ಯಾರೂ ಪ್ರಯತ್ನಿಸಲೇಬಾರದ ಹೆಚ್ಚು ಅಪಾಯಕಾರಿ ಸೆಲ್ಫಿಗಳು!!!

Written By:

  ಸೆಲ್ಫಿ ತೆಗೆಯುವುದು ಎಷ್ಟು ಸುಲಭದ ಕೆಲಸ ಅಲ್ಲವೇ? ನಿಮ್ಮ ಫೋನ್‌ನಲ್ಲಿ ಮುಂಭಾಗ ಕ್ಯಾಮೆರಾ ಆನ್ ಮಾಡಿ ಫೋಸ್ ಕೊಟ್ಟು ನಾವೇ ನಮ್ಮ ಸೆಲ್ಫಿ ತೆಗೆಯಬಹುದು. ಇಷ್ಟು ಸುಲಭದ ಕೆಲಸ ಮಾಡಲು ಲೇಖನ ಏಕೆ ಎಂಬ ಆಲೋಚನೆ ನಿಮ್ಮ ಮನದಲ್ಲಿ ಮೂಡಿರಬಹುದು ಅಲ್ಲವೇ? ಆದರೆ ಸೆಲ್ಫಿಯಲ್ಲೇ ಸಾಹಸಗಳನ್ನು ಮಾಡುವವರ ಫೋಟೋಗಳನ್ನು ಇಂದಿಲ್ಲಿ ನೀಡುತ್ತಿದ್ದೇವೆ . ಇವರು ಮಾಡುತ್ತಿರುವ ಈ ಕೆಲಸ ಅವರಿಗೆ ಮನರಂಜನೆಯನ್ನು ನೀಡುತ್ತಿದ್ದರೂ ನೋಡುವವರಿಗೆ ಮೈಜುಮ್ಮೆನ್ನದೆ ಇರದು.

  ಓದಿರಿ: ವಿಶ್ವವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ರಹಸ್ಯಗಳು

  ಸೆಲ್ಫಿ ಕ್ರೇಜ್ ಇವರುಗಳಲ್ಲಿ ಎಷ್ಟಿದೆಯೆಂದರೆ ಇದಕ್ಕಾಗಿ ತಮ್ಮ ಪ್ರಾಣವನ್ನು ಬಲಿ ಕೊಡಲು ಸಿದ್ಧರಾಗುವಷ್ಟರ ಮಟ್ಟಿಗೆ. ಹಾಗೆಂದು ನೀವಿದನ್ನು ಟ್ರೈ ಮಾಡಲು ಹೋಗದಿರಿ ಎಂಬುದು ನಮ್ಮ ಮನವಿಯಾಗಿದೆ. ಬನ್ನಿ ಯಾವ ರೀತಿಯ ಸೆಲ್ಫಿಗಳನ್ನು ಈ ಸಾಹಸಿಗಳು ತೆಗೆದಿದ್ದಾರೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಟ್ರೈನ್ ಸೆಲ್ಫಿ

  ಜೇರ್ಡ್ ಮೈಕಲ್ ವೇಗವಾಗಿ ಟ್ರೈನ್ ಬರುತ್ತಿರುವಾಗ ಸೆಲ್ಫಿ ತೆಗೆಯಲು ಯತ್ನಿಸಿದ ಈ ಸಂದರ್ಭದಲ್ಲಿ ಟ್ರೈನ್ ಕಂಡೆಕ್ಟರ್ ಜೇರ್ಡ್‌ಗೆ ಉಂಟಾಗಲಿರುವ ಅಪಾಯವನ್ನು ಮನಗಂಡು ತಲೆಯನ್ನು ಒದ್ದಿದ್ದು,ಆಗ ಸೆರೆಯಾದ ಸೆಲ್ಫಿಯನ್ನು ಚಿತ್ರದಲ್ಲಿ ನಿಮಗೆ ಕಾಣಬಹುದಾಗಿದೆ.

  ರಿಪೋರ್ಟರ್‌ಗೆ ಆಗಲಿದ್ದ ಅನಾಹುತ

  ರಿಪೋರ್ಟರ್ ಕೆಲ್ಲಿ ನ್ಯಾಶ್ ಫೆನ್‌ವೇ ಪಾರ್ಕ್‌ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಭೇಟಿ ಕೊಟ್ಟಾಗ ಸೆಲ್ಫಿ ತೆಗೆಯಲು ಹೋದಾಗ ಬೀಸಿ ಬಂದ ಚೆಂಡು ಸೆಲ್ಫಿಯಲ್ಲಿ ಅಚ್ಚೊತ್ತಿದೆ.

  ಎತ್ತರದ ಬಿಲ್ಡಿಂಗ್ ಸೆಲ್ಫಿ

  ದುಬೈನ ಎತ್ತರದ ಕಟ್ಟಡದಲ್ಲಿ ತೆಗೆದ ಸಾಹಸಮಯಿ ಸೆಲ್ಫಿ ಇದಾಗಿದೆ.

  ಮೈ ನವಿರೇಳಿಸುವ ಸೆಲ್ಫಿ

  ಕಾನೂನು ಬಾಹಿರವಾಗಿ ಅತಿ ಎತ್ತರದ ಕಟ್ಟಗಳನ್ನು ಏರಿ ಇವರುಗಳು ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ.

  ಪ್ಲೇನ್ ಸೆಲ್ಫಿ

  ಫರ್ಡಿನಾಂಡ್ ಪೆಂಟೀಸ್ ತನ್ನ ಗೊಪ್ರೊ ವೀಡಿಯೊ ಕ್ಯಾಮೆರಾದಲ್ಲಿ ಫೋಟೋ ತೆಗೆಯುತ್ತಿದ್ದಾಗ ಒಂದು ವಿಮಾನ ಸಮುದ್ರದಲ್ಲಿ ಪತನಗೊಂಡಿತು. ಅದಾಗ್ಯೂ ಆತ ಪತನಗೊಂಡ ವಿಮಾನದೊಂದಿಗೆ ತನ್ನ ರೋಲ್ ಆಗುತ್ತಿದ್ದ ಕ್ಯಾಮೆರಾದಲ್ಲಿ ಸೆಲ್ಫಿ ತೆಗೆಸಿಕೊಂಡಿರುವುದು.

  ಡ್ರೈವಿಂಗ್ ಸೆಲ್ಫಿ

  ಅಲೆಕ್ಸ್ ಕಠಿಣ ರಸ್ತೆಗಳಲ್ಲಿ ತಮ್ಮ ಜೀಪ್‌ನೊಂದಿಗೆ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಗೊಪ್ರೊದಲ್ಲಿ ಸೆಲ್ಫಿ ತೆಗೆಸಿಕೊಂಡಿರುವುದು. ಈತ ಎಂಟೆದೆಯ ಭಂಟನೇ ಇರಬೇಕು ಎಂಬುದು ನಮ್ಮ ಅಭಿಪ್ರಾಯ

  ಹೋರಿ ಸೆಲ್ಫಿ

  ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಹೋರಿ ಓಟದಲ್ಲಿ ಈತ ಸೆಲ್ಫಿ ತೆಗೆಯುವ ದುಸ್ಸಾಹಸಕ್ಕೆ ಕೈಹಾಕಿದ್ದಾನೆ. ಹಿಂಭಾಗದಲ್ಲಿ ಹೋರಿ ನಿಂತಿದ್ದು ನಂತರ ಆತ ಅದರ ತಿವಿತಕ್ಕೆ ಒಳಗಾಗಿದ್ದನಂತೆ.

  ಕರಡಿಯೊಂದಿಗೆ ಸೆಲ್ಫಿ

  ಯುಎಸ್ ಅರಣ್ಯ ಇಲಾಖೆಯು ಕರಡಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದದನ್ನು ನಿಷೇಧಿಸಿದೆ. ಅದಾಗ್ಯೂ ಈಕೆ ಸೆಲ್ಫಿ ತೆಗೆಸಿಕೊಂಡಿರುವುದು ನಿಯಮಾವಳಿಗಳನ್ನು ಮುರಿದಂತಾಗಿದೆ.

  ಜ್ವಾಲಾಮುಖಿ ಸೆಲ್ಫಿ

  ಸಾಹಸಿ ಫೋಟೋಗ್ರಾಫರ್ ಜಾರ್ಜ್ ಕುರ್ನೋಸ್ ಜ್ವಾಲಾಮುಖಿಯೊಂದಿಗೆ ತೆಗೆಸಿಕೊಂಡ ಭಯಾನಕ ಸೆಲ್ಫಿ ಇಲ್ಲಿದೆ.

  ಕಾರಿನಲ್ಲಿ ಸೆಲ್ಫಿ

  ಕಾರಿನಲ್ಲಿ ಡ್ರೈವ್ ಮಾಡುತ್ತಿರುವಾಗ ಸೆಲ್ಫಿ ತೆಗೆಸಿಕೊಂಡು ನಂತರ ಅಪಘಾತಕ್ಕೆ ತುತ್ತಾಗಿದ್ದಾರೆ.

  ಮೋಟಾರ್ ಸೈಕಲ್ ಸೆಲ್ಫಿ

  ಜೇಡಿಯಲ್ ತನ್ನ ಮೋಟಾರ್ ಸೈಕಲ್ ರಾಲಿಗೆ ಹೋಗುವುದಕ್ಕೆ ಮುನ್ನ ಈ ಸೆಲ್ಫಿಯನ್ನು ತೆಗೆಸಿಕೊಂಡಿದ್ದು ನಂತರ ಆತನ ಬೈಕ್ ಅಪಘಾತಕ್ಕೆ ಈಡಾಯಿತು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  Here down to see rare selfies from around the world that capture some heart-pounding close calls and extreme dangers.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more