Subscribe to Gizbot

ಇಸ್ರೊ ಯಶಸ್ವಿ ಉಪಗ್ರಹ ಉಡಾವಣೆ!...ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದ್ದು ಹೀಗೆ!!

Written By:

ಭಾರತದ ಹೆಮ್ಮೆಯ ಅಂತರಿಕ್ಷ ಸಂಸ್ಥೆ ಇಸ್ರೋ ಸಾಧನೆಗಳು ದಿನದಿಂದ ದಿನಕ್ಕೆ ಮುಗಿಲುಮಟ್ಟುತ್ತಿವೆ.! ಹೌದು, ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಿಂದ ಶುಕ್ರವಾರ ಸಂಜೆ 4.57ಕ್ಕೆ ಉಡಾವಣೆಗೊಂಡ ಜಿಎಸ್ಎಲ್ವಿ-9 ಉಪಗ್ರಹ ಜಿಸ್ಯಾಟ್-9 ಉಡಾವಣೆಯನ್ನು ಯಶಸ್ವಿಯಾಗಿ ಪೂರೈಸಿದೆ.!!

ಸ್ಥಳೀಯ ಸಹಕಾರಕ್ಕಾಗಿ ದಕ್ಷಿಣ ಏಷ್ಯಾ ಜಿಸ್ಯಾಟ್-9 ಉಪಗ್ರಹ ಉಡಾವಣೆ ಮಾಡಿದ್ದು, ಸ್ಥಳೀಯ ಸಹಕಾರದಲ್ಲಿ ಕಾರ್ಯ ಮತ್ತು ಸಹಕಾರಕ್ಕೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಮಾರ್ಗದರ್ಶನವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ದಕ್ಷಿಣ ಏಷ್ಯಾ ರಾಷ್ಟ್ರಗಳ ಅಭಿವೃದ್ಧಿ ಮತ್ತು ಸಮೃದ್ಧಿಗೆ ಅತ್ಯಾಧುನಿಕ ಅಂತರಿಕ್ಷ ತಂತ್ರಜ್ಞಾನದ ನೆರವನ್ನು ನೀಡುವುದಾಗಿ ಎರಡು ವರ್ಷಗಳ ಹಿಂದೆ ಭಾರತ ಭರವಸೆ ನೀಡಿತ್ತು. ಅದನ್ನು ಇಂದು ಈಡೇರಿಸಿದೆ ಎಂದು ಹೇಳಿದರು.

ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಇಂದು ಐತಿಹಾಸಿಕವಾಗಿ ಬಹಳ ಮಹತ್ವದ ದಿನ ಎಂದು ಮೋದಿಯವರು ಹೇಳಿದ್ದು, ಯಾವ ಯಾವ ದೇಶದ ಪ್ರಧಾನಿ/ಮುಖ್ಯಸ್ಥರು ಜಿಸ್ಯಾಟ್-9 ಬಗ್ಗೆ ಏನು ಹೇಳಿದ್ದಾರೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!'

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಹೇಳಿರುವುದು.!!

ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಹೇಳಿರುವುದು.!!

ಪ್ರಧಾನಿ ಮೋದಿಯವರ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಹೇಳಿಕೆಯನ್ನು ಉಲ್ಲೇಖಿಸಿದ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್, ತಮ್ಮ ಕನಸು ಮತ್ತು ಆಸೆಗಳನ್ನು ಈಡೇರಿಸಲು ಸದಸ್ಯ ರಾಷ್ಟ್ರಗಳು ಉಪಗ್ರಹವನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.

ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್!!

ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್!!

ದಕ್ಷಿಣ ಏಷ್ಯಾ ರಾಷ್ಟ್ರಗಳ ನಡುವಿನ ಸಂಪರ್ಕ ಇದರಿಂದ ಹೆಚ್ಚಾಗುತ್ತದೆ. ಅಭಿವೃದ್ಧಿಗೆ ಸಂಪರ್ಕ ಅತಿ ಮುಖ್ಯ. ದಕ್ಷಿಣ ದೇಶಗಳ ಅಭಿವೃದ್ದಿಗೆ ಭಾರತದ ಸಾಧನೆ ಮಹತ್ವದ್ದಾಗಿದೆ ಎಂದು ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಹೇಳಿದರು.

ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

ಕಡ್ಡಾಯ ಪ್ರಾದೇಶಿಕ ಸಹಕಾರ ಇಂದು ವಾಸ್ತವವಾಗಿ ಬದಲಾಗಿದೆ. ಮಾತು ಮತ್ತು ಕೃತಿಗಳ ನಡುವಿನ ಅಂತರಕ್ಕೆ ಇಂದು ಸೇತುವೆ ನಿರ್ಮಿಸಿದ್ದೇವೆ. ಭಾರತದ ಜೊತೆ ಆಫ್ಘಾನಿಸ್ತಾನ ದ ಸಂಭಂದ ಗಟ್ಟಿಯಾಗಿದೆ ಎಂದು ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಹೇಳಿದರು.

 ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ

ಉಪಗ್ರಹದ ಯಶಸ್ವಿ ಉಡಾವಣೆಗೆ ಅಭಿನಂದನೆ ಸಲ್ಲಿಸಿದ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಈ ಉಪಗ್ರಹದ ಯಶಸ್ವಿ ಉಡಾವಣೆ ಮೂಲಕ ದಕ್ಷಿಣ ಏಷ್ಯಾ ದೇಶಗಳ ಘನತೆ ಹೆಚ್ಚಾಗಲಿದೆ ಎಂದು ಹೇಳಿದರು. ವಿಶ್ವದ ಇತಿಹಾಸದಲ್ಲಿ ಇದು ಪ್ರಭಾವಶಾಲಿ ಮೈಲಿಗಲ್ಲು. ನೆರೆ ದೇಶಗಳ ಉತ್ತಮ ಭವಿಷ್ಯಕ್ಕೆ ಉಪಗ್ರಹವನ್ನು ಸಮರ್ಪಿಸಿದ ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು ಎಂದರು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Prime Minister Narendra Modi on Wednesday congratulated ISRO on the successful launch of PSLV-C36. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot