2ನೇ ಮಹಾಯುದ್ಧ ಸಮಯದಲ್ಲಿ ತೆಗೆದ ಕಪ್ಪು-ಬಿಳುಪು ಫೋಟೋಗಳು

By Suneel
|

ಇಂದು ಕ್ಯಾಮೆರಾದಲ್ಲಿ ಫೋಟೋ ಸೆರೆ ಹಿಡಿಯಬೇಕಾದರೆ ಲೈವ್‌ ಎಫೆಕ್ಟ್‌ ಸಹಿತ ಫೋಟೋ ಕ್ಯಾಪ್ಚರ್ ಮಾಡುವಷ್ಟು ಟೆಕ್ನಾಲಜಿ ಅಭಿವೃದ್ದಿ ಹೊಂದಿದೆ. ಆದರೆ ಹಾಗೆ ಒಮ್ಮೆ ಕಲ್ಪನೆ ಮಾಡಿಕೊಳ್ಳಿ 50 ವರ್ಷಗಳ ಹಿಂದೆ ಕ್ಯಾಮೆರಾ ಫೀಚರ್‌ ಹೇಗಿತ್ತು, ಕ್ಯಾಮೆರಾದಲ್ಲಿ ತೆಗೆದ ಫೋಟೋಗಳು ಹೇಗಿರುತ್ತಿದ್ದವು ಎಂದು ಕಲ್ಪನೆ ಮಾಡಿಕೊಂಡರೆ ಬಹುಶಃ ಈಗಿನ ಫೋಟೊಗಳನ್ನು ಹೋಲಿಕೆ ಮಾಡಿಕೊಂಡು ವ್ಯಂಗ್ಯವಾಗಿಯೋ ಅಥವಾ ಅಭಿವೃದ್ದಿಯ ಬಗ್ಗೆ ಹೆಮ್ಮೆಯನ್ನೋ ಪಡಬಹುದು. ಆದರೆ ಟೆಕ್ನಾಲಜಿಯಲ್ಲಿ ಯಾವುದನ್ನು ಕಡೆಗಣಿಸುವ ಹಾಗಿಲ್ಲ. ಅದಕ್ಕೆ ಉದಾಹರಣೆಯಾಗಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ತೆಗೆದ ಫೋಟೋಗಳು ಹೇಗಿವೆ ಎಂದು ನೀವೇ ನೋಡಿ.

ಚೀನಾ

ಚೀನಾ

ಜುಲೈ 11,1940 ರಲ್ಲಿ ಚೀನಾದ ಒಂದು ಪ್ರದೇಶದಲ್ಲಿ ಸೈನಿಕರು ಯುದ್ಧ ವಸ್ತ್ರದಲ್ಲಿ ನಿಂತಿರುವುದು. ಚೀನಾ ಸೈನಿಕರು ಜರ್ಮಿನಿ ರೀತಿಯಲ್ಲಿ ಸ್ಟೀಲ್‌ ಹೆಲ್ಮೆಟ್ ಧರಿಸಿ ಪೆರೇಡ್‌ನಲ್ಲಿ ನಿಂತಿರುವುದು.
ಫೋಟೋ ಕೃಪೆ: AP Photo

ಬಾರ್‌ಡಿಯಾ

ಬಾರ್‌ಡಿಯಾ

ಬ್ರಿಟಿಷ್‌ ಇನ್ಫಾಂಟ್ರಿಮ್ಯಾನ್‌ ಯುದ್ಧಕ್ಕೆ ಸಿದ್ದವಾಗಿ ಪೊಜಿಶನ್‌ನಲ್ಲಿರುವುದು.
ಫೋಟೋ ಕೃಪೆ: AP Photo

ಬಾರ್‌ಡಿಯಾ

ಬಾರ್‌ಡಿಯಾ

ಬ್ರಿಟಿಷರ ಯುದ್ಧ ಪಡೆ ಸೆರೆಹಿಡಿದ ಲಿಬ್‌ಯಾನ್‌ ಸೀಪೋರ್ಟ್‌ ಪ್ರದೇಶದ ಫೋಟೋ ಇದು. ಇದರಲ್ಲಿ 4 ಜೆನೆರಲ್‌ಗಳು ಸೇರಿದಂತೆ 38,000 ಸೆರೆಯಾಳುಗಳು ಇದ್ದಾರೆ.
ಫೋಟೋ ಕೃಪೆ: AP Photo

ಆಸ್ಟ್ರೇಲಿಯನ್‌ ಬೆಳಕಿನ ಅಶ್ವದಳ

ಆಸ್ಟ್ರೇಲಿಯನ್‌ ಬೆಳಕಿನ ಅಶ್ವದಳ

1941 ರ ಜನವರಿಯಲ್ಲಿ ಈಜಿಪ್ಟ್‌ ಮರುಭೂಮಿಯಲ್ಲಿ ಬ್ರೆನ್‌ ಗನ್‌ ಕ್ಯಾರಿಯರ್‌ಗಳ ಫೋಟೋ ಇದು.
ಫೋಟೋ ಕೃಪೆ: AP Photo

ಆಫ್ರಿಕಾ

ಆಫ್ರಿಕಾ

ಆಫ್ರಿಕಾದಲ್ಲಿ ಮಿಡಲಿಸ್ಟ್‌ ಒಬ್ಬರು ಇಟಲಿ ಮಿಲಿಟರಿ ಪಡೆ ವಿರುದ್ಧ ಹಾರಿಸಲು ಬಾಂಬ್‌ ತಯಾರಿಸುತ್ತಿರುವುದು.
ಫೋಟೋ ಕೃಪೆ: AP Photo

ಇಥಿಯೋಪಿಯಾ

ಇಥಿಯೋಪಿಯಾ

ಇಥಿಯೋಪಿಯಾ ಸಾಮ್ರಾಟರು 1941 ಫೆಬ್ರುವರಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಫೋಟೋ ಕೃಪೆ: AP Photo

 ಬ್ರಿಟನ್‌ ಯುದ್ಧ ಪಡೆ

ಬ್ರಿಟನ್‌ ಯುದ್ಧ ಪಡೆ

1941ರ ಜನವರಿಯಲ್ಲಿ ಕೆನಡಾದ ನಾವಿಕ ಮತ್ತು ಬ್ರಿಟಿಷ್‌ ಸೈನಿಕ ಇಂಗ್ಲೀಷ್‌ ಪೋರ್ಟ್‌ ಹತ್ತಿರ ಸಿಗರೇಟ್‌ ಹಚ್ಚಲು ಬೆಂಕಿ ಹಂಚಿಕೊಳ್ಳುತ್ತಿರುವುದು.
ಫೋಟೋ ಕೃಪೆ: AP Photo

ಫಿಲಿಡೆಲ್ಫಿಯಾ

ಫಿಲಿಡೆಲ್ಫಿಯಾ

1940 ಆಗಸ್ಟ್‌ನಲ್ಲಿ ಫಿಲಿಡೆಲ್ಫಿಯಾ ನಾವಿ ಯಾರ್ಡ್‌ನಲ್ಲಿ ಅಮೇರಿಕ ಡೆಸ್ಟ್ರಾಯರ್‌ಗಳು ಕಾಣಿಸಿಕೊಂಡಿದ್ದು ಹೀಗೆ.
ಫೋಟೋ ಕೃಪೆ: AP Photo

ವಾಯುಪಡೆ ರಕ್ಷಣೆ ಪರಿಶೀಲನೆ

ವಾಯುಪಡೆ ರಕ್ಷಣೆ ಪರಿಶೀಲನೆ

ನ್ಯೂಯಾರ್ಕ್‌ ಸಿಟಿಯಲ್ಲಿ ಎಂಪೈರ್‌ ಸ್ಟೇಟ್‌ ಬಿಲ್ಡಿಂಗ್‌ನಲ್ಲಿ ವಾಯುಪಡೆ ರಕ್ಷಣೆ ಪರಿಶೀಲನೆಯನ್ನು ಕೆಲವರು ವೀಕ್ಷಿಸುತ್ತಿದ್ದದ್ದು ಹೀಗೆ.
ಫೋಟೋ ಕೃಪೆ: Photo by AP Photo/John Lindsay

ಕ್ಯಾಲಿಫೋರ್ನಿಯಾ

ಕ್ಯಾಲಿಫೋರ್ನಿಯಾ

1941 ಮಾರ್ಚ್‌ 19 ರಂದು ಕ್ಯಾಲಿಫೋರ್ನಿಯಾದಲ್ಲಿ ಅಮೇರಿಕದ ಅಂಚೆ ಉದ್ಯೋಗಿಗಳು 17 ಟನ್‌ ಯೋಚಿತ ಪ್ರಚಾರದ ಓದುಗ ಪತ್ರಗಳನ್ನು ವೀಕ್ಷಿಸುತ್ತಿರುವುದು ಹೀಗೆ.
ಫೋಟೋ ಕೃಪೆ: AP Photo

 ಅರಬ್‌

ಅರಬ್‌

ಅರಬ್‌ನಲ್ಲಿ ಬ್ರಿಟಷ್‌ ಸೈನಿಕರು ಎರಡನೇ ಮಹಾಯುದ್ಧಕ್ಕಾಗಿ ಅರಬ್ಬಿ ದೇಶದವರನ್ನು ಸೇರಿಸಿಕೊಂಡು ಮೊದಲ ಪೆರೇಡ್‌ ಅನ್ನು 1940 ಡಿಸೆಂಬರ್‌ನಲ್ಲಿ ಪ್ರಾರಂಭಿಸಿದ್ದು ಹೀಗೆ.
ಫೋಟೋ ಕೃಪೆ: AP Photo

 ಸ್ಕಾಟ್ಲೆಂಡ್‌

ಸ್ಕಾಟ್ಲೆಂಡ್‌

ಡಿಸೆಂಬರ್‌ 9, 1940 ರಂದು ಬ್ರಿಟಿಷ್‌ ಮಿಲಿಟರಿ ಪಡೆಯ ಸ್ಕಾಟ್ಲೆಂಡ್‌ ಪದಾತಿ ಸೈನ್ಯ ಮತ್ತು ಭಾರತದ ಟ್ರೂಪ್‌ಗಳು ಉತ್ತರ ಆಫ್ರಿಕಾದ ಮರುಭೂಮಿ ಪ್ರದೇಶದ ಪಿರಮಿಡ್‌ ಪ್ರದೇಶದಲ್ಲಿ ನಡೆದುಹೋಗುತ್ತಿರುವುದು.
ಫೋಟೋ ಕೃಪೆ: AP Photo

ಜರ್ಮನ್‌ ಆಫ್ರಿಕಾ ದಳ

ಜರ್ಮನ್‌ ಆಫ್ರಿಕಾ ದಳ

ಜರ್ಮನ್‌ನ ಆಫ್ರಿಕಾ ದಳದ ಕಮಾಂಡರ್‌ ಫೀಲ್ಡ್ ಮಾರ್ಷೆಲ್‌ ಜೆನೆರಲ್ ಎರ್ವಿನ್‌ ರೊಮ್ಮೆಲ್ ಜರ್ಮನ್‌ ಅಧಿಕಾರಿಯೊಂದಿಗೆ ಕಾರಿನಲ್ಲಿ ಕುಳಿತು ಪಾನೀಯ ಸೇವಿಸುತ್ತಿರುವುದು. ಈ ಫೋಟೋವನ್ನು 1941 ರಲ್ಲಿ ಸೆರೆಹಿಡಿಯಲಾಗಿದೆ.
ಫೋಟೋ ಕೃಪೆ: AP Photo

ಟೊಕಿಯೋ

ಟೊಕಿಯೋ

1940 ಡಿಸೆಂಬರ್‌ 17 ರಂದು ಜಪಾನ್‌, ಜರ್ಮಿನಿ ಮತ್ತು ಇಟಲಿಯ ಮಕ್ಕಳು ಟೊಕಿಯೋದಲ್ಲಿ ಒಟ್ಟಿಗೆ ಸೇರಿದ್ದ ಫೋಟೋ.
ಫೋಟೋ ಕೃಪೆ: AP Photo

 ಧ್ವನಿ ಪತ್ತೆಕಾರಿ

ಧ್ವನಿ ಪತ್ತೆಕಾರಿ

ಚೀನಾ ಸೈನಿಕರ ಧ್ವನಿ ಪತ್ತೆಕಾರಿಯೂ ಗುಂಡು ಹಾರಿಸುವ ಬಗ್ಗೆ ಏರ್‌ಕ್ರಾಫ್ಟ್‌ ಬಂದೂಕಿಗೆ ನಿರ್ದೇಶನ ನೀಡುತ್ತದಂತೆ. ಅದನ್ನು ವ್ಯವಸ್ಥೆಗೊಳಿಸುತ್ತಿರುವ ಫೋಟೋ.
ಫೋಟೋ ಕೃಪೆ: AP Photo

ಜಪಾನ್‌ ಯುದ್ಧ ಟ್ಯಾಂಕ್

ಜಪಾನ್‌ ಯುದ್ಧ ಟ್ಯಾಂಕ್

ಜಪಾನ್‌ ಯುದ್ಧ ಟ್ಯಾಂಕ್‌ ತುರ್ತು ಕಾರ್ಯ ನಿಮಿತ್ತ ಚಿನಾದ ಒಂದು ಪ್ರದೇಶದ ಬ್ರಿಡ್ಜ್‌ ಮೇಲೆ ಹೋಗುತ್ತಿರುವುದು. ಈ ದೃಶ್ಯವನ್ನು 1941 ಜೂನ್‌ನಲ್ಲಿ ಸೆರೆಹಿಡಿಯಲಾಗಿತ್ತು.
ಫೋಟೋ ಕೃಪೆ: AP Photo

ಜರ್ಮನ್‌ ಸೈನಿಕರು

ಜರ್ಮನ್‌ ಸೈನಿಕರು

1941 ರಲ್ಲಿ ಗ್ರೀಸ್‌ ಅನ್ನು ಆಕ್ರಮಣ ಮಡಿಕೊಂಡಾಗ ಜರ್ಮನ್‌ ಸೈನಿಕರ ತಂಡವೊಂದು ಗ್ರೀಕ್‌ ಗ್ರಾಮದಲ್ಲಿ ನೆಡೆದು ಹೋಗುತ್ತಿದ್ದ ಫೋಟೋ.
ಫೋಟೋ ಕೃಪೆ: AP Photo

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳುಪ್ರಖ್ಯಾತ 23 ಸಿನಿಮಾಗಳಲ್ಲಿ ಊಹೆ ಮಾಡಲಾಗದ ದೃಶ್ಯಗಳು

ಪ್ರಪಂಚದ ಅತ್ಯದ್ಭುತ ರಿಯಲ್‌ ಫೋಟೋಗಳು ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆಪ್ರಪಂಚದ ಅತ್ಯದ್ಭುತ ರಿಯಲ್‌ ಫೋಟೋಗಳು ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

ದೆವ್ವಗಳು ಖಂಡಿತ ಇಲ್ಲ, ಈ ವೀಡಿಯೋ ನೋಡಿದ ನಂತರ ಹೇಳಿ!!ದೆವ್ವಗಳು ಖಂಡಿತ ಇಲ್ಲ, ಈ ವೀಡಿಯೋ ನೋಡಿದ ನಂತರ ಹೇಳಿ!!

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Incredible Black and White World War II Photos Around the World. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X