ಸಂಶೋಧಕರಿಂದ ನರಕ ಗ್ರಹ ಪತ್ತೆ: Cancri 55 e !!

By Suneel
|

ಭೂಮಿಗೆ ಹೋಲುವ ಇತರ ಗ್ರಹಗಳನ್ನು ಪತ್ತೆಹಚ್ಚುವಲ್ಲಿ ತಂತ್ರಜ್ಞಾನ ಬಳಕೆ ಮತ್ತು ಅಭಿವೃದ್ಧಿಯಿಂದ ಹಲವು ಖಗೋಳಶಾಸ್ತ್ರಜ್ಞರು, ವಿಜ್ಞಾನಿಗಳು ಸತತ ಪ್ರಯತ್ನದಲ್ಲಿದ್ದಾರೆ. ಅಂದಹಾಗೆ ಇಂದು ಪ್ರಬಲ ರೇಡಿಯೋ ಸಂವಹನ ಮತ್ತು ಬೆಳಕಿನ ದೂರದರ್ಶಕಗಳನ್ನು ಹಿಂದಿಗಿಂತಲೂ ವೇಗವಾಗಿ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಸೌರಕಕ್ಷೆಯ ಹೊರವಲಯದಿಂದ ಬಿಲಿಯನ್‌ ಗಟ್ಟಲೆ ಕಿಲೋ ಮೀಟರ್‌ ದೂರದಿಂದ ಹಲವು ಡೇಟಾವನ್ನು ಮರಳಿ ಪಡೆಯಲಾಗುತ್ತಿದೆ. ಈ ರೀತಿಯ ವಿಜ್ಞಾನಿಗಳ ಸಂಶೋಧನೆಯಿಂದ ಇದುವರೆಗೆ ಅವರ ಕೊಡುಗೆ ಎಂದರೆ ಕೆಲವು ಗ್ರಹಗಳನ್ನು ಪತ್ತೆ ಹಚ್ಚಿದ್ದು, ಅವುಗಳು ಭವಿಷ್ಯದಲ್ಲಿ ಶತಕೋಟಿ ವರ್ಷಗಳ ನಂತರವಾದರೂ ಸಹ ಅಲ್ಲಿ ದ್ರವ ಜಲಮಾರ್ಗವನ್ನು ಉಳಿಸಿಕೊಳ್ಳುತ್ತವೆ. ಅಂದಹಾಗೆ ಈಗ ವಿಜ್ಞಾನಿಗಳು ಸ್ಫೋಟಕ ಮಾಹಿತಿಯೊಂದನ್ನು ತಿಳಿಸಿದ್ದಾರೆ. ಅದೇನು ಗೊತ್ತಾ?

ಖಗೋಳವಿಜ್ಞಾನಿಗಳ ತಂಡವೊಂದು "Cancri 55 e" ಎಂಬ ಆಸಕ್ತದಾಯಕವಾದ ಗ್ರಹವೊಂದನ್ನು ಇತ್ತೀಚೆಗೆ ಪತ್ತೆ ಹಚ್ಚಿದ್ದು, ಅದರ ಸಂಯೋಜನೆ ವ್ಯವಸ್ಥೆಯಿಂದ ನರಕದ ರೀತಿಯಲ್ಲಿ ಕಾಣುತ್ತದೆ ಎನ್ನಲಾಗಿದೆ. ಇಷ್ಟುದಿನ ಕೇವಲ ಕಲ್ಪನೆಯಲ್ಲಿ ಮಾತ್ರ ನರಕದ ಬಗ್ಗೆ ಊಹಿಸುತ್ತಿದ್ದ ಜನತೆಗೆ, ಹೊಸ ಸ್ಫೋಟಕ ಮಾಹಿತಿಯನ್ನು ವಿಜ್ಞಾನಿಗಳು ವಿಲಕ್ಷಣ ಗ್ರಹವೊಂದನ್ನು ನರಕದ ರೀತಿಯಲ್ಲಿದೆ ಎಂದು ಪತ್ತೆಹಚ್ಚಿ ವಾಸ್ತವತೆ ಬಗ್ಗೆ ಹೇಳುತ್ತಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿರಿ. ಲೇಖನದ ಕೊನೆಯ ಸ್ಲೈಡರ್‌ನಲ್ಲಿ ವೀಡಿಯೋ ಸಹ ನೋಡಿರಿ.

ನರಕದ ರೀತಿಯಲ್ಲಿ ಕಾಣುವ ಗ್ರಹ

ನರಕದ ರೀತಿಯಲ್ಲಿ ಕಾಣುವ ಗ್ರಹ

ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದ ನರಕದ ರೀತಿಯಲ್ಲಿ ಕಾಣುತ್ತಿರುವ ಗ್ರಹ ಎರಡು ಮುಖಗಳನ್ನು ಹೊಂದಿದೆ ಅಥವಾ ಅರ್ಧಗೋಳವನ್ನು ಹೊಂದಿದೆ ಎನ್ನಲಾಗಿದೆ.

"Cancri 55 e"

ವಿಜ್ಞಾನಿಗಳು ಪತ್ತೆ ಹಚ್ಚಿರುವ ಗ್ರಹದ ಒಂದು ಭಾಗ ಸಂಪೂರ್ಣ ಕತ್ತಲೆಯಿಂದ ಆವರಿಸಿದೆ. ಇನ್ನೊಂದು ಭಾಗ ಕುದಿಯುವ ಲಾವಾವನ್ನು ಸಂಪೂರ್ಣವಾಗಿ ಹೊಂದಿದೆ.

"Cancri 55 e"

"Cancri 55 e" ಕುದಿಯುವ ಲಾವಾ ಇರುವ ಮುಖಭಾಗವೂ ಸೂರ್ಯನ ತಾಪವನ್ನು ಎದುರಿಸುತ್ತಿದ್ದು, ಅದರ ಶಾಖ 2,000 ಡಿಗ್ರಿ ಸೆಲ್ಸಿಯಸ್‌ ಇದೆ. ಅಲ್ಲದೇ ಸಂಪೂರ್ಣ ವಾತಾವರಣವು ಹೈಡ್ರೂಜನ್‌ ಸೈನೆಡ್‌ನಿಂದ ಸಂಯೋಜನೆ ಹೊಂದಿದೆ. ಇದರಲ್ಲಿನ ಅತ್ಯಧಿಕವಾದ ವಿಷ ಅನಿಲ ಒಡ್ಡುವಿಕೆಯಿಂದ ಕೇವಲ ಒಂದು ನಿಮಿಷದೊಳಗೆ ಸಾವು ಸಂಭವಿಸುತ್ತದೆ.

ನರಕ ಗ್ರಹ

ನರಕ ಗ್ರಹ

ಮಂಗಳ ಗ್ರಹ ಸೇರಿದಂತೆ ಇತರ ಕೆಲವು ಗ್ರಹಗಳು ಜೀವನಕ್ಕೆ ಆಧಾರವಾಗಿವೆ. ಆದರೆ ತೀವ್ರ ಬೆಂಕಿ ಮತ್ತು ಸಂಪೂರ್ಣ ಕತ್ತಲೆ ಹೊಂದಿರುವ "Cancri 55 e" ಗ್ರಹವು ನರಕ ಎಂಬುದಕ್ಕೆ ವಿವರಣೆ ನೀಡುತ್ತದೆ.

"Cancri 55 e"

"Cancri 55 e" ನರಕ ಗ್ರಹವು ಸೂರ್ಯನ ಚಲನೆಯಿಂದ ಸ್ಥಗಿತಗೊಂಡಿದೆ, ಹೇಗೆ ಭೂಮಿಯ ಚಲನೆಯಿಂದ ಚಂದ್ರ ಸ್ಥಗಿತಗೊಂಡಿದೆಯೋ ಹಾಗೆ. ಆದ್ದರಿಂದ ಗ್ರಹದ ಒಂದು ಭಾಗ ಎಲ್ಲಾ ಕಾಲದಲ್ಲೂ ಸುಡುತ್ತಿರುತ್ತದೆ. ಇದರಿಮದ ಖಾಯಂ ಆಗಿ ಸಂಪೂರ್ಣ ಕತ್ತಲೆ ಹೊಂದಿರುವ ಭಾಗ 1,500 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ಹೊಂದುವುದರಲ್ಲಿದೆ. ಕೇವಲ ಒಂದು ಸೆಕೆಂಡಿನಲ್ಲಿ ಮನುಷ್ಯನನ್ನು ನಾಶಮಾಡಬಹುದಾಗಿದೆ.

 ಪ್ರಬಲ ರೇಡಿಯೇಷನ್

ಪ್ರಬಲ ರೇಡಿಯೇಷನ್

"Cancri 55 e" ನರಕ ಗ್ರಹವು ಪ್ರಬಲ ರೇಡಿಯೇಷನ್ ಅನ್ನು ಬಿಡುಗಡೆ ಮಾಡುತ್ತದೆ. ಈ ರೇಡಿಯೇಷನ್‌ ಅಲ್ಲಿನ ಅಪಾಯ ಸಂಭವಿಸಿದ ಸ್ಫೋಟ ಮತ್ತು ಅಂತರ್‌ ಸಿಡಿತದಿಂದ ಬಿಡುಗಡೆಯಾಗುತ್ತದೆ.

ಹೋಲಿಕೆ

ಹೋಲಿಕೆ

ಇಂತಹ ಹಲವು ಗ್ರಹಗಳು ಬಾಹ್ಯಾಕಾಶದಲ್ಲಿದ್ದು ಅವುಗಳಲ್ಲಿ "Cancri 55 e" ಗ್ರಹದ ರೀತಿಯ ತಾಪಮಾನ ಸಾಮಾನ್ಯವಾಗಿದ್ದು, ವಾಸಿಸಲು ಯಾವುವು ಸಹ ಯೋಗ್ಯವಿಲ್ಲ. ಬಾಹ್ಯಾಕಾಶದಲ್ಲಿ ಇದು ಸಾಮಾನ್ಯವಾಗಿದೆ. ಅಲ್ಲದೇ ಸೌರವ್ಯೂಹದಲ್ಲಿ ಬುಧ, ಶುಕ್ರ ಗ್ರಹಗಳು ಸಹ ಅಧಿಕವಾದ ತಾಪಮಾನ ಹೊಂದಿದ್ದು ಅವುಗಳ ಸಹ ನಮಗೆ ಯೋಗ್ಯವಲ್ಲ.

ಮಂಗಳ ಗ್ರಹ

ಮಂಗಳ ಗ್ರಹ

ಮಂಗಳ ಗ್ರಹವು ಸಹ ಆದರ್ಶ ವಾತಾವರಣಕ್ಕಿಂತ ಹೆಚ್ಚು ತಂಪು ವಾತಾವರಣ ಹೊಂದಿದೆ. ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಸಹ ಕಲ್ಲಿನ ಸಮುದಾಯ ಹೊಂದಿಲ್ಲ. ಆದರೆ ಅನಿಲ ಮತ್ತು ದ್ರವ ಉತ್ತಮ ತಂಪು ಹೊಂದಿವೆ. ಪ್ಲುಟೊ ಸಹ ಸಾಮಾನ್ಯ ತಾಪಮಾನ ಹೊಂದಿದ್ದು ಇದಕ್ಕೆ ಅನಿಲ ಗಟ್ಟಿತನ ಕಾರಣವಾಗಿದೆ.

 ಭೂಮಿ

ಭೂಮಿ

ವಿಜ್ಞಾನಿಗಳು ಭೂಮಿಯಿಂದ ಬಿಲಿಯನ್‌ ಗಟ್ಟಲೇ ಕಿಲೋ ಮೀಟರ್‌ ದೂರದಲ್ಲಿರುವ ಗ್ರಹಗಳ ತಾಪಮಾನ ಮತ್ತು ಜೀವಿಸುವ ಸಾಧ್ಯತೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಭೂಮಿಯೇ ಇಂದು ಸಂತೋಷಪಟ್ಟು ಜೀವಿಸುವಷ್ಟು ಸಾಧ್ಯತೆಗಳನ್ನು ಎಲ್ಲಾ ರೀತಿಯಿಂದಲೂ ಕಳೆದುಕೊಳ್ಳುತ್ತಿದೆ.

ನರಕ ಗ್ರಹ

ವೀಡಿಯೋ ನೋಡಿ
ಚಿತ್ರ ಕೃಪೆ: APOD Videos

ಗಿಜ್‌ಬಾಟ್‌

ಗಿಜ್‌ಬಾಟ್‌

ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?ಪ್ರತಿಯೊಬ್ಬರನ್ನು ನಿಬ್ಬೆರಗಾಗಿಸುವ 'ಬಿಲ್‌ ಗೇಟ್ಸ್‌' ಮನೆ ಹೇಗಿದೆ ಗೊತ್ತಾ?

25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!25 ವರ್ಷಗಳ ಕಾಲ ಗುಹೆಯೊಳಗಿದ್ದ 'ರಾ ಪಾಲೆಟ್ಟೆ': ಆಶ್ಚರ್ಯಕರ ಚಟುವಟಿಕೆ!!

ಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳುಪ್ರಪಂಚಕ್ಕೆ ಕೊಡುಗೆ ನೀಡಿದ ಭಾರತೀಯರ ಪ್ರಖ್ಯಾತ ಆವಿಷ್ಕಾರಗಳು

ಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟುಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು

ಗಿಜ್‌ಬಾಟ್‌

ಗಿಜ್‌ಬಾಟ್‌

ಕನ್ನಡ ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್.ಕಾಂ

Best Mobiles in India

English summary
Researchers Claim They Have Found Hell. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X