ಕಾಲೇಜು ಹುಡುಗರಿಗೆ ಗಾಳ ಹಾಕಿದ ಜಿಯೋದಿಂದ ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್..!!

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಹೊಸ ಅಲೆಯನ್ನು ಹುಟ್ಟಿಹಾಕಿದೆ ಎಂದರೆ ತಪ್ಪಾಗುವುದಿಲ್ಲ. ಅಲ್ಲದೇ ತಾನು ಬೆಲೆ ಕಡಿಮೆ ಮಾಡುವ ಮೂಲಕ ಇತರೆ ಕಂಪನಿಗಳಿಂದಲೂ ಭರ್ಜರಿ ಆಫರ್ ಘೋಷಣೆ ಮಾಡಿಸಿದ ಕೀರ್ತಿ ಜಿಯೋಗೆ ಸಲ್ಲಬೇಕು. ಸದ್ಯ ಜಿಯೋ ಇದೇ ಮಾದರಿಯಲ್ಲಿ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ.

ಜಿಯೋದಿಂದ ಕಾಲೇಜು ಹುಡುಗರಿಗೆ ಭರ್ಜರಿ ಆಫರ್..!!

ಯುವ ಜನತೆಯನ್ನು ಸೆಳೆಯಲು ಹೊಸದೊಂದು ಕ್ರಮಕ್ಕೆ ಮುಂದಾಗಿರುವ ಜಿಯೋ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವೈ-ಫೈ ಓದಗಿಸಲು ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ದೇಶದಲ್ಲಿರುವ ಅತೀ ದೊಡ್ಡ ಸಮುದಾಯಕ್ಕೆ ಗಾಳ ಹಾಕಿದೆ ಜಿಯೋ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪಂಜಾಬ್‌ನಲ್ಲಿ ಮೊದಲ ಪರೀಕ್ಷೆ:

ಪಂಜಾಬ್‌ನಲ್ಲಿ ಮೊದಲ ಪರೀಕ್ಷೆ:

ಈಗಾಗಲೇ ಪಂಜಾಬ್ ಸರಕಾರ ಜಿಯೋ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದುಮ ಸರಕಾರಿ ಸ್ವಾಮ್ಯದಲ್ಲಿರುವ ಕಾಲೇಜುಗಳಲ್ಲಿ ಉಚಿತ ವೈ-ಫೈ ಸೇವೆಯನ್ನು ಓದಗಿಸುವಂತೆ ಜಿಯೋಗೆ ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸೇವೆ:

ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಸೇವೆ:

ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ಬೋಧನೆ ವಿಷಯದಲ್ಲಿ ಸಹಾಯವಾಗಲು ಮತ್ತು ಕಾಲೇಜುಗಳಲ್ಲಿ ಕಾಷ್ ಲೈಸ್ ವ್ಯವಹಾರವನ್ನು ನಡೆಸಲು ಜಿಯೋ ಇಂಟರ್ನೆಟ್ ಸೇವೆಯ ಸಹಾಯವನ್ನು ಪಡೆಯುವುದು ಇದರ ಉದ್ದೇಶವಾಗಿದೆ.

ಇಂಜಿನಿಯರಿಂಗ್ ಕಾಲೇಜ್ ಸೇರಿದಂತೆ ಎಲ್ಲೆಡೆ:

ಇಂಜಿನಿಯರಿಂಗ್ ಕಾಲೇಜ್ ಸೇರಿದಂತೆ ಎಲ್ಲೆಡೆ:

ಸರ್ಕಾರಿ ಸ್ವಾಮ್ಯದ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಐಟಿಐ ಕಾಲೇಜುಗಳಲ್ಲಿ ಜಿಯೋ ಉಚಿತ ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಇದಕ್ಕಾಗಿ ಸರಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಶೀಘ್ರವೇ ಎಲ್ಲಾ ರಾಜ್ಯಗಳಿಗೂ ವಿಸ್ತರಣೆ:

ಶೀಘ್ರವೇ ಎಲ್ಲಾ ರಾಜ್ಯಗಳಿಗೂ ವಿಸ್ತರಣೆ:

ಇದೇ ಮಾದರಿಯಲ್ಲಿ ಜಿಯೋ ಎಲ್ಲಾ ರಾಜ್ಯಗಳಿಗೂ ಈ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಇಟ್ಟುಕೊಂಡಿದೆ ಎನ್ನಲಾಗಿದೆ. ಪಂಜಾಬ್ ನಲ್ಲಿ ಇದು ಯಶಸ್ವಿಯಾದರೆ ಖಂಡಿತವಾಗಿಯೂ ಬೇರೆ ಎಲ್ಲಾ ರಾಜ್ಯಗಳಿಗೂ ಈ ಸೇವೆ ವಿಸ್ತರಣೆಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
eliance will provide free Wi-Fi facility in all government Industrial Training Institutes (ITIs), polytechnics, and engineering colleges of the state. to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot