Subscribe to Gizbot

ವಿಶ್ವದ ಬಹುದೊಡ್ಡ ವನ್ನಾಕ್ರೈ ಸೈಬರ್ ಅಟ್ಯಾಕ್ ಹಿಂದಿರುವುದು ಯಾರು ಗೊತ್ತಾ?

Written By:

150ಕ್ಕೂ ಅಧಿಕ ದೇಶಗಳ ಸುಮಾರು ಎರಡು ಲಕ್ಷ ಕಂಪ್ಯೂಟರ್‌ಗಳ ಮೇಲೆ ದಾಳಿ ಮಾಡಿ, ವಿಶ್ಚವನ್ನೆ ನಡುಗಿಸಿದ ಬಹುದೊಡ್ಡ ಸೈಬರ್ ಅಟ್ಯಾಕ್ ದಾಳಿಯ ಹಿಂದೆ ಉತ್ತರ ಕೊರಿಯಾದ ಕೈವಾಡವಿದೆಯೇ? ಹೀಗೊಂದು ಬಲವಾದ ಶಂಕೆ ಪ್ರಪಂಚದಾಧ್ಯಂತ ಹರಿದಾಡಿದೆ.!!

ಹೌದು, ವನ್ನಾ ಕ್ರೈ ರಾನ್‌ಸಮ್ ವೇರ್‌ ಎಂಬ ಸೈಬರ್ ಅಟ್ಯಾಕ್ ಇತ್ತೀಚಿಗೆ ಪ್ರಪಂಚವೇ ನೋಡಿದ ಬಹುದೊಡ್ಡ ಸೈರ್ ಅಟ್ಯಾಕ್, ಹಾಗಾಗಿ, ಈ ಸೈಬರ್ ದಾಳಿಯ ಹಿಂದೆ ಸೈಬರ್‌ ತಂತ್ರಜ್ಞರು ಹಿಂದೆ ಬಿದ್ದಿದ್ದು, ಈಗ ಸೈಬರ್ ದಾಳಿಯ ಮೂಲ ಉತ್ತರ ಕೋರಿಯಾಕ್ಕೆ ಹೋಗಿಮುಟ್ಟಿದೆ.!! ಹಾಗಾದರೆ, ಅಟ್ಯಾಕ್ ಹಿಂದಿರುವ ವಿಷಯಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕುಖ್ಯಾತ ಲಾಝರಸ್ ಎಂಬ ಸಮೂಹ!!

ಕುಖ್ಯಾತ ಲಾಝರಸ್ ಎಂಬ ಸಮೂಹ!!

ಉತ್ತರ ಕೊರಿಯದ ಪರವಾಗಿ ಕೆಲಸ ಮಾಡುತ್ತಿರುವ ಕುಖ್ಯಾತ ಲಾಝರಸ್ ಎಂಬ ಸಮೂಹ ಈ ರಾನ್‌ಸಮ್‌ವೇರ್‌ ದಾಳಿಯ ಹಿಂದಿರುವ ಸಾಧ್ಯತೆ ಇದೆ ಹೇಳಲಾಗಿದೆ.! ವಿಶ್ವದ ಬಹುದೊಡ್ಡ ದಾಳಿಯ ಹಿಂದೆ ಉತ್ತರ ಕೊರಿಯಾ ಕೈವಾಡವಿದೆ ಎನ್ನುವ ವರದಿಗಳು ಬಿತ್ತರವಾಗಿವೆ.

ಈ ಮೊದಲೂ ಇದೇ ಕುತಂತ್ರಾಂಶ!!

ಈ ಮೊದಲೂ ಇದೇ ಕುತಂತ್ರಾಂಶ!!

ಈ ಅಟ್ಯಾಕ್ ಮಾಡಿರುವ ವನ್ನಾ ಕ್ರೈನಲ್ಲಿ ಬಳಸಲಾಗಿರುವ ಕೋಡಿಂಗ್‌ ಮತ್ತು ಟೂಲ್ಸ್‌ಗಳನ್ನು ಬಳಸಿಕೊಂಡು ಈ ಮೊದಲೂ ಸಹ ಲಾಝರಸ್ ಹ್ಯಾಕಿಂಗ್‌ ಸಮೂಹ ಈ ರೀತಿಯ ಕುತಂತ್ರಾಂಶವನ್ನು ರೂಪಿಸಿತ್ತು ಎನ್ನಲಾಗಿದೆ.ವನ್ನಾ ಕ್ರಿಪ್ಟ್ ರಾನ್ ಸಮ್ ದಾಳಿಗೆ ರೂಪಿಸಲಾದ ಕುತಂತ್ರಾಂಶಕ್ಕೂ ಕುಖ್ಯಾತ ಲಾಝರಸ್‌ ಸಮೂಹದ ಈ ಹಿಂದೆ ದಾಳಿ ಮಾಡಿದ್ದ ಕುತಂತ್ರಾಂಶಕ್ಕೂ ಸಾಮ್ಯತೆ ಇದೆ ಎನ್ನಲಾಗಿದೆ.

ಬಿಬಿಸಿ ಕೂಡ ಈ ಬಗ್ಗೆ ಶಂಕೆ!!

ಬಿಬಿಸಿ ಕೂಡ ಈ ಬಗ್ಗೆ ಶಂಕೆ!!

ಖ್ಯಾತ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಬಿಬಿಸಿ ಕೂಡ ದಾಳಿಯ ಹಿಂದೆ ಉತ್ತರ ಕೊರಿಯಾ ಕೈವಾಡ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು, ಭಾರತೀಯ ನೀಲ್ ಮೆಹ್ತಾ ಅವರ ಟ್ವೀಟ್ ಆಧಾರದ ಮೇಲೆ ಈ ಸುದ್ದಿ ಬಿತ್ತರಿಸಿದೆ.

ಯಾರು ಈ ನೀಲ್ ಮೆಸ್ತಾ?

ಯಾರು ಈ ನೀಲ್ ಮೆಸ್ತಾ?

ಪ್ರಸ್ತುತ ಖ್ಯಾತ ಗೂಗಲ್ ಸಂಸ್ಥೆ ಭದ್ರತಾ ಸಂಶೋಧಕರಾಗಿ ಭಾರತೀಯ ನೀಲ್ ಮೆಹ್ತಾ ಕಾರ್ಯನಿರ್ವಹಿಸುತ್ತಿದ್ದಾರೆ. ,ಬ್ರಿಟಿಷ್‌ ಕೊಲಂಬಿಯಾ ವಿಶ್ವವಿದ್ಯಾಲಯದ ಪದವೀಧರ ನೀಲ್ ಮೆಹ್ತಾ ಈ ಹಿಂದೆ ಐಬಿಎಂ ಇಂಟರ್ ನೆಟ್‌ ಸೆಕ್ಯುರಿಟಿ ಸಿಸ್ಟಮ್‌ ನಲ್ಲಿ ಕೆಲಸ ಮಾಡಿದ್ದರು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
WannaCry ransomware cyber-attack 'may have N Korea link'
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot