Subscribe to Gizbot

ಮೊದಲೇ ಜಿಯೋ ಸಮ್ಮರ್ ಆಫರ್‌ಗೆ ರೀಚಾರ್ಜ್ ಮಾಡಿಸಿದ್ರಾ? ಹಾಗಿದ್ರೆ ಬಂಪರ್ ಕೊಡುಗೆ!!

Written By:

ಜಿಯೋ ಧನ್‌ಧನಾಧನ್ ಆಫರ್ ಬರುವುದಕ್ಕೂ ಮುನ್ನ ಸಮ್ಮರ್ ಸರ್‌ಪ್ರೈಸ್ ಆಫರ್‌ಗೆ ರೀಚಾರ್ಜ್ ಮಾಡಿಸಿದ್ದವರಿಗೆ ಜಿಯೋ ಮತ್ತೊಂದು ಕೊಡುಗೆ ನೀಡಿದೆ.!! ಹೌದು ಜಿಯೋ ಇದೀಗ ತನ್ನ ಮೊದಲ ಗ್ರಾಹಕರಿಗೆ ವಿಶೇಷ ಆಫರ್ ಒಂದನ್ನು ನೀಡಿ ಮತ್ತೆ ಗಮನ ಸೆಳೆದಿದೆ.!!

ಜಿಯೋ ಧನ್‌ಧನಾಧನ್ ಆಫರ್ ಬಿಡುಗಡೆಗೂ ಮೊದಲು ಜಿಯೋ ಸಮ್ಮರ್ ಸಪ್‌ಪ್ರೈಸ್ ಆಫರ್ ಅನ್ನು ಬಿಡುಗಡೆ ಮಾಡಿತ್ತು. ಇದು ಜಿಯೋವಿನ ಮೊದಲ ಪೇಡ್ ಸೇವೆ ಆಗಿದ್ದು, ಈ ಆಫರ್ ಬಿಡುಗಡೆಯಾದ ಕೆವಲ ಎರಡು ದಿವಸಗಳಿಗೆ ಟ್ರಾಯ್ ಸೂಚನೆ ಮೇರೆಗೆ ಈ ಆಫರ್ ಕೊನೆಗೊಂಡಿತ್ತು. ಆದರೆ, ಜಿಯೋ ಸಮ್ಮರ್ ಸಪ್‌ಪ್ರೈಸ್ ಆಫರ್ ಬಿಡುಗಡೆಯಾದ ಎರಡೇ ದಿವಸಗಳಲ್ಲಿ ಸರಿಸುಮಾರು ಮೂರು ಕೋಟಿಗೂ ಹೆಚ್ಚು ಗ್ರಾಹಕರು 303 ರೂಪಾಯಿ ರೀಚಾರ್ಜ್ ಮಾಡಿಸಿಕೊಂಡಿದ್ದರು.

ಮೊದಲೇ ಜಿಯೋ ಸಮ್ಮರ್ ಆಫರ್‌ಗೆ ರೀಚಾರ್ಜ್ ಮಾಡಿಸಿದ್ರಾ? ಹಾಗಿದ್ರೆ ಬಂಪರ್ ಕೊಡುಗೆ!!

ಇದಾದ ನಂತರ ಜಿಯೋವಿನ ಧನ್‌ಧನಾಧನ್ ಆಫರ್ ಬಿಡುಗಡೆಯಾಗಿ ಜಿಯೋ ಸಮ್ಮರ್ ಸಪ್‌ಪ್ರೈಸ್ ಆಫರ್ ಕೊನೆಯಾಯಿತು. ಹಾಗಾಗಿ,ಜಿಯೋವಿನ ಸಮ್ಮರ್ ಸಪ್‌ಪ್ರೈಸ್ ಆಫರ್ ರೀಚಾರ್ಜ್ ಮಾಡಿಸಿದವರಿಗೆ ಜಿಯೋ ಹೆಚ್ಚಿನ ಕೊಡುಗೆ ನೀಡಲು ನಿರ್ಧರಿಸಿದೆ. ಸಮ್ಮರ್ ಆಫರ್ 303 ರೂಪಾಯಿ ರೀಚಾರ್ಜ್ ಮಾಡಿಸಿದ್ದವರಿಗೆ 4 ತಿಂಗಳು ಸಂಪೂರ್ಣ ಉಚಿತ ಆಫರ್ ಅನ್ನು ನಿಡಿದೆ.!!

ಹಾಗಾಗಿ, ಜಿಯೋ ಸಮ್ಮರ್ ಸಪ್‌ಪ್ರೈಸ್ ಆಫರ್ ಗ್ರಾಹಕರು ಜಿಯೋ ಧನ್‌ಧನಾಧನ್ ಆಫರ್ ಮುಗಿಯುವವರಿಗೂ ಉಚಿತ ಡೇಟಾ ಮತ್ತು ಕಾಲ್ ಸೇವೆ ಪಡೆಯಬಹುದಾಗಿದ್ದು, ನೂತನ ಜಿಯೋ ಧನ್‌ಧನಾಧನ್ ಆಫರ್ ಬಗ್ಗೆ ಕೆಲವು ಕುತೋಹಲ ವಿಷಯಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1 ರಿಲಯನ್ಸ್ ಜಿಯೋ ಧನ್‌ಧನಾಧನ್ ಆಫರ್ ಏನನ್ನು ಹೊಂದಿದೆ.?

#1 ರಿಲಯನ್ಸ್ ಜಿಯೋ ಧನ್‌ಧನಾಧನ್ ಆಫರ್ ಏನನ್ನು ಹೊಂದಿದೆ.?

ಇದೀಗ ಜಿಯೋ ಜಿಯೋ ಧನ್‌ಧನಾಧನ್ ಆಫರ್ ನೀಡಿದ್ದು, ಈ ಆಫರ್‌ನಲ್ಲಿ 309 ರೂಪಾಯಿಯ ಮೇಲ್ಪಟ್ಟು ರೀಚಾರ್ಜ್ ಮಾಡಿಸಿದರೆ ಮತ್ತೆ ಮೂರು ತಿಂಗಳ ಜಿಯೋ ಅನ್‌ಲಿಮಿಟೆಡ್ ಸೇವೆಯನ್ನು ಪಡೆಯಬಹುದು.!!

#2 ಪ್ರೈಮ್ ರೀಚಾರ್ಜ್ ಮಾಡಿಸದೇ ಧನ್‌ಧನಾಧನ್ ಆಫರ್ ದೊರೆಯುವುದೇ?

#2 ಪ್ರೈಮ್ ರೀಚಾರ್ಜ್ ಮಾಡಿಸದೇ ಧನ್‌ಧನಾಧನ್ ಆಫರ್ ದೊರೆಯುವುದೇ?

ಖಂಡಿತ ಸಾಧ್ಯವಿಲ್ಲಾ.!! ಹೌದು, ಜಿಯೋ ಪ್ರೈಮ್‌ ರೀಚಾರ್ಜ್ ಮಾಡಿಸದೇ ಇರುವವರು ಜಿಯೋ ಧನ್‌ಧನಾಧನ್ ಆಫರ್ ಪಡೆಯಲು ಅರ್ಹವಿರುವುದಿಲ್ಲ. ಹಾಗಾಗಿ, ಪ್ರೈಮ್‌ ಮೆಂಬರ್‌ಶಿಪ್ ಪಡೆಯಲೇಬೇಕು

#3 ಈಗಾಗಲೇ ಪ್ರೈಮ್ ರೀಚಾರ್ಜ್ ಮಾಡಿಸಿದ್ದರೆ?

#3 ಈಗಾಗಲೇ ಪ್ರೈಮ್ ರೀಚಾರ್ಜ್ ಮಾಡಿಸಿದ್ದರೆ?

ಈಗಾಗಲೇ ಜಿಯೋ ಪ್ರೈಮ್‌ ರೀಚಾರ್ಜ್ ಮಾಡಿಸಿರುವ ಜಿಯೋ ಗ್ರಾಹಕರು ಜಿಯೋ ಧನ್‌ಧನಾಧನ್ ಆಫರ್‌ಗೆ ಅರ್ಹರಾಗಿರುತ್ತಾರೆ. ಹಾಗಾಗಿ, 309 ರೂಪಾಯಿ ರೀಚಾರ್ಜ್ ಮಾಡಿಸಿ ಮೂರು ತಿಂಗಳ ಜಿಯೋ ಧನ್‌ಧನಾಧನ್ ಆಫರ್ ಎಂಜಾಯ್ ಮಾಡಿ.

#4 149 ರೂಪಾಯಿ ರೀಚಾರ್ಜ್ ಮಾಡಿಸಿದರೆ?

#4 149 ರೂಪಾಯಿ ರೀಚಾರ್ಜ್ ಮಾಡಿಸಿದರೆ?

ಈಗಾಗಲೇ ಜಿಯೋ ಪ್ರೈಮ್‌ ರೀಚಾರ್ಜ್ ಮಾಡಿಸಿದ್ದು, ಜಿಯೋ ಆಫರ್‌ನ 149 ರೂಪಾಯಿ ರೀಚಾರ್ಜ್ ಮಾಡಿಸಿದರೆ ಜಿಯೋ ಜಿಯೋ ಧನ್‌ಧನಾಧನ್ ಆಫರ್‌ ಪಡೆಯಲು ಸಾಧ್ಯವಿಲ್ಲಾ. ಹಾಗಾಗಿ, 309 ರೂಪಾಯಿ ರೀಚಾರ್ಜ್ ಮಾಡಿಸಿ ಮೂರು ತಿಂಗಳ ಅನ್‌ಲಿಮಿಟೆಡ್‌ ಸೇವೆಯನ್ನು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
The Jio summer surprise plan will be valid between April-July 2017.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot