ವೈಜ್ಞಾನಿಕ ಕೃಷಿ ಬಗ್ಗೆ ಮಾಹಿತಿ ನೀಡಲಿದೆ ಮೈ ಅಗ್ರಿಗುರು ಆಪ್!!

Written By:

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾದ ಒಂದು ಭಾಗವಾಗಿ ಮಹೀಂದ್ರ ಅಗ್ರಿ ಸಲ್ಯೂಷನ್ ಲಿಮಿಟೆಡ್‌ ಕಂಪೆನಿ ರೈತರಿಗೆ ಸಲಹೆ ನೀಡುವ ಆಪ್‌ ಒಂದನ್ನು ಬಿಡುಗಡೆಮಾಡಿದೆ. ಮಾರುಕಟ್ಟೆ ದರಗಳು, ಹವಾಮಾನ, ನೂತನ ಕೃಷಿ ತಂತ್ರಜ್ಞಾನ, ಬೆಳೆಗಳು, ವ್ಯವಸಾಯ ಕ್ರಮ, ರಸಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಈ ಆಪ್ ನೀಡುತ್ತದೆ.!

"ಮೈ ಅಗ್ರಿಗುರು" ಎಂಬ ಆಪ್‌ ಇದಾಗಿದ್ದು, ರೈತರು ಹೊಸದಾಗಿ ಒಂದು ವೇದಿಕೆಯನ್ನು ಸೃಷ್ಟಿಮಾಡಿಕೊಂಡು ಕೃಷಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚೆಯನ್ನು ಮಾಡಬಹುದಾದ ಅವಕಾಶವನ್ನು ಸಹ ಈ ಆಪ್ ಹೊಂದಿದೆ. !!

ವೈಜ್ಞಾನಿಕ ಕೃಷಿ ಬಗ್ಗೆ ಮಾಹಿತಿ ನೀಡಲಿದೆ ಮೈ ಅಗ್ರಿಗುರು ಆಪ್!!

ಹಿಟ್ ಆಗಲಿಲ್ಲ ಹೊಸ ವರ್ಷನ್ ವಾಟ್ಸ್ಆಪ್!..ಹಳೆಯದೇ ಬೆಸ್ಟ್!!

ಆಂಡ್ರಾಯ್ಡ್ ಮಾದರಿಯಲ್ಲಿ ಲಭ್ಯವಿರುವ ಈ ಆಪ್‌ ಅನ್ನು ರೈತರು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದ್ದು, ಆಪ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಈ ಆಪ್‌ ತಯಾರಾಗಿದ್ದು, 2025ರ ಒಳಗೆ ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಈ ಆಪ್ ಸೌಲಭ್ಯ ವಿಸ್ತರಣೆ ಆಗಲಿದೆ.

ವೈಜ್ಞಾನಿಕ ಕೃಷಿ ಬಗ್ಗೆ ಮಾಹಿತಿ ನೀಡಲಿದೆ ಮೈ ಅಗ್ರಿಗುರು ಆಪ್!!

ಪ್ರಮುಖವಾಗಿ ಯುವ ಸಮೂಹ ಕೃಷಿ ಬಗ್ಗೆ ಹೆಚ್ಚು ಒಲವು ತೋರಬೇಕಿದ್ದು, ಅವರಿಗೆ ಹೆಚ್ಚಿನ ವೈಜ್ಞಾನಿಕ ಮಾಹಿತಿಯನ್ನು ನೀಡಲು ಈ ಆಪ್ ರೂಪಿಸಲಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ 7 ಕೋಟಿ ರೈತರನ್ನು ತಲುಪುವ ಗುರಿ ಹೊಂದಲಾಗಿದೆ!!

English summary
MyAgriGuru is India most trusted app in agriculture. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot