ಭಾರತ ಮಿಲಿಟರಿಯ ಪವರ್‌ಫುಲ್‌ ಹೈಟೆಕ್‌ ವೆಪನ್‌ಗಳು ಯಾವುವು ಗೊತ್ತೇ?

Written By:

ಯಾವುದೇ ದೇಶ ತನ್ನ ರಕ್ಷಣೆ ವಿಷಯದಲ್ಲಿ ಮೊದಲ ಆದ್ಯತೆ ಕೊಡಬೇಕಿರುವುದು ಆರ್ಥಿಕ ಸ್ಥಿತಿಯ ಗುಣಮಟ್ಟಕ್ಕೆ. ನಂತರದಲ್ಲಿ ದೇಶದ ಮಿಲಿಟರಿ ವ್ಯವಸ್ಥೆಗೆ. ಇತ್ತೀಚಿನ ದಿನಗಳಲ್ಲಿ ಭಾರತ ಮಾತ್ರವಲ್ಲದೇ ಎಲ್ಲಾ ದೇಶಗಳು ಸಹ ತಮ್ಮ ತಮ್ಮ ಮಿಲಿಟರಿ ವ್ಯವಸ್ಥೆಗೆ ಆದ್ಯತೆ ನೀಡುತ್ತಿರುವುದು ಹೊಸ ವಿಷಯವೇನಲ್ಲ. ಅದರಲ್ಲೂ ಉತ್ತರ ಕೋರಿಯಾದಂತಹ ಅಧ್ಯಕ್ಷರು ಹೆಚ್ಚಾದರೆ ಇತರ ದೇಶಗಳಿಗೆ ಸಮಸ್ಯೆ ತಪ್ಪಿದ್ದಲ್ಲ. ಭಾರತ ಇಂದು ಎಷ್ಟೇ ದೇಶಗಳೊಂದಿಗೆ ಸಹ ಉತ್ತಮ ಬಾಂಧವ್ಯ ಹೊಂದಿದ್ದರು ಸಹ ಬೃಹತ್‌ ಪ್ರಮಾಣದಲ್ಲಿ ಅತ್ಯಧಿಕ ಸಾಮರ್ಥ್ಯವುಳ್ಳ ಮಿಲಿಟರಿ ಹೈಟೆಕ್‌ ವೆಪನ್‌ಗಳನ್ನು ಅಭಿವೃದ್ದಿ ಪಡಿಸಿಕೊಳ್ಳುವಲ್ಲಿ ನಿರತವಾಗಿದೆ. ಅಲ್ಲದೇ ತನ್ನಷ್ಟಕ್ಕೆ ತಾನೇ ಮಿಲಿಟರಿ ವ್ಯವಸ್ಥೆಯಲ್ಲಿ ಅಪ್‌ಡೇಟ್‌ ಆಗುತ್ತಿದೆ.

ತಂತ್ರಜ್ಞಾನ ಆಧಾರಿತ ವೆಪನ್‌ಗಳು ಇತರ ದೇಶಗಳೊಂದಿಗೆ ಎದುರು ನಿಲ್ಲಲು ಅತ್ಯಧಿಕ ಮಟ್ಟದಲ್ಲಿ ಸಹಾಯವಾಗುತ್ತದೆ. ಕಳೆದ ಕೆಲವು ದಶಕಗಳ ಹಿಂದೆ ಭಾರತ ತನ್ನ ರಕ್ಷಣೆಗೆ ಇತರ ದೇಶಗಳ ಪೂರೈಕೆಯನ್ನು ಅವಲಂಭಿಸಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭಾರತ ತನ್ನದೇ ಆದ ಮಿಲಿಟರಿ ಹೈಟೆಕ್‌ ವೆಪನ್‌ಗಳ ಅಭಿವೃದ್ದಿಯಲ್ಲಿ ತೊಡಗಿದೆ. ಅಂದಹಾಗೆ 2016 ಇಸವಿಗೆ ಹೊಂದಿಕೊಂಡಂತೆ ಭಾರತ ಟಾಪ್‌ 10 ಹೈಟೆಕ್ ವೆಪನ್‌ಗಳನ್ನು ಹೊಂದಿದೆ. ಭಾರತ ಹೊಂದಿರುವ ಹೈಟೆಕ್‌ ವೆಪನ್‌ಗಳು ಯಾವುವು ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸು-30Mki-ದಿ ಫೈಟರ್‌ (Su-30Mki-The Fighter)

ಸು-30Mki-ದಿ ಫೈಟರ್‌ (Su-30Mki-The Fighter)

ಸು-30Mki-ದಿ ಫೈಟರ್‌ (Su-30Mki-The Fighter)

'ಸು-30Mki-ದಿ ಫೈಟರ್‌' ಅತ್ಯುತ್ತಮ ವಿಮಾನವಾಗಿದ್ದು ವಾಯುಪಡೆಯಲ್ಲಿ ತನ್ನ ಸೇವೆ ಸಲ್ಲಿಸುತ್ತಿದೆ. ಇದು ಎಲ್ಲಾ ವಾತಾವರಣದಲ್ಲೂ ದೀರ್ಘ ಕಾಲ ದಾಳಿಗಾಗಿ ರಷ್ಯಾದ ಸುಖೊಯ್‌ ರಿಂದ ಅಭಿವೃದ್ದಿಗೊಂಡಿದೆ. ಅಲ್ಲದೇ ಎಚ್‌ಎಎಲ್‌ನಿಂದ ಲೈಸನ್ಸ್‌ ಆಧಾರದಿಂದ ಅಭಿವೃದ್ದಿ ಪಡಿಸಲಾಗಿದೆ. ಪ್ರಸ್ತುತ ಭಾರತ ವಾಯುಪಡೆ 200 ಕ್ಕೂ ಹೆಚ್ಚು 'ಸು-30Mki-ದಿ ಫೈಟರ್‌' ವಿಮಾನಗಳನ್ನು ಹೊಂದಿದೆ.

ಬ್ರಹ್ಮೊಸ್ ಮಿಸ್ಸೆಲ್‌-ದ ಗೇಮ್‌ ಫಿನಿಷರ್‌ (Brahmos missile-The Game Finisher)

ಬ್ರಹ್ಮೊಸ್ ಮಿಸ್ಸೆಲ್‌-ದ ಗೇಮ್‌ ಫಿನಿಷರ್‌ (Brahmos missile-The Game Finisher)

ಬ್ರಹ್ಮೊಸ್ ಮಿಸ್ಸೆಲ್‌-ದ ಗೇಮ್‌ ಫಿನಿಷರ್‌ (Brahmos missile-The Game Finisher)

ಬ್ರಹ್ಮೊಸ್‌ ಏರಿಯೋಸ್ಪೇಸ್‌ ಪ್ರೈವೇಟ್‌ ಲಿಮಿಟೆಡ್‌ನಿಂದ ಅಭಿವೃಧ್ದಿಗೊಂಡ "ಬ್ರಹ್ಮೊಸ್ ಮಿಸ್ಸೆಲ್‌-ದ ಗೇಮ್‌ ಫಿನಿಷರ್‌" ಸೂಪರ್‌ಸಾನಿಕ್‌ ರಾಂಜೆಟ್‌ ವೇಗ ಕ್ಲಿಪಣಿ. ಭಾರತದ ಮಿಲಿಟರಿ ಪಡೆಯಲ್ಲಿ ಅತಿವೇಗದ ಯುದ್ಧ ಕ್ಲಿಪಿಣಿ ಇದಾಗಿದೆ.

ಅರ್ಜುನ್‌ ಮಾರ್ಕ್‌-IIನೇ ಯುದ್ಧ ಟ್ಯಾಂಕ್‌ (Arjun Mark-II Main Battle Tank)

ಅರ್ಜುನ್‌ ಮಾರ್ಕ್‌-IIನೇ ಯುದ್ಧ ಟ್ಯಾಂಕ್‌ (Arjun Mark-II Main Battle Tank)

ಅರ್ಜುನ್‌ ಮಾರ್ಕ್‌-IIನೇ ಯುದ್ಧ ಟ್ಯಾಂಕ್‌ (Arjun Mark-II Main Battle Tank)

ಅರ್ಜುನ್‌ ಮಾರ್ಕ್‌ 2 ಮಾರಣಾಂತಿಕ ಯುದ್ಧ ವೆಪನ್ ಆಗಿದ್ದು, ಮೂರನೇ ತಲೆಮಾರಿನ ಆತ್ಯಾಧುನಿಕ ಪ್ರಧಾನ ಯುದ್ಧ ಟ್ಯಾಂಕ್‌. ಅಲ್ಲದೇ ಇದು ಮುಖ್ಯ ಅರ್ಜುನ್‌ ಯುದ್ಧ ಟ್ಯಾಂಕ್‌ನ ಅಪ್‌ಗ್ರೇಡ್‌ ವರ್ಸನ್‌. ಸುರಕ್ಷತೆ ಜೊತೆಗೆ ಫೈಯರ್‌ ಪವರ್‌ ಮತ್ತು ಮೊಬಿಲಿಟಿ ಪವರ್‌ ಹೊಂದಿದೆ. 13 ಪ್ರಮುಖ ಸುಧಾರಣೆಗಳೊಂದಿಗೆ 93 ನವೀಕರಣಗಳನ್ನು ಪಡೆದಿದೆ.

ಐಎನ್ಎಸ್ ವಿಕ್ರಮಾದಿತ್ಯ- ಫ್ಲೋಟಿಂಗ್ ಏರ್‌ಫೀಲ್ಡ್ ಮತ್ತು ಮಿನಿ ಸಿಟಿ

ಐಎನ್ಎಸ್ ವಿಕ್ರಮಾದಿತ್ಯ- ಫ್ಲೋಟಿಂಗ್ ಏರ್‌ಫೀಲ್ಡ್ ಮತ್ತು ಮಿನಿ ಸಿಟಿ

(INS Vikramaditya-Floating airfield and Mini city)

ಐಎನ್ಎಸ್ ವಿಕ್ರಮಾದಿತ್ಯ ಭಾರತ ಸಾಗರಗಳ ರಾಜನಿದ್ದಂತೆ. ಭಾರತದ ಮಿಲಿಟರಿ ಪಡೆಯಲ್ಲಿ ಯುದ್ಧ ವಾಹನಗಳನ್ನು ಹೊಯ್ಯುವ ಅತ್ಯುತ್ತಮ ಫ್ಲೋಟಿಂಗ್ ಏರ್‌ಫೀಲ್ಡ್.

 ಐಎನ್ಎಸ್ ಚಕ್ರ-ಶಾರ್ಕ್ ಸ್ಟೀಲ್‌

ಐಎನ್ಎಸ್ ಚಕ್ರ-ಶಾರ್ಕ್ ಸ್ಟೀಲ್‌

INS Chakra-Shark made of Steel

ಐಎನ್ಎಸ್ ಚಕ್ರವನ್ನು ರಷ್ಯಾ ತಯಾರಿಸಿದೆ. ಐಎನ್‌ಎಸ್‌ ಚಕ್ರ ಭಾರತದ ಜಲಾಂತರ್ಗಾಮಿ ಸಂಹಾರಿ ಬೇಟೆಗಾರ ಮತ್ತು ನ್ಯೂಕ್ಲಿಯಾರ್‌ ತಿರುಗುಣಿ. ಐಎನ್‌ಎಸ್‌ ಚಕ್ರ ಸಾಂಪ್ರಾದಾಯಿಕ ಜಲಾಂತರ್ಗಾಮಿಗಿಂತ ಭಿನ್ನವಾಗಿದ್ದು ಆಗಾಗ ತನ್ನ ಬ್ಯಾಟರಿಗಳನ್ನು ಚಾರ್ಜ್‌ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಇದು 24 ಗಂಟೆಗಳಿಗಿಂತ ಹೆಚ್ಚು ಕಾಲ ನೀರಿನೊಳಗೆ ಇರುತ್ತದೆ. ಭಾರತದ ಇದನ್ನು ರಷ್ಯಾದಿಂದ 10 ವರ್ಷಗಳ ಕಾಲ ಗುತ್ತಿಗೆಗೆ ತೆಗೆದುಕೊಂಡಿದ್ದು ತನ್ನ ನೌಕಾಪಡೆ ಸಿಬ್ಬಂದಿಗೆ ತರಬೇತಿ ನೀಡಲು ಸಹ ಬಳಸುತ್ತಿದೆ ಮತ್ತು ಪರಮಾಣು ಚಾಲಿತ ಜಲಾಂತರ್ಗಾಮಿಯಾಗಿದೆ.

ಅಗ್ನಿ ವಿ- ದಿ ಕಿಲ್ಲರ್ ಮಿಸೈಲ್‌

ಅಗ್ನಿ ವಿ- ದಿ ಕಿಲ್ಲರ್ ಮಿಸೈಲ್‌

Agni V-The killer Missile

ಅಗ್ನಿ ವಿ ಖಂಡಾಂತರ ಕಿಲ್ಲರ್‌ ಕ್ಲಿಪಣಿಯಾಗಿದ್ದು, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ದಿಪಡಿಸಿದೆ. ಇದರ ಗರಿಷ್ಟ ಕಾರ್ಯ ವ್ಯಾಪ್ತಿ 8000 km. ಅಗ್ನಿ ವಿ 1000kg ಪರಮಾಣು ವಾರ್‌ಹೆಡ್‌ ಅನ್ನು ಮ್ಯಾಕ್‌ ವೇಗ 24ರಲ್ಲಿ ಹೋಗಬಲ್ಲದು.

ಫಾಲ್ಕಾನ್‌ ಅವಾಕ್ಸ್‌

ಫಾಲ್ಕಾನ್‌ ಅವಾಕ್ಸ್‌

Phalcon Awacs

ಭಾರತ ತಡವಾಗಿ ವಾಯುಗಾಮಿಗೆ ಕಾಲಿರಿಸಿದೆ. ಅಂದಹಾಗೆ ವಾಯುಗಾಮಿ ಅರ್ಲಿ ವಾರ್ನಿಂಗ್ ಮತ್ತು ನಿಯಂತ್ರಣ ವ್ಯವಸ್ಥೆ ಅಡವಾಗಿ ಕಾಲಿರಿಸಿದರು ಸಹ ಆತ್ಯಾಧುನಿಕತೆಯೊಂದಿಗೆ ಅಪ್ಪಳಿಸಿ ಪ್ರಪಂಚದಲ್ಲೇ ಅವಾಕ್ಸ್ ಅತ್ಯುತ್ತಮ ಎನಿಸಿದೆ.

 ಐಎನ್‌ಎಸ್‌ ವಿಕ್ರಾಂತ್‌ ಅನ್‌ಡಾಕ್ಡ್

ಐಎನ್‌ಎಸ್‌ ವಿಕ್ರಾಂತ್‌ ಅನ್‌ಡಾಕ್ಡ್

INS Vikrant Undocked

ಐಎನ್‌ಎಸ್‌ ವಿಕ್ರಾಂತ್‌ ವಿಮಾನ ಕ್ಯಾರಿಯರ್‌ ಅನ್ನು ಮೊದಲ ಬಾರಿಗೆ ಭಾರತದಲ್ಲಿ ತಯಾರಿಸಲಾಯಿತು. ಅಲ್ಲದೇ ಮೊದಲ ವಿಕ್ರಾಂತ್‌ ‌ ಕ್ಲಾಸ್ ವಿಮಾನ ಕ್ಯಾರಿಯರ್ ಕೊಚ್ಚಿನ್‌ನಲ್ಲಿ ಹಡುಗುತಾಣದಲ್ಲಿ ಭಾರತದ ನೌಕಾಪಡೆಗಾಗಿ ಅಭಿವೃದ್ದಿಪಡಿಸಲಾಯಿತು. ಇದು ಯುದ್ಧ ವಿಮಾನಗಳನ್ನು ಸಾಗಿಸುವ ಸಲುವಾಗಿ ಅಭಿವೃದ್ದಿಗೊಂಡದ್ದರಿಂದ 262 ಮೀಟರ್‌(860ft) ಉದ್ದ, 60 ಮೀಟರ್(200ft) ಅಗಲ ಹೊಂದಿದೆ. ತಾಂತ್ರಿಕವಾಗಿ ಹೆಚ್ಚು ಸೌಲಭ್ಯಯುತವಾಗಿದೆ.

ಬರಾಕ್‌ 8- ಶೀಲ್ಡ್‌ಗಾಗಿ ಒಳಬರುವ ಕ್ಷಿಪಣಿಗಳು

ಬರಾಕ್‌ 8- ಶೀಲ್ಡ್‌ಗಾಗಿ ಒಳಬರುವ ಕ್ಷಿಪಣಿಗಳು

Barak 8-Shield for Incomming missiles

ಭಾರತದ ನೌಕಾಪಡೆಯ ಪವರ್‌ಫುಲ್‌ ವೆಪನ್‌ಗಳಲ್ಲಿ ಬರಾಕ್‌ 8 ಉತ್ತಮ ಮೈಲಿಗಲ್ಲು. ಇದು ದೂರವ್ಯಾಪ್ತಿಯ ವಿರೋಧಿ ಗಾಳಿ ಮತ್ತು ವಿರೋಧಿ ಕ್ಷಿಪಣಿಯಾಗಿದೆ. ಇದನ್ನು ದೂರವ್ಯಾಪ್ತಿಯ ರಕ್ಷಣಾ ನೌಕಾಪಡೆ ವ್ಯವಸ್ಥೆಯು ಇಸ್ರೇಲ್‌ ಏರಿಯೋಸ್ಪೇಸ್‌ ಜೊತೆ ಸಂಘಟಿತವಾಗಿ ಅಭಿವೃದ್ದಿಗೊಂಡಿದೆ. ಬರಾಕ್‌ 8 ಯುದ್ಧ ಕ್ಷಿಪಣಿಯು ಭಾರತದ ನೌಕಾಪಡೆಯಲ್ಲಿ 2013 ರಿಂದ ಸೇವೆ ಆರಂಭಿಸಿದೆ.

T-90s Bheeshma-The destroyer

T-90s Bheeshma-The destroyer

T-90s Bheeshma-The destroyer

"T-90s Bheeshma", ವಿನಾಶಕ ಎಂದೇ ಹೆಸರು ಪಡೆದಿದೆ. ಅಂದಹಾಗೆ ಇದು ರಷ್ಯಾದ ಮೂರನೇ ತಲೆಮಾರಿನ ಪ್ರಧಾನ ಯುದ್ಧ ಟ್ಯಾಂಕ್‌. ಅಲ್ಲದೇ ಇದು T-72'ನ ಹೊಸ ನವೀಕರಣವು ಸಹ. ಇತ್ತೀಚೆಗೆ 'ಟಿ' ಸೀರೀಸ್‌ನಲ್ಲಿ ಫೈಯರ್‌ ಪವರ್‌, ಮೊಬಿಲಿಟಿ ಮತ್ತು ಸುರಕ್ಷತೆ ಸಾಮರ್ಥವನ್ನು ಹೆಚ್ಚಿಸಲಾಗಿದೆ. "T-90s Bheeshma" ರಷ್ಯಾದ ಮಿಲಿಟರಿಯಲ್ಲಿ 1992ರಲ್ಲಿ ಸೇವೆ ಆರಂಭಿಸಿತು. ಭಾರತ ಮಿಲಿಟರಿ 2001 ರಲ್ಲಿ 310 T90S ಟ್ಯಾಂಕ್‌ ಒಪ್ಪಂದಕ್ಕೆ ಸಹಿ ಹಾಕಿ ಇದರ ಸೇವೆಯನ್ನು ಪಡೆಯಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
TOP 10 Most Powerful Hightech Weapons In INDIAN ARMED FORCES 2016. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot