ಅಪಾರ್ಥ ತಿಳ್ಕೊಬೇಡಿ..ಭಾರತೀಯರಿಗೆ ಸ್ನ್ಯಾಪ್‌ಡೀಲ್ ಮನವಿ!! ಏಕೆ ಗೊತ್ತಾ?

Written By:

ಭಾರತದಂತಹ ಬಡದೇಶದಲ್ಲಿ ಸಾಮ್ರಾಜ್ಯ ವಿಸ್ತರಿಸಲು ನನಗೆ ಇಷ್ಟವಿಲ್ಲ ಎಂದು ಸ್ನ್ಯಾಪ್ಚ್ಯಾಟ್ ಆಪ್ ಸಿಇಒ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಲು ಹೋಗಿ ಹೆಚ್ಚು ಭಾರತೀಯರು ಎಡವಟ್ಟು ಮಾಡಿದ್ದಾರೆ.!! ಹೌದು, ಸ್ನ್ಯಾಪ್ಚ್ಯಾಟ್ ಬಹಿಷ್ಕರಿಸಲು ಹೋಗಿ ಖ್ಯಾತ ಅಂತರ್ಜಾಲ ಶಾಪಿಂಗ್ ಜಾಲತಾಣ ಸ್ನ್ಯಾಪ್ಡೀಲ್‌ಗೆ ಹೆಚ್ಚು ಜನರು ಬಹಿಷ್ಕಾರ ಹಾಕಿದ್ದಾರೆ.!!

ಸ್ನ್ಯಾಪ್ಚ್ಯಾಟ್ ಆಪ್ ಸಂಸ್ಥೆಯ ಸಿಇಒ ಇವಾನ್ ಸ್ಪೀಗೆಲ್ ಭಾರತದ ವಿರುದ್ಧ ನೀಡಿದ್ದ ವಿವಾದಾತ್ಮಕ ಹೇಳಿಕೆ ಸುದ್ದಿಯಾದ ಬೆನ್ನಲ್ಲೇ ಸ್ನ್ಯಾಪ್ಚ್ಯಾಟ್ ಬಹಿಷ್ಕರಿಸಿ ಎಂಬ ಕ್ಯಾಂಪೇನ್ ಭಾರತದಲ್ಲಿ ಆರಂಭವಾಗಿತ್ತು. ಇದಕ್ಕೆ ಪೂರಕವಾಗಿ ಜನರು ಸ್ಪಂದಿಸಿ ಸ್ನ್ಯಾಪ್ಚ್ಯಾಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಅಪಾರ್ಥ ತಿಳ್ಕೊಬೇಡಿ..ಭಾರತೀಯರಿಗೆ ಸ್ನ್ಯಾಪ್‌ಡೀಲ್ ಮನವಿ!! ಏಕೆ ಗೊತ್ತಾ?

ಓದಿರಿ: ಭಾರತ ಬಡದೇಶ ಎಂದ ಸ್ನ್ಯಾಪ್‌ಚಾಟ್‌ಗೆ ಭಾರತೀಯರು ನೀಡಿದ ಶಾಕ್ ಏನು ಗೊತ್ತಾ?

ಆದರೆ, ಸ್ನ್ಯಾಪ್ಚ್ಯಾಟ್ ವಿರುದ್ದ ಆಕ್ರೋಶ ವ್ಯಕ್ತಪಡಿಸುವ ಭರದಲ್ಲಿ ಕೆಲವರು ಸ್ನ್ಯಾಪ್‌ಡೀಲ್ ಆನ್‌ಲೈನ್ ಮಾರಾಟ ಸಂಸ್ಥೆಯನ್ನು ಬಹಿಷ್ಕರಿಸುವ ಮೂಲಕ ಎಡವಟ್ಟು ಮಾಡಿದ್ದಾರೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವ ಹಾಗೆ ಇದೀಗ ಸ್ನ್ಯಾಪ್‌ಡೀಲ್ ಸಮಸ್ಯೆ ಎದುರಿಸುತ್ತಿದೆ.!!

ಅಪಾರ್ಥ ತಿಳ್ಕೊಬೇಡಿ..ಭಾರತೀಯರಿಗೆ ಸ್ನ್ಯಾಪ್‌ಡೀಲ್ ಮನವಿ!! ಏಕೆ ಗೊತ್ತಾ?

ಓದಿರಿ: "ಫೇಸ್‌ಬುಕ್‌ ಡೈರೆಕ್ಟ್" ಆಯ್ಕೆ ಬಳಸಿದ್ದೀರಾ? ಏನಿದು ಹೊಸ ಆಯ್ಕೆ? ಉಪಯೋಗ ಹೇಗೆ?

ಈಗಾಗಲೇ ಲಕ್ಷಾಂತರ ಜನರು ಸ್ನ್ಯಾಪ್‌ಡೀಲ್ ಆಪ್‌ ಅನ್ನು ಅನ್‌ಇಸ್ಟಾಲ್ (ಡೀಲೀಟ್) ಮಾಡಿದ್ದು. ಸ್ನ್ಯಾಪ್‌ಡೀಲ್ ಸಂಸ್ಥೆಗೆ ದೊಡ್ಡ ತಲೆನೋವು ತಂದೊಡ್ಡಿದೆ.!! ಈ ಬಗ್ಗೆ ಸ್ನ್ಯಾಪ್‌ಡೀಲ್ ಮಾಹಿತಿ ನೀಡಿದ್ದು, ಜನರು ಸ್ನ್ಯಾಪ್‌ಡೀಲ್ ಬಗ್ಗೆ ಅಪಾರ್ಥ ತಿಳಿಯದಹಾಗೆ ಮನವಿ ಮಾಡಿದ್ದಾರೆ.!!

ಇನ್ನು ಈ ಹಿಂದೆ ಸ್ನ್ಯಾಪ್‌ಡೀಲ್ ರಾಯಭಾರಿಯಾಗಿದ್ದ ಅಮೀರ್ ಖಾನ್ ಅಸಹಿಷ್ಣುತೆ ಕುರಿತಂತೆ ಹೇಳಿಕೆ ನೀಡಿದ್ದಾಗಲೂಸ್ನ್ಯಾಪ್‌ಡೀಲ್ ಸಂಸ್ಥೆ ಭಾರಿ ವಿರೋಧ ಎದುರಿಸಿತ್ತು. ಹಾಗೆಯೇ, ಇದೀಗ ತನ್ನದಲ್ಲದ ತಪ್ಪಿಗೆ ಮತ್ತೆ ಸ್ನ್ಯಾಪ್‌ಡೀಲ್ ಶಿಕ್ಷೆ ಎದುರಿಸುವಂತಾಗಿದೆ.!!

English summary
Snapdeal is suffering amid the Snapchat controversy. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot