6ಕಿ.ಮೀ ಉಬರ್ ಕ್ಯಾಬ್ ಪ್ರಯಾಣಕ್ಕೆ ಶಾಕಿಂಗ್ ಬಿಲ್!..ಬೆಂಗಳೂರು ಟೆಕ್ಕಿಗೆ ಸಂಕಷ್ಟ!!

Written By:

ಉಬರ್ ಕ್ಯಾಬ್‌ನಲ್ಲಿ ಕೇವಲ 6 ಕಿಲೋಮಿಟರ್ ಪ್ರಯಾಣ ಮಾಡಿದ್ದಕ್ಕೆ 5,352 ರೂ. ಬಿಲ್!! ಇಂತಹದೊಂದು ಪ್ರಸಂಗ ನಡೆದಿರುವುದು ಎಲ್ಲೋ ಅಲ್ಲ ನಮ್ಮ ಬೆಂಗಳೂರಿನಲ್ಲಿ.!! ಹೌದು, ನಗರದ ಟೆಕ್ಕಿಯೊರ್ವರು ಸಿಟಿ ರೈಲ್ವೆ ಸ್ಟೇಷನ್‌ನಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಊಬರ್ ಕಾರ್ ಬುಕ್ ಮಾಡಿದ್ದಾಗ ಈ ಘಟನೆ ನಡೆದಿದೆ.!!

ಬೆಂಗಳೂರಿನ ಟೆಕ್ಕಿ ಪ್ರವೀಣ್ ಮೈಸೂರಿನತ್ತ ಪ್ರಯಾಣ ಬೆಳೆಸಲು ರೈಲ್ವೆ ನಿಲ್ದಾಣದಿಂದ ಮೈಸೂರು ರಸ್ತೆಗೆ ಉಬರ್ ಆಪ್‌ ಮೂಲಕ ಕ್ಯಾಬ್ ಬುಕ್ ಮಾಡಿದ್ದಾರೆ, ಕ್ಯಾಬ್ ಹತ್ತಿದ ಪ್ರವೀಣ್ಗೆ ಆಪ್‌ನಲ್ಲಿ ಮೊದಲು 6 ಕಿ.ಮೀಗೆ 103 ರೂ. ಬಿಲ್ ತೋರಿಸಿದ್ದು, ನಂತರ ಇದೇ ಬಿಲ್ ಇಳಿಯುವಾಗ 5,352 ರೂ. ಆಗಿದೆ.!!

6ಕಿ.ಮೀ ಉಬರ್ ಕ್ಯಾಬ್ ಪ್ರಯಾಣಕ್ಕೆ ಶಾಕಿಂಗ್ ಬಿಲ್!..ಬೆಂಗಳೂರು ಟೆಕ್ಕಿಗೆ ಸಂಕಷ್ಟ!

ಕೇವಲ 6 ಕಿಲೋಮಿಟರ್‌ಗೆ 5,352 ರೂ. ಬಿಲ್‌ ನೊಡಿದ ಪ್ರವೀಣ್ ತಾನು ಹಿಂದೆ ಯಾವುದೇ ಬಾಕಿಯನ್ನಯ ಉಳಿಸಿಕೊಂಡಿಲ್ಲ. ಆದ ಕಾರಣ 103 ರೂ. ಮಾತ್ರವೇ ನೀಡುವುದಾಗಿ ಟೆಕ್ಕಿ ಕ್ಯಾಬ್ ಚಾಲಕನಿಗೆ ಹೇಳಿದ್ದಾರೆ. ಆದರೆ, ಕ್ಯಾಬ್ ಚಾಲಕ ಇದಕ್ಕೆ ಒಪ್ಪದೇ ಪ್ರಕರಣ ಬ್ಯಾಟರಾಯನಪುರ ಪೊಲೀಸ್‌ ಸ್ಟೇಷನ್ ಮಟ್ಟಿಲತ್ತಿದೆ.!!

6ಕಿ.ಮೀ ಉಬರ್ ಕ್ಯಾಬ್ ಪ್ರಯಾಣಕ್ಕೆ ಶಾಕಿಂಗ್ ಬಿಲ್!..ಬೆಂಗಳೂರು ಟೆಕ್ಕಿಗೆ ಸಂಕಷ್ಟ!

ಬಿಲ್ ಅಧಿಕೃತವಾಗಿ ಬಂದಿರುವ ಕಾರಣ ನೀವು ಚಾಲಕನಿಗೆ ಪೂರ್ತಿಹಣ ನೀಡಬೇಕು ಎಂದು ಪೊಲೀಸರು ಹೇಳಿದ್ದಾರೆ. ಟೆಕ್ಕಿ 103 ರೂ. ನೀಡಿ ಉಳಿದ ಮೊತ್ತವನ್ನು ನಾಳೆ ಬರಿಸುವುದಾಗಿ ಹೇಳಿದ ನಂತರ, ಊಬರ್ ಸಂಸ್ಥೆಯಿಂದ ಟೆಕ್ಕಿಗೆ ಮೇಲ್ ಬಂದಿದ್ದು ತಾಂತ್ರಿಕ ಕಾರಣಗಳಿಂದಾಗಿ ಈ ರೀತಿ ಸಮಸ್ಯೆಯುಂಟಾಗಿದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದೆ.!!

Read more about:
English summary
why is uber using cab drivers to collect prior debt? That is not the driver's job. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot