25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!

By Suneel
|

25 ವರ್ಷಗಳ ಕಾಲ ಎಲ್ಲರಿಂದ ದೂರವಿದ್ದು ವ್ಯಕ್ತಿಯೊಬ್ಬ ತಾನು ಸಾಧಿಸಲು ಸಾಧ್ಯವಾಗುವುದಾದರೂ ಏನು ಅಲ್ವಾ? ಹೀಗೆ ಯೋಚಿಸುವುದು ತಪ್ಪು. ಯಾಕಂದ್ರೆ ಅಮೇರಿಕದ ಗುಹಾಂತರ ಕಲೆಗಾರರೊಬ್ಬರು 25 ವರ್ಷಗಳ ಕಾಲ ಎಲ್ಲರಿಂದ ದೂರವಿದ್ದು, ಮರಳಿನ ಬೆಟ್ಟದಲ್ಲಿ ಗುಹೆಯೊಂದನ್ನು ಅಗೆಯುತ್ತಾ ಈಗ ಎಲ್ಲರ ಕಣ್ಮನ ಸೆಳೆಯುವ, ನೋಡಿದವರು ನಿಬ್ಬೆರಗಾಗುವಂತಹ ಕಲೆಯನ್ನು ಕೆತ್ತನೆಗೊಳಿಸಿದ್ದಾರೆ. ಅದು ಎಷ್ಟು ಅದ್ಭುತವೆಂಬುದನ್ನು ಪದಗಳಲ್ಲಿ ಓದುವುದಕ್ಕಿಂತ ಲೇಖನದ ಕೊನೆಯ ಸ್ಲೈಡರ್‌ನಲ್ಲಿ ನೀವು ನೋಡಬಹುದು. ಅಂದಹಾಗೆ ಅವರ ಈ ಗುಹಾಂತರ ಕಲೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.

ಯಾವುದೇ ಶಿಕ್ಷಣ ಪಡೆಯದ, ರಚನಾತ್ಮಕ ಇಂಜಿನಿಯರಿಂಗ್‌ ಸಹ ತಿಳಿಯದ ರಾ ಪಾಲೆಟ್ಟೆ ಎಂಬುವವರ ಜೊತೆಗೆ ಕಂಪನಿಯಾಗಿದ್ದದ್ದು ಅವರ ಮುದ್ದಿನ ನಾಯಿ ಮಾತ್ರ. ಹೊಸದಾದ ಭಾವನಾತ್ಮಕ ಲೋಕವನ್ನೇ ಸೃಷ್ಟಿಸಿಕೊಡುವ ರಾ ಪಾಲೆಟ್ಟೆ'ರವರ ಗುಹಾಂತರ ಕಲೆ, ಅವರು 25 ವರ್ಷ ಶ್ರಮಿಸಿ ರಚಿಸಿದ ಗುಹೆಯೊಳಗಿನ ಅದ್ಭುತ ಏನೇಂಬುದನ್ನು ಇಂದಿನ ಲೇಖನದ ತಿಳಿಯಿರಿ.

1

1

ಉತ್ತರ ಮೆಕ್ಸಿಕೊ ಮರಳು ಬೆಟ್ಟದಲ್ಲಿ ಈಗ ಅದ್ಭುತ ಸ್ಥಳವೊಂದು ನಿರ್ಮಾಣವಾಗಿದೆ. ಅಮೇರಿಕದ 'ರಾ ಪಾಲೆಟ್ಟೆ' ಎಂಬ ಗುಹೆ ಕಲಾಕಾರರೊಬ್ಬರು ಕಲಾತ್ಮಕ ಶಿಲ್ಪಗಳನ್ನು ರಚಿಸಲು ಮರಳಿನ ಬೆಟ್ಟವನ್ನು ಅಗೆದು ತಮ್ಮ ಕೈಚಳಕದಿಂದ ಅದ್ಭುತವೊಂದನ್ನು ಸೃಷ್ಟಿಸಿದ್ದಾರೆ.
ಚಿತ್ರ ಕೃಪೆ: web

2

2

ಅಂದಹಾಗೆ ರಾ ಪಾಲೆಟ್ಟೆ ಮರಳಿನ ಬೆಟ್ಟವನ್ನು ಅಗೆದು ಅವರು ನಿರ್ಮಿಸಿರುವ ಕಲಾತ್ಮಕತೆಯು ಪ್ರತಿಷ್ಟಿತ ಸ್ಥಳಗಳ ಸಾಲಿಗೆ ಇದು ಸಹ ಸೇರಲಿದೆ ಎಂದು 'LA Times'ನ ವರದಿಗಾರರಾದ ಮಾರ್ಥ ಮೆಂಡೊಜ ಶ್ಲಾಘಿಸಿದ್ದಾರೆ.

3

3

ವಿಶೇಷ ಅಂದ್ರೆ 'ರಾ ಪಾಲೆಟ್ಟೆ' ಯಾವುದೇ ಶಿಕ್ಷಣ ಪಡೆದಿಲ್ಲ. ಕಲೆಯನ್ನು ಕಲಿಯಲು ಮತ್ತು ರಚನಾತ್ಮಕ ಎಂಜಿನಿಯರಿಂಗ್ ಶಿಕ್ಷಣವನ್ನು ಪಡೆದಿಲ್ಲ. ಇವರ ಸ್ವತಃ ಅಲೋಚನೆಯಿಂದ ಕುತೂಹಲ ಮೂಡಿಸುವಂತಹ, ಆಕರ್ಷಕ ಕಲೆಯನ್ನು ಮೂಡಿಸಿದ್ದಾರೆ.

4

4

ರಾ ಪಾಲೆಟ್ಟೆ'ರವರು 25 ವರ್ಷಗಳ ಕಾಲ ಗುಹೆಯಲ್ಲಿ ಒಬ್ಬರೇ ಇದ್ದುಕೊಂಡು, ತಮ್ಮ ತಂತ್ರಗಾರಿಕೆಯಿಂದ ಯಾರು ಸಹ ಊಹಿಸಲು ಸಾಧ್ಯವೇ ಆಗದಂತಹ ಭವ್ಯವಾದ ಕಲೆಯನ್ನು ಮರಳಿನ ಬೆಟ್ಟದಲ್ಲಿ ಕೆತ್ತಿದ್ದಾರೆ.

5

5

ಅಂದಹಾಗೆ ಒಬ್ಬರೇ ಇದ್ದರಾ ಆ ಗುಹೆಯಲ್ಲಿ ಅಂತ ಪ್ರಶ್ನೆ ಹುಟ್ಟಬಹುದು. ರಾ ಪಾಲೆಟ್ಟೆ'ಗೆ ಕಂಪನಿಯಾಗಿ ಅವರ ನಾಯಿ ಇತ್ತು. ಗುಹೆಯಲ್ಲಿ ಇದ್ದುಕೊಂಡು ಅವರು ತಮ್ಮ ಗುರಿಯನ್ನು ಭಾವನಾತ್ಮಕವಾಗಿ ಜನತೆಗೆ ತೋರಿಸಲು ಪಣವಾಗಿಟ್ಟಿದ್ದರು.

6

6

ರಾ ಪಾಲೆಟ್ಟೆ ಮರಳಿನ ಬೆಟ್ಟದ ಗುಹೆಯೊಳಗೆ ನಿರ್ಮಿಸಿರುವ ಪ್ರತಿಯೊಂದು ಕಲೆಯು ಸಹ ಎಲ್ಲರನ್ನು ಬೆರಗುಗೊಳಿಸುವಂತಿದ್ದು, ಅವರು ರಚಿಸಿರುವ ಅದ್ಭುತ ಕಲೆಯನ್ನು ಭೂಮಿಯ ಮೇಲಿನ "Windows" ಎಂದು ಹೆಸರಿಸಿದ್ದಾರೆ. ಅವರು ಗುಹೆಯೊಳಗೆ ನಿರ್ಮಿಸಿರುವ ಛಾವಣಿಗಳು 20 ಅಡಿಗಳಿಗೂ ಎತ್ತರದಲ್ಲಿವೆ.

7

7

ರಾ ಪಾಲೆಟ್ಟೆ'ರವರ ಕಲೆಯು ಈಗ ಹಲವು ದೇಶಗಳ ಪ್ರವಾಸಿಗರ ಕಣ್ಮನ ಸೆಳೆದಿದ್ದು, ಬಂದವರು ಎಲ್ಲರೂ ಸಹ ಈ ನಿಬ್ಬೆರಗಾಗಿಸುವ ಕಲೆಗೆ ಇವರು 25 ವರ್ಷ ಶ್ರಮಿಸಿರುವ ಬಗ್ಗೆ ಶ್ಲಾಘಿಸುತ್ತಾರೆ. ಅಲ್ಲದೇ ರಾ ಪಾಲೆಟ್ಟೆ ತಾವು ನಿರ್ಮಿಸಿರುವ ಗುಹೆಯೊಳಗಿನ ಕಲೆಯನ್ನು ಹಿಂದಿಗಿಂತಲೂ ಸಹ ಅಭಿವೃದ್ದಿಗೊಳಿಸಬೇಕು ಎಂದು ಹೇಳಿದ್ದಾರೆ. ಅಲ್ಲದೇ ಅವರು ಜನರು ಮಾತನಾಡಲು ಕುಳಿತು ಕೊಳ್ಳುವ ಸ್ಥಳವನ್ನು ಬೆಳಕಿನಿಂದ ಕೂಡಿರುವಂತೆ ಮಾಡಲು ಸೃಜನಾತ್ಮಕವಾಗಿ ಸ್ವಾಭಾವಿಕ ಬೆಳಕನ್ನು ಪತ್ರಿಯೊಂದು ಕಲೆಗೆ ನೀಡಿದ್ದಾರೆ.

8

8

ರಾ ಪಾಲೆಟ್ಟೆ'ರವರಿಗೆ 75 ವರ್ಷ ತುಂಬಿದೆ. ಇವರು ತಮ್ಮ ಕಲಾತ್ಮಕ ರಚನೆಯನ್ನು ಭೌತಿಕವಾಗಿ ವಿಶ್ಲೇಷಿಸದೆ, ತಮ್ಮ ರಚನೆಯನ್ನು ಭಾವನಾತ್ಮಕವಾಗಿ ಪ್ರಾರ್ಥನೆ ಮತ್ತು ಧ್ಯಾನಕ್ಕಾಗಿ ಬಳಸುವ ಪ್ರದೇಶ ಎಂದಿದ್ದಾರೆ. ಕಾರನ ಹಲವು ಜನರು ಕೇವಲ ಇದು ಸೃಜನಶೀಲತೆ ಎಂದು ನೋಡಿ ಸುಮ್ಮನಾಗುತ್ತಾರೆ. ಆದರೆ ಇದು ಉತ್ತಮ ಭಾವನಾತ್ಮಕ ಲೋಕವನ್ನು ಕಟ್ಟಿಕೊಡಬಲ್ಲದು.

9

9

ರಾ ಪಾಲೆಟ್ಟೆ ಗುಹೆ ಕೆತ್ತನೆಗಳನ್ನು ನೋಡಿದ ಪ್ರವಾಸಿಗರೊಬ್ಬರು " ಗುಹೆಯಲ್ಲಿ ಕಲೆಯನ್ನು ರಚಿಸಿರುವ ಕಲಾಕಾರ ಆತ್ಮವನ್ನು, ಹೃದಯವನ್ನು ಹಾಗೂ ಮನಸ್ಸನ್ನು ಅತ್ಯಧಿಕವಾಗಿ ಇದರಲ್ಲಿ ಕೇಂದ್ರಿಕರಿಸಿದ್ದಾರೆ. ನಾನು ಕಲಾಕಾರನ ಸ್ಫೂರ್ತಿದಾಯಕ ಭಾವನೆಗಳನ್ನು ತುಂಬಾ ಪ್ರೀತಿಸುತ್ತೇನೆ" ಎಂದು ಹೇಳಿದ್ದಾರೆ.

10

10

'ರಾ ಪಾಲೆಟ್ಟೆ' ಗುಹೆಯಲ್ಲಿನ ಕಲೆಯನ್ನು ಅಭಿವೃದ್ದಿಗೊಳಿಸಲು ಹಲವರನ್ನು ನೇಮಿಸಿಕೊಂಡಿದ್ದಾರೆ. ಅಲ್ಲದೇ ಇವರು ಯುವ ಜನಾಂಗ ಜಗತ್ತನ್ನು ಸುಂದರಗೊಳಿಸಲು ಇಂತಹ ಸೃಜನಾತ್ಮಕ ಕಲೆಯಲ್ಲಿ ತೊಡಗಿಕೊಳ್ಳಬಹುದು ಎಂದಿದ್ದಾರೆ.

11

ಹಿಂದಿನ ಸ್ಲೈಡರ್‌ಗಳಲ್ಲಿ ಕೇವಲ ಅವರ ಕಲೆಯ ಬಗೆಗಿನ ಚಿತ್ರಗಳನ್ನು ಮಾತ್ರ ನೋಡಿದ್ದೀರಿ. ಈ ವೀಡಿಯೋದಲ್ಲಿ ರಾ ಪಾಲೆಟ್ಟೆ'ನೊಂದಿಗಿನ ಸಂದರ್ಶನ ಮತ್ತು ಗುಹೆಯೊಳಗಿನ ಕಲೆಯನ್ನು ವಿಸ್ತಾರವಾಗಿ ನೋಡಿ.

ವೀಡಿಯೋ ಕೃಪೆ:CBS Sunday Morning

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳುಪ್ರತಿಯೊಬ್ಬರಿಗೂ ಗೊಂದಲ ಉಂಟುಮಾಡುವ ಅಚ್ಚರಿ ಫೋಟೋಗಳು

ಜಗತ್ತು ಹೇಗೆ ಕೊನೆಗೊಳ್ಳುತ್ತದೆ ಗೊತ್ತೇ?ಜಗತ್ತು ಹೇಗೆ ಕೊನೆಗೊಳ್ಳುತ್ತದೆ ಗೊತ್ತೇ?

ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?ವಿಶ್ವದ ಅತ್ಯುತ್ತಮ ಟೆಕ್ನಾಲಜಿ ವೆಪನ್ ಮಿಲಿಟರಿ ಪಡೆ ಯಾವುದು ಗೊತ್ತಾ?

ವಿ‍ಶ್ವದ ಅದ್ಭುತಗಳ ಫೋಟೋ ತೆಗೆದ ಡ್ರೋನ್‌!!ವಿ‍ಶ್ವದ ಅದ್ಭುತಗಳ ಫೋಟೋ ತೆಗೆದ ಡ್ರೋನ್‌!!

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Man in a Cave FOR 25 YEARS. But What He Makes Is Mind Blowing: video. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X