ಇಲ್ಲಿದೆ 2017ರಲ್ಲಿ ನಡೆದ ಟಾಪ್ 10 ಸ್ವಾಧೀನಪಡಿಸಿಕೊಳ್ಳುವಿಕೆಗಳ ಪಟ್ಟಿ

By Tejaswini P G

  ವ್ಯವಹಾರ ವಿಸ್ತರಿಸುವ ದೂರದೃಶ್ಟಿ ಹೊಂದಿರುವ ಎಲ್ಲಾ ಕಂಪೆನಿಗಳು ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ವಿಲೀನಗಳ ಕುರಿತು ಚಿಂತನೆ ನಡೆಸಿಯೇ ಇರುತ್ತದೆ. ಕಳೆದ ವರ್ಷಗಳಂತೆ ಈ ವರ್ಷವೂ ಟೆಕ್ ಉದ್ಯಮದಲ್ಲಿ ಹಲವು ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ವಿಲೀನಗಳು ನಡೆದಿವೆ.

  ಇಲ್ಲಿದೆ 2017ರಲ್ಲಿ ನಡೆದ ಟಾಪ್ 10 ಸ್ವಾಧೀನಪಡಿಸಿಕೊಳ್ಳುವಿಕೆಗಳ ಪಟ್ಟಿ

  ಹಲವು ತಾಂತ್ರಿಕ ಕಂಪೆನಿಗಳು ಖಾಸಗಿಕೀರಣಗೊಂಡರೆ ಇನ್ನು ಕೆಲವು ಹಲವು ವಿಭಾಗಗಳನ್ನು ಒಂದಾಗಿಸಿ ಹೊಸ ಸೇವೆಗಳನ್ನು ನೀಡುತ್ತಾ ಹೊಸ ಮಾರುಕಟ್ಟೆಗೆ ಲಗ್ಗೆಯಿಟ್ಟವು. ಆಪಲ್, ಗೂಗಲ್, ಸಿಸ್ಕೋ, HPE, ಇಂಟೆಲ್, ಸಿಎ ಟೆಕ್ನಾಲಜೀಸ್ ಮೊದಲಾದ ಹಲವು ಸಂಸ್ಥೆಗಳು ಎಕ್ವಿಸಿಶನ್ ಅಥವಾ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಈ ವರ್ಷ ಹೆಚ್ಚು ಸಕ್ರಿಯವಾಗಿ ಭಾಗವಹಿಸುತ್ತಾ ಮುಂಚೂಣಿಯಲ್ಲಿದೆ.

  ಇದರ ಫಲವಾಗಿ ನಾವು ಭವಿಷ್ಯದಲ್ಲಿ ಹಲವು ಹೊಸ ಸರ್ವೀಸ್, ಪ್ರಾಡಕ್ಟ್ ಮತ್ತು ಕೆಪೆಬಲಿಟಿ ಗಳನ್ನು ಕಾಣಬಹುದಾಗಿದೆ.ಈ ಎಲ್ಲಾ ಕಂಪೆನಿಗಳು ಐಒಟಿ, ವಿಆರ್,ಎಐ, ಕ್ಲೌಡ್ ಮೊದಲಾದ ಆಧುನಿಕ ತಂತ್ರಜ್ಞಾನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

  ಈ ಲೇಖನದಲ್ಲಿ ಈ ವರ್ಷ ನಡೆದ ಕೆಲವು ಮಹತ್ವದ ಜಾಗತಿಕ ಟೆಕ್ ಸಂಸ್ಥೆಗಳ ವಿಲೀನ ಮತ್ತು ಸ್ವಾಧೀನಪಡಿಸಿಕೊಳ್ಳುವಿಕೆಗಳನ್ನು ಸಂಪಾದಿಸಿದ್ದೇವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನೊಮ್ಮೆ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  HPE ಸ್ವಾಧೀನದಲ್ಲಿ ಸಿಂಪ್ಲಿವಿಟಿ ಮತ್ತು ನಿಂಬಲ್ ಸ್ಟೋರೇಜ್

  HPE ಸಂಸ್ಥೆಯು $650 ಮಿಲಿಯನ್ ನ ಡೀಲ್ ನಲ್ಲಿ ಸಿಂಪ್ಲಿವಿಟಿ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದೆ. ತದನಂತರ HPE ಹಲವು ಹೊಸ ಪ್ರಾಡಕ್ಟ್ಗಳನ್ನು ಹೊರ ತಂದಿದೆ.DL380 ಸರ್ವರ್ಗಳ ಸಂದರ್ಭದಲ್ಲಿ HPE ಸಿಂಪ್ಲಿವಿಟಿ ಆಮ್ನಿ ಸ್ಟ್ಯಾಕ್ ಸಾಫ್ಟ್ವೇರ್ ನೊಂದಿಗೆ ಕೈಜೋಡಿಸುವ ಮಾತು ಕೇಳಿಬಂದಿತ್ತು.

  HPE ಸಿಂಪ್ಲಿವಿಟಿಯನ್ನು ಜನವರಿ 2017ರಲ್ಲಿ ತನ್ನ ಸ್ವಾಧೀನಕ್ಕೆ ಪಡೆದರೆ, ಮಾರ್ಚ್ ನಲ್ಲಿ $1.09 ಬಿಲಿಯನ್ ವೆಚ್ಚದಲ್ಲಿ ನಿಂಬಲ್ ಸ್ಟೋರೇಜ್ ಅನ್ನು ಸ್ವಾಧೀನ ಪಡಿಸಿಕೊಂಡಿತು. ಈಗಾಗಲೇ ಬೆಳೆಯುತ್ತಿರುವ ತನ್ನ ಸ್ಟೋರೇಜ್ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಈ ಹೆಜ್ಜೆ ಇಟ್ಟಿದೆ. HPE ನ ಸಿಇಒ ಆದ ಮೆಗ್ ವಿಟ್ಮ್ಯಾನ್ ತಮ್ಮ ವ್ಯವಹಾರಗಳನ್ನು ಪುನರ್ರಚನೆ ಮಾಡುವುದರ ಜೊತೆಗೆ ಸ್ಟೋರೇಜ್ ಸರ್ವೀಸಸ್ ನತ್ತವೂ ಗಮನ ಹರಿಸುತ್ತಿದ್ದಾರೆ.

  ಸಿಸ್ಕೋ ಸ್ವಾಧೀನದಲ್ಲಿ ಆಪ್ಡೈನಾಮಿಕ್ಸ್

  ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಎಪ್ಲಿಕೇಶನ್ ಎನಲಿಟಿಕ್ಸ್ ಸಂಸ್ಥೆಯಾದ ಆಪ್ಡೈನಾಮಿಕ್ಸ್ ಅನ್ನು ಸಿಸ್ಕೋ ಸಂಸ್ಥೆಯು $3.7 ಬಿಲಿಯನ್ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿದೆ. ಎಪ್ಲಿಕೇಶನ್ಗಳ ಕಾರ್ಯಕ್ಷಮತೆಯನ್ನು ಗಮನಿಸುವುದಲ್ಲದೆ ನಮ್ಮ ಗಮನದ ಅವಶ್ಯಕತೆ ಇರುವ ತೊಂದರೆಗಳನ್ನು ಗುರುತಿಸುವ ಸಾಮರ್ಥ್ಯವುಳ್ಳ ಸಾಫ್ಟ್ವೇರ್ ಅನ್ನು ಆಪ್ಡೈನಾಮಿಕ್ಸ್ ತಯಾರಿಸುತ್ತದೆ. ಆಪ್ಡೈನಾಮಿಕ್ಸ್ IPO ಫೈಲ್ ಮಾಡುವ ಮೊದಲು ಈ ಒಪ್ಪಂದದ ಕುರಿತು ಮಾತುಕತೆ ಪ್ರಾರಂಭವಾಗಿತ್ತಾದರೂ ಮಾರ್ಚ್ ನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.

  ಗೂಗಲ್ ಸ್ವಾಧೀನದಲ್ಲಿ ಕ್ಯಾಗಲ್

  ಡೇಟಾ ವಿಜ್ಞಾನಿಗಳ ಆನ್ಲೈನ್ ಸಮುದಾಯವಾದ ಕ್ಯಾಗಲ್ ಸಂಸ್ಥೆಯನ್ನು ಗೂಗಲ್ ಮಾರ್ಚ್ ನಲ್ಲಿ ಸ್ವಾಧೀನಪಡಿಸಿಕೊಂಡಿದೆ. ಡೇಟಾ ವಿಜ್ಞಾನ ಮತ್ತು ಮೆಶೀನ್ ಲರ್ನಿಂಗ್ ಸ್ಪರ್ಧೆಗಳನ್ನು ಆಯೋಜಿಸುವದಕ್ಕೆ ಕ್ಯಾಗಲ್ ಸಂಸ್ಥೆ ಹೆಸರುವಾಸಿಯಾಗಿದೆ.ತಮ್ಮ ಕೃತಕ ಬುದ್ಧಿಮತ್ತೆ ಮತ್ತು ಮೆಶೀನ್ ಲರ್ನಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಗೂಗಲ್ ಕ್ಯಾಗಲ್ ಅನ್ನು ವಶಪಡಿಸಿಕೊಂಡಿದ್ದು , ಈ ಮೂಲಕ ಕ್ಯಾಗಲ್ ಸಮುದಾಯದ 600000 ಡೇಟಾ ವಿಜ್ಞಾನಿಗಳ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

  ರೆಡ್‌ಮಿ ನೋಟ್ 4ಗೆ ಸೆಡ್ಡು ಹೊಡೆಯುವ ಏಕೈಕ ಫೋನ್ ಇದು!!..ಬೆಲೆ ಕೇವಲ 6,999 ರೂ.!!

  ಸಿಎ ಟೆಕ್ನಾಲಜೀಸ್ ವಶದಲ್ಲಿ ವೆರಾಕೋಡ್

  ಸೆಕ್ಯೂರಿಟಿ ಟೆಸ್ಟಿಂಗ್ ಸಂಸ್ಥೆಯಾದ ವೆರಾಕೋಡ್ ಅನ್ನು ಸಿಎ ಟೆಕ್ನಾಲಜೀಸ್ ಸಂಸ್ಥೆ $614 ಮಿಲಿಯನ್ ಮೊತ್ತದ ಒಪ್ಪಂದದಲ್ಲಿ ವಶಪಡಿಸಿಕೊಂಡಿದೆ. ಉದ್ಯಮಗಳಿಗೆ ಮತ್ತು ಆಪ್ ಡೆವೆಲಪರ್ಗಳಿಗೆ ನೀಡುವ ಡೆವಲಪ್ಮೆಂಟ್ ಮತ್ತು ಟೆಸ್ಟಿಂಗ್ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಈ ಒಪ್ಪಂದಕ್ಕೆ ಬರಲಾಗಿದೆ. ವೆರಾಕೋಡ್ ಸಾಫ್ಟ್ವೇರ್-ಆಸ್-ಅ-ಸರ್ವೀಸ್ ಪ್ಲ್ಯಾಟ್ಫಾರ್ಮ್ ನೀಡುತ್ತದಲ್ಲದೆ ಡೆವೆಲಪರ್ಗಳಿಗೆ ತಮ್ಮ ಆಪ್ಗಳ ಸೆಕ್ಯೂರಿಟಿ ಹೆಚ್ಚಿಸಲು ಸಹಾಯಮಾಡುತ್ತದೆ.

  ಗೂಗಲ್ ಮತ್ತು HTC

  ಗೂಗಲ್ ಕಳೆದ ಸೆಪ್ಟಂಬರ್ನಲ್ಲಿ HTC ಯ ಸ್ಮಾರ್ಟ್ಫೋನ್ ವ್ಯವಹಾರದ ಸ್ವಲ್ಪ ಭಾಗವನ್ನು $1.1 ಬಿಲಿಯನ್ ಗೆ ಖರೀದಿಸುವ ಒಪ್ಪಂದಕ್ಕೆ ಬಂದಿತ್ತು. ಗೂಗಲ್ ನ ಹಾರ್ಡ್ವೇರ್ ವ್ಯವಹಾರಕ್ಕೆ ಶಕ್ತಿ ತುಂಬುವ ಪ್ರಯತ್ನ ಇದಾಗಿತ್ತು. ಇದರ ನಂತರ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ ಮೇಲೆ ಕೆಲಸ ಮಾಡಿದ HTC ಯ ತಂಡಗಳಿಂದ ಮಂದಿಯನ್ನು ತನ್ನ ಸಂಸ್ಥೆಗೆ ಸೆಳೆದುಕೊಳ್ಳುತ್ತಿದೆ.

  ಆಪಲ್ ಸ್ವಾಧೀನದಲ್ಲಿ ಲ್ಯಾಟೀಸ್.ಐಓ

  ಆಪಲ್ ತನ್ನ ಕೃತಕ ಬುದ್ಧಿಮತ್ತೆ ಮತ್ತು ಮೆಶೀನ್ ಲರ್ನಿಂಗ್ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಲ್ಯಾಟೀಸ್.ಐಓ ಅನ್ನು ಸ್ವಾಧೀನಪಡಿಸಕೊಂಡಿದೆ. ಕ್ಯಾಲಿಫೋರ್ನಿಯಾ ಮೂಲದ ಸ್ಟಾರ್ಟಪ್ ಕಂಪೆನಿಯಾದ ಲ್ಯಾಟೀಸ್.ಐಓ ಅನ್ನು $175 -$200 ಮಿಲಿಯನ್ ವೆಚ್ಚದಲ್ಲಿ ಆಪಲ್ ಸ್ವಾಧೀನಪಡಿಸಿಕೊಂಡಿದೆ. ಈ ಸ್ಟಾರ್ಟಪ್ ಸಂಸ್ಥೆಯು ಅಸಂಘಟಿತ ಕಚ್ಚಾ ಡೇಟಾ ಅನ್ನು ಸಂಘಟಿತ ಮತ್ತು ಅರ್ಥಪೂರ್ಣ ಮಾಹಿತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವುಳ್ಳ ತನ್ನ ಎಐ ಎಂಜಿನ್ ಗೆ ಪ್ರಸಿದ್ಧಿ ಪಡೆದಿದೆ.

  ವೆರಿಜಾನ್ ವಶದಲ್ಲಿ ಯಾಹೂ

  ಈ ವರ್ಷ ಜೂನ್ ನಲ್ಲಿ ವೆರಿಜಾನ್ ಸಂಸ್ಥೆಯು $4.5 ಬಿಲಿಯನ್ ವೆಚ್ಚದಲ್ಲಿ ಯಾಹೂ ಅನ್ನು ವಶಪಡಿಸಿಕೊಂಡಿದೆ. ಯುಎಸ್ ಮೂಲದ ಈ ಸಂಸ್ಥೆಯು ತನ್ನ ಈಗಿನ ಎಒಎಲ್ ವ್ಯವಹಾರದೊಂದಿಗೆ ಈ ಹೊಸ ಆಸ್ತಿಯನ್ನು ವಿಲೀನಗೊಳಿಸಿ 'ಓತ್' ಎಂಬ ಅಂಗಸಂಸ್ಥೆಯನ್ನ ಪ್ರಾರಂಭಿಸಲಿದೆ. ಈ ಹೊಸ ಅಂಗಸಂಸ್ಥೆಯು 50ಕ್ಕೂ ಅಧಿಕ ಮೀಡಿಯಾ ಬ್ರ್ಯಾಂಡ್ ಗಳನ್ನು ಹೊಂದಿರಲಿದ್ದು ಜಗತ್ತಿನಾದ್ಯಂತ 1 ಬಿಲಿಯನ್ಗೂ ಅಧಿಕ ಗ್ರಾಹಕರನ್ನು ಹೊಂದಲಿದೆ.

  ಇಂಟೆಲ್ ವಶದಲ್ಲಿ ಮೊಬೈಲ್ಐ

  ಯುಎಸ್ ಮೂಲದ ಚಿಪ್ ತಯಾರಕರಾದ ಇಂಟೆಲ್ ಸಂಸ್ಥೆಯು ಮಾರ್ಚ್ನಲ್ಲಿ 15.3 ಬಿಲಿಯನ್ ವೆಚ್ಚದಲ್ಲಿ ಇಸ್ರೇಲ್ ಮೂಲದ ಡ್ರೈವರ್-ಲೆಸ್ ಕಾರ್ ಸಂಸ್ಥೆಯಾದ ಮೊಬೈಲ್ಐ ಅನ್ನು ವಶಪಡಿಸಿಕೊಂಡಿದೆ. ಮೊಬೈಲ್ಐ ಸಂಸ್ಥೆಯು 27 ಕಾರ್ ಉತ್ಪಾದಕ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದು ಮಾರುಕಟ್ಟೆಯಲ್ಲಿ ಲಭ್ಯವಿರುವ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್, ಸೆಮಿ-ಆಟೋನೋಮಸ್ ಕ್ರೂಸ್ ಕಂಟ್ರೋಲ್ ಸಿಸ್ಟಮ್ ಮೊದಲಾದ ಸಾಫ್ಟ್ವೇರ್ ಮೂರನೇ ಎರಡರಷ್ಟು ಭಾಗವನ್ನು ನಿಯಂತ್ರಿಸುತ್ತದೆ. ನಿಜ ಹೇಳಬೇಕೆಂದರೆ ಈ ತಂತ್ರಜ್ಞಾನಗಳ ಸಮಗ್ರ ಸೆಟ್ ಹೊಂದಿರುವ ಕೆಲವೇ ಸಂಸ್ಥೆಗಳಲ್ಲಿ ಮೊಬೈಲ್ಐ ಒಂದಾಗಿದೆ. ಬೇರೆ ಯಾವುದೇ ಸಂಸ್ಥೆಯೂ ಸೆಲ್ಫ್-ಡ್ರೈವಿಂಗ್ ನ ತಂತ್ರಜ್ಞಾನಗಳ ಸಮಗ್ರ ಸೆಟ್ ಅನ್ನು ಹೊಂದಿಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Here we list the top tech acquisitions of this year made by Google, Apple, Cisco, CA Technologies, HP, Intel and others.
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more