Subscribe to Gizbot

ಕೇವಲ 20 ನಿಮಿಷಗಳಲ್ಲಿ "0% to 100%" ಚಾರ್ಜ್..ಇನ್ನು ಎಲ್ಲವೂ ಸಾಧ್ಯ.!!

Written By:

ವಿಶ್ವದಲ್ಲಿಯೇ ಅತ್ಯಂತ ವೇಗದ ಬ್ಯಾಟರಿ ಚಾರ್ಜ್ ಆಗುವ ಕಲ್ಪನೆಗೆ ಪರಿಹಾರ ಸಿಕ್ಕಿದೆ.!! ಪ್ರಸ್ತುತ ಇರುವ ಸ್ಮಾರ್ಟ್‌ಫೊನ್‌ಗಳು 100 ಪರ್ಸೆಂಟ್ ಚಾರ್ಜ್ ಆಗಲು ಕನಿಷ್ಟ ಎಂದರೂ ಒಂದೂವರೆ ಗಂಟೆ ಬೇಕು. ಆದರೆ, ಚೀನೀ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪೆನಿ ಮೈಜು ಪರಿಚಯಿಸಿರುವ ನೂತನ ತಂತ್ರಜ್ಞಾನದಿಂದ ಕೇವಲ 20 ನಿಮಿಷಗಳಲ್ಲಿಯೇ ಸ್ಮಾರ್ಟ್‌ಫೋನ್ ಚಾರ್ಜ್ ಆಗಲಿದೆ.!!

ಬಾರ್ಸಿಲೋನಾದಲ್ಲಿ ನಡೆಯುತ್ತಿರುವ 2017ರ ಮೊಬೈಲ್ ವರ್ಲ್ಡ್ ಕಾಂಗ್ರೆಸ್ನಲ್ಲಿ ಮೈಜು ಈ ತಂತ್ರಜ್ಞಾನದ ಬಗ್ಗೆ ಪರಿಚಯಿಸಿದ್ದು, ಕೇವಲ 20 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುವ "ಸೂಪರ್ ಎಮ್‌ ಚಾರ್ಜ್" ತಂತ್ರಜ್ಞಾನ ಜಗತ್ತನ್ನೆ ನಿಬ್ಬರಗಾಗಿಸಿದೆ.! ಒಂದು ಸಂಪೂರ್ಣ ಖಾಲಿ ಬ್ಯಾಟರಿ ಕೇವಲ 20 ನಿಮಿಷಗಳಲ್ಲಿ ಗರಿಷ್ಠ ಸಾಮರ್ಥ್ಯದ ಚಾರ್ಜ್ ಪಡೆಯಬಹುದಾಗಿದ್ದು, ನಾವು ಇದನ್ನು ಸಾಧಿಸಿದ್ದೇವೆ ಎಂದು ಮೈಜು ಕಂಪೆನಿಯ ಮೇಲ್ವಿಚಾರಕ ಲೀ ಟೊ ಹೇಳಿದ್ದಾರೆ.!!

ಕೇವಲ 20 ನಿಮಿಷಗಳಲ್ಲಿ

ಟೆಕ್ ಟಿಪ್ಸ್...ಲಿಂಕ್‌ ತೆರೆಯುವ ಸಮಯ ಉಳಿಸಿ!! ಏನಿದು?

"ಸೂಪರ್ ಎಮ್‌ ಚಾರ್ಜ್" ತಂತ್ರಜ್ಞಾನದಲ್ಲಿ, 55 ವ್ಯಾಟ್ ವಿ/5 ಚಾರ್ಜ್ ಚಾರ್ಜ್ ಕನೆಕ್ಟರ್ ಬಳಸಿ ಕೇವಲ 20 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದಾಗಿದ್ದು, ಉಷ್ಣ ನಿರ್ವಹಣಾ ವ್ಯವಸ್ಥೆ ತರಕ್ಷಣೆಗೆ ಅತ್ಯಾಧುನಿಕ ರಕ್ಷಾಣ ವಿಧಾನವನ್ನು ಅಳವಡಿಸಲಾಗಿದೆ. ಹಾಗಾಗಿ, ಇನ್ನು ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಮಾಡಲು ಹೆಚ್ಚು ಕಷ್ಟಪಡಬೇಕಿಲ್ಲ ಎಂದು ಅವರು ತಿಳಿಸಿದರು.!!

ಕೇವಲ 20 ನಿಮಿಷಗಳಲ್ಲಿ

"ಸೂಪರ್ ಎಮ್‌ ಚಾರ್ಜ್" ತಂತ್ರಜ್ಞಾನ ಸಾಮಾನ್ಯ ಬ್ಯಾಟರಿಗಳಿಗಿಂತ 4 ಪಟ್ಟು ಹೆಚ್ಚು ವಿಶ್ವಾಸಾರ್ಹವಾಗಿದ್ದು, ಇಂತಹ ಹೊಸತನದ ಆವಿಷ್ಕಾರದ ಸುಲಭದ ಕೆಲಸವಲ್ಲ, ಈ ಅತ್ಯುತ್ತಮ ತಂತ್ರಜ್ಞಾನ ರಚಿಸಲು ಅನೇಕ ತೊಂದರೆಗಳನ್ನು ಮತ್ತು ಅಡೆತಡೆಗಳನ್ನು ದಾಟಿಬಂದಿದ್ದೇವೆ ಎಂದು ಹೇಳಿದರು.

Read more about:
English summary
Meizu's Super mCharge claims to be the fastest battery charging solution and can charge an empty battery from 0 to 100% in just 20 minutes.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot