರಕ್ಕೆ ಕನ್ನ ಹಾಕಿದ ರಾನ್ ಸಮ್: ಹಣ ನೀಡದಿದ್ದರೆ ಪೈರಸಿ ಬಿಡುಗಡೆ ಮಾಡುವ ಬೆದರಿಕೆ

Written By:

ವನ್ನಾಕ್ರೈ ರಾನ್ ಸಮ್ ದಾಳಿಗೆ ಕೇವಲ ಸಾಫ್ಟ್‌ವೇರ್‌ ಕಂಪನಿಗಳು, ಬ್ಯಾಂಕು ಗಳು ತುತ್ತಾಗಿವೆ ಎಂದುಕೊಂಡಿದ್ದರೆ ಅದು ತಪ್ಪು, ಎಲ್ಲಿ ಇಂಟರ್‌ನೆಟ್ ಬಳಕೆ ಮತ್ತು ಕಂಪ್ಯೂಟರ್‌ ಬಳಕೆಯಾಗಲಿದೆಯೋ ಅಲ್ಲೇಲ್ಲವೂ ವನ್ನಾಕ್ರೈ ವಕ್ರದೃಷ್ಟಿಯೂ ಬೀರಿದೆ. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಬಿಗ್ ಬಜೆಟ್ ಹಾಲಿವುಡ್ ಚಿತ್ರವೊಂದು ರಾನ್ ಸಮ್ ದಾಳಿಗೆ ಸಿಲುಕಿ ನಲುಗುತ್ತಿದೆ.

ಪೈರೇಟ್ಸ್ ಆಫ್ ದಿ ಕೆರಿಬಿಯನ್ ಚಿತ್ರಕ್ಕೆ ಕನ್ನ ಹಾಕಿದ ರಾನ್ ಸಮ್

ವಿಶ್ವಾದ್ಯಂತ ವನ್ನಾಕ್ರೈ ರಾನ್ ಸಮ್ ದಾಳಿ ನಡೆದಿದ್ದು, ಭಾರತವೂ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ರಾಷ್ಟ್ರಗಳ 2 ಲಕ್ಷಕ್ಕೂ ಅಧಿಕ ಕಂಪ್ಯೂಟರ್ ಗಳು ಈ ದಾಳಿಗೆ ಗುರಿಯಾಗಿದೆ. ಹಾಲಿವುಡ್ ದುಬಾರಿ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿರುವ ಸಿಸಿಮಾ 'ಪೈರೇಟ್ಸ್ ಆಫ್ ದಿ ಕೆರಿಬಿಯನ್ - ಡೆಡ್ ಮಾನ್ ಟೆಲ್ ನೋ ಟೆಲ್ಸ್' ಹ್ಯಾಕರ್ಸ್ ಕೈ ಸೇರಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿನಿಮಾ ನಮ್ಮ ಕೈಲಿದೆ ಎಂದ ಹ್ಯಾಕರ್ಸ್:

ಸಿನಿಮಾ ನಮ್ಮ ಕೈಲಿದೆ ಎಂದ ಹ್ಯಾಕರ್ಸ್:

'ಪೈರೇಟ್ಸ್ ಆಫ್ ದಿ ಕೆರಿಬಿಯನ್ - ಡೆಡ್ ಮಾನ್ ಟೆಲ್ ನೋ ಟೆಲ್ಸ್' ಚಿತ್ರವನ್ನು ಸಂಪೂರ್ಣವಾಗಿ ಕದ್ದಿರುವುದಾಗಿ ಘೋಷಣೆ ಮಾಡಿರುವ ಹ್ಯಾಕರ್ಸ್, ತಮ್ಮ ಬಳಿ ಈಗಾಗಲೇ ಅಂತಿಮ ಸಿಮಾದ ಕಾಪಿ ಇದೆ ಎಂದು ತಿಳಿಸಿದ್ದು, ಸಂಪೂರ್ಣ ಚಿತ್ರವನ್ನು ಆನ್ ಲೈನ್ ನಲ್ಲಿ ಉಚಿತವಾಗಿ ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾರೆ.

ಭಾರೀ ಪ್ರಮಾಣದ ಹಣಕ್ಕೆ ಬೇಡಿಕೆ:

ಭಾರೀ ಪ್ರಮಾಣದ ಹಣಕ್ಕೆ ಬೇಡಿಕೆ:

'ಪೈರೇಟ್ಸ್ ಆಫ್ ದಿ ಕೆರಿಬಿಯನ್ - ಡೆಡ್ ಮಾನ್ ಟೆಲ್ ನೋ ಟೆಲ್ಸ್' ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದ್ದು, ಶೀಘ್ರವೇ ವಿಶ್ವದಾದ್ಯಂತ ತೆರೆಕಾಣಲಿದೆ ಎನ್ನಲಾಗಿದೆ. ಈಗಾಗಲೇ ಸಾವಿರಾರು ಕೋಟಿ ಹಣವನ್ನು ಸಿನಿಮಾ ತಯಾರಿಕೆಗೆ ವೆಚ್ಚ ಮಾಡಲಾಗಿದೆ. ಸದ್ಯ ಈ ಚಿತ್ರವಿರುವ ಕಂಪ್ಯೂಟರ್ ಹ್ಯಾಕ್ ಮಾಡಿರುವ ಹ್ಯಾಕರ್ಸ್ ತಾವು ಕೇಳಿದಷ್ಟು ಹಣ ಕೊಡದಿದ್ದರೆ ಸಂಪೂರ್ಣ ಚಿತ್ರವನ್ನು ಬಿಡುಗಡೆಗೆ ಮುನ್ನವೇ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಮೇ 24ರಂದು ವಿಶ್ವಾದ್ಯಂತ ತೆರೆಗೆ:

ಮೇ 24ರಂದು ವಿಶ್ವಾದ್ಯಂತ ತೆರೆಗೆ:

ಈಗಾಗಲೇ ಪೈರೇಟ್ಸ್ ಆಫ್ ದಿ ಕೆರಿಬಿಯನ್ ಚಿತ್ರದ ನಾಲ್ಕು ಭಾಗಗಳು ವಿಶ್ವದಾದ್ಯಂತ ತೆರೆ ಕಂಡಿದ್ದು, ಭರ್ಜರಿ ಯಶಸ್ಸನ್ನು ಕಂಡಿರುವುದಲ್ಲದೇ ನಿರ್ಮಾಪಕರಿಗೆ ಭಾರೀ ಹಣ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ವಾಲ್ಟ್ ಡಿಸ್ನಿ ಭರ್ಜರಿ ವೆಚ್ಚದಲ್ಲಿ ಈ ಚಿತ್ರದ ಭಾಗ 5 ಅನ್ನು ನಿರ್ಮಾಣ ಮಾಡಿದೆ. ಮೇ 24ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಚಿತ್ರತಂಡ ತಯಾರಿ ನಡೆಸಿದ್ದರೇ ಇತ್ತ ಲೀಕ್ ಮಾಡುವುದಾಗಿ ಬೆದರಿಕೆ ಬಂದಿದೆ.

ಎಫ್ ಬಿಐ ಅಧಿಕಾರಿಗಳಿಗೆ ದೂರು:

ಎಫ್ ಬಿಐ ಅಧಿಕಾರಿಗಳಿಗೆ ದೂರು:

ಬಿಡುಗಡೆಗೆ ಸಿದ್ಧವಾಗಿರುವ ತಮ್ಮ ಚಿತ್ರವನ್ನು ಹ್ಯಾಕರ್ಸ್‌ಗಳು ಕದ್ದಿರುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಡಿಸ್ನಿ ಸ್ಟುಡಿಯೋ ಸಿಇಓ ಬಾಬ್ ಇಗರ್ ಎಫ್ ಬಿಐ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೂ ಮಾಹಿತಿ ನೀಡಿದ್ದಾರೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Movie website Deadline identified Pirates of the Caribbean: Dead Men Tell No Tales, which opens on 26 May, as the target, without revealing its sources, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot