ಅನ್ಯಗ್ರಹಗಳ ಜೀವಿಗಳನ್ನು ಮೊದಲು ಹುಡುಕುತ್ತದೆಯೇ ಚೀನಾ!!?

Written By:

ಅನ್ಯಗ್ರಹಗಳ ಜೀವಿಗಳ ಬಗ್ಗೆ ಮಾನವನಿಗೆ ಮೊದಲಿನಿಂದಲೂ ಕುತೋಹಲವೇ. ಇದಕ್ಕಾಗಿ ಮಾನವನು ಮಾಡದ ಕಾರ್ಯಗಳೇ ಇಲ್ಲ ಎನ್ನಬಹುದು.ತಂತ್ರಜ್ಞಾನ ಬೆಳೆದಂತೆ ಈ ಅನ್ಯಗ್ರಹ ಜೀವಿಗಳ ಬಗ್ಗೆ ಹುಡುಕಾಟ ಹೆಚ್ಚುತ್ತಿದೆಯೇ ವಿನಃ ಕಡಿಮೆಯಾಗುತ್ತಿಲ್ಲ.!!

ಇದಕ್ಕೆ ಉದಾಹರಣೆ ಎಂದರೆ ಚೀನಾ. ಎಲ್ಲರಿಗಿಂತ ಮೊದಲು ನಾವು ಇರಬೇಕು ಎಂದು ಗುರಿಯನ್ನು ಹೊತ್ತಿರುವ ಚೀನಾ ಈ ಬಾರಿ ಏಲಿಯನ್‌ಗಳ ಹುಡುಕಾಟಕ್ಕೆ ಕೈ ಹಾಕಿದೆ.! ಇದಕ್ಕಾಗಿ ನೈರುತ್ಯ ಚೀನಾದ ಗುಯ್ಚೋ ಪ್ರಾಂತ್ಯದ ದಟ್ಟ ಕಾಡಿನ ಮಧ್ಯೆ ಜಗತ್ತಿನಲ್ಲೇ ಅತ್ಯಂತ ಬೃಹತ್ 'ರೇಡಿಯೋ ಟೆಲಿಸ್ಕೋಪ್' ಒಂದನ್ನು ತಯಾರಿಸಿದೆ.!

ಅನ್ಯಗ್ರಹಗಳ ಜೀವಿಗಳನ್ನು ಮೊದಲು ಹುಡುಕುತ್ತದೆಯೇ ಚೀನಾ!!?

ವೈಜ್ಞಾನಿಕ ಕೃಷಿ ಬಗ್ಗೆ ಮಾಹಿತಿ ನೀಡಲಿದೆ ಮೈ ಅಗ್ರಿಗುರು ಆಪ್!!

ಇತರೆ ಗ್ರಹಗಳಲ್ಲಿ ಜೀವಿಗಳಿದ್ದು, ಅನ್ಯಗ್ರಹಗಳಿಂದ ಬರಬಹುದಾದ ರೇಡಿಯೋ ತರಂಗಗಳ ರೂಪದ ಸಂದೇಶವನ್ನು ಸ್ವೀಕರಿಸುವುದು ಈ ಟೆಲಿಸ್ಕೋಪಿನ ಕೆಲಸ. ಇನ್ನು ಇತ್ತೀಚಿಗೆ ಈ ರೇಡಿಯೋ ಟೆಲಿಸ್ಕೋಪ್ ಪ್ರಾಯೋಗಿಕವಾಗಿ ಚಾಲನೆ ಪಡೆದಿದೆ.

ಈ ರೇಡಿಯೋ ಟೆಲಿಸ್ಕೋಪ್ 500 ಮೀಟರ್ ಅಗಲವಿದೆ, ಸುತ್ತಳತೆ ಒಂದೂವರೆ ಕಿಲೋಮೀಟರಿಗೂ ಜಾಸ್ತಿ ಇದೆ. 50 ವರ್ಷಗಳ ಹಿಂದೆ ಪೋರ್ಟೋರಿಕೋದ ಅರೆಸಿಬೋ ಪಟ್ಟಣದಂಚಿನ ಕಾಡಿನಲ್ಲಿ ನಿರ್ಮಾಣ ಮಾಡಲಾಗಿದ್ದ 305 ಮೀಟರ್ ಅಗಲದ 'ಅರಿಸೆಬೋ ಅಬ್ಸರ್ವೇಟರಿ' ಯನ್ನು ಇದು ಹಿಂದಿಕ್ಕಿದೆ. ಜಗತ್ತಿನ ಅತೀ ದೊಡ್ಡ ಟೆಲಿಸ್ಕೋಪ್ ಎಂಬ ಹಿರಿಮೆಗೆ ಪಾತ್ರವಾಗಿದೆ.

ಅನ್ಯಗ್ರಹಗಳ ಜೀವಿಗಳನ್ನು ಮೊದಲು ಹುಡುಕುತ್ತದೆಯೇ ಚೀನಾ!!?

ಖಗೋಳ ವಿಜ್ಞಾನಗಳು ಅನ್ಯಗ್ರಹ ಜೀವಿಗಳನ್ನು ಬಹಳ ಹಿಂದಿನಿಂದಲೂ ಹುಡುಕುತ್ತಲೇ ಇದ್ದಾರೆ. ಆದರೆ ಈವರೆಗೆ ಇದರ ಬಗ್ಗೆ ಎಲ್ಲೂ ಸಣ್ಣ ಕುರುಹು ಕೂಡಾ ಸಿಕ್ಕಿಲ್ಲ. ಮುಂದೊಂದು ದಿನ ಈ ಬೃಹತ್ ಟೆಲಿಸ್ಕೋಪ್ ಕೈಗೆಏಲಿಯನ್‌ಗಳು ಸಿಕ್ಕಿ ಬೀಳುತ್ತವಾ ಕಾದು ನೋಡಬೇಕಿದೆ.

Read more about:
English summary
In a stunning landscape of jagged limestone hills in southwestern China. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot