ಪುರುಷನಿಗೆ ಕುಂಗ್ ಫು ಸ್ಟೈಲ್‌ನಲ್ಲಿ ಹೊಡೆದ ಮಹಿಳೆ: ವೀಡಿಯೋ ವೈರಲ್

Written By:

ಬೆಂಗಳೂರಿನಲ್ಲಿ ದಿನಾಂಕ 23 ರಂದು ಮಣಿಪುರದ 22 ವರ್ಷದ ಯುವತಿಯೊಬ್ಬಳು ದುಷ್ಕರ್ಮಿಯೊಬ್ಬನಿಂದ ಹಲ್ಲೆಗೊಳಗಾಗಿರುವುದು ಈಗಾಗಲೇ ಬಹುಸಂಖ್ಯಾತರಿಗೆ ತಿಳಿದಿರಬಹುದು. ಅಂದಹಾಗೆ ಈ ಬಗ್ಗೆ ಟೆಕ್ನಾಲಜಿ ಬಗ್ಗೆ ಮಾಹಿತಿ ತಿಳಿಸುವ ಇವರು ಏಕೆ ಹೇಳುತ್ತಿದ್ದಾರೆ ಎಂದು ಪ್ರಶ್ನೆ ಹುಟ್ಟಬಹುದು. ನಾವು ಈ ವಿಷಯ ಹೇಳಲು ಒಂದು ಪ್ರಮುಖ ಕಾರಣವಿದೆ. ಒಂಟಿಯಾಗಿ ಕಾಣಿಸಿಕೊಳ್ಳುವ ಮಹಿಳೆಯರ ಮೇಲೆ ದೌರ್ಜನ್ಯ ಯತ್ನಗಳು ಇಂದು ಹೆಚ್ಚಾಗುತ್ತಿರುವುದು ಒಂದು ದುರಂತ ಸಂಗತಿ. ಇಂತಹ ದುರ್ಘಟನೆಗಳ ಬಗ್ಗೆ ಚಿಂತನೆ ಮಾಡಲು ಭಯವಾಗುವಂತೆ ಕಾನೂನು ಮತ್ತು ಶಿಕ್ಷೆಯ ಬಗ್ಗೆ ಪರಿಣಾಮಕಾರಿ ಅರಿವು ಮೂಡಿಸದಿರುವುದು ಇನ್ನೂ ದುರಂತದ ಸಂಗತಿ. ಆದ್ರೆ ಗಿಜ್‌ಬಾಟ್‌ ನಿಮಗೊಂದು ವೈರಲ್‌ ವೀಡಿಯೋ ತೋರಿಸುತ್ತಿದೆ. ಅದನ್ನ ನೋಡಿದ್ರೆ ಬಹುಶಃ ಎಲ್ಲಾ ವಯೋಮಾನದ ಮಹಿಳೆಯರಿಗೂ ಸಹ ತಮ್ಮನ್ನು ತಾವು ಕಾಪಾಡಿಕೊಳ್ಳಲು ಇರುವ ಮಾರ್ಗ ತಿಳಿಯುತ್ತೇ. ಅಲ್ಲದೇ ಎಂತಹ ಮಹಿಳೆಯರಿಗೂ ಸಹ ಈ ವೀಡಿಯೋ ನೋಡಿದ್ರೆ ನಾವು ಸಹ ಇಂತಹ ಧೈರ್ಯವನ್ನು ಸದಾ ನಮ್ಮಲ್ಲಿ ಕಾಪಾಡಿಕೊಳ್ಳಬೇಕು ಎನಿಸುವುದರಲ್ಲಿ ಸಂಶಯವಿಲ್ಲ. ಚೀನಾದ ಮಹಿಳೆಯ ಸ್ವಯಂ ರಕ್ಷಣೆಯನ್ನು ನೋಡಬಹುದಾದ ಈ ವೀಡಯೋ ವೈರಲ್‌ ಆಗಿದೆ.

ವೀಡಿಯೋ ಬಗ್ಗೆ ಮಾಹಿತಿ ತಿಳಿದು ಲೇಖನದ ಕೊನೆಯ ಸ್ಲೈಡರ್‌ನಲ್ಲಿ ವೀಡಿಯೋ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿಸಿಟಿವಿ ವೀಡಿಯೋ

ಸಿಸಿಟಿವಿ ವೀಡಿಯೋ

ಸಿಸಿಟಿವಿ ವೀಡಿಯೋ

ಅಂದಹಾಗೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗೆ ತೋರಿಸುತ್ತಿರೋ ವೀಡಿಯೋವನ್ನು ಚೀನಾದ 'People's Daily" ಹಂಚಿದೆ. ವೀಡಿಯೋದಲ್ಲಿ ಮಹಿಳೆಯೊಬ್ಬಳನ್ನು ಲಿಫ್ಟ್‌ನಲ್ಲಿ ಪುರುಷ ದುರುಪಯೋಗಪಡಿಸಿಕೊಳ್ಳಲು ಯತ್ನಸಿದಾಗ ಆಕೆ ಸರಳವಾಗಿ ಹೋರಾಟ ಮಾಡಿದ ಬಗೆಯನ್ನು ಹೊಂದಿದೆ.

ಏಪ್ರಿಲ್‌ 24

ಏಪ್ರಿಲ್‌ 24

ಏಪ್ರಿಲ್‌ 24

ಏಪ್ರಿಲ್‌ 24 ರ ಲಿಫ್ಟ್‌ನಲ್ಲಿನ ಸಿಸಿಟಿವಿ ವೀಡಿಯೋ ಕ್ಲಿಪ್ಸ್ ಏಪ್ರಿಲ್‌ 27 ರಂದು ಹಂಚಲ್ಪಟ್ಟಿದೆ. ಇಂದು ವೀಡಿಯೋ ಸಾವಿರಾರು ವೀಕ್ಷಣೆಗೊಂಡಿದ್ದು, ಮಹಿಳೆಯರಿಗೆ ಹೆಚ್ಚು ಸಹಾಯವಾಗಲಿದೆ.

ಮಹಿಳೆಯರಿಗೆ ಬೇಕು ಸ್ವಯಂ ರಕ್ಷಣೆ ಶಕ್ತಿ

ಮಹಿಳೆಯರಿಗೆ ಬೇಕು ಸ್ವಯಂ ರಕ್ಷಣೆ ಶಕ್ತಿ

ಮಹಿಳೆಯರಿಗೆ ಬೇಕು ಸ್ವಯಂ ರಕ್ಷಣೆ ಶಕ್ತಿ

ಇಂದು ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರು ಉದ್ಯೋಗಕ್ಕಾಗಿ ದಾಪುಗಾಲಿಡುತ್ತಿದ್ದು, ಸಮಯದ ಹಂಗನ್ನು ಲೆಕ್ಕಿಸಿದೆ ಉದ್ಯೋಗಕ್ಕಾಗಿ ಹಳ್ಳಿಯಿಂದ ನಗರಕ್ಕೆ, ಪಟ್ಟಣಗಳಿಗೆ ಬರುವ ಪತ್ರಿಯೊಬ್ಬರು ಸಹ ತಮ್ಮ ಸ್ವಯಂ ರಕ್ಷಣೆ ಸಾಮರ್ಥ್ಯವನ್ನು ಹೊಂದಬೇಕಿದೆ. ಚೀನಾ ಮಹಿಳೆಯ ಸ್ವಯಂ ರಕ್ಷಣೆ ಫೈಟ್‌ ಹೇಗಿದೆ ಎಂದು ಮುಂದಿನ ಸ್ಲೈಡರ್‌ ಕ್ಲಿಕ್‌ ಮಾಡಿ.

ಚೀನಾ ಮಹಿಳೆ ಫೈಟ್

ಚೀನಾ ಮಹಿಳೆ ಫೈಟ್

ಲಿಫ್ಟ್‌ ಒಳಗೆ ಬಂದ ಪುರುಷನೊಬ್ಬ ಆಕೆ ಒಬ್ಬಳೆ ಇರುವುದನ್ನು ನೋಡಿ ಆಕೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದಾಗ ಚೀನಾ ಮಹಿಳೆ ಕಪಾಲಕ್ಕೆ ಕೊಟ್ಟಿದ್ದು ಒಂದೇ ಏಟು. ಅದಕ್ಕೆ ಸುಸ್ತಾದ. ನಂತರದಲ್ಲೂ ಮಹಿಳೆ ಕೊಟ್ಟ ಏಟು ಇನ್ನು ಆ ಪುರುಷ ಎಂದಿಗೂ ಅಂತಹ ಇನ್ನೊಂದು ಪ್ರಯತ್ನಕ್ಕೆ ಚಿಂತಿಸದೇ ಮಾಡಿತು. ವೈರಲ್‌ ವೀಡಿಯೋ ಆಗಿ ಹೆಚ್ಚು ವೀಕ್ಷಣೆ ಪಡೆಯುತ್ತಿದೆ.

ವೀಡಿಯೋ ಕೃಪೆ:People's Daily 人民日报

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Viral Video: Woman bashes up man who tries to grope her in an elevator, kung fu-style. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot