Subscribe to Gizbot

ರೋಬಾಟ್ ಟೆಕ್ನಾಲಜಿ ಬಗ್ಗೆ ತಂತ್ರಜ್ಞಾನ ದಿಗ್ಗಜರ ಫೈಟ್!!.ಪ್ರಪಂಚದ ದೊಡ್ಡ ಚರ್ಚೆ ಏನಿದು?!!

Written By:

'ಕೃತಕ ಬುದ್ಧಿಮತ್ತೆ' ಬಗ್ಗೆ ಟೆಕ್ನಾಲಜಿಯ ಇಬ್ಬರು ದೈತ್ಯರು ಎಂದು ಹೆಸರುವಾಸಿಯಾಗಿರುವ ಎಲಾನ್ ಮಸ್ಕ್ ಮತ್ತು ಮಾರ್ಕ್ ಝುಕರ್‌ಬರ್ಗ್ ಅವರ ಮಾತಿನ ಸಮರ ಮತ್ತಷ್ಟು ಮುಂದುವರೆದಿದೆ.!! ಕೃತಕ ಬುದ್ಧಿಮತ್ತೆ ಪರಿಕಲ್ಪನೆಗೆ ಸಂಬಂಧಿಸಿದಂತೆ ಇಬ್ಬರು ಭಿನ್ನ ನಿಲುವುಗಳನ್ನು ತಳೆದಿದ್ದು, ಪ್ರಪಂಚದ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.!!

ಸ್ವತಃ ಒಂದು 'ಕೃತಕ ಬುದ್ಧಿಮತ್ತೆ' ಕಂಪೆನಿಯನ್ನು ಆರಂಭಿಸಿರುವ ಸ್ಪೇಸ್ ಎಕ್ಸ್‌ನ ಎಲಾನ್ ಮಸ್ಕ್ ''ಕೃತಕ ಬುದ್ಧಿಮತ್ತೆ ಮನುಷ್ಯರನ್ನೇ ಎರಡನೇ ದರ್ಜೆ ನಾಗರಿಕರನ್ನಾಗಿಸಬಹುದು" ಎಂದು ಹೇಳಿದಕ್ಕೆ ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್ 'ಇದೊಂದು ಬೇಜವಾಬ್ದಾರಿ ಹೇಳಿಕೆ. ಈ ವಿಷಯದಲ್ಲಿ ನಾನು ಆಶಾವಾದಿ' ಎಂದಿದ್ದಾರೆ.

ಇನ್ನು ಇದಕ್ಕೆ ಟ್ವೀಟ್ ಮೂಲಕ ಉತ್ತರ ಕೊಟ್ಟ ಎಲಾನ್ ಮಸ್ಕ್ 'ಝುಕರ್‌ಬರ್ಗ್‌ಗೆ ವಿಷಯ ಜ್ಞಾನವಿಲ್ಲ' ಎಂದದ್ದು ಮತ್ತಷ್ಟು ವಾದವಿವಾದಕ್ಕೆ ಕಾರಣವಾಗಿದ್ದು, ಹಾಗಾದರೆ, ಏನಿದು 'ಕೃತಕ ಬುದ್ಧಿಮತ್ತೆ'? ತಂತ್ರಜ್ಞಾನ ದೈತ್ಯರು ವಿಭನ್ನ ದೃಷ್ಟಿಕೋನ ಹೊಂದಿರುವುದು ಏಕೆ? ಎಂಬ ಎಲ್ಲಾ ವಿಷಯಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ‘ಕೃತಕ ಬುದ್ಧಿಮತ್ತೆ

ಏನಿದು ‘ಕೃತಕ ಬುದ್ಧಿಮತ್ತೆ"?

ನೀವು ಸೂಪರ್‌ಸ್ಟಾರ್ ಉಪೇಂದ್ರ ಅವರ ಹಾಲಿವುಡ್ ಮತ್ತು ರಜಿನಿಕಂತ್ ಅವರ ರೋಬಾಟ್ ಸಿನಿಮಾ ನೋಡಿದ್ದರೆ ಕೃತಕ ಬುದ್ಧಿಮತ್ತೆ ಎಂದರೆ ಏನು ಎಂದು ತಿಳಿಯಬಹುದು. ಯಂತ್ರವು ತನ್ನ ಸ್ವಂತಿಕೆ ಬುದ್ದಿಯನ್ನು ಉಪಯೋಗಿಸಿ ಎಲ್ಲಾ ಕಾರ್ಯಗಳನ್ನು ಮಾಡುವಂತದನ್ನು ಕೃತಕ ಬುದ್ಧಿಮತ್ತೆ ಎನ್ನುತ್ತಾರೆ.

ತಂತ್ರಜ್ಞಾನ ದೈತ್ಯರು ವಿಭನ್ನ ದೃಷ್ಟಿಕೋನ!!

ತಂತ್ರಜ್ಞಾನ ದೈತ್ಯರು ವಿಭನ್ನ ದೃಷ್ಟಿಕೋನ!!

ಎಲಾನ್ ಮಸ್ಕ್ ಮತ್ತು ಮಾರ್ಕ್ ಝುಕರ್‌ಬರ್ಗ್ನಿಂದ ಪ್ರಪಂಚದ ದೊಡ್ಡ ಚರ್ಚೆಗೆ ಗ್ರಾಸವಾಗಿರುವ ವಿಷಯ ಈ ಕೃತಕ ಬುದ್ಧಿಮತ್ತೆ.!! ಈ ತಂತ್ರಜ್ಞಾನ ಅಭಿವೃದ್ದಿಯಾದರೆ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳನ್ನು ಎಲಾನ್ ಮಸ್ಕ್ ಅನಾದರ್ಶಸ್ಥಿತಿಯಲ್ಲಿ ನೋಡಿದರೆ ಮಾರ್ಕ್ ಝುಕರ್‌ಬರ್ಗ್ ಆದರ್ಶಸ್ಥಿತಿಯಲ್ಲಿ ನೊಡುತ್ತಿದ್ದಾರೆ.!!

ಕೃತಕ ಬುದ್ಧಿಮತ್ತೆ ಪರ ಯಾರಿದ್ದಾರೆ?

ಕೃತಕ ಬುದ್ಧಿಮತ್ತೆ ಪರ ಯಾರಿದ್ದಾರೆ?

ಮಾರ್ಕ್ ಝುಕರ್‌ಬರ್ಗ್ ರೀತಿಯಲ್ಲಿಯೇ ಇತರ ಹೆಸರಾಂತ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದು, ಗೂಗಲ್ ಡೀಪ್ ಮೈಂಡ್‌ನ ಸಂಸ್ಥಾಪಕ ಡೆಮಿಸ್ ಹಸಾಬಿಸ್ ಪ್ರಕಾರ ಕೃತಕ ಬುದ್ಧಿಮತ್ತೆ ಮನುಕುಲ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೊಂದು ‘ಅಂತಿಮ ಪರಿಹಾರ' ಎಂದು ಹೇಳಿದ್ದಾರೆ. ಮೈಕ್ರೋಸಾಫ್ಟ್ ರೆಡ್ಮಂಡ್ ಲ್ಯಾಬ್ ನಿರ್ದೇಶಕ ಎರಿಕ್ ಹಾರ್ವಿಟ್ಜ್ ಅವರು ಸಹ ಮನುಷ್ಯನನ್ನು ಇನ್ನಿಲ್ಲದಷ್ಟು ಸಬಲನನ್ನಾಗಿ ಮಾಡಬಲ್ಲ ಸಾಧನ ಕೃತಕ ಬುದ್ಧಿಮತ್ತೆ ಎಂದಿದ್ದಾರೆ.!!

ಕೃತಕ ಬುದ್ಧಿಮತ್ತೆ ವಿರುದ್ದವಾದ ಹೇಳಿಕೆಗಳು.!!

ಕೃತಕ ಬುದ್ಧಿಮತ್ತೆ ವಿರುದ್ದವಾದ ಹೇಳಿಕೆಗಳು.!!

ಎಲಾನ್ ಮಸ್ಕ್ ಪ್ರಕಾರ ಕೃತಕ ಬುದ್ಧಿಮತ್ತೆ ಮನುಕುಲದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದರೆ, ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸಹ ಕೃತಕ ಬುದ್ಧಿಮತ್ತೆಯನ್ನು ಮನುಕುಲ ಕೊನೆಗೊಳಿಸಬಹುದಾದ ಪರಿಕಲ್ಪನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಾಳಜಿ ವಹಿಸಬೇಕಾದ ವಿಚಾರ ಎಂದಿದ್ದಾರೆ.

ಸೂಕ್ತ ಉದಾಹರಣೆ ರೋಬಾಟ್!!

ಸೂಕ್ತ ಉದಾಹರಣೆ ರೋಬಾಟ್!!

ಕೃತಕ ಬುದ್ಧಿಮತ್ತೆ ಬಗ್ಗೆ ತಂತ್ರಜ್ಞಾನ ದಿಗ್ಗಜರು ಅಭಿಪ್ರಾಯಪಟ್ಟಿರುವ ಪ್ರಕಾರ ಇವರೀರ್ವರ ವಾದವಿವಾದಕ್ಕೆ ಸೂಪರ್‌ಸ್ಟಾರ್ ರಜಿನಿಕಾತ್ ಅಭಿನಯಿಸಿರುವ ರೂಬಾಟ್( ಎಂಧಿರನ್) ಸಿನಿಮಾ ಸೂಕ್ತ ಉದಾಹರಣೆಯಾಗಬಹುದು ಎನ್ನಬಹುದು.!! ಆದರೆ, ತಂತ್ರಜ್ಞಾನ ದಿಗ್ಗಜರಿಗೆ ಉತ್ತರ ಸಿಗದ ಈ ಪ್ರಶ್ನೆ ಸಾಮಾನ್ಯರಿಗೆ ಯಕ್ಷಪ್ರಶ್ನೆಯೇ ಸರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
It looks like the two tech titans are arguing about AI’s impact on humanity. Really they’re protecting their personal brands.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot