ಅಪಾಯಕಾರಿ ಇಂಟರ್‌ನೆಟ್‌ ಬಳಕೆ ಬಗ್ಗೆ ನಿಮಗೆಷ್ಟು ಗೊತ್ತು?..ಇಲ್ಲಿ ನೋಡಿ!!

ಮನಶಾಸ್ತ್ರಜ್ಞರು ಮತ್ತು ಸೈಬರ್ ಕಾನೂನ ತಜ್ಞರು ನೀಡಿರುವ ಒಂದು ರಿಪೋರ್ಟ್ ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ.!!

|

ನಿಮಗೆ ಗೊತ್ತಿರಬಹುದು ಇತ್ತೀಚಿಗಷ್ಟೆ ಅಪಾಯಕಾರಿ ಬ್ಲೂ ವೇಲ್ ಗೇಮ್‌ ಹುಚ್ಚಿಗೆ ಮುಂಬೈ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ.! ಈ ಸುದ್ದಿ ಇನ್ನೂ ಹಚ್ಚಹಸಿರಾಗಿರುವಾಗಲೇ ಇಂಟರ್‌ನೆಟ್‌ ಬಗ್ಗೆ ಮನಶಾಸ್ತ್ರಜ್ಞರು ಮತ್ತು ಸೈಬರ್ ಕಾನೂನ ತಜ್ಞರು ನೀಡಿರುವ ಒಂದು ರಿಪೋರ್ಟ್ ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ.!!

ಹೌದು, ಇಂಟರ್‌ನೆಟ್‌ನಿಂದ ಪ್ರಯೋಜನ ಎಷ್ಟಿದೆಯೋ ಅಷ್ಟೇ ದುಷ್ಪರಿಣಾಮವೂ ಇದೆ.!! ಇಂದು ಜನರು ಏನೇ ಮಾಹಿತಿ ಬೇಕಾದರೂ ಇಂಟರ್‌ನೆಟ್ ಮೊರೆ ಹೋಗುತ್ತಾರೆ. ಯಾವುದೇ ವಿಷಯವನ್ನು ಇಂಟರ್‌ನೆಟ್ ಮೂಲಕವೇ ಪಡೆಯಲು ಹೋಗಿ ಇಂಟರ್‌ನೆಟ್ ಪ್ರಪಾತಕ್ಕೆ ಬೀಳುವ ಸಾಧ್ಯತೆಯನ್ನು ಸಹ ಅವರು ಮರೆತಿರುತ್ತಾರೆ ಎಂದು ತಜ್ಞರು ಹೇಳಿದ್ದಾರೆ.!!

ಇಂಟರ್‌ನೆಟ್ ನಲ್ಲಿ ಆತ್ಮಹತ್ಯೆಗೆ ಪ್ರಚೋದಿಸುವ ತಾಣಗಳು ಅತ್ಯಂತ ಅಪಾಯಕಾರಿಯಾಗಿವೆ. ಇನ್ನು ಸರ್ಕಾರಕ್ಕೆ ಅಂತರ್ಜಾಲದ ಬಗ್ಗೆ ನಿಗಾವಹಿಸುವುದು ಕೂಡ ಕಷ್ಟಕರ ಕೆಲಸವಾಗಿರುವುದರಿಂದ ನಾವೇ ಇಂಟರ್‌ನೆಟ್‌ ಬಗ್ಗೆ ಸ್ವನಿಯಂತ್ರಣ ವಹಿಸುವುದು ಸೂಕ್ತ.!! ಹಾಗಾಗಿ, ಇಂಟರ್‌ನೆಟ್‌ ಬಗ್ಗೆ ನಾವು ತಿಳಿಯಬೇಕಾದ ಕೆಲವು ಮಹತ್ವದ ಮಾಹಿತಿಗಳು ಈ ಕೆಳಗಿನಂತಿದ್ದು, ಅವುಗಳು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಅಂತರ್ಜಾಲದ ನಿರ್ಬಂಧ ಸಾಧ್ಯವಿಲ್ಲ.!!

ಅಂತರ್ಜಾಲದ ನಿರ್ಬಂಧ ಸಾಧ್ಯವಿಲ್ಲ.!!

ಯಾವುದೇ ಕಾರಣಕ್ಕೂ ಅಂತರ್ಜಾಲವನ್ನು ನಿರ್ಬಂಧಿಸಲು ಸಾಧ್ಯವೇ ಇಲ್ಲ.!! ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಇಂಟರ್‌ನೆಟ್ ಅನ್ನು ಒಳ್ಳೆಯ ಕಾರಣಕ್ಕಾಗಿ ಬಳಸಬೇಕೆ ಹರತು ಅದರ ದುಷ್ಪರಿಣಾಮಗಳನ್ನು ನಾವೆ ನಿಗ್ರಹಿಸಿಕೊಳ್ಳಬೇಕು.!! ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.!!

ಇದು ಗ್ರೇಟ್ ಇಂಡಿಯನ್‌ ಅಮೇಜಾನ್ ಸೇಲ್!!..ಏನೆಲ್ಲಾ ಆಫರ್?
ಪರ್ಯಾಯ ಯಾಂತ್ರಿಕ ವ್ಯವಸ್ಥೆಯಿಲ್ಲ!!

ಪರ್ಯಾಯ ಯಾಂತ್ರಿಕ ವ್ಯವಸ್ಥೆಯಿಲ್ಲ!!

ಡೀಪ್‌ವೆಬ್ ನಂತಹ ಕರಾಳ ತಾಣಗಳು ಅಪಾಯಕಾರಿ ಎಂದು ಅನಿಸದಿದ್ದರೂ ಕೂಡ ಮನುಷ್ಯನ ಮನಸ್ಸಿನ ಮೇಲೆ ಉಂಟು ಮಾಡುವ ಪರಿಣಾಮ ಮಾತ್ರ ವ್ಯತಿರಿಕ್ತವಾಗಿರುತ್ತವೆ. ಆದರೆ, ಅಂತಹ ತಾಣಗಳನ್ನು ತೆಗೆದುಹಾಕುವ ಯಾವುದೇ ಯಾಂತ್ರಿಕ ವ್ಯವಸ್ಥೆಯಿಲ್ಲ ಎಂದು ಸೈಬರ್ ಕಾನೂನು ತಜ್ಞ ಪವನ್ ದುಗ್ಗಲ್ ಅವರು ಹೇಳುತ್ತಾರೆ.

ಅಂತರ್ಜಾಲ VS ವಾಸ್ತವ!!

ಅಂತರ್ಜಾಲ VS ವಾಸ್ತವ!!

ಅಂತರ್ಜಾಲದ ಬಳಕೆ ದುಷ್ಪರಿಣಾಮಗಲು ಮಕ್ಕಳಿಗೆ ಹೆಚ್ಚು ತಟ್ಟುತ್ತವೆ.!! ವಾಸ್ತವ ಪ್ರಪಂಚಕ್ಕೆ ತೆರೆದುಕೊಳ್ಳದ ಪುಟ್ಟ ಮನಸ್ಸುಗಳು ಅಂತರ್ಜಾಲದೆಡೆಗೆ ಮನಸ್ಸು ಮಾಡಿ ಅದು ಆಡಿಸಿದಂತೆ ಆಡುತ್ತಾರೆ.!! ಇದರಿಂದಲೇ ಅವರು ಮಾನಸಿಕ ತೂಲಾಟ ಅನುಭವಿಸುತ್ತಾರೆ ಎಂದು ಮನಶಾಸ್ತ್ರಜ್ಞರು ಹೇಳಿದ್ದಾರೆ.!!

ಚಟವಾಗಬಹುದು ಇಂಟರ್ನೆಟ್!!

ಚಟವಾಗಬಹುದು ಇಂಟರ್ನೆಟ್!!

253 ಮಿಲಿಯನ್ ಜನರು ಇಂಟರ್ನೆಟ್ ಉಪಯೋಗ ಉಪಯೋಗಿಸುತ್ತಿದ್ದಾರೆ ಎನ್ನುವ ಅಂದಾಜಿದೆ. ಅವರಲ್ಲಿ ನಾಲ್ಕು ಮಿಲಿಯನ್ ಜನರು ಇಂಟರ್ನೆಟ್ ಚಟ ಅಂಟಿಸಿಕೊಂಡಿದ್ದು, ಅವರೆಲ್ಲ 18ರ ಕೆಳಗಿನವರು. ಒಂದು ಅಧ್ಯಯನದ ಪ್ರಕಾರ ಶೇಕಡಾ 42ರಷ್ಟು ಯುವಜನತೆ ಇಂಟರ್ನೆಟ್ ಚಟಕ್ಕೆ ಬಲಿಯಾಗುತ್ತಿದ್ದಾರೆ.

ಬಿರಿಯಾನಿ VS ಬಾಂಬ್!!

ಬಿರಿಯಾನಿ VS ಬಾಂಬ್!!

ಇಂಟರ್‌ನೆಟ್ ಮೂಲಕ ಕಲಿಯಲು ತಿಳಿದುಕೊಳ್ಳಲು ಹಲವಾರು ವಿಷಯಗಳಿರುತ್ತವೆ.!! ಒಂದು ಒಳ್ಳೆಯ ರೆಸಿಪಿ ಇರುವ ಬಿರಿಯಾನಿ ಹೇಗೆ ಮಾಡಬಹುದು ಎಂದು ಇಂಟರ್‌ನೆಟ್‌ನಲ್ಲಿ ತಿಳಿಯಬಹುದಾದರೆ ಒಂದು ಬಾಂಬ್ ಅನ್ನು ಹೇಗೆ ತಯಾರಿಸಬಹುದು ಎಂದು ಸಹ ತಿಳಿಯಬಹುದು.! ಹಾಗಾಗಿ, ಇಂಟರ್‌ನೆಟ್ ಬಳಕೆ ಮಾಡುವುದು ನಿಮ್ಮ ಮೇಲಿದೆ.!!

<strong>ದೇಶದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ರಸ್ತೆಗಳಲ್ಲಿ 'ಸ್ಮಾರ್ಟ್​ ಪಾರ್ಕಿಂಗ್'​ ಶುರು!!</strong>ದೇಶದಲ್ಲೇ ಪ್ರಪ್ರಥಮ ಬಾರಿಗೆ ಬೆಂಗಳೂರು ರಸ್ತೆಗಳಲ್ಲಿ 'ಸ್ಮಾರ್ಟ್​ ಪಾರ್ಕಿಂಗ್'​ ಶುರು!!

Best Mobiles in India

English summary
On the internet, one can learn to make biriyani or a bomb. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X