Subscribe to Gizbot

ವಾಟ್ಸ್‌ಆಪ್‌ ಅಪ್‌ಡೇಟ್ ವರ್ಷನ್..ಟಾಪ್‌ನಲ್ಲಿ ಪಿನ್ ಮಾಡಿ ನೋಡಿ!!

Written By:

ಪ್ರಪಂಚದಲಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೆಸ್‌ಬುಕ್ ಒಡೆತನದ ವಾಟ್ಸ್‌ಆಪ್‌ ಮತ್ತೆ ಅಪ್‌ಡೇಟ್ ಆಗಿದೆ.! ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಲು ಕಾಲಕಾಲಕ್ಕೆ ಹೊಸ ಫೀಚರ್‌ಗಳಿಂದ ಬಳಕೆದಾರನ್ನು ಆಕರ್ಷಿಸುತ್ತಲೇ ಇರುವ ಇದೀಗ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ಫೀಚರ್ಸ್ ನೀಡುತ್ತಿದೆ.!!

ಇದಕ್ಕೆ ಸದ್ಯದ ಸೇರ್ಪಡೆ ಫೇವರಿಟ್ ಚಾಟ್!! ಹೌದು, ಫೇಸ್‌ಬುಕ್ ಮೆಸೇಂಜರ್ ರಿತಿಯಲ್ಲಿಯೇ ಇಷ್ಟವಾದ ವೈಯಕ್ತಿಕ ಚಾಟ್ ಅಥವಾ ಗ್ರೂಪನ್ನು ಟಾಪ್‌ನಲ್ಲಿ ಇಟ್ಟುಕೊಳ್ಳಲು ಪಿನ್ ಮಾಡಿಕೊಳ್ಳುವ ಅವಕಾಶವನ್ನು ನೂತನ ವಾಟ್ಸ್‌ಆಪ್‌ ಕಲ್ಪಿಸಿದೆ.ಇದರಿಂದ ತಮ್ಮ ಪ್ರೀತಿಪಾತ್ರರ ಜೊತೆ ಸಂಭಾಷಣೆ ನಡೆಸಲು ಪಿನ್‌ಚಾಟ್ ತೆರೆಯಬಹುದಾಗಿದೆ.!

ವಾಟ್ಸ್‌ಆಪ್‌ ಅಪ್‌ಡೇಟ್ ವರ್ಷನ್..ಟಾಪ್‌ನಲ್ಲಿ ಪಿನ್ ಮಾಡಿ ನೋಡಿ!!

ಸದ್ಯಕ್ಕೆ ಈ ಫೇವರಿಟ್ ಫೀಚರ್ ವಾಟ್ಸಾಪ್ ಬೀಟಾ ವರ್ಷನ್ 2.17.162ಗೆ ಮಾತ್ರ ಲಭ್ಯವಿದ್ದು, ಗೂಗಲ್ ಪ್ಲೇ ಸ್ಟೋರ್ ಮೂಲಕ ಬೀಟಾವರ್ಷನ್ ಆಪ್‌ ಡೌನ್‌ಲೋಡ್ ಮಾಡಬಹುದಾಗಿದೆ. ಇನ್ನು ವಾಟ್ಸ್‌ಅಪ್ ಹೊರತಂದಿರುವ ನೂತನ ಫೀಚರ್ ಹಲವು ವಿಶೇಷತೆಗಳನ್ನು ಹೊಂದಿದೆ.

ವಾಟ್ಸ್‌ಆಪ್‌ ಅಪ್‌ಡೇಟ್ ವರ್ಷನ್..ಟಾಪ್‌ನಲ್ಲಿ ಪಿನ್ ಮಾಡಿ ನೋಡಿ!!

ಆದರೆ ನೂತನವಾಗಿ ಪರಿಚಯಿಸಿರುವ ವಾಟ್ಸ್‌ಆಪ್‌ ಫೀಚರ್‌ ಮೂಲಕ ಯಾವುದೇ ಬಳಕೆದಾರರು ಕೇವಲ ಮೂರು ಸಂಭಾಷಣೆಗಳನ್ನು ಮಾತ್ರ ಟಾಪ್‌ನಲ್ಲಿ ಪಿನ್ ಮಾಡಿಕೊಳ್ಳಬಹುದು.! ವಾಟ್ಸ್‌ಆಪ್ ತೆರೆದು ನಿಮ್ಮ ಪ್ರೀತಿಪಾತ್ರ ಪಿನ್ ಐಕಾನ್ ಕ್ಲಿಕ್ ಮಾಡಿದರೆ ಚಾಟ್ಆಪ್‌ನಲ್ಲಿ ಪಿನ್ ಆಗುತ್ತದೆ. ಒಂದು ವೇಳೆ ಅನ್‌ಪಿನ್ ಮಾಡಬೇಕಾದರೂ ಇದೇ ಪ್ರಕ್ರಿಯೆಯನ್ನು ಬಳಕೆದಾರರು ಅನುಸರಿಸಬೇಕು.!!

English summary
The update will make it harder to miss important chats – and easier to miss the less important ones. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot