Subscribe to Gizbot

ಪರಿಹಾರವನ್ನೇ ಕಾಣದ ಜಗತ್ತಿನ ರಹಸ್ಯಗಳು

Written By:

ಪ್ರಕೃತಿ ತನ್ನಲ್ಲಿ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡು ನಮ್ಮನ್ನು ಬೆಕ್ಕಸ ಬೆರಗಾಗಿಸುತ್ತಿದೆ ಎಂಬ ಅದ್ಭುತ ವಿಷಯಗಳಂತೆ ಕೆಲವೊಂದು ನಿಗೂಢತೆಗಳನ್ನು ತನ್ನಲ್ಲಿ ಇರಿಸಿಕೊಂಡು ಪರಿಹರಿಸಲೇ ಸಾಧ್ಯವಿಲ್ಲ ಎಂಬುದನ್ನು ನಮಗೆ ತೋರಿಸುತ್ತಿದೆ. ಪ್ರಕೃತಿಯಲ್ಲೇ ತನ್ನಷ್ಟಕ್ಕೆ ಉಂಟಾಗಿರುವ ಅದ್ಭುತಗಳೋ ಅಥವಾ ಮಾನವ ನಿರ್ಮಿತ ಆಕಸ್ಮಿಲಗಳೋ ಎಂಬುದಂತೂ ಇನ್ನೂ ರಹಸ್ಯವಾಗಿದೆ.

ಇಂದಿನ ಲೇಖನದಲ್ಲಿ ಸ್ತಂಬೀಭೂತಗೊಳಿಸುವ ಟಾಪ್ ರಹಸ್ಯ ವಿಷಯಗಳತ್ತ ನಾವು ನಿಮ್ಮನ್ನು ಕೊಂಡೊಯ್ಯುತ್ತಿದ್ದು ಇದು ಏಕಿಷ್ಟು ರಹಸ್ಯಮಯವಾಗಿದೆ ಎಂಬುದನ್ನು ನೀವು ತಿಳಿದುಕೊಳ್ಳಬಹುದಾದ ವಿಷಯಗಳನ್ನೆ ನಾವು ಇಲ್ಲಿ ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಲ್ ವಾಟರ್ ಹೋಲ್

#1

ಮೆಲ್ ವಾಟರ್ ಹೋಲ್ ವಾಶಿಂಗ್ಟನ್‌ನಲ್ಲಿ ಕಂಡು ಬಂದಿದ್ದು, 9 ಫೀಟ್ ಅಗಲದ ಹೋಲ್ ಆಗಿದೆ. ಈ ಕಣಿವೆ ಉಂಟಾಗಿರುವುದಾದರೂ ಹೇಗೆ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದ್ದು ಇದಕ್ಕಿನ್ನೂ ಉತ್ತರ ಕಂಡುಹಿಡಿಯಲಾಗಿಲ್ಲ.

ಕಾಣೆಯಾದ ಬ್ರಿಟನ್ ಸೈನಿಕರು

#2

ಬ್ರಿಟನ್ ಮತ್ತು ಟರ್ಕಿಗೆ ನಡೆದ ಯುದ್ಧದಲ್ಲಿ ಕೆಲವೊಬ್ಬರು ಸೈನಿಕರು ಕಾಣೆಯಾಗಿದ್ದರು. ಬ್ರಿಟನ್ ಸರಕಾರವು ಟರ್ಕಿಯನ್ನು ಅವರನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದರೂ ಟರ್ಕಿ ಯಾರನ್ನೂ ಒತ್ತೆಯಾಳುಗಳಾಗಿ ಇರಿಸಿಕೊಂಡಿರಲಿಲ್ಲ. ಹಾಗಿದ್ದರೆ ಈ ಸೈನಿಕರು ಎಲ್ಲಿಗೆ ಹೋದರು ಎಂಬುದು ಮಾತ್ರವೇ ಇನ್ನೂ ರಹಸ್ಯವಾಗಿದೆ.

ಲಾರ್ಡ್ ರಾಸ್‌ಮೋರ್ ಮರಣದ ಹಿಂದಿರುವ ರಹಸ್ಯ

#3

ರಾಬರ್ಟ್ ಕನ್ನಿಂಗ್ ಹ್ಯಾಮ್ ಮರಣ ಹೊಂದಿರುವ ಹಿಂದಿನ ರಹಸ್ಯ ಇನ್ನೂ ನಿಗೂಢವಾಗಿಯೇ ಇದ್ದು ಇವರ ಸಾವು ಹೇಗೆ ಸಂಭವಿಸಿದೆ ಎಂಬುದು ಮಾತ್ರ ನಿಗೂಢವಾಗಿದೆ. ಬರಿಯ ಒಂದು ಧ್ವನಿಯಿಂದ ಇವರ ಮರಣ ಸಂಭವಿಸಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಕಪ್ಪು ದಿರಿಸಿನ ಮನುಷ್ಯರು

#4

ಮೆನ್ ಇನ್ ಬ್ಲಾಕ್ ಕುರಿತ ರಹಸ್ಯ ಕಥೆಗಳನ್ನು ನೀವು ಕೇಳಿರುತ್ತೀರಿ ಅಲ್ಲವೇ? ಅಜ್ಞಾತ ಹಾರುವ ತಟ್ಟೆ ಗ್ರಹದಿಂದ ಬಂದವರಾಗಿರಬಹುದು ಎಂಬುದಾಗಿ ಇವರನ್ನು ಗುರುತಿಸಲಾಗುತ್ತಿದೆ. ಸರಕಾರಿ ಏಜೆಂಟರ್‌ಗಳೆಂಬುದಾಗಿ ಕರೆಸಿಕೊಳ್ಳುವ ಇವರುಗಳು ಎಲ್ಲಿಂದ ಬಂದಿರುವವರು ಎಂಬುದು ಮಾತ್ರ ಬೇಧಿಸಲಾಗದ ರಹಸ್ಯವಾಗಿದೆ.

ವೋ ಸಿಗ್ನಲ್

#5

ಏಲಿಯನ್‌ಗಳ ಸಿಗ್ನಲ್ ಎಂಬುದಾಗಿ ಈ ಶಬ್ಧವನ್ನು ಗುರುತಿಸಲಾಗಿದ್ದು ಕೋಯಿ ಮಿಲ್ ಗಯಾ ಚಿತ್ರದಲ್ಲಿ ಬರುವ ಈ ಸ್ವರವನ್ನು ನಿಮಗೆ ಗಮನಿಸಿಕೊಳ್ಳಬಹುದಾಗಿದೆ. 72 ಸೆಕೆಂಡ್‌ಗಳಷ್ಟು ಉದ್ದವಾಗಿರುವ ಈ ಶಬ್ಧವು 17,600 ಬೆಳಕಿನ ವರ್ಷಗಳಿಂದಾಚೆಗೆ ಬರುವಂತದ್ದಾಗಿದೆ.

727 ವಿಮಾನ ಅದೃಶ್ಯ

#6

ಬೋಯಿಂಗ್ 727 ಮೇ 25, 2003 ರ ಸಂಜೆ ಅನಾಮತ್ತಾಗಿ ನಾಪತ್ತೆಯಾಯಿತು. ಆಗಸದಲ್ಲಿ ಹಾರುತ್ತಿದ್ದ ವಿಮಾನ ಒಮ್ಮೆಲೆ ಅದೃಶ್ಯವಾಗಿದ್ದು ಇನ್ನಷ್ಟು ನಿಗೂಢತೆಗೆ ಕಾರಣವಾಯಿತು.

ಸ್ಕೈ ಕ್ವೇಕ್ಸ್ ರಹಸ್ಯ

#7

ಬಾನಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಅನಾಮಧೇಯ ಶಬ್ಧವಾಗಿದೆ. ಇದೇ ರೀತಿಯ ಶಬ್ಧಗಳು ಪ್ರಪಂಚದ ವಿವಿಧ ಮೂಲೆಗಳಲ್ಲಿ ಉಂಟಾಗುತ್ತದೆ. ಹೆಚ್ಚಾಗಿ ಉತ್ತರ, ದಕ್ಷಿಣ ಕ್ಯಾರೊಲಿನಾ, ಓಕ್ಲಾಹೋಮಾ ಮತ್ತು ರಷ್ಯಾದಲ್ಲೂ ಈ ಶಬ್ಧ ಉಂಟಾಗುತ್ತದೆ.

ಡಲ್ಸ್ ಪೇಪರ್ಸ್

#8

ಯುಎಸ್‌ಎ ಸರಕಾರ ಮತ್ತು ಏಲಿಯನ್ ಜನಾಂಗದ ನಡುವೆ ಆಪರೇಟ್ ಆಗಿರುವ ಅಂಡರ್ ಗ್ರೌಂಡ್ ಮೆಗಾ ಲ್ಯಾಬೊರೇಟರಿ ಆಗಿದೆ.

ಲಾ ರೈಡ್

#9

ಯುಎಸ್ ಸೇನೆಯು ಜಪಾನ್ ಹಾಕಿದ ಬಾಂಬ್ ದಾಳಿಯಿಂದಾಗಿ ತೀವ್ರ ನಷ್ಟಕ್ಕೆ ಒಳಗಾಯಿತು. ಈ ದಾಳಿ 2500 ಅಮೇರಿಕನ್ನರನ್ನು ಬಲಿ ತೆಗೆದುಕೊಂಡಿತು. ಜಗತ್ತೇ ಈ ಆಘಾತದಿಂದ ಬೆಚ್ಚಿ ಬಿದ್ದಿತು.

ಬೇಚಿಮೊ

#10

ಈ ಶಿಪ್‌ನ ಹಿಂದಿರುವ ದಂತಕಥೆ ನಿಜಕ್ಕೂ ರಹಸ್ಯಮಯವಾಗಿದೆ. ಐಸ್‌ ಸಂಪೂರ್ಣವಾಗಿ ಈ ಹಡಗನ್ನು ಆವರಿಸಿ ಅದರ ಯಾನಕ್ಕೆ ಅಡ್ಡಿಯನ್ನುಂಟು ಮಾಡಿತು. ಹಡಗನ್ನು ಕಾಪಾಡಲು ಏರೋಪ್ಲೇನ್ ಅನ್ನು ಕಳುಹಿಸಿದರೂ ಅದು ವಿಫಲವಾಯಿತು.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಗೂಗಲ್‌ನಿಂದ "ಏರಿಯಾ 6" ನಿಗೂಢತೆ ಬಯಲು: ಡ್ರೋನ್‌ಗಳ ಪರೀಕ್ಷೆ
ತ್ರಿವಳಿಗಳಲ್ಲಿ ತಾಯಿ ಯಾರು? ಇಂಟರ್ನೆಟ್‌ನಲ್ಲಿ ಗೊಂದಲ ಸೃಷ್ಟಿಸಿದ ಫೋಟೋ
ಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು
ಕಾಲ್ಪನಿಕ ವಿಜ್ಞಾನದಿಂದ ಸಂಶೋಧನೆಗೊಂಡ ಪ್ರಖ್ಯಾತ ಟೆಕ್ನಾಲಜಿಗಳು

ಭೇಟಿ ನೀಡಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟ

ಇನ್ನಷ್ಟು ಲೇಖನಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಹೋಗಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
it fit to step onto the table and venture into the realm of the macabre to bring our readers another set of Top 10 Mysteries of The World We’ll Probably Never Solve.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot